Homeಮುಖಪುಟಲೈಂಗಿಕ ಗುಲಾಮಗಿರಿಯ ಅಪಾಯದ ಅಂಚಿನಲ್ಲಿ ಅಫ್ಘಾನ್ ಮಹಿಳೆಯರು

ಲೈಂಗಿಕ ಗುಲಾಮಗಿರಿಯ ಅಪಾಯದ ಅಂಚಿನಲ್ಲಿ ಅಫ್ಘಾನ್ ಮಹಿಳೆಯರು

- Advertisement -

ಅಫ್ಘಾನಿಸ್ಥಾನದ ಈಗ ತಾಲಿಬಾನಿಗಳ ವಶವಾಗಿದೆ. ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ಲಾ ಅಫ್ಘಾನ್‌ನ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಆಫ್ಘಾನ್‌ನಲ್ಲಿ ತಾಲಿಬಾನ್‌ ಆಡಳಿತ ಆರಂಭವಾಗಿದ್ದು, ಅಲ್ಲಿನ ಮಹಿಳೆಯರು ಲೈಂಗಿಕ ಗುಲಾಮಗಿರಿಯ ಅಪಾಯದ ಅಂಚಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ದಾಳಿಯು ಮಹಿಳೆಯರನ್ನು ನಿಯಂತ್ರಿಸುವ ಕ್ರಮವನ್ನು ಒಳಗೊಂಡಿದೆ. ದೇಶದ ದೊಡ್ಡ ಭಾಗಗಳ ಮೇಲೆ ತಾಲಿಬಾನ್‌ ನಿಯಂತ್ರಣ ಸಾಧಿಸಿದೆ. ಆದರೆ, ಕನಿಷ್ಟ ಪ್ರತಿರೋಧ ಮತ್ತು ಅಂತರಾಷ್ಟ್ರೀಯ ಒತ್ತಡದ ಕೊರತೆಯಿಂದಾಗಿ ಅವರ ಹಿಂಸಾಚಾರ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಅಫ್ಘಾನ್‌ ಮಹಿಳೆಯರಿಗೆ ಅಪಾಯವನ್ನು ತದ್ದೊಡ್ಡುತ್ತಿದೆ.

ಈ ಹಿಂದೆ ಜುಲೈನಲ್ಲಿ, ತಾಲಿಬಾನಿಗಳೊಂದಿಗೆ ‘ಮದುವೆ’ ಮಾಡಲು 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ಮತ್ತು 45 ವರ್ಷದೊಳಗಿನ ವಿಧವೆಯರ ಪಟ್ಟಿಯನ್ನು ನೀಡುವಂತೆ ಅಫ್ಘಾನ್‌ನ ಸ್ಥಳೀಯ ಧಾರ್ಮಿಕ ಮುಖಂಡರಿಗೆ ತಾಲಿಬಾನ್ ಕೇಳಿತ್ತು.

ಈ ಬಲವಂತದ ಮದುವೆಗಳು ನಡೆದರೆ, ಮಹಿಳೆಯರು ಮತ್ತು ಹುಡುಗಿಯರನ್ನು ಪಾಕಿಸ್ತಾನದ ವಜೀರಿಸ್ತಾನಕ್ಕೆ ಕರೆದೊಯ್ದು ಪುನಃ ಶಿಕ್ಷಣ ನೀಡಲಾಗುವುದು ಮತ್ತು ‘ಅಧಿಕೃತ ಇಸ್ಲಾಂ’ಗೆ ಪರಿವರ್ತಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ: ಅಫ್ಘಾನ್‌‌ ಪತನ: ನೆರೆ ದೇಶಗಳಿಗೆ ಸಂಬಂಧಿಸಿದ ವಿದೇಶಾಂಗ ನೀತಿಯನ್ನು ಪರಿಶೀಲಿಸಬೇಕು – ಶರದ್ ಪವಾರ್

