ರೈತ
PC: AP

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಇಂದಿಗೆ 19 ನೇ ದಿನ ತಲುಪಿದ್ದು, ದೆಹಲಿಯ ಹೊರವಲಯದಲ್ಲಿರುವ ದೆಹಲಿ-ಜೈಪುರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಪೊಲೀಸರು – ರೈತರ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಸುಮಾರು 20 ರೈತರನ್ನು ವಶಕ್ಕೆ ಪಡೆಯಲಾಯಿತು. ಬಂಧನ ವಿರೋಧಿಸಿ 200 ಕ್ಕೂ ಹೆಚ್ಚು ರೈತರು ಧರಣಿ ನಡೆಸಿದ್ದು, ಸುಮಾರು ಒಂದು ಗಂಟೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ರಾಜ್ಯಪಾಲರೇ, ಭೂಸುಧಾರಣಾ ಕಾಯ್ದೆಗೆ ಸಹಿ ಹಾಕಬೇಡಿ: ಟ್ವಿಟ್ಟರ್ ದಾಳಿಗೆ ಸಿದ್ದತೆ!

ಟ್ರಾಕ್ಟರುಗಳ ಮೂಲಕ ಪ್ರತಿಭಟನಾಕಾರರು ಹೆದ್ದಾರಿಯ ಒಂದು ಭಾಗವನ್ನು ತಡೆಯುತ್ತಿದ್ದಂತೆ ಪೊಲೀಸರು ಅವುಗಳನ್ನು ತಡೆಯಲು ಪ್ರಯತ್ನಿಸಿದರು. ಭದ್ರತಾ ಸಿಬ್ಬಂದಿಗಳು ಹೆದ್ದಾರಿಯನ್ನು ತೆರವುಗೊಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದು, ಟ್ರಾಕ್ಟರುಗಳನ್ನು ಹತ್ತಿ, ವಾಹನಗಳ ಕೀಲಿಗಳನ್ನು ಕಸಿದುಕೊಳ್ಳುವುದರೊಂದಿಗೆ ಘರ್ಷಣೆ ಆರಂಭವಾಗಿದೆ.

ರೈತರ ಹೊಸ ಜಾಥವನ್ನು ತಡೆಯಲು ಉದ್ದೇಶಪೂರ್ವಕವಾಗಿ ದೆಹಲಿ-ಜೈಪುರ್‌ ಗಡಿಗಿಂತಲೂ ದೂರದ ಬನಿಪುರ್‌ ಚೌಕ್‌ಗೆ ಬ್ಯಾರಿಕೇಡ್ ಹಾಕಿದ್ದಾರೆ. ಇಂದು, ದೇಶಾದ್ಯಂತ ಹಲವಾರು ರೈತ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗಳ ಬಗ್ಗೆ ನವೆಂಬರ್ ಅಂತ್ಯದಲ್ಲಿ ಪ್ರಾರಂಭವಾದ ಪ್ರತಿಭಟನೆಯು ತೀವ್ರ ಸ್ವರೂಪವನ್ನು ಪಡೆಯುತ್ತಿದ್ದು ವಿವಿಧ ರಾಜ್ಯದಿಂದ ಇನ್ನೂ ಹತ್ತಾರು ಸಾವಿರ ರೈತರು ದೆಹಲಿಯತ್ತ ಹೊರಟು ನಿಂತಿದ್ದಾರೆ.

ಇದನ್ನೂ ಓದಿ: ದನ ಕಳ್ಳತನ: ಬಜರಂಗ ದಳದ ಮಾಜಿ ಮುಖಂಡನ ಬಂಧನ

LEAVE A REPLY

Please enter your comment!
Please enter your name here