Homeಚಳವಳಿರೈತರು ವಿಷ ಸೇವಿಸಿದಾಗ ಕಾಳಜಿ ವಹಿಸದವರು ಪಿಜ್ಜಾ ತಿನ್ನುವಾಗ ಟೀಕೆ ಮಾಡುತ್ತಾರೆ - ದಿಲ್ಜಿತ್ ದೋಸಾಂಜ್

ರೈತರು ವಿಷ ಸೇವಿಸಿದಾಗ ಕಾಳಜಿ ವಹಿಸದವರು ಪಿಜ್ಜಾ ತಿನ್ನುವಾಗ ಟೀಕೆ ಮಾಡುತ್ತಾರೆ – ದಿಲ್ಜಿತ್ ದೋಸಾಂಜ್

ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿನ್ನೋದು ತಪ್ಪಲ್ಲ ಅಂದಮೇಲೆ ರೈತರು ಹೋರಾಟದಲ್ಲಿ ಪಿಜ್ಜಾ ತಿನ್ನೋದು ಹೇಗೆ ತಪ್ಪು?

- Advertisement -
- Advertisement -

ದೆಹಲಿಯ ಗಡಿಗಳಲ್ಲಿ ಕಳೆದ 19 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕಳೆದ ವಾರ ಪಿಜ್ಜಾ ವಿತರಣೆಯಾದ ಬಗ್ಗೆ ಟೀಕಿಸಿದವರಿಗೆ, ಟ್ರೋಲ್ ಮಾಡಿದವರಿಗೆ ನಟ, ಗಾಯಕ ದಿಲ್ಜಿತ್ ದೋಸಾಂಜ್ ತಿರುಗೇಟು ನೀಡಿದ್ದಾರೆ. ಪ್ರತಿಭಟನೆ ಆರಂಭದಿಂದಲು ರೈತರ ಪರವಾಗಿ ನಿಂತಿರುವ ನಟ, ರೈತರ ಬಗೆಗಿನ ಎಲ್ಲಾ ಆರೋಪಗಳಿಗೂ ಉತ್ತರ ನೀಡುತ್ತಿದ್ದಾರೆ.

ಕಳೆದ ವಾರ, ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲಿ ನೂರಾರು ಪಿಜ್ಜಾಗಳನ್ನು ಪ್ರತಿಭಟನಾ ನಿರತ ರೈತರಿಗೆ  ವಿತರಿಸಲಾಗಿತ್ತು. ಅಮೃತಸರದ ಐವರು ಸ್ನೇಹಿತರ ಗುಂಪು ಸಿಂಘು ಗಡಿಯಲ್ಲಿ ಒಂದು ಅಂಗಡಿ ಮಾಡಿ, ಪ್ರತಿಭಟನಾ ನಿರತ ರೈತರಿಗೆ ಸುಮಾರು 400 ಪಿಜ್ಜಾಗಳನ್ನು ವಿತರಿಸಿದ್ದರು.

36 ವರ್ಷದ ಬಾಲಿವುಡ್ ನಟ ದಿಲ್ಜಿತ್ ದೋಸಾಂಜ್, ತಮ್ಮ ಟ್ವಿಟರ್‌ ಖಾತೆಯಲ್ಲಿ ಒಂದು ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. “ರೈತರು ವಿಷ ಸೇವಿಸುವುದರ ಬಗ್ಗೆ ಯಾರಿಗೂ ಎಂದಿಗೂ ಕಾಳಜಿಯಿಲ್ಲ. ಆದರೆ, ರೈತರು ಪಿಜ್ಜಾ ತಿನ್ನುವುದು ಸುದ್ದಿಯಾಗಿದೆ.” ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಜನರಿಗಾಗಿ ತಮ್ಮ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ನಟ ಸೋನು ಸೂದ್!

“ಪಿಜ್ಜಾಗಳಿಗಾಗಿ ಹಿಟ್ಟನ್ನು ಒದಗಿಸುವ ರೈತರು, ತಾವು ಕೂಡ ಒಂದು ಪಿಜ್ಜಾ ತಿನ್ನಲು ಅರ್ಹರಾಗಿರುತ್ತಾರೆ” ಎಂದು ತನ್ನ ನಾಲ್ವರು ಸ್ನೇಹಿತರೊಂದಿಗೆ ಪಿಜ್ಜಾ ಹಂಚಿದ್ದ ಶನ್‌ಬೀರ್ ಸಿಂಗ್ ಸಂಧು ಸುದ್ದಿ ಸಂಸ್ಥೆ ಪಿಟಿಐ ಜೊತೆಗೆ ಹೇಳಿದ್ದಾರೆ.

4fuee5m8

ಈ ಘಟನೆಯನ್ನು ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದರು. ಇನ್ನೂ ಅನೇಕ ಮಂದಿ ಪ್ರತಿಭಟನೆಯನ್ನು ತಿರುಚಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನೀಡುತ್ತಿರುವ ಐತಿಹಾಸಿಕ ಉಡುಗೊರೆ ರೈತರಿಗೆ ಬೇಡ: ಯೋಗೇಂದ್ರ ಯಾದವ್

ಇದನ್ನೂ ಓದಿ: ರೈತರ ಪ್ರತಿಭಟನೆ ಬೆಂಬಲಿಸಲು ರಾಜೀನಾಮೆ ನೀಡಿದ ಪಂಜಾಬ್ ಡಿಐಜಿ!

