Homeಮುಖಪುಟಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಪಿಯೂಷ್ ಗೋಯಲ್-ರಾಹುಲ್ ಗಾಂಧಿ ನಡುವೆ ವಾಕ್ಸಮರ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಪಿಯೂಷ್ ಗೋಯಲ್-ರಾಹುಲ್ ಗಾಂಧಿ ನಡುವೆ ವಾಕ್ಸಮರ

- Advertisement -
- Advertisement -

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ತೀವ್ರ ವಾಕ್ಸಮರ ನಡೆದಿದೆ.

ಶುಕ್ರವಾರ (ಫೆ.13) ದೇಶದ ಪ್ರಮುಖ ರೈತ ಸಂಘಟನೆಗಳ ನಾಯಕರೊಂದಿಗೆ ರಾಹುಲ್ ಗಾಂಧಿ ನಡೆಸಿದ ಸಭೆಯನ್ನು ‘ಹಂತ-ಹಂತವಾಗಿ ಸಂಘಟಿಸಿದ ಕೃತಕ ಮತ್ತು ನಕಲಿ’ ಸಭೆ ಎಂದು ಟೀಕಿಸಿದ ಪಿಯೂಷ್ ಗೋಯಲ್, ರಾಹುಲ್ ಗಾಂಧಿ ಮುಗ್ದರು, ಶ್ರಮಿಕರೂ ಆದ ಅನ್ನದಾತರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ರಾಹುಲ್ ಗಾಂಧಿಯವರು ಮತ್ತೊಮ್ಮೆ ಹಂತ-ಹಂತವಾಗಿ ರೂಪಿಸಲಾದ, ಅತ್ಯಂತ ಕೃತಕ ಮತ್ತು ನಕಲಿ ನಿರೂಪಣೆಯನ್ನು ಹೊರತಂದಿದ್ದಾರೆ. ಈ ಬಾರಿ, ಅವರು ರೈತ ನಾಯಕರೆಂದು ನಟಿಸುತ್ತಿರುವ ಕೆಲವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹೆಗಲ ಮೇಲೆ ಇಟ್ಟು ಗುಂಡು ಹಾರಿಸುತ್ತಿದ್ದಾರೆ. ಇದು ಸಂಪೂರ್ಣ ಕೃತಕ ಮತ್ತು ಆಧಾರರಹಿತ ಸಂಭಾಷಣೆಯಾಗಿದೆ” ಎಂದಿರುವ ಗೋಯಲ್, ‘ಫರ್ಜಿ (ನಕಲಿ) ರಾಹುಲ್ ಗಾಂಧಿ’ ಎಂಬ ಶೀರ್ಷಿಕೆಯೊಂದಿಗೆ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

“ವ್ಯಾಪಾರ ಒಪ್ಪಂದದ ಕುರಿತ ರಾಹುಲ್ ಗಾಂಧಿಯವರ ಹೇಳಿಕೆಗಳು ‘ನಕಲಿ ಮತ್ತು ಕಟ್ಟುಕಥೆ’ ಎಂದಿರುವ ಗೋಯಲ್, ರೈತರ ಹಿತಾಸಕ್ತಿಗಳನ್ನು ‘ಮೋದಿ ಸರ್ಕಾರ ಸಂಪೂರ್ಣವಾಗಿ ರಕ್ಷಿಸಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

“ರೈತರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ’ ಎಂಬುವುದನ್ನು ನಾನು ದಾಖಲೆಯೊಂದಿಗೆ ಮತ್ತು ಸಂಪೂರ್ಣ ಜವಾಬ್ದಾರಿಯೊಂದಿಗೆ ಹೇಳುತ್ತಿದ್ದೇನೆ. ಇದು ನಮ್ಮ ರೈತರು, ಮೀನುಗಾರರು, ಯುವಕರು, ಎಂಎಸ್‌ಎಂಇಗಳು, ಕುಶಲಕರ್ಮಿಗಳು ಮತ್ತು ನವೋದ್ಯಮಗಳಿಗೆ ಸಹಾಯ ಮಾಡುವ ವ್ಯಾಪಾರ ಒಪ್ಪಂದವಾಗಿದೆ” ಎಂದಿದ್ದಾರೆ.

“ರಾಹುಲ್ ಗಾಂಧಿ, ಇಂದು ನೀವು ನಾಟಕ ಕಲಾವಿದರಾಗಿ ಮತ್ತು ನಕಲಿ, ಆಧಾರರಹಿತ ಆರೋಪಗಳು ಮತ್ತು ಕಟ್ಟುಕಥೆಗಳ ನಿರಂತರ ವ್ಯಾಪಾರಿಯಾಗಿ ಸಂಪೂರ್ಣವಾಗಿ ಬಹಿರಂಗಗೊಂಡಿದ್ದೀರಿ” ಎಂದು ವಾಗ್ದಾಳಿ ನಡೆಸಿದ್ದಾರೆ.

