Homeಮುಖಪುಟಬಿಗ್‌ಬಾಸ್ ನಡೆಸುವವರಿ‌ಗೆ ರಾಜಕೀಯದ ಬಗ್ಗೆ ಏನು ಗೊತ್ತು - ತಮಿಳುನಾಡು ಸಿಎಂ: ತಿರುಗೇಟು ನೀಡಿದ ಕಮಲ್

ಬಿಗ್‌ಬಾಸ್ ನಡೆಸುವವರಿ‌ಗೆ ರಾಜಕೀಯದ ಬಗ್ಗೆ ಏನು ಗೊತ್ತು – ತಮಿಳುನಾಡು ಸಿಎಂ: ತಿರುಗೇಟು ನೀಡಿದ ಕಮಲ್

"ಅವರಿಗೆ (ಕಮಲ್ ಹಾಸನ್) ರಾಜಕೀಯದ ಬಗ್ಗೆ ಏನು ಗೊತ್ತು? ಅವರು ಬಿಗ್ ಬಾಸ್ ನಡೆಸುತ್ತಾರೆ. ಅವುಗಳನ್ನು ನೋಡಿದರೆ ಮಕ್ಕಳು ಮಾತ್ರವಲ್ಲ, ಕುಟುಂಬಗಳೇ ಹಾಳಾಗುತ್ತವೆ"

- