ವಿಡಿಯೊ ಕರೆ ಮಾಡಿ ನರ್ಸ್‌ಗೆ ಸೂಚನೆ ನೀಡುವ ಮೂಲಕ ಖಾಸಗಿ ಕ್ಲಿನಿಕ್‌ನ ವೈದ್ಯರೊಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೋಮವಾರ ವಿಕ್ರಮಸಿಂಗಪುರದಲ್ಲಿ ಇರುವ ಅವರ ಖಾಸಗಿ ಕ್ಲಿನಿಕ್‌ಗೆ ಸೀಲ್ ಮಾಡಿದ್ದಾರೆ. ತಮಿಳುನಾಡು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಂಬಾಸಮುದ್ರಂ ತಹಶೀಲ್ದಾರ್ ಶಬರಿ ಮಲ್ಲಿಕಾ ಅವರು ಇತ್ತೀಚೆಗೆ ವಿಕ್ರಮಸಿಂಗಪುರದ ವೈಕಲ್‌ಪಾಲಂನಲ್ಲಿ ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಡಾಕ್ಟರ್ ಚಂದ್ರಶೇಖರ್ ಒಡೆತನದ ಕ್ಲಿನಿಕ್‌ನಲ್ಲಿ ನರ್ಸ್‌ಗಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿದೆ. ಅಷ್ಟೆ ಅಲ್ಲದೆ, ಡಾಕ್ಟರ್ ತನ್ನ ನರ್ಸ್‌ಗೆ ವಿಡಿಯೊ ಕಾಲ್ ಮೂಲಕ ಸೂಚನೆಗಳನ್ನು ನೀಡುವುದು ಕಂಡು ಬಂದಿತ್ತು.
ಇದನ್ನೂಓದಿ: ತೆಲಂಗಾಣ | ಸಮಂತಾ-ನಾಗಚೈತನ್ಯ ವಿಚ್ಛೇದನ ವಿಷಯದಲ್ಲಿ ರಾಜಕೀಯ ಕಾಳಗ : ಸಚಿವೆ ಸುರೇಖಾಗೆ ಕೆಟಿಆರ್ ಲೀಗಲ್ ನೋಟಿಸ್
ಈ ಬಗ್ಗೆ ಆರೋಗ್ಯಾಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದು ಕಳೆದ ಕೆಲವು ತಿಂಗಳುಗಳಿಂದ ಡಾ ಚಂದ್ರಶೇಖರನ್ ಅವರ ಕ್ಲಿನಿಕ್‌ಗೆ ಭೇಟಿ ನೀಡುತ್ತಿಲ್ಲ ಎಂದು ತಿಳಿದುಬಂದಿತ್ತು. ಸೋಮವಾರ, ತಿರುನಲ್ವೇಲಿಯ ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕಿ ಡಾ.ಲತಾ ಅವರು ಅಂಬಾಸಮುದ್ರಂ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಗ್ರಾಮ ಆಡಳಿತಾಧಿಕಾರಿ ಮತ್ತು ವಿಕ್ರಮಸಿಂಗಪುರಂ ಪೊಲೀಸರ ಸಮ್ಮುಖದಲ್ಲಿ ಕ್ಲಿನಿಕ್‌ಗೆ ಸೀಲ್ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.ತಮಿಳುನಾಡು
ಆರೋಗ್ಯ ಸೇವೆಗಳ ಜಂಟಿ ನಿರ್ದೇಶಕಿ ಡಾ. ಲತಾ ಅವರ ಅವರ ದೂರಿನ ಆಧಾರದ ಮೇಲೆ ಪೊಲೀಸರು ಚಂದ್ರಶೇಖರನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. “ರೋಗಿಗಳಿಗೆ ಖುದ್ದಾಗಿ ಚಿಕಿತ್ಸೆ ನೀಡುವ ಬದಲು, ಚಂದ್ರಶೇಖರನ್ ಅವರು ವೀಡಿಯೊ ಕರೆ ಮೂಲಕ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ದಾದಿಯರಿಗೆ ಸೂಚನೆಗಳನ್ನು ನೀಡಿದ್ದರು. ಅವರ ಕ್ಲಿನಿಕ್ ವಿರುದ್ಧ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ (ನೋಂದಣಿ ಮತ್ತು ನಿಯಂತ್ರಣ) ಕಾಯಿದೆಯಡಿಯಲ್ಲಿ ಕ್ರಮವನ್ನು ಪ್ರಾರಂಭಿಸಲಾಗುವುದು” ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ.