ವ್ಯಾಪಾರ ಒಪ್ಪಂದದ ಅಡಿಯಲ್ಲಿ ಸೋಯಾಬೀನ್ ಹಿಂಡಿ ಮತ್ತು ಮೆಕ್ಕೆಜೋಳದಂತಹ ಉತ್ಪನ್ನಗಳಿಗೆ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ, ಆದ್ದರಿಂದ ಇವುಗಳಿಂದ ದೇಶದ ರೈತರಿಗೆ ಯಾವುದೇ ಅಪಾಯವಿಲ್ಲ ಎಂದು ಪಿಯೂಷ್ ಗೋಯಲ್ ಪ್ರತಿಪಾದಿಸಿದ್ದಾರೆ. ಇನ್ನು ಸೇಬುಗಳ ಆಮದಿಗೆ ಸಂಬಂಧಿಸಿದಂತೆ ಮಾತನಾಡಿರುವ ಸಚಿವರು, ಸರ್ಕಾರ ಅನಿಯಮಿತ ಆಮದಿಗೆ ಅವಕಾಶ ನೀಡಿಲ್ಲ; ಬದಲಾಗಿ, ನಿಗದಿತ ಪ್ರಮಾಣವನ್ನು ಮಾತ್ರ ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ.

ಸೇಬುಗಳ ಆಮದನ್ನು ಪ್ರತಿ ಕೆಜಿಗೆ 80 ರೂಪಾಯಿಗಳ ಕನಿಷ್ಠ ಆಮದು ಬೆಲೆ ಮತ್ತು ಅದರ ಜೊತೆಗೆ 25 ರೂಪಾಯಿಗಳ ಆಮದು ಸುಂಕವನ್ನು ಪಾವತಿಸಿದರೆ ಮಾತ್ರ ಅನುಮತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಚಿವರ ಹೇಳಿಕೆಗೆ ತಿರುಗೇಟು ಕೊಟ್ಟಿರುವ ರಾಹುಲ್ ಗಾಂಧಿ, ಶನಿವಾರ ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಜವಳಿ ಉದ್ಯಮದ ಕುರಿತಾದ ತಮ್ಮ ಆತಂಕಗಳನ್ನು ಪುನರುಚ್ಚರಿಸಿದ್ದು, ಈ ವ್ಯಾಪಾರ ಒಪ್ಪಂದವು ಹತ್ತಿ ಬೆಳೆಗಾರರು ಮತ್ತು ಜವಳಿ ರಫ್ತುದಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಪ್ರತಿಪಾದಿಸಿದ್ದಾರೆ.

“ಪಿಯೂಷ್ ಗೋಯಲ್ ಅವರೇ ಸುಳ್ಳು ಹೇಳಬೇಡಿ…” ಎಂದು ರಾಹುಲ್ ಗಾಂಧಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ವ್ಯಾಪಾರ ಒಪ್ಪಂದವು ಒಂದು ರೀತಿಯ ‘ಶರಣಾಗತಿ’ ಎಂದು ಪುನರುಚ್ಚರಿಸಿದ ಅವರು, ಇದರಿಂದ ದೇಶದ ಹತ್ತಿ ಬೆಳೆಗಾರರು ಮತ್ತು ಜವಳಿ ಉದ್ಯಮ ಎರಡಕ್ಕೂ ‘ಬಹಳ ದೊಡ್ಡ ಮಟ್ಟದ ಹಾನಿಯಾಗುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಶುಕ್ರವಾರ 17 ಪ್ರಮುಖ ರೈತ ಸಂಘಟನೆಗಳ ನಾಯಕರನ್ನು ಭೇಟಿ ಮಾಡಿದ್ದಾರೆ. ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ವಿರೋಧಿಸಲು ರಾಷ್ಟ್ರವ್ಯಾಪಿ ಚಳುವಳಿಯ ಅಗತ್ಯತೆಯ ಬಗ್ಗೆ ಚರ್ಚಿಸಿದ್ದಾರೆ.

ಸಭೆಯ ದೃಶ್ಯಗಳನ್ನು ಹಂಚಿಕೊಡಿರುವ ರಾಹುಲ್ ಗಾಂಧಿ, “ನರೇಂದ್ರ ‘ಸರೆಂಡರ್’ ಮೋದಿ ಅವರು ಭಾರತದ ರೈತರಿಗೆ ದ್ರೋಹ ಬಗೆದಿದ್ದಾರೆ. ರೈತರು ಇದನ್ನು ಅರಿತುಕೊಂಡಿದ್ದಾರೆ. ಇದು ಕೇವಲ ವ್ಯಾಪಾರ ಒಪ್ಪಂದವಲ್ಲ; ಇದು ನಮ್ಮ ಅನ್ನದಾತರ ಜೀವನೋಪಾಯದ ಮೇಲೆ ನಡೆಸಿದ ನೇರ ದಾಳಿಯಾಗಿದೆ” ಎಂದಿದ್ದಾರೆ.

