Homeಮುಖಪುಟಬಂಧನದಲ್ಲೂ ಕಾನೂನು ನೆರವು ನೀಡುವುದನ್ನು ಮುಂದುವರೆಸಿರುವ ಸುರೇಂದ್ರ ಗಾಡ್ಲಿಂಗ್

ಬಂಧನದಲ್ಲೂ ಕಾನೂನು ನೆರವು ನೀಡುವುದನ್ನು ಮುಂದುವರೆಸಿರುವ ಸುರೇಂದ್ರ ಗಾಡ್ಲಿಂಗ್

ಖೈರ್ಲಾಂಜಿ ಹತ್ಯಾಕಾಂಡ, ಜಾವಖೇಡ ಹತ್ಯಾಕಾಂಡ, ಮನೋರಮಾ ಕಾಂಬ್ಳೆ ಹತ್ಯಾಕಾಂಡ, ಕಾವಲೇವಾಡ ಸಂಜಯ್ ಕೋಬ್ರಗಾಡೆ ಕೊಲೆ ಪ್ರಕರಣ, ರಾಮಾಬಾಯಿ ಅಂಬೇಡ್ಕರ್ ನಗರ ಹತ್ಯಾಕಾಂಡ ಪ್ರತಿಭಟನೆ ಪ್ರಕರಣಗಳು, ನಕಲಿ ಎನ್‌ಕೌಂಟರ್‌ಗಳಂತಹ ಪ್ರಕರಣಗಳಲ್ಲಿ ಗಾಡ್ಲಿಂಗ್ ಮುಂಚೂಣಿಯ ನ್ಯಾಯವಾದಿಯಾಗಿದ್ದರು.

- Advertisement -
- Advertisement -

ಸುರೇಂದ್ರ ಅವರು ಮೋಕಾ (MCOCA), ಪೋಟಾ (POTA), ಟಾಡಾ (TADA), ಯುಎಪಿಎ (UAPA) ಗಳಂತ ಕಾಯಿದೆಗಳ ಕುರಿತು ಗಮನಾರ್ಹ ತಿಳುವಳಿಕೆ ಹೊಂದಿದ್ದವರು. ಕಳೆದ 24 ವರ್ಷಗಳಲ್ಲಿ ಹೈಕೋರ್ಟ್ ಮತ್ತು ಅನೇಕ ವೇದಿಕೆಗಳ ಮುಂದೆ ವಿವಿಧ ಪ್ರಕರಣಗಳನ್ನು ನಿರ್ವಹಿಸಿದ್ದರು. ವ್ಯಕ್ತಿಯೊಬ್ಬ ಆರೋಪಿಯಾದರೂ ಸಹ ಆತನ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಆತನ ಪರವಾಗಿ ವಕಾಲತ್ತು ವಹಿಸುವುದು ತಮ್ಮ ವೃತ್ತಿಪರ ಉದ್ಯೋಗದ ಮೂಲಭೂತ ಕರ್ತವ್ಯ ಎಂದು ನಂಬಿದ್ದ ಕಾರಣಕ್ಕಾಗಿ ಪೋಲೀಸ್ ವ್ಯವಸ್ಥೆಯ ಹಗೆತನ ಕಟ್ಟಿಕೊಂಡದ್ದಲ್ಲದೆ, ಹಲವು ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಕಾಯಿತು. ಅಲ್ಲಿ ಅನೇಕರು ಹಲವು ಸಂದರ್ಭಗಳಲ್ಲಿ ಇವರಿಗೆ ಬೆದರಿಕೆ ಹಾಕಿದ್ದಿದೆ. ಅವೆಲ್ಲಾ ಟೊಳ್ಳು ಬೆದರಿಕೆಗಳಾಗಿದ್ದವು. ಆ ಮೂಲಕ ಭಯ ಹುಟ್ಟಿಸುವುದು ಹಾಗೂ ಅರ್ಜಿದಾರರು ವಿಚಾರಣೆಯಿಂದ ಹಿಂದಕ್ಕೆ ಸರಿಯುವಂತೆ ಮಾಡುವುದು ಅಥವಾ ವಿಚಲಿತರನ್ನಾಗಿಸುವುದು ಇದರ ಉದ್ದೇಶವಾಗಿತ್ತು. ಆದರೆ ಇವರು ಒಬ್ಬ ಪ್ರಬುದ್ದ ಫಿರ್ಯಾದಿದಾರರಾಗಿದ್ದರಿಂದ ಈ ದಾಳಿಕೋರರನ್ನು ನಿರುತ್ಸಾಹಗೊಳಿಸಿ ಅಲಕ್ಷಿಸುತ್ತಿದ್ದರು

