Homeಅಂತರಾಷ್ಟ್ರೀಯಸ್ವಿಟ್ಜರ್ ಲೆಂಡ್ ನ ಲಕ್ಷಾಂತರ ಮಹಿಳೆಯರು ಒಮ್ಮೆಗೆ ಬೀದಿಗಿಳಿದಿದ್ದು ಏಕೆ ಗೊತ್ತಾ!

ಸ್ವಿಟ್ಜರ್ ಲೆಂಡ್ ನ ಲಕ್ಷಾಂತರ ಮಹಿಳೆಯರು ಒಮ್ಮೆಗೆ ಬೀದಿಗಿಳಿದಿದ್ದು ಏಕೆ ಗೊತ್ತಾ!

ಸ್ವಿಟ್ಜರ್ ಲೆಂಡ್ ನ ಮಹಿಳೆಯರಿಗೆ ಮತದಾನದ ಹಕ್ಕು ದೊರಕಿದ್ದು 1971ರಲ್ಲಿ. ಅಷ್ಟು ಮಾತ್ರವಲ್ಲ, 1985ರವರೆಗೆ ಸ್ವಿಟ್ಜರ್ಲೆಂಡ್ ನ ಮಹಿಳೆ ಬ್ಯಾಂಕ್ ಅಕೌಂಟ್ ತೆರೆಯಲು ಗಂಡನ ಅನುಮತಿ ಪಡೆಯಲೇಬೇಕಿತ್ತು

- Advertisement -
- Advertisement -

ದೇಶಗಳು ಎಷ್ಟೇ ಶ್ರೀಮಂತವಾಗಿದ್ದರೂ, ಅಭಿವೃದ್ಧಿ ಹೊಂದಿದ್ದರೂ ಅಲ್ಲಿನ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ನೋಡುವ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ಎಂಬುದು ಬೇಸರದ ಸಂಗತಿ. ಇವತ್ತು ನಾವು ಹೇಳ ಹೊರಟಿರುವುದು ‘ಕಪ್ಪು ಹಣದ ಖಜಾನೆ’ಯಾಗಿರುವ ಸ್ವಿಟ್ಜರ್ ಲೆಂಡ್ ನ ಮಹಿಳೆಯರ ಬಗ್ಗೆ.

ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಸ್ವಿಟ್ಜರ್ ಲೆಂಡ್ ತನ್ನ ದೇಶದ ಮಹಿಳೆಯರನ್ನು ಅಸಮಾನತೆಯಿಂದ ನಡೆಸಿಕೊಳ್ಳುತ್ತದೆ ಎಂದರೆ ನೀವು ನಂಬಲೇಬೇಕು. ಕಳೆದ ಒಂದು ವಾರದ ಹಿಂದೆ ಶುಕ್ರವಾರ (ಜೂನ್ 14)ರಂದು ಸ್ವಿಟ್ಜರ್ ಲೆಂಡ್ ನ ಮಹಿಳೆಯರು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ, ಹೆಚ್ಚಿನ ಗೌರವ ಹಾಗೂ ಸಮಾನತೆ ಸಿಗಲೇಬೇಕು ಇದು ಹೋರಾಟದ ಹಕ್ಕೊತ್ತಾಯವಾಗಿತ್ತು.

ಸುಮಾರು 30 ವರ್ಷಗಳ ತರುವಾಯು ರಾಷ್ಟ್ರದಾದ್ಯಂತ ಸಮಾನ ಹಕ್ಕುಗಳಿಗಾಗಿ ಆಗ್ರಹಿಸಿ ಲಕ್ಷಾಂತರ ಮಹಿಳೆಯರು ಬೀದಿಗಿಳಿದಿದ್ದಾರೆ. ರಸ್ತೆ, ಇಕ್ಕೆಲಗಳ ತುಂಬೆಲ್ಲಾ ನೇರಳೆ ಬಣ್ಣದ ಧ್ವಜಗಳು, ಮಹಿಳೆಯರ ಮೆರವಣಿಗೆಗಳು ರಾರಾಜಿಸುತ್ತಿದ್ದವು.

ಸ್ವಿಟ್ಜರ್ ಲೆಂಡ್ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು ಯಾವಾಗ ಗೊತ್ತೆ?

