ತಮಿಳುನಾಡಿನ ವಿರುದುನಗರ ಜಿಲ್ಲೆಯ ಸತ್ತೂರಿನಲ್ಲಿರುವ ಪಟಾಕಿ ತಯಾರಿಕಾ ಘಟಕದಲ್ಲಿ ಹಠಾತ್ ಸ್ಫೋಟ ಸಂಭವಿಸಿದ್ದು, ಪಟಾಕಿಗಳನ್ನು ಸಂಗ್ರಹಿಸಲಾಗಿದ್ದ ಗೋದಾಮಿಗೆ ಮತ್ತು ಸಮೀಪದ ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ತಮಿಳುನಾಡು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸತ್ತೂರು ಮತ್ತು ಶಿವಕಾಶಿಯಿಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಘಟಕಕ್ಕೆ ಧಾವಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಎರಡು ಗಂಟೆಗಳ ಕಾಲ ನಿರಂತರ ಸ್ಫೋಟಗಳು ನಡೆದಿದ್ದು 15 ಕಿಮೀ ವ್ಯಾಪ್ತಿಯ ನಿವಾಸಿಗಳಲ್ಲಿ ಭೀತಿ ಸೃಷ್ಟಿಸಿದೆ ಎಂದು ವರದಿಯಾಗಿದೆ.
Blast in firecracker unit in #TamilNadu's #Virudhunagar.
🎥ANI pic.twitter.com/UM0lD9uRxn— TNIE Tamil Nadu (@xpresstn) September 28, 2024
ಇದನ್ನೂಓದಿ: ಅಕ್ರಮ ಡಿನೋಟಿಫಿಕೇಷನ್ ಪ್ರಕರಣ : ಕುಮಾರಸ್ವಾಮಿ ವಿಚಾರಣೆ ನಡೆಸಿದ ಲೋಕಾಯುಕ್ತ
ಮೂರು ವಿವಿಧ ಅಗ್ನಿಶಾಮಕ ಠಾಣೆಗಳ ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಆದಾಗ್ಯೂ, ನಿರಂತರ ಸ್ಫೋಟಗಳ ನಡುವೆ ಪರಿಸ್ಥಿತಿಯನ್ನು ಹತೋಟಿಗೆ ತರಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ.
10ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಸಮೀಪದಲ್ಲಿ ನಿಲ್ಲಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಬೆಂಕಿ ನಂದಿಸಿದ ನಂತರವೇ ಎಷ್ಟು ಮಟ್ಟಿನ ಹಾನಿಯಾಗಿದೆ ಎಂದು ನಿರ್ಣಯಿಸಲಾಗುವುದು ಎಂದು ಅವರು ಹೇಳಿದ್ದಾರೆ.ತಮಿಳುನಾಡು
ವಿಡಿಯೊ ನೋಡಿ: ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


