ದೇಶದಲ್ಲಿ ರೈತ ಹೋರಾಟ ದಿನದಿಂದ ದಿನಕ್ಕೆ ಕಾವೇರುತ್ತಿದ್ದು ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಬೆಂಬಲ ಸೂಚಿಸಿದ್ದವು. ಈ ಸಾಲಿಗೆ ಈಗ ತಮಿಳುನಾಡಿನ ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳು ಸೇರಿಕೊಂಡಿವೆ.
ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಹೋರಾಟ ಮಾಡುತ್ತಿರುವ ರೈತರನ್ನು ಬೆಂಬಲಿಸಿ ಡಿಎಂಕೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಡಿಎಂಕೆ ಮುಖಂಡ ಎಂ ಕೆ ಸ್ಟಾಲಿನ್, “ಕಳೆದ 23 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರನ್ನು ಬೆಂಬಲಿಸಿ ನಾವು ಇದುವರೆಗೂ ಹತ್ತಾರು ಹೋರಾಟಗಳನ್ನು ಮಾಡಿದ್ದರೂ ಸಹ, ಇಂದು ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲಾಗಿದೆ” ಎಂದು ಹೇಳಿದರು.
போராடும் விவசாயிகளுக்கு ஆதரவான உண்ணாநிலை அறப்போராட்டத்தில் எனது உரை. https://t.co/fBzGtFoYG7
— M.K.Stalin (@mkstalin) December 18, 2020
“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಕಾನೂನಗಳು ಜನದ್ರೋಹಿ ಎಂಬುದನ್ನು ನಾನು ಹೇಳಿ ನೀವು ತಿಳಿದುಕೊಳ್ಳಬೇಕಾಗಿಲ್ಲ. ಇವು ಕಾರ್ಪೊರೇಟ್‌ಗಳ ಪರ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದನ್ನು ವಿರೊಧಿಸಿ ದೇಶದ ರೈತ ಬಾಂಧವರು ಕುಟುಂಬ ಸಮೇತರಾಗಿ ದೆಹಲಿಗೆ ಹೋಗಿ ಪ್ರತಿಭಟಿಸುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ” ಎಂದು ಹೇಳಿದರು.
ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ರೈತ ಹೋರಾಟಗಾರರು; ಕರುಣೆ ಇಲ್ಲದ ಸರ್ಕಾರ!
போராடும் விவசாயிகளுக்கு ஆதரவாக உண்ணாநிலை அறப்போராட்டம் – நேரலை https://t.co/bzLu7GS3ej
— M.K.Stalin (@mkstalin) December 18, 2020
ಇದನ್ನೂ ಓದಿ: ರೈತರು ವಿಷ ಸೇವಿಸಿದಾಗ ಕಾಳಜಿ ವಹಿಸದವರು ಪಿಜ್ಜಾ ತಿನ್ನುವಾಗ ಟೀಕೆ ಮಾಡುತ್ತಾರೆ – ದಿಲ್ಜಿತ್…
ಕೃಷಿ ಕಾನೂನಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ನಿನ್ನೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.
ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ನಿನ್ನೆ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮುಂದಾದ ಮಾಜಿ ಸೈನಿಕರು!


