ಸ್ಕಾರ್ಫ್ (ಹಿಜಾಬ್) ಹಾಕಿಕೊಂಡು ಬರುತ್ತಾರೆಂದು ಕಳೆದ ಮೂರು ವಾರದಿಂದ ತರಗತಿಯಿಂದ ಹೊರಹಾಕಲ್ಪಟ್ಟ ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿನಿಯರು ಗುರುವಾರ ಕಾಲೇಜಿನ ಗೇಟಿನ ಬಳಿ ಭಿತ್ತಿಪತ್ರ ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. “ಹಿಜಾಬ್ ಹಾಕಿದ್ದಕ್ಕಾಗಿ ನಾವು ತರಗತಿಯಿಂದ ಹೊರಗೆ ಕುಳಿತು ಕೊಳ್ಳುವಂತಾಗಿದೆ. ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೆ ತೀರುತ್ತೇವೆ, ಇದು ನನ್ನ ಮೂಲಭೂತ ಹಕ್ಕು- ಎಂಬ ಭಿತ್ತಿಪತ್ರವನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿದರು.
ನಮ್ಮದು ಒಂದು ವರ್ಷದ ಹೋರಾಟ. ಪ್ರಥಮ ಪಿಯುಸಿಗೆ ಸೇರಿದಾಗ ಸ್ಕಾರ್ಫ್ ಹಾಕಿಕೊಂಡು ಬಂದಾಗಿಂದ ನಮಗೆ ಮಾನಸಿಕ ಹಿಂಸೆ ಕೊಡಲಾಗುತ್ತಿದೆ. ಒತ್ತಡ ಹಾಕಿ ಹಿಜಾಬ್ ತೆಗೆಸಿದರು. ತರಗತಿಯಿಂದ ಹೊರಗೆ ಹಾಕಿದರು. ಮನವಿ ಮಾಡಿದರು ತರಗತಿಗೆ ಸೇರಿಸಲಿಲ್ಲ. ಅಂತೂ ಮೊದಲ ವರ್ಷ ಮಗಿಯಿತು. ದ್ವಿತೀಯ ಪಿಯುಸಿ ಸೇರಿದಾಗ ಮತ್ತೆ ಹಿಜಾಬ್ ಹಾಕದಂತೆ ಹೇಳಲಾಯಿತು. ಪ್ರಾಚಾರ್ಯರಿಗೆ ಪೋಷಕರಿಂದ ಸ್ಕಾರ್ಫ್ ಹಾಕಿಕೊಂಡು ಬರಲು ಅವಕಾಶ ಕೊಡುವಂತೆ ಮನವಿ ಮಾಡಿಸಿದೆವು. ಆದರೆ ಪ್ರಾಚಾರ್ಯರು ನಮ್ಮ ಬೇಡಿಕೆ ತಿರಸ್ಕರಿಸಿದರು ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸುತ್ತಾರೆ.
ನಮ್ಮ ಬೇಡಿಕೆ ಪ್ರಾಚಾರ್ಯರು ಪರಿಗಣಿಸಬಹುದೆಂದು ಕಾದೆವು. ಆದರೆ ಸಕಾರಾತ್ಮಕ ಸ್ಪಂದನೆ ಬರಲಿಲ್ಲ. ನಾವು ಅನಿವಾರ್ಯವಾಗಿ ಡಿಸೆಂಬರ್ ಕೊನೆಯ ವಾರದಲ್ಲಿ ಸ್ಕಾರ್ಫ್ ಧರಿಸಿ ಕಾಲೇಜಿಗೆ ಬಂದೆವು. ಆಗ ನಮ್ಮನ್ನು ತರಗತಿಗೆ ಪ್ರವೇಶಿಸದಂತೆ ಹೇಳಿ ಹೊರಗಡೆ ಇಟ್ಟರು. ನಾವು ತರಗತಿಯಿಂದ ಹೊರಹಾಕಲ್ಪಟ್ಟಿರುವುದು ಯಾರಿಗೂ ತಿಳಿಯಬಾರದೆಂದು ಲೈಬ್ರರಿ ಮತ್ತು ಸ್ಟಾಫ್ ರೂಮಿನಲ್ಲಿ ಕುಳಿತುಕೊಳ್ಳುವಂತೆ ಹೇಳಲಾಗುತ್ತಿತ್ತು ಎಂದು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ತಮಗಾಗುತ್ತಿರುವ ಅನ್ಯಾಯ ವಿವರಿಸುತ್ತಾರೆ.