ಪ್ರತಿಭಟಿಸುತ್ತಿರುವ ರೈತರಿಗೆ ಉಚಿತ ಪಿಜ್ಜಾಗಳು, ಮಸಾಜ್ ಕುರ್ಚಿಗಳು, ಇದು ಪ್ರತಿಭಟನೆಯೇ ಅಥವಾ ಪಂಚತಾರಾ ಸ್ಪಾನಾ? ಮತ್ತು ಇದಕ್ಕಾಗಿ ಯಾರು ಪಾವತಿಸುತ್ತಿದ್ದಾರೆ? ಎಂದು ಅನೇಕ ಪ್ರಶ್ನೆಗಳು ಬಂದಿದ್ದವು.

ಇದಕ್ಕೆ ಬಹಳಷ್ಟು ಸಾಮಾಜಿಕ ಜಾಲತಾಣಿಗರು “ಗೂಗಲ್‌ನಿಂದ ಆಹಾರ ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ರೈತರನ್ನು ಅವಮಾನಿಸಬೇಡಿ. ಅವರು 20 ದಿನಗಳಿಂದ ಹೋರಾಟ ಮಾಡಿ ದಣಿದಿದ್ದಾರೆ. ಹಾಗಾಗಿ ಬಹಳಷ್ಟು ಪ್ರಜ್ಞಾವಂತರು ಹೋರಾಟ ನಿರತ ರೈತರಿಗೆ ಸಹಾಯ ಮಾಡುತ್ತಿದ್ದಾರೆ. ರೈತರನ್ನು ಕೇವಲ ಬಡವರನ್ನಾಗಿಯೇ ನೋಡುವ ನಿಮ್ಮ ಮನಸ್ಥಿತಿಗೆ ಧಿಕ್ಕಾರ” ಎಂಬುದಾಗಿ ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದರು.

“ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿನ್ನೋದು ತಪ್ಪಲ್ಲ ಅಂದಮೇಲೆ ರೈತರು ಹೋರಾಟದಲ್ಲಿ ಪಿಜ್ಜಾ ತಿನ್ನೋದು ಹೇಗೆ ತಪ್ಪು? ಅನ್ನದಾತ ರೈತರು ಹೋರಾಟದಲ್ಲಿ ಪಿಜ್ಜಾ ಬಿರಿಯಾನಿ ತಿನ್ನೋದು ನಾವೆಲ್ಲರೂ ಖುಷಿಯಿಂದ ಸ್ವಾಗತಿಸಬೇಕು. ಅನ್ನದಾತೋ ಸುಖೀಭವ” ಎಂದು ಯುವ ಹೋರಾಟಗಾರ ಸರೋವರ್ ಬೆಂಕಿಕೆರೆ ಅಭಿಪ್ರಾಯಪಟ್ಟಿದ್ದಾರೆ.

ಈ ತಿಂಗಳ ಆರಂಭದಲ್ಲಿ, ದಿಲ್ಜಿತ್ ದೋಸಾಂಜ್ ದೆಹಲಿ-ಹರಿಯಾಣ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ಬೆಂಬಲ ನೀಡಲು ಭೇಟಿ ನೀಡಿದ್ದರು. “ದಯವಿಟ್ಟು ನಮ್ಮ ರೈತರ ಬೇಡಿಕೆಗಳನ್ನು ಈಡೇರಿಸಿ. ಎಲ್ಲರೂ ಇಲ್ಲಿ ಶಾಂತಿಯುತವಾಗಿ ಕುಳಿತಿದ್ದಾರೆ ಮತ್ತು ಇಡೀ ದೇಶವು ರೈತರೊಂದಿಗೆ ಇದೆ. ಈ ರೈತರ ಪ್ರತಿಭಟನೆ ಬಗ್ಗೆ, ಟ್ವಿಟ್ಟರ್‌ನಲ್ಲಿ ವಿಷಯಗಳನ್ನು ತಿರುಚಲಾಗಿದೆ ಆದರೆ ಸತ್ಯವೆಂದರೆ ರೈತರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ. ಇಲ್ಲಿ ಯಾರೂ ರಕ್ತಪಾತದ ಬಗ್ಗೆ ಮಾತನಾಡುವುದಿಲ್ಲ. ಇವರ ಬೇಡಿಕೆಗಳನ್ನು ಪರಿಹರಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ದಿಲ್ಜಿತ್ ಮನವಿ ಮಾಡಿದ್ದರು.

ನವೆಂಬರ್ ಅಂತ್ಯದಲ್ಲಿ ಪ್ರಾರಂಭವಾದ ಆಂದೋಲನದ ಬಗ್ಗೆ ಅವರು ನಿಯಮಿತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ದಿಲ್ಜಿತ್ ಹಾಕಿದ ಟ್ವೀಟ್‌ಗಳಲ್ಲಿ ಒಂದನ್ನು ಬಾಲಿವುಡ್ ನಟ ಪ್ರಿಯಾಂಕಾ ಚೋಪ್ರಾ ಕೂಡ ಅನುಮೋದಿಸಿ, ರಿಟ್ವೀಟ್ ಮಾಡಿದ್ದರು.


ಇದನ್ನೂ ಓದಿ: ಹೋರಾಟನಿರತ ರೈತರ ಸ್ಪೆಟರ್, ಹೊದಿಕೆ‌ಗಾಗಿ 1 ಕೋಟಿ ರೂ. ದೇಣಿಗೆ ನೀಡಿದ ಗಾಯಕ ದಿಲ್ಜಿತ್​ ದೋಸಂಜ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...