ಈ ತಾಲಿಬಾನ್ ಆಕ್ರಮಣದಿಂದ ಮುಂದೆ ಏನಾಗಲಿದೆ ಎಂಬುದಕ್ಕೆ ಎಚ್ಚರಿಕೆಯಾಗಿ, 1996-2001ರ ನಡುವಿನ ತಾಲಿಬಾನ್‌ಗಳ ಕ್ರೂರ ಆಡಳಿತವು ನಮ್ಮ ಮುಂದಿದೆ. ಆ ಸಮಯದಲ್ಲಿ ಮಹಿಳೆಯರು ನಿರಂತರ ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾಗಿದ್ದರು. ಅವರಿಗೆ ಉದ್ಯೋಗ ಮತ್ತು ಶಿಕ್ಷಣವನ್ನು ನಿರಾಕರಿಸಲಾಗಿತ್ತು ಬುರ್ಖಾ ಧರಿಸಲು ಒತ್ತಾಯಿಸಲಾಯಿತು ಮತ್ತು ಮನೆಯಿಂದ ಹೊರಹೋಗುವುದನ್ನು ನಿಷೇಧಿಸಲಾಗಿತ್ತು.

ಮಹಿಳೆಯರು ಮತ್ತು ಅವರ ಹಕ್ಕುಗಳ ಬಗ್ಗೆ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ ಎಂದು ತಾಲಿಬಾನ್‌ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೂ, ಅವರ ಕ್ರಮಗಳು ಸಾವಿರಾರು ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಗೆ ಒಪ್ಪಿಸುವ ಪ್ರಯತ್ನಗಳು ಇತ್ತೇಚೆಗೆ ನಡೆದಿವೆ.

ಇದಲ್ಲದೆ, ತಾಲಿಬಾನ್ 12 ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣುಮಕ್ಕಳ ಶಿಕ್ಷಣವನ್ನು ನಿರಾಕರಿಸುವ ಉದ್ದೇಶವನ್ನು ಸೂಚಿಸಿದೆ. ಅಲ್ಲದೆ, ಮಹಿಳೆಯರಿಗೆ ಉದ್ಯೋಗ ನಿರಾಕರಣೆಯ ನಿಯಮವನ್ನು ಪುನರ್‌ಸ್ಥಾಪಿಸುವ ಉದ್ದೇಶವಿದೆ.

ಕಳೆದ 20 ವರ್ಷಗಳಲ್ಲಿ ಅಫಘಾನ್ ಮಹಿಳೆಯರು ಗಳಿಸಿದ ಹಕ್ಕುಗಳು, ವಿಶೇಷವಾಗಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಭಾಗವಹಿಸುವಿಕೆಯನ್ನು ಮತ್ತೆ ಕಳೆದುಕೊಳ್ಳುವ ಅಪಾಯ ಈಗ ಎದುರಾಗಿದೆ.

ತಾಲಿಬಾನ್‌ಗಳಿಗೆ ಮಹಿಳೆಯರನ್ನು ವಿವಾಹ ಮಾಡಿಸುವ ಕೃತ್ಯ, ಅವರನ್ನು ತಾಲಿಬಾನ್‌ಗೆ ಸೇರಿಸುವ ತಂತ್ರವಾಗಿದೆ. ಇದು ವಿವಾಹವಲ್ಲ, ಲೈಂಗಿಕ ಗುಲಾಮಗಿರಿಯಾಗಿದೆ. ಮದುವೆಯ ನೆಪದಲ್ಲಿ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಗೆ ತಳ್ಳುವುದು ಯುದ್ಧ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಜಿನೇವಾ ಸಮಾವೇಶದ ಪರಿಚ್ಛೇದ 27 ಹೇಳುತ್ತದೆ.

ಇದನ್ನೂ ಓದಿ: ಅಫ್ಘಾನ್ ಪತನ: ಕಾಬೂಲ್‌ನಿಂ‌ದ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರ

“ಮಹಿಳೆಯರನ್ನು ವಿಶೇಷವಾಗಿ ಅವರ ಗೌರವದ ಮೇಲಾಗು ದಮನ, ಅತ್ಯಾಚಾರ, ಬಲವಂತದ ವೇಶ್ಯಾವಾಟಿಕೆ ಅಥವಾ ಯಾವುದೇ ರೀತಿಯ ಅಸಭ್ಯ ಆಕ್ರಮಣದಿಂದ ರಕ್ಷಿಸಬೇಕು” ಎಂದು 27ನೇ ಪರಚ್ಛೇದ ಹೇಳಿದೆ.