ಕೆಲವು ಕಾನೂನುಗಳೊಂದಿಗೆ ಸಂಘರ್ಷ ನಡೆಸುತ್ತಿದ್ದ ಹಲವು ಜನರ ಸೇವೆ ಮಾಡುತ್ತಿದ್ದ ಸುರೇಂದ್ರ, ಕೆಲ ಅತಿ ಸೂಕ್ಷ್ಮ ವಿಷಯಗಳನ್ನು ನಿರ್ವಹಿಸಬೇಕಾಗುತ್ತಿತ್ತು ಮತ್ತು ಈ ಕಾರಣಕ್ಕಾಗಿ ಜನರ ನಡುವೆ ಪ್ರಚಾರ ದೊರಕುತ್ತಿತ್ತು ಹಾಗೆಯೆ ಪೋಲೀಸರ ಕೆಂಗಣ್ಣಿಗೂ ಗುರಿಯಾದ್ದಿರು.

ಒಂದು ಬಾರಿ ಮಹಿಳಾ ಸಂಘಟನೆಗಳ ಕೋರಿಕೆಯ ಮೇರೆಗೆ ಇವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿಕೊಂಡಾಗ, ಬಿಗಿಯಾದ ಪೋಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿತ್ತು, ಕೋರ್ಟ್‌ನ ಆವರಣವನ್ನು ರಕ್ಷಣಾ ದಳದ ಮೂಲಕ ಸುತ್ತುವರೆಯುತ್ತಿದ್ದರು. ಕೋರ್ಟನಲ್ಲಿ ವಿಚಾರಣೆಯ ದಿನಗಳಂದು ಎಚ್ಚರಿಕೆಯ ನೋಟೀಸು ಹೊರಡಿಸುತ್ತಿದ್ದರು ಮತ್ತು ಇಂತಹ ಪ್ರಕರಣಗಳಲ್ಲಿ ಪೋಲೀಸರು ತಮ್ಮ ನಿರಂಕುಶ ಅಧಿಕಾರವನ್ನು ಪ್ರಯೋಗಿಸುತ್ತಿದ್ದರು. ಇದೆಲ್ಲದರಾಚೆ ಕೋರ್ಟಿಗೆ ವ್ಯಕ್ತಿಗಳ ನಿರ್ದೋಷತೆಯನ್ನು ಮನವರಿಕೆ ಮಾಡಿಕೊಡುವಲ್ಲಿ ಮತ್ತು ಬಾಲಿಶವಾದ ಆರೋಪಗಳನ್ನು ತಿರಸ್ಕರಿಸುವುದರಲ್ಲಿ ಗಾಡ್ಲಿಂಗ್ ಸಫಲರಾಗುತ್ತಿದ್ದರು. ಯುಎಪಿಎ, ಟಾಡಾ ಕಾಯಿದೆ ಅಡಿಯಲ್ಲಿ ಆರೋಪಿತರಾದ, ಭಯೋತ್ಪಾದಕರು ಅಥವಾ ನಕ್ಸಲೈಟ್‌ರು ಎಂದು ಹಣೆಪಟ್ಟಿ ಕಟ್ಟಿದ್ದ ಅಮಾಯಕರ ಪರವಾಗಿ ವಕಾಲತ್ತು ವಹಿಸುತ್ತಿದ್ದರು. ಸೌಹಾರ್ದ ಸಮಾಜಕ್ಕಾಗಿ ದುಡಿದ ಇಂತಹವರ ಹೆಸರುಗಳು ಇತಿಹಾಸದ ಭಾಗವಾಗುವುದರಲ್ಲಿ ಅನುಮಾನವಿಲ್ಲ.

ಅರುಣ್ ಫೆರೇರ, ಧನೇಂದ್ರ ಭೂರಿಲೆ, ವೆರ್ನನ್ ಗೋನ್ಸಾಲ್ವಿಸ್, ಸುಧೀರ್ ಧಾವಲೆರಂತಹವರ ಪರ ಗಾಂಡ್ಲಿಂಗ್ ವಕಾಲತ್ತು ವಹಿಸಿದ್ದರ ಜೊತೆಗೆ ವಿಭಿನ್ನ ಸಿದ್ಧಾಂತಗಳ ಹಿನ್ನಲೆಯುಳ್ಳಂತಹ ಹೋರಾಟಗಾರರ ಪರವಾಗಿ ಗಾಡ್ಲಿಂಗ್ ಮುಖ್ಯ ಪಾತ್ರವಹಿಸುತ್ತಿದ್ದರು.

ಖೈರ್ಲಾಂಜಿ ಹತ್ಯಾಕಾಂಡ, ಜಾವಖೇಡ ಹತ್ಯಾಕಾಂಡ, ಮನೋರಮಾ ಕಾಂಬ್ಳೆ ಹತ್ಯಾಕಾಂಡ, ಕಾವಲೇವಾಡ ಸಂಜಯ್ ಕೋಬ್ರಗಾಡೆ ಕೊಲೆ ಪ್ರಕರಣ, ರಾಮಾಬಾಯಿ ಅಂಬೇಡ್ಕರ್ ನಗರ ಹತ್ಯಾಕಾಂಡ ಪ್ರತಿಭಟನೆ ಪ್ರಕರಣಗಳು, ನಕಲಿ ಎನ್‌ಕೌಂಟರ್‌ಗಳಂತಹ ಪ್ರಕರಣಗಳಲ್ಲಿ ಗಾಡ್ಲಿಂಗ್ ಮುಂಚೂಣಿಯ ನ್ಯಾಯವಾದಿಯಾಗಿದ್ದರು. ಇದರ ಜೊತೆಗೆ ಭೀಮ್ ಕೊರೆಗಾಂವ್ ಗಲಭೆಯ ತನಿಖೆ ನಡೆಸುತ್ತಿದ್ದ ಸತ್ಯಶೋಧನಾ ಸಮಿತಿಯ ಭಾಗವಾಗಿದ್ದರು.

ಇಂತ ಒಂದು ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಮಹಿಳಾ ಸಂಘಟನೆಗಳು ಅರ್ಜಿದಾರರನ್ನೇ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಆಗಿ ನೇಮಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದವು. ನಂತರ ಒತ್ತಡಕ್ಕೆ ಮಣಿದು ಗಾಡ್ಲಿಂಗ್ ಅವರನ್ನು ನೇಮಿಸಿಕೊಳ್ಳಲಾಯಿತು ಮತ್ತು ಪ್ರತಿಕೂಲ ತನಿಖಾ ತಂಡದ ನಡುವೆಯೂ ಆರೋಪಿ ಗಂಡನಿಗೆ ದೋಷಿಯೆಂದು ಸಾಬೀತುಪಡಿಸುವಲ್ಲಿ ಅವರು ಯಶಸ್ವಿಯಾದರು. ಈ ಪ್ರಕರಣದ ಮುಕ್ತಾಯದ ನಂತರ ತನಿಖಾ ತಂಡದ ಪೋಲೀಸರ ಒಡಕುಂಟು ಮಾಡುವ ವರ್ತನೆಯ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒಬ್ಬ ಅರ್ಜಿದಾರ, ಪ್ರಾಸಿಕ್ಯೂಟರ್‌ನ ಹೊಣೆಗಾರಿಕೆಯುಳ್ಳವನಾಗಿ ಹಿರಿಯ ಅಧಿಕಾರಿಗಳಿಗೆ ಪತ್ರವನ್ನು ಬರೆದರು

ಒಬ್ಬ ನ್ಯಾಯವಾದಿ, ಅರ್ಜಿದಾರನಾಗಿ ಹಿಂದುಳಿದ ಸಮುದಾಯಗಳಿಗೆ ಸಂಬಂಧಿಸಿದಂತೆ, ಮೀಸಲಾತಿಯ ಸಮರ್ಥಕನಾಗಿ, ನ್ಯಾಯಾಂಗದ ಸ್ವಾತಂತ್ರ್ಯ ಕುರಿತಂತೆ ಧ್ವನಿಯೆತ್ತಲು ಗಾಡ್ಲಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮಾನವ ಹಕ್ಕುಗಳಿಗೆ ಸಂಬಂದಿಸಿದಂತೆ ಜನರಿಗೆ ಅರಿವು ಮೂಡಿಸುವ ಸಾರ್ವಜನಿಕ ಸಬೆಗಳನ್ನು ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಹಿರಿಯ ನಿವೃತ್ತ ನ್ಯಾಯಾಧೀಶರ ಜೊತೆಗೂಡಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ರಚನೆಗೊಂಡ ಸತ್ಯಶೋಧನ ಸಮಿತಿಗಳ ಭಾಗವಾಗಿದ್ದರು. ಪೋಲಿಸ್ ವ್ಯವಸ್ಥೆಯು ನ್ಯಾಯವಾದಿಗಳಿಗೆ ಉಪದ್ರವ ಕೊಡುವುದನ್ನು ವಿರೋಧಿಸುತ್ತಿದ್ದರು. ಚತ್ತೀಸಘಡದಲ್ಲಿ ಯುಎಪಿಎ ಜಾಲಕ್ಕೆ ಬಲಿಯಾದ ಆದಿವಾಸಿಗಳ ಪರ ವಕಾಲತ್ತು ವಹಿಸಿದ್ದ ವಕೀಲರಿಗೆ ಪೀಡಿಸಿ ತೊಂದರೆ ಕೊಟ್ಟ ಪ್ರಕರಣದ ಕುರಿತು ಸತ್ಯಶೋಧನೆ ನಡೆಸಿ ವರದಿಯನ್ನು ಮಂಡಿಸಿದರು

ಸಾಮಾಜಿಕ ಹೋರಾಟಗಾರನಾಗಿ ಇವೇ ಕಾರಣಗಳಿಗೆ ಪೋಲಿಸ್ ಇಲಾಖೆಯಲ್ಲಿನ ಪಟ್ಟಭದ್ರ ಹಿತಾಸಕ್ತಿಗಳಿಗೆ, ಅಧಿಕಾರ ವರ್ಗಕ್ಕೆ ಗಾಡ್ಲಿಂಗ್ ಹಿತಕರನಲ್ಲದ ಅಪ್ರಿಯರಾಗಿದ್ದರು. ಪ್ರತಿವಾದಿ ಪರವಾಗಿ ಅವರು ವಾದಿಸುವುದರ ಮೂಲಕ ಇಡೀ ಪ್ರಕರಣದ ಫಲಿತಾಂಶವನ್ನು ಬದಲಿಸುತ್ತಿದ್ದರು. ಬಾರ್ ಅಸೋಶಿಯೇಶನ್‌ನ ಬಲವಾದ ವಿರೋಧದ ನಡುವೆಯೂ ನಿರ್ಭೀತಿಯಿಂದ ಹಲವು ದಮನಿತರನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಇದರಿಂದ ಮಾಧ್ಯಮಗಳಲ್ಲಿ ನಕರಾತ್ಮಕ ಪ್ರಚಾರ ಮತ್ತು ತನಿಖಾ ತಂಡಗಳಿಂದ ಬಹಿರಂಗವಾಗಿಯೆ ಬೆದರಿಕೆಯ ಕರೆಗಳು ಬರತೊಡಗಿದವು. ನಕ್ಸಲ್‌ರು ಎಂದು ವರ್ಗೀಕರಿಸ್ಪಟ್ಟವರ ಪರವಾಗಿ ವಾದಿಸುವ ಇವರ ನಡೆಯಿಂದ ಪೋಲೀಸರು ಗಾಡ್ಲಿಂಗ್ ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದರು. ಇಂತಹ ಪ್ರಕರಣಗಳನ್ನು ಕೈಗೆತ್ತಿಕೊಳ್ಳವುದಕ್ಕೆ ಅಥವಾ ಈ ಮಾದರಿಯ ಆರೋಪಿಗಳನ್ನು ಪ್ರತಿನಿಧಿಸುವುದನ್ನು ವಿರೋಧಿಸಿ ಪೋಲೀಸ್ ಅದಿಕಾರಿಗಳು ಅನೇಕ ಬಾರಿ ತಮ್ಮ ಅಸಂತುಷ್ಟಿ ವ್ಯಕ್ತಪಡಿಸಿದ್ದರು