ಕಾಲೇಜಿನಲ್ಲಿ ಪೂಜೆ ಇನ್ನಿತರ ಆಚರಣೆ ನಡೆಯುತ್ತವೆ, ಇದು ಕಾಲೇಜಾದ್ದರಿಂದ ನಾವು ಅದಕ್ಕೆ ಗೌರವ ಕೊಡುತ್ತೇವೆ. ಹಾಗೆಯೆ ನಮ್ಮ ಮೂಲಭೂತ ಹಕ್ಕಾಗಿರುವ ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರಲು ಅವಕಾಶ ಕೊಡಬೇಕು. ನಾವು ಕಪ್ಪು ಬಣ್ಣದ ಹಿಜಾಬ್ ಹಾಕಿಕೊಂಡು ಬರುವುದಿಲ್ಲ. ಕಾಲೇಜಿನ ಸಮವಸ್ತ್ರದಲ್ಲಿರುವ ನೀಲಿ ಬಣ್ಣದ ಹಿಜಾಬ್ ಹಾಕಿಕೊಂಡು ಬರತ್ತೇವೆ. ಇದಕ್ಕಾದರೂ ಅವಕಾಶ ಕೊಡಿಯೆಂದು ಬೇಡುತ್ತಿದ್ದೇವೆ. ಆದರೆ ಅದಕ್ಕೂ ಅವಕಾಶ ಕೊಡುತ್ತಿಲ್ಲ ಎಂದು ತರಗತಿಯಿಂದ ಹೊರ ಹಾಕಲ್ಪಟ್ಟ ವಿದ್ಯಾರ್ಥಿನಿಯರು ತಮ್ಮ ನೋವು ತೋಡಿಕೊಳ್ಳುತ್ತಾರೆ.
ಇದನ್ನೂ ಓದಿ: ಉಡುಪಿ: ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಇನ್ನೂ ಪ್ರವೇಶ ನೀಡದ ಕಾಲೇಜು



ಹಿಜಾಬ್ ಧರಿಸಿರುವವರನ್ನು ತರಗತಿಯಿಂದ ಹೊರಕ್ಕೆ ಹಾಕಿರುವುದು ಅಮಾನವೀಯ ಹಾಗೂ ಕಾನೂನು ಬಾಹಿರ ಕೃತ್ಯ.
ಇವತ್ತು ಹಿಜಾಬ್ ನಾಳೆ ಘೋಷ ನಾಳದು ತರಗತಿಯ ಮಧ್ಯದಲ್ಲಿ ನಮಾಜ್ ಮಾಡಲು ಅವಕಾಶ ನಂತರ ಮಹಿಳೆಯರ ಕಲಾ ಶಾಲೆಯಲ್ಲಿ ಗಂಡಸರು ಪಾಠ ಮಾಡಬಾರದು ಕೊನೆಗೆ ಶರಿಯತ್ತನ್ನು ಪಾಲಿಸಬೇಕು ಎಂದು ತಕರಾರು ಮಾಡುತ್ತಾರೆ ಇವರು ಶಾಲೆಗೆ ಬರುವುದು ವಿದ್ಯೆ ಕಲಿಯಲು ಇವರಿಗೆ ಎಲ್ಲಿ ಸರಿಯಾಗುತ್ತದೆಯೊ ಅಲ್ಲಿಗೆ ಹೋಗಲಿ ಆದುದರಿಂದ ಶಾಲ ಆಡಳಿತ ಮಂಡಳಿಯು ಇವರ ಬೇಡಿಕೆಯನ್ನು ಇಡೇರಿಸ ಬಾರದು ಶಾಲೆಯಲ್ಲಿ ಅದರ ನಿಯಮಗಳನ್ನು ವಿರೋಧಸಿದ್ದಕ್ಕೆ ಅವರನ್ನು ಶಾಲೆಯಿಂದ ತೆಗೆದು ಹಾಕಬೇಕು