“ಇಂದು ಸಂಸತ್ತಿನಲ್ಲಿ ರೈತ ಸಂಘಟನೆಗಳ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ರೈತರ ಆತಂಕಗಳು ಸ್ಪಷ್ಟವಾಗಿ ಗೊತ್ತಾಗಿವೆ. ಹಣದುಬ್ಬರ, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಕನಿಷ್ಠ ಬೆಂಬಲ ಬೆಲೆ ಸಂಬಂಧ ಹೋರಾಡುತ್ತಿರುವ ರೈತರನ್ನು, ಈಗ ಬೃಹತ್ ಸಬ್ಸಿಡಿಗಳು ಮತ್ತು ಯಾಂತ್ರಿಕ ಶಕ್ತಿಯ ಬೆಂಬಲ ಹೊಂದಿರುವ ವಿದೇಶಿ ಬೆಳೆಗಳನ್ನು ಎದುರಿಸಲು ಯಾವುದೇ ಸಿದ್ಧತೆಯಿಲ್ಲದೆ ಕೈಬಿಡಲಾಗುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಕಾಂಗ್ರೆಸ್ ಪಕ್ಷವು ರೈತರ ‘ಹಕ್ಕುಗಳು, ಭದ್ರತೆ ಮತ್ತು ಘನತೆ’ಗಾಗಿ ಅವರ ಪರವಾಗಿ ನಿಲ್ಲುತ್ತದೆ” ಎಂದು ಪ್ರತಿಪಾದಿಸಿದ ರಾಹುಲ್ ಗಾಂಧಿ, “ಇದು ಸಮಾನವಾದ ಹೋರಾಟವಲ್ಲ; ಇದು ಏಕಪಕ್ಷೀಯ ಒತ್ತಡವಾಗಿದೆ. ಸರ್ಕಾರದ ಟೊಳ್ಳು ಭರವಸೆಗಳು ಇನ್ನು ಮುಂದೆ ನಡೆಯುವುದಿಲ್ಲ. ರೈತರ ಅನುಮತಿಯಿಲ್ಲದೆ ಅವರ ಭವಿಷ್ಯವನ್ನು ಅಡವಿಡಲು ಸಾಧ್ಯವಿಲ್ಲ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆ ಹಿಂದಿಯನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು (ಮಾ.28) ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿ ಮತ್ತು...

ಇರಾನ್‌ನ ಸರ್ವೋಚ್ಚ ನಾಯಕನನ್ನು ‘ನಿರ್ಮೂಲನೆ’ ಮಾಡಲಾಗಿದೆ; ನಮ್ಮ ಮುಂದಿನ ಗುರಿ ಕ್ಯೂಬಾ: ಡೊನಾಲ್ಡ್‌ ಟ್ರಂಪ್

ಪಶ್ಚಿಮ ಏಷ್ಯಾದಾದ್ಯಂತ ಯುದ್ಧ ಮುಂದುವರೆದಿದ್ದರೂ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಅನಿಶ್ಚಿತವಾಗಿದ್ದರೂ ಸಹ, ಇರಾನ್‌ನ ಉನ್ನತ ನಾಯಕರು ಮತ್ತು ಅದರ ಹೆಚ್ಚಿನ ಮಿಲಿಟರಿ ಸಾಮರ್ಥ್ಯ ನಾಶವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿಯಾಮಿಯಲ್ಲಿ ಸೌದಿ...

ತೆಲಂಗಾಣ| ನಿಗದಿತ ವೇತನ-ಉದ್ಯೋಗ ಭದ್ರತೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಹೈದರಾಬಾದ್‌ನ ಧರಣಾ ಚೌಕ್‌ನಲ್ಲಿ ಇಂದು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು. ಸರ್ಕಾರವು 18,000 ರೂ.ಗಳ ಮಾಸಿಕ ನಿಗದಿತ ವೇತನ ಮತ್ತು ಉದ್ಯೋಗ ಭದ್ರತೆಯ ಚುನಾವಣಾ...

2001-2006 ರ ಚುನಾವಣೆ ಗೆಲ್ಲಲು ವಿ.ಡಿ. ಸತೀಸನ್ ಆರ್‌ಎಸ್‌ಎಸ್ ಬೆಂಬಲ ಕೋರಿದ್ದರು: ಸಂಘದ ನಾಯಕನಿಂದ ಆರೋಪ

ಕೇರಳದ ಯುಡಿಎಫ್ ಅಧ್ಯಕ್ಷ ವಿ ಡಿ ಸತೀಸನ್ 2001 ಮತ್ತು 2006 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ಬೆಂಬಲ ಕೋರಿದ್ದರು ಎಂದು ಸಂಘ ಪರಿವಾರದ ಹಿರಿಯ ನಾಯಕ...

ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಕನ್ನಡ ಕಲಿತು ಬರಬೇಕು: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಮಾ.28: ಇತರೇ ರಾಜ್ಯಗಳಿಂದ ಕರ್ನಾಟಕದ ಚರ್ಚ್‌ಗಳಲ್ಲಿ ಧರ್ಮಾಧ್ಯಕ್ಷರಾಗಲು ಬರುವವರು ಕಡ್ಡಾಯವಾಗಿ ಕನಿಷ್ಠ ಆರು ತಿಂಗಳು ವ್ಯಾವಹಾರಿಕ ಕನ್ನಡವನ್ನು ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನಕ್ಕೆ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ...

‘ಮಾನವಶಕ್ತಿ ಕೊರತೆಯಿಂದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಒತ್ತಡ ಎದುರಿಸಬಹುದು..’; ಸೇನಾ ಮುಖ್ಯಸ್ಥರಿಂದ ಸರ್ಕಾರಕ್ಕೆ ಎಚ್ಚರಿಕೆ

ಹೆಚ್ಚುತ್ತಿರುವ ಮಾನವಶಕ್ತಿ ಕೊರತೆಯಿಂದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಕಾರ್ಯಾಚರಣೆಯ ಗಂಭೀರ ಒತ್ತಡವನ್ನು ಎದುರಿಸಬಹುದು ಎಂದು ಸೇನಾ ಮುಖ್ಯಸ್ಥ ಇಯಾಲ್ ಜಮೀರ್ ಭದ್ರತಾ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ವರದಿಗಳನ್ನು...

ಯೆಮೆನ್‌ನಿಂದ ಹಾರಿದ ಮೊದಲ ಕ್ಷಿಪಣಿ ಎದುರಿಸಿದ ಇಸ್ರೇಲ್; ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಹೌತಿ ಪ್ರವೇಶ?

ಕಳೆದ ತಿಂಗಳು ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದ ನಂತರ, ಮಾರ್ಚ್ 28 ರಂದು ಯೆಮೆನ್‌ನಿಂದ ಹಾರಿಸಲಾದ ಕ್ಷಿಪಣಿಯೊಂದನ್ನು ಇಸ್ರೇಲ್ ಮೊದಲಬಾರಿಗೆ ಎದುರಿಸಿದೆ. ಕಳೆದ ತಿಂಗಳು ಮಧ್ಯಪ್ರಾಚ್ಯದಲ್ಲಿ ಯುದ್ಧ ಭುಗಿಲೆದ್ದ ನಂತರ ಯೆಮೆನ್‌ನಿಂದ ಮೊದಲ ಬಾರಿಗೆ...

ಬಿಜೆಪಿಗೆ ಮತ ಹಾಕುವುದು ವ್ಯರ್ಥ; ಬದಲಿಗೆ ಕಾಂಗ್ರೆಸ್‌ಗೆ ಹಾಕಿ: ಸಂಸದ ಶಶಿ ತರೂರ್

ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕುವುದು ವ್ಯರ್ಥ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕೇರಳದಲ್ಲಿ ಹೇಳಿದ್ದಾರೆ. ರಾಜ್ಯದ ಚುನಾವಣಾ ಸ್ಪರ್ಧೆ ಪ್ರಾಥಮಿಕವಾಗಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಎಡ...

ಅಬುಧಾಬಿ | ಭದ್ರತಾ ಪಡೆಗಳು ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯರಿಗೆ ಗಾಯ

ಯುಎಇ ರಾಜಧಾನಿ ಅಬುಧಾಬಿ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಸಂದರ್ಭದಲ್ಲಿ, ಕ್ಷಿಪಣಿಗಳ ಅವಶೇಷಗಳು ಬಿದ್ದ ಪರಿಣಾಮ ಐವರು ಭಾರತೀಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಬುಧಾಬಿಯ ಸರ್ಕಾರಿ...

ಧುರಂಧರ್-2 ಬಿಜೆಪಿಯ ದೊಡ್ಡ ಬಜೆಟ್‌ನ ರಾಜಕೀಯ ಜಾಹೀರಾತು: ಧ್ರುವ ರಾಥೀ

ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಅವರ ಆಕ್ಷನ್ ಎಂಟರ್‌ಟೈನರ್ ಧುರಂಧರ್‌ನ ಮುಂದುವರಿದ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆಯ ಜೊತೆಗೆ ಬಲಪಂಥೀಯ ವರ್ಗದ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಗಳಿಸುತ್ತಿದೆ. ಆದರೂ, ಈ ಚಿತ್ರವು ಸಾಕಷ್ಟು...