ಪ್ರ್ರೊ. ಜಿ.ಎನ್. ಸಾಯಿಬಾಬ ಅವರ ವಿಚಾರಣೆಯ ಸಂದರ್ಭದಲ್ಲಿ ಆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಬವಾಚೆ ಅವರು ಒಮ್ಮೆ ಸಾಯಿಬಾಬಾರನ್ನು ಜೈಲಿಗೆ ಕಳುಹಿಸಿದ ನಂತರ ವಕೀಲ ಸುರೇಂದ್ರ ಗಾಡ್ಲಿಂಗ್ ಅವರ ಸರದಿ ಎಂದು ಬಹಿರಂಗವಾಗಿ ಕೋರ್ಟ್ ಆವರಣದಲ್ಲಿ ಹೇಳಿದ್ದರು. ಗಾಡ್ಲಿಂಗ್ ಅವರ ಜ್ಯೂನಿಯರ್/ಸಹಾಯಕರ ಮುಂದೆಯೆ ಈ ಬಹಿರಂಗ ಬೆದರಿಕೆ ನೀಡಿಲಾಗಿತ್ತು. ಪ್ರತಿವಾದಿಯು ಮುಕ್ತ ಮನಸ್ಸಿನಿಂದ, ನಿರ್ಭೀತಿಯಿಂದ ವಕಾಲತ್ತು ಮುಂದುವರೆಸುವುದನ್ನು ನಿರ್ಭಂಧಿಸುವುದೇ ಈ ಬೆದರಿಕೆಯ ಉದ್ದೇಶವಾಗಿತ್ತು. ಈ ಹೆದರಿಸುವ ತಂತ್ರಕ್ಕೆ ಪೂರಕವಾಗಿ ಶರಣಾಗತನಾದ ನಕ್ಸಲೈಟ್ ಒಬ್ಬ ಗಾಡ್ಲಿಂಗ್ ವಿರುದ್ದ 164 ಹೇಳಿಕೆಗಳನ್ನು ನೀಡಿ ಬಾಲಿಶವಾದ ಅಪಾದನೆಗಳನ್ನು ಹೊರೆಸಿದ್ದ. ಈ ಪ್ರಸಕ್ತ ತನಿಖೆಯ ಅಧಿಕೃತ ಭಾಗವಾಗಿಲ್ಲದಿದ್ದರೂ ಇದೇ ಅಧಿಕಾರಿಯು ಇನ್ನೂ ಹಲವು ಅಪರಿಚಿತ ಅಧಿಕಾರಿಗಳ ಜೊತೆಯೊಂದಿಗೆ ಈ ತನಿಖೆಯನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದರು. 1990ರ ದಶಕದಿಂದಲೂ ಗಾಡ್ಲಿಂಗ್ ಅವರು ಈ ಬೆದರಿಕೆಗಳಿಗೆ ಜಗ್ಗಲಿಲ್ಲವಾದರೂ ಸಹ ತನ್ನ ಮದುವೆಯ ದಿನ ಜೇಬಿನಲ್ಲಿ ನಿರೀಕ್ಷಣಾ ಜಾಮೀನಿನ ಪ್ರತಿಯನ್ನಿಟ್ಟುಕೊಂಡಿದ್ದರು. ಆದಾಗ್ಯೂ ಪೋಲೀಸರು ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷದ ಜೊತೆ ಸೇರಿ ತಾತ್ಕಲಿಕವಾಗಿ ಗಾಡ್ಲಿಂಗ್ ಅವರನ್ನು ಮೌನಗೊಳಿಸಲು ಸಫಲರಾದರು.

ಆದರೆ ಹುಟ್ಟಾ ಹೋರಾಟಗಾರನನ್ನು ಮೌನಗೊಳಿಸಲು ಸಾದ್ಯವಿಲ್ಲ. ಯೆರವಾಡ ಜೈಲಿನಲ್ಲಿ ಬಂಧಿಸಿಟ್ಟರೂ ಸಹ ಗಾಡ್ಲಿಂಗ್ 10 ಖೈದಿಗಳಿಗೆ ಕಾನೂನು ನೆರವು ನೀಡುವುದರ ಮೂಲಕ ಅವರು ಜೈಲಿನಿಂದ ಬಿಡುಗಡೆಯಾಗಲು ನೆರವಾದರು. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ತಲೋಜಾದಲ್ಲಿನ ಅವರ ವಾಸವನ್ನು ಅಹಿತಕರವಾಗಿಸಲಾಗಿದೆ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಬಿ. ಶ್ರೀಪಾದ ಭಟ್


ಇದನ್ನೂ ಓದಿ: ಬಡಜನರಿಗೆ ವಕೀಲೆಯಾಗಿದ್ದಕ್ಕೆ ಜೈಲಿಗೆ ಹೋದ ಐಐಟಿ ಪದವೀಧರೆ ಸುಧಾ ಭಾರದ್ವಾಜ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...