ಪ್ರವಾಸಿಗರ ಸ್ವರ್ಗವಾಗಿರುವ, ‘ಅಭಿವೃದ್ಧಿ ದೇಶ’ ಎನಿಸಿಕೊಂಡಿರುವ ಸ್ವಿಟ್ಜರ್ ಲೆಂಡ್ ನ ಮಹಿಳೆಯರಿಗೆ ಮತದಾನದ ಹಕ್ಕು ದೊರಕಿದ್ದು 1971ರಲ್ಲಿ. ಅಂದರೆ ಭಾರತ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಮತದಾನದ ಹಕ್ಕು ಸಿಕ್ಕ ಹಲವು ದಶಕಗಳ ನಂತರ. ಅಷ್ಟು ಮಾತ್ರವಲ್ಲ, 1985ರವರೆಗೆ ಸ್ವಿಟ್ಜರ್ಲೆಂಡ್ ನ ಮಹಿಳೆ ಬ್ಯಾಂಕ್ ಅಕೌಂಟ್ ತೆರೆಯಲು ಗಂಡನ ಅನುಮತಿ ಪಡೆಯಲೇಬೇಕಿತ್ತು ಎಂಬುದು ಅಲ್ಲಿನ ಅಸಮಾನತೆಯ, ಪುರುಷಾಧಿಪತ್ಯದ ಗಂಭೀರತೆಯನ್ನು ತಿಳಿಸುತ್ತದೆ.

ಮಹಿಳೆಯರಿಗೆ ಪುರುಷರಷ್ಟೆ ಸಮಾನ ಅವಕಾಶ ಸಿಗುತ್ತಿದೆಯೇ ಎಂದು ನೋಡಿದರೆ ಅದು ಕೂಡ ಪ್ರಶ್ನೆಯಾಗಿಯೇ ಉಳಿಯಬಹುದು. ಇಲ್ಲಿನ ಮಹಿಳಾ ಉದ್ಯೋಗಿಗಳಿಗೆ ‘ಹೆರಿಗೆ ರಜೆ’ ಪರಿಚಯವಾಗಿದ್ದು, ಜಾರಿಗೆ ಬಂದದ್ದು ತೀರಾ ಇತ್ತೀಚೆಗೆ 2005ರಲ್ಲಿ.

ಸ್ವಿಟ್ಜರ್ ಲೆಂಡ್ ಶೇ.59 ರಷ್ಟು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎನ್ನುತ್ತವೆ ಇತ್ತೀಚಿನ ಆಮ್ನೆಸ್ಟಿ ಅಂತರರಾಷ್ಟ್ರೀಯ ಸಮೀಕ್ಷೆಯ ನಡೆಸಿದ ವರದಿಗಳು. ಅಂದರೆ ಅಲ್ಲಿನ ಮಹಿಳೆಯರಿಗೆ ಸಮಾನ ಗೌರವವೆಂಬುದು ಕನಸಿನ ಮಾತಾಗಿದೆ

ಹಾಗಾಗಿ ಶಿಕ್ಷಕರು, ಕ್ಲೀನರ್ ಗಳು, ಆರೋಗ್ಯ ಪಾಲಕರು ಹಾಗೂ ಇತರೆ ಉದ್ಯೋಗದಲ್ಲಿ ಸಮಾನ ವೇತನ ಸಿಗಬೇಕು, ಸಮಾನ ಗೌರವ ಸಿಗಬೇಕು ಎಂಬುದು ಇವರ ಹಕ್ಕೊತ್ತಾಯವಾಗಿದೆ.

ಸ್ವಿಟ್ಜರ್ ಲೆಂಡ್ ಇತಿಹಾಸದಲ್ಲಿಯೇ 1991ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿ ಇತಿಹಾಸ ನಿರ್ಮಿಸಿದ್ದರು. ಸುಮಾರು ಎರಡು ದಶಕಗಳ ನಂತರ ಜೂನ್ 14ರಂದು ಇವರು ನಡೆಸಿದ ಹೋರಾಟದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಕೆಲಸವನ್ನು ಬಿಟ್ಟು ಬೀದಿಗಳಿದು ಹೋರಾಟ ನಡೆಸಿದ್ದರು.

ಹಲವಾರು ಪತ್ರಿಕೆಗಳು ಈ ಹೋರಾಟಕ್ಕೆ  ಬೆಂಬಲ ಸೂಚಿಸಿ ಅದಕ್ಕಾಗಿ ರಜೆ ಹಾಕಿದ್ದ ಮಹಿಳೆಯರಿಗೆ ದಂಡ ವಿಧಿಸುವುದಿಲ್ಲ ಎಂದು ಘೋಷಿಸಿದ್ದರು. ಅಷ್ಟೆ ಅಲ್ಲದೇ ಲೀ ಟೈಮ್ಸ್ ಪತ್ರಿಕೆ ಮಹಿಳಾ ಪತ್ರಕರ್ತರು ಬರೆಯುತ್ತಿದ್ದ ಅಂಕಣಗಳ ಜಾಗವನ್ನು ಖಾಲಿ ಬಿಟ್ಟು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು ಎನ್ನಲಾಗಿದೆ.

ಆಧಾರ: ದಿ ಗಾರ್ಡಿಯನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...