Homeಮುಖಪುಟಅರುಣ್ ಫೆರೇರ: ನತದೃಷ್ಟರ ಕಾನೂನು ನೆರವಿಗೆ ಸದಾ ಲಭ್ಯವಿದ್ದ ಕಾರ್ಯಕರ್ತ

ಅರುಣ್ ಫೆರೇರ: ನತದೃಷ್ಟರ ಕಾನೂನು ನೆರವಿಗೆ ಸದಾ ಲಭ್ಯವಿದ್ದ ಕಾರ್ಯಕರ್ತ

ಜೈಲಿನಲ್ಲಿದ್ದ ದಿನಗಳ ಅನುಭವಗಳ ಕುರಿತು ಅರುಣ್ ಬರೆದ ಪುಸ್ತಕ "ಕಲರ್ಸ್ ಆಫ್ ದಿ ಕೇಜ್" ಭಾರತದಲ್ಲಿ ಜೈಲಿನನುಭವಗಳ ಕುರಿತು ಬಂದ ಪುಸ್ತಕಗಳಲ್ಲೇ ಮಹತ್ವದ್ದು. ಈ ಪುಸ್ತಕವು ಜೈಲಿನಲ್ಲಿನ ಕ್ರೂರ ವಾಸ್ತವಗಳನ್ನು ಬಹಳ ಸೂಕ್ಷ್ಮವಾಗಿ ಭಾರತೀಯರಿಗೆ ಪರಿಚಯಿಸಿತು.

- Advertisement -
- Advertisement -

ಅರುಣ್ ಫೆರೇರ ಅವರದ್ದು ಬಹುಮುಖಿ ವ್ಯಕ್ತಿತ್ವ. ಅವರು ಲೇಖಕರು, ವಕೀಲರು, ವ್ಯಂಗ್ಯಚಿತ್ರಕಾರ, ಚಳುವಳಿಗಾರ, ಉತ್ತಮ ಕತೆಗಾರ ಮತ್ತು ಅದ್ಭುತ ವ್ಯಕ್ತಿತ್ವದ ಸ್ನೇಹಿತ. ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದ ಜೈಲಿನ ಅನುಭವಗಳ ಕುರಿತಾದ ಪುಸ್ತಕ “ಕಲರ್ಸ್ ಆಫ್ ದಿ ಕೇಜ್”ನ ಕತೃ ಅರುಣ್ ಫೆರೇರ. ಸಮಾಜದಂಚಿನಲ್ಲಿರುವ ಜನರಿಗೆ ಉಚಿತವಾಗಿ ಕಾನೂನು ಸಹಾಯಗಳನ್ನು ಒದಗಿಸುವ ಸಂಘಟನೆಯಾದ ’ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾಯರ್ಸ್’ನ (IAPL) ಪ್ರಮುಖ ಸದಸ್ಯರು. ತುರ್ತು ಪರಿಸ್ಥಿತಿಯ ದಮನ ಕಾರ್ಯಗಳ ನಂತರದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸ್ಥಾಪಿತವಾದ ’ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್’ನ (ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣಾ ಸಮಿತಿ) ಸದಸ್ಯರೂ ಹೌದು.

2007ರ ಮೇ ತಿಂಗಳಿನಲ್ಲಿ ಅರುಣ್ ಫೆರೇರರನ್ನು ಅಕ್ರಮವಾಗಿ ಬಂಧಿಸಿ, ಹಿಂಸಿಸಲಾಯಿತು. ತದನಂತರ ಅವರಿಗೆ ’ನಕ್ಸಲೈಟ್’ ಎಂಬ ಹಣೆಪಟ್ಟಿ ಹಚ್ಚಿ ಕಠಿಣಾತಿ ಕಠಿಣ ಯುಎಪಿಎ ಕಾಯ್ದೆಯಡಿ ಆರೋಪಪಟ್ಟಿ ದಾಖಲಿಸಲಾಯಿತು. ಪೋಲೀಸರು ಅರುಣ್ ರವರನ್ನು ದೈಹಿಕವಾಗಿ ಹಿಂಸೆಗೆ ಒಳಪಡಿಸಿದ್ದನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಅವರ ದುರ್ಬಲ ಶರೀರದ ಫೋಟೋಗಳು ಧೃಡಪಡಿಸಿದವು.

