ಕನ್ನಡದ ಯಶಸ್ವಿ ಚಿತ್ರ ಯು ಟರ್ನ್ ಹಿಂದಿಗೆ ಕೊಂಡೊಯ್ದ ಏಕ್ತಾ ಕಪೂರ್‌

ಪವನ್ ಕುಮಾರ್‌ ನಿರ್ದೇಶನದ ಕನ್ನಡದ ಯಶಸ್ವಿ ಚಲನಚಿತ್ರ ಯು ಟರ್ನ್ ಹಿಂದಿಗೆ ರಿಮೇಕ್ ಆಗುತ್ತಿದ್ದು, ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್‌ ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್ ನಿರ್ವಹಿಸಿದ ಪಾತ್ರದಲ್ಲಿ ಅಲಯ ಎಫ್ ಕಾಣಿಸಿಕೊಳ್ಳಲ್ಲಿದ್ದಾರೆ. ಹಿಂದಿ ರಿಮೇಕ್ ಅನ್ನು ಆರಿಫ್ ಖಾನ್ ನಿರ್ದೇಶಿಸಲಿದ್ದಾರೆ.

ಕನ್ನಡದ ಹಿಟ್ ಚಲನಚಿತ್ರ ಯು ಟರ್ನ್‌ 2016 ರಲ್ಲಿ ತೆರೆಕಂಡಿತ್ತು. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದರು. ಬಳಿಕ ಈ ಚಿತ್ರ ಮಲಯಾಳಂ, ತೆಲುಗು ತಮಿಳು ಮತ್ತು ಬಂಗಾಳಿ ಭಾಷೆಗಳಲ್ಲೂ ತಯಾರಾಗಿತ್ತು. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಮಂತಾ ನಾಯಕಿಯಾಗಿದ್ದರು. ಈಗ ಈ ಚಿತ್ರ ಹಿಂದಿ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅಲಯ ಏಫ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲಯಗೆ ಇದು ಬಾಲಿವುಡ್‌ನ ಎರಡನೇ ಚಿತ್ರವಾಗಿದೆ.

ಯು ಟರ್ನ್ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ನಿರ್ಮಾಪಕಿ ಏಕ್ತಾ ಕಪೂರ್ ಸೋಮವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ತಿಳಿಸಿದ್ದಾರೆ. “ತಮಿಳು, ತೆಲುಗು ಮತ್ತು ಕನ್ನಡದಲ್ಲಿ  ಬ್ಲಾಕ್ ಬಾಸ್ಟರ್‌ ಯಶಸ್ಸು ಮತ್ತು ಪ್ರಶಸ್ತಿಗಳನ್ನು ಪಡೆದಿರುವ ಯು ಟರ್ನ್ ಅನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಉತ್ಸುಕವಾಗಿದ್ದೇವೆ. ಜೀವನದಲ್ಲಿ, ಯಾವುದೇ ಶಾರ್ಟ್‌ಕಟ್‌ಗಳಿಲ್ಲ. ಆದರೆ ಕೆಲವೊಮ್ಮೆ ನೀವು ನಿಯಮಗಳನ್ನು ಮುರಿಯಬೇಕು ಮತ್ತು ನಿಮ್ಮ ಪ್ರಯಾಣದ ಹಾದಿಯನ್ನು ಬದಲಾಯಿಸಲು ಯು ಟರ್ನ್ ತೆಗೆದುಕೊಳ್ಳಬೇಕು’ ಎಂದಿದ್ದಾರೆ.

ಇದನ್ನೂ ಓದಿ: ನನ್ನ ತಪ್ಪಿನಿಂದ ರಾಹುಲ್ ಗಾಂಧಿ ಕೆಟ್ಟ ರೀತಿಯ ಟ್ರೋಲ್‌ಗೆ ಒಳಗಾದರು- ನಟಿ ರಮ್ಯಾ

 

ಇನ್ಸ್ಟಾಗ್ರಾಮ್‌ನಲ್ಲಿ ತನ್ನ ಹೊಸ ಚಿತ್ರವನ್ನು ಪ್ರಕಟಿಸಿರುವ ನಟಿ ಅಲಯ “ಕೆಲವೊಮ್ಮೆ ಜೀವನದಲ್ಲಿ, ಶಾರ್ಟ್ಕಟ್ ತೆಗೆದುಕೊಳ್ಳುವುದು ಮುಂದಿರುವ ಮಾರ್ಗವಲ್ಲ. ನಿಮ್ಮ ಪ್ರಯಾಣದ ಹಾದಿಯನ್ನು ಬದಲಾಯಿಸುವ ಮೊದಲು ಎರಡು ಬಾರಿ ಯೋಚಿಸಿ ಮತ್ತು ಯುಟರ್ನ್ ತೆಗೆದುಕೊಳ್ಳಿ!” ಎಂದಿದ್ದಾರೆ.

 

View this post on Instagram

 

A post shared by ALAYA F (@alayaf)

ಚಿತ್ರದ ಹಿಂದಿ ರಿಮೇಕ್ ಅನ್ನು ಆರಿಫ್ ಖಾನ್ ನಿರ್ದೇಶಿಸಲಿದ್ದು, ಏಕ್ತಾ ಕಪೂರ್ ಮತ್ತು ತಾಯಿ ಶೋಭಾ ಕಪೂರ್ ನಿರ್ಮಿಸಲಿದ್ದಾರೆ. ಚಿತ್ರದ ಶೂಟಿಂಗ್ ‌ಮಂಗಳವಾರದಿಂದ ಪ್ರಾರಂಭವಾಗುತ್ತದೆ.


ಇದನ್ನೂ ಓದಿ: ಚಿತ್ರರಂಗದ ಅಭಿವ್ಯಕ್ತಿಯನ್ನೇ ಕಿತ್ತುಕೊಳ್ಳುವ ಕೇಂದ್ರದ ಹೊಸ ಕಾನೂನು: ಕಮಲ್ ಹಾಸನ್ ಸೇರಿ ಚಿತ್ರತಾರೆಯರ ವಿರೋಧ

LEAVE A REPLY

Please enter your comment!
Please enter your name here