ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಬಳಿಯುತ್ತಿರುವ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವ್ಯಂಗ್ಯಕ್ಕೀಡಾಗಿದೆ. ಕೃತ್ಯವನ್ನು ಸಮರ್ಥಿಸಿಕೊಂಡಿರುವ ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲಾ, ಇದನ್ನು ಅಧ್ಯಾಪಕರ ನೇತೃತ್ವದಲ್ಲಿ ನಡೆಯುತ್ತಿರುವ ಸಂಶೋಧನಾ ಯೋಜನೆಯ ಭಾಗವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಬೇಸಿಗೆಯಲ್ಲಿ ತಂಪಾಗಿರಲು ಕಾಲೇಜು
”ಭಾರತದ ಸಾಂಪ್ರದಾಯಿಕ ಜ್ಞಾನವನ್ನು ಬಳಸಿಕೊಂಡು ಶಾಖದ ಒತ್ತಡ ನಿಯಂತ್ರಣದ ಅಧ್ಯಯನ” ಎಂಬ ಶೀರ್ಷಿಕೆಯ ಅಧ್ಯಯನವು ಇನ್ನೂ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ. “ಅಧ್ಯಯನ ಇನ್ನೂ ಪ್ರಕ್ರಿಯೆಯಲ್ಲಿದೆ. ಒಂದು ವಾರದ ನಂತರ ನಾನು ಪೂರ್ಣ ಸಂಶೋಧನೆಯ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಪೋರ್ಟಾ ಕ್ಯಾಬಿನ್‌ಗಳಲ್ಲಿ ಸಂಶೋಧನೆಯನ್ನು ನಡೆಸಲಾಗುತ್ತಿದೆ.” ಎಂದು ಹೇಳಿದ್ದಾಋಎ.
“ನೈಸರ್ಗಿಕ ಮಣ್ಣನ್ನು ಮುಟ್ಟುವುದರಿಂದ ಯಾವುದೇ ಹಾನಿಯಿಲ್ಲದ ಕಾರಣ ಒಂದಿಷ್ಟು ನಾನೆ ಬಳಿದಿದ್ದೇನೆ. ಕೆಲವು ಜನರು ಪೂರ್ಣ ವಿವರಗಳನ್ನು ತಿಳಿಯದೆ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ವೀಡಿಯೊದಲ್ಲಿ, ವತ್ಸಲಾ ಅವರು ತಮ್ಮ ಸಿಬ್ಬಂದಿಯ ಸಹಾಯದಿಂದ ಗೋಡೆಗಳ ಮೇಲೆ ಸಗಣಿ ಬಳಿಯುತ್ತಿರುವುದು ದಾಖಲಾಗಿದೆ.
ಸಿ ಬ್ಲಾಕ್‌ನಲ್ಲಿ ತರಗತಿ ಕೊಠಡಿಗಳನ್ನು ತಂಪಾಗಿಸಲು ಸ್ಥಳೀಯ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಪ್ರತಿಪಾದಿಸಿ ಕಾಲೇಜಿನ ಶಿಕ್ಷಕರ ಗುಂಪಿನಲ್ಲಿ ಅವರೇ ಈ ವೀಡಿಯೊವನ್ನು ಸ್ವತಃ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಬೇಸಿಗೆಯಲ್ಲಿ ತರಗತಿ ಕೊಠಡಿಗಳು ತಂಪಾಗಿರುತ್ತವೆ ಎಂದು ಪ್ರತಿಪಾದಿಸಿ ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರತ್ಯೂಷ್ ವತ್ಸಲಾ ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಸಾರಿಸಿದ್ದಾರೆ.
ಸುದ್ದಿ ಓದಿ➣➣ https://t.co/PWNStUq7om#NaanuGauri #delhiuniversity #gobaruniversity pic.twitter.com/zk7x865F0q
— Naanu Gauri (@naanugauri) April 14, 2025
“ಈ ಕೊಠಡಿಗಳಲ್ಲಿ ತರಗತಿಗಳನ್ನು ಹೊಂದಿರುವವರಿಗೆ ಶೀಘ್ರದಲ್ಲೇ ಈ ಕೊಠಡಿಗಳು ಹೊಸ ರೂಪದಲ್ಲಿ ಸಿಗುತ್ತವೆ. ನಿಮ್ಮ ಬೋಧನಾ ಅನುಭವವನ್ನು ಆಹ್ಲಾದಕರವಾಗಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಅವರು ಸಂದೇಶದಲ್ಲಿ ಬರೆದಿದ್ದಾರೆ ಎಂದು ವರದಿ ಹೇಳಿದೆ.
1965 ರಲ್ಲಿ ಸ್ಥಾಪನೆಯಾದ ಮತ್ತು ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಅವರ ಹೆಸರನ್ನು ಇಡಲಾದ ಈ ಕಾಲೇಜು ಅಶೋಕ್ ವಿಹಾರ್‌ನಲ್ಲಿದೆ ಮತ್ತು ದೆಹಲಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕಾಲೇಜು ಐದು ಬ್ಲಾಕ್‌ಗಳನ್ನು ಒಳಗೊಂಡಿದ್ದು, ಸೆಗಣಿ ಬಳಿಯುವ ಯೋಜನಯನ್ನು ಒಂದು ಬ್ಲಾಕನ್ನು ಕೇಂದ್ರಿಕರಿಸಿ ನಡೆಸಲಾಗಿದೆ ಎಂದು ವರದಿ ಹೇಳಿದೆ. ಬೇಸಿಗೆಯಲ್ಲಿ ತಂಪಾಗಿರಲು ಕಾಲೇಜು
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಂಬೇಡ್ಕರ್ ಜನ್ಮದಿನ ವಿಶೇಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ
ಅಂಬೇಡ್ಕರ್ ಜನ್ಮದಿನ ವಿಶೇಷ: ಅಂಬೇಡ್ಕರ್ ಪರಿಭಾವಿಸಿದ ಭಾರತ V/s ವರ್ತಮಾನ ಭಾರತ