ಸುಳ್ಳು ಕೇಸುಗಳಡಿಯಲ್ಲಿ ಬಂಧನಕ್ಕೊಳಪಡಿಸಿ ಕುಟುಂಬಸ್ಥರು, ಸ್ನೇಹಿತರು ಮತ್ತು ಸಂಗಾತಿಗಳಿಂದ ದೂರವಾಗಿಸಿದ ಘಟನೆಗಳು ಮೂಡಿಸಿದ ಆಘಾತವನ್ನು ಅರುಣ್ ರವರ ಸರಳ ನಗು ಮತ್ತು ವ್ಯಕ್ತಿತ್ವವು ಮರೆಮಾಚುತ್ತಿತ್ತು. 2007ರಲ್ಲಿ ಬಂಧನವಾದ ನಂತರ ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಜರ್ಜರಿತ ವ್ಯಕ್ತಿಯೇ ಈ ನಗುಮುಖದ ಮನುಷ್ಯ ಎಂಬುದನ್ನು ಅರಿಯುವುದೇ ಹಲವರಿಗೆ ಕಷ್ಟವಾಗಿರಬಹುದು.

2010ರ ಸೆಪ್ಟೆಂಬರ್ ತಿಂಗಳಿನಲ್ಲಿ ನಾಗಪುರದ ನ್ಯಾಯಾಲಯ ಅರುಣ್‌ರವರನ್ನು ದೋಷಮುಕ್ತರನ್ನಾಗಿಸಿ ಖುಲಾಸೆಗೊಳಿಸುತ್ತದೆ. ಜೈಲಿನ ಆವರಣದಿಂದ ಹೊರಬಂದ ಅರುಣ್‌ರವರನ್ನು ಸಾದಾ ಉಡುಪಿನಲ್ಲಿದ್ದ ಪೋಲೀಸರು ಮತ್ತೆ ಬಂಧಿಸುತ್ತಾರೆ. ಅರುಣ್‌ರವರ ಬರುವಿಕೆಗೆ ಕಾಯುತ್ತಿದ್ದ ಕುಟುಂಬದವರನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಅವರಿಗೆ ದಕ್ಕುವುದಿಲ್ಲ. ಅರುಣ್ ಜೈಲಿನಲ್ಲಿದ್ದ ಸಮಯದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಅವರ ಮೇಲೆ ಕೇಸ್ ದಾಖಲಿಸಿಬಿಡುತ್ತಾರೆ! ಒಟ್ಟು ನಾಲ್ಕು ವರ್ಷ ಎಂಟು ತಿಂಗಳು ಜೈಲುವಾಸವನ್ನನುಭವಿಸಿದ ಅರುಣ್ 2012ರ ಜನವರಿಯಲ್ಲಿ ಸ್ವತಂತ್ರರಾಗುತ್ತಾರೆ. ಆ ಸಮಯದಲ್ಲಿ ನಾರ್ಕೋಅನಾಲಿಸಿಸ್ ಪರೀಕ್ಷೆ ಕಾನೂನಿಗೆ ಹೊರತಾದುದಾಗಿರಲಿಲ್ಲ. ಪೋಲೀಸರು ಅರುಣ್ ರವರನ್ನು ಈ ಪರೀಕ್ಷೆಗೆ ಒಳಪಡಿಸಿದ್ದರು. ಚಳುವಳಿಗಾರರು ನಾರ್ಕೋಅನಾಲಿಸಿಸ್ ಪರೀಕ್ಷೆಯನ್ನು ವಿರೋಧಿಸುವ ಕಾರ್ಯದಲ್ಲಿ ತೊಡಗಲು ಅರುಣ್‌ರವರ ಪ್ರಕರಣ ಕಾರಣವಾಯಿತೆಂದರೆ ತಪ್ಪಲ್ಲ.

ವರುಷಗಳ ಕಾಲ ಜೈಲಿನಲ್ಲಿ ಕಳೆದರೂ ಸಹಿತ, ಬಿಡುಗಡೆಯಾದ ನಂತರ ಅರುಣ್ ಸಿದ್ಧಾರ್ಥ ಕಾಲೇಜಿನಲ್ಲಿ 2015 ರಲ್ಲಿ ತಮ್ಮ ಲಾ ಪದವಿಯನ್ನು ಪೂರ್ತಿಗೊಳಿಸಿ 2016ರಿಂದ ವಕೀಲರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ. ತಮ್ಮ ರಾಜಕೀಯ ಮತ್ತು ಚಳುವಳಿಯನ್ನು ನ್ಯಾಯಾಲಯದ ಅಂಗಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ವಕೀಲರ ಅವಶ್ಯಕತೆ ಇರುವ, ವಕೀಲರ ದೊಡ್ಡ ಮೊತ್ತದ ಫೀಸನ್ನು ಕಟ್ಟಲು ಅಶಕ್ತರಾಗಿರುವ ಜನರನ್ನು ಪ್ರತಿನಿಧಿಸುತ್ತಾರೆ ಅರುಣ್ ಫೆರೇರ.

ಅರುಣ್

ಜೈಲಿನಲ್ಲಿದ್ದ ದಿನಗಳ ಅನುಭವಗಳ ಕುರಿತು ಅರುಣ್ ಬರೆದ ಪುಸ್ತಕ “ಕಲರ್ಸ್ ಆಫ್ ದಿ ಕೇಜ್” ಭಾರತದಲ್ಲಿ ಜೈಲಿನನುಭವಗಳ ಕುರಿತು ಬಂದ ಪುಸ್ತಕಗಳಲ್ಲೇ ಮಹತ್ವದ್ದು. ಈ ಪುಸ್ತಕವು ಜೈಲಿನಲ್ಲಿನ ಕ್ರೂರ ವಾಸ್ತವಗಳನ್ನು ಬಹಳ ಸೂಕ್ಷ್ಮವಾಗಿ ಭಾರತೀಯರಿಗೆ ಪರಿಚಯಿಸಿತು. ಬಂಧನ ದಿನಗಳಲ್ಲಿನ ಚಿತ್ರಹಿಂಸೆ, ವರುಷಗಳ ಕಾಲ ಸುಳ್ಳು ಕೇಸುಗಳನ್ನಾಕಿ ಹಿಂಸಿಸುವ ಪರಿ ಮತ್ತು ನೆಲದ ಕಾನೂನನ್ನು ಹಾಡಹಗಲಿನಲ್ಲೇ ಮೀರಿನಿಲ್ಲುವ ವ್ಯವಸ್ಥೆಯ ಕುರಿತು ಅರುಣ್ ಬರೆದರು. ಕ್ರೂರತೆಯ ವಿರುದ್ಧ ಸಿಡಿದೆದ್ದು ಮುಷ್ಕರಕ್ಕಿಳಿಯುವ ಖೈದಿಗಳು, ಭರವಸೆ ಕಳೆದುಹೋಗದಂತೆ ಕಾಪಿಡುವ ಪುಟ್ಟ ಸಮಾಧಾನಗಳ ಕುರಿತು ಬರೆದರು. ಕುಖ್ಯಾತ ’ಅಂಡಾ’ ಕೊಠಡಿಯೊಳಗಿನ ಒಂಟಿ ಜೈಲು ವಾಸದ ಕುರಿತು ಬರೆಯುತ್ತಾ ಅರುಣ್ “ಭಯಹುಟ್ಟಿಸುವ ಅಂಡಾ ಸೆಲ್ಲಿನ ವಾತಾವರಣಕ್ಕಿಂತ ಹೆಚ್ಚಾಗಿ ಮನುಷ್ಯರ ಸಂಪರ್ಕವೇ ಇರದಿರುವುದು ಉಸಿರುಗಟ್ಟಿಸುತ್ತದೆ. ಅಂಡಾ ಸೆಲ್ಲಿನೊಳಗಿದ್ದಾಗ ಹದಿನೈದು ಘಂಟೆಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯ ಆ ಕೊಠಡಿಯೊಳಗೆ ನೀವು ಒಬ್ಬರೇ ಕಳೆಯುತ್ತೀರಿ. ನೀವು ನೋಡುವ ಇನ್ನಿತರೆ ಮನುಷ್ಯರೆಂದರೆ ಕಾವಲುಗಾರರು ಮತ್ತು ಅತಿ ಅಪರೂಪಕ್ಕೆ ನಿಮ್ಮ ವಿಭಾಗದಲ್ಲಿರುವ ಇನ್ನಿತರೆ ಖೈದಿಗಳು. ಅಂಡಾ ಸೆಲ್ಲಿನಲ್ಲಿ ಕೆಲವು ವಾರಗಳನ್ನು ಕಳೆದರೆ ಮನುಷ್ಯ ಕುಸಿದುಬಿಡುತ್ತಾನೆ” ಎನ್ನುತ್ತಾರೆ.

’ಕಲರ್ಸ್ ಆಫ್ ಕೇಜ್’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅರುಣ್ “ನಾನೊಬ್ಬ ಚಳುವಳಿಗಾರನಾದರೆ ಏನಾಯಿತು? ಶಂಕಿತ ಮಾವೋವಾದಿಗಳ ಅಥವಾ ಭಯೋತ್ಪಾದಕರ ಪ್ರಕರಣಗಳನ್ನು ನಿಭಾಯಿಸದರೇನಾಯಿತು? ಒಬ್ಬ ವಕೀಲನಾಗಿ ಶಂಕಿತರ ಕೇಸುಗಳನ್ನು ನಾನು ತೆಗೆದುಕೊಂಡರೇನಾಯಿತು? ಈ ಕಾರಣಗಳಿಂದಾಗಿ ನನ್ನನ್ನೂ ಅದೇ ಪ್ರಕರಣಗಳಲ್ಲಿ ಸುಳ್ಳು ಸುಳ್ಳೇ ಸಿಕ್ಕಿಸುವ ಸವಲತ್ತು ಈ ವ್ಯವಸ್ಥೆಗೆ ಸಿಕ್ಕಿದ್ದಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ.

ದುರದೃಷ್ಟವಶಾತ್ ಈ ಬಾರಿ ಅರುಣ್ ಫೆರೇರರನ್ನು ಸ್ಪಷ್ಟವಾಗಿ ಈ ಕಾರಣಗಳಿಗಾಗಿಯೇ ಬಂಧಿಸಿದ್ದಾರೆ, ಕಾನೂನಾತ್ಮಕ ಸಹಾಯ ಪಡೆಯಲು ಸಾಧ್ಯವಾಗದೆ ಭಾರತದ ಜೈಲುಗಳಲ್ಲಿ ಕೊಳೆಯುತ್ತಿರುವ ಜನರ ಹಕ್ಕುಗಳ ಕುರಿತಾಗಿ ಮಾತನಾಡಿದ ಕಾರಣಕ್ಕೆ ಅರುಣ್ ಫೆರೇರರನ್ನು ಬಂಧಿಸಿದ್ದಾರೆ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಡಾ. ಕೆ ಆರ್ ಅಶೋಕ್


ಇದನ್ನೂ ಓದಿ; ಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...