2008 ರಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 1820ರ ನಿರ್ಣಯವನ್ನು ಅಂಗೀಕರಿಸಿತು. “ಅತ್ಯಾಚಾರ ಮತ್ತು ಇತರ ಲೈಂಗಿಕ ದೌರ್ಜನ್ಯಗಳು ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು” ಎಂದು ಅದು ಘೋಷಿಸಿತು.

ಈಗ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಏನಾಗುತ್ತದೆ ಎಂಬುದು ಅಲ್ಲಿನ ದೌರ್ಜನ್ಯಗಳನ್ನು ತಡೆಯಲು ವಿಶ್ವಸಂಸ್ಥೆಯು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ತಜ್ಞರಿಂದ ಬಂದಿರುವ ಸಲಹೆಗಳಲ್ಲಿ ಸುಸ್ಥಿರ ಶಾಂತಿ ಮತ್ತು ತಕ್ಷಣದ ಕದನ ವಿರಾಮವನ್ನು ತರುವ ಕ್ರಮಗಳು ಸೇರಿವೆ. ಅಲ್ಲದೆ, ಮಹಿಳಾ ಹಕ್ಕುಗಳನ್ನು ಖಾತರಿಪಡಿಸುವುದು, ಅಫ್ಘಾನಿಸ್ತಾನದ ಸಂವಿಧಾನ ಮತ್ತು ರಾಷ್ಟ್ರೀಯ ಶಾಸನ ಮತ್ತು ಅಂತರಾಷ್ಟ್ರೀಯ ಕಾನೂನಿನಲ್ಲಿ ಪ್ರತಿಪಾದಿಸಲಾಗಿದೆ.

ಪ್ರಸ್ತುತ, ಅಫ್ಘಾನ್ ಸರ್ಕಾರದ ತಂಡದಲ್ಲಿ ಕೇವಲ ನಾಲ್ಕು ಮಹಿಳಾ ಶಾಂತಿ ಸಂಧಾನಕಾರರಿದ್ದಾರೆ ಮತ್ತು ತಾಲಿಬಾನ್‌ಗಳಲ್ಲಿ ಯಾರೂ ಇಲ್ಲ. ತಾಲಿಬಾನ್ ವಿರುದ್ಧವಿರುವ ನಿರ್ಬಂಧಗಳನ್ನು ತೆಗೆದುಹಾಕುವ ಕ್ರಮಗಳ ಸಂದರ್ಭದಲ್ಲಿ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ಬದ್ಧತೆಯನ್ನೂ ಕೂಡ ಅನುಸರಿಸಬೇಕಾಗಿದೆ.

ಪ್ರಸ್ತುತ ಅಫ್ಘಾನಿಸ್ತಾನಕ್ಕೆ ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕಾ ಅತಿದೊಡ್ಡ ದಾನಿಗಳಾಗಿದ್ದು, ಮಹಿಳಾ ಹಕ್ಕುಗಳು ಮತ್ತು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ನೀಡಬೇಕು.

ಮಹಿಳೆಯರಿಗೆ ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆ ಮತ್ತು ನ್ಯಾಯಕ್ಕೆ ಸಮಾನ ಪ್ರವೇಶವಿದೆ ಎಂದು ಖಚಿತಪಡಿಸಿಕೊಳ್ಳಲು ಯುಎನ್ ಮತ್ತು ಅಂತರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಅಫ್ಘಾನಿಸ್ತಾನ ಮತ್ತು ಇತರ ಪ್ರದೇಶದಾದ್ಯಂತ ಮಹಿಳೆಯರು ಸ್ವಾಗತಿಸುತ್ತಾರೆ.

ಮೂಲ: ಔಟ್‌ಲುಕ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಅಫ್ಘಾನ್ ಪತನ: ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು; ಟೇಕಾಫ್‌ ಆದ ವಿಮಾನದಿಂದ ಬಿದ್ದ ಜನರು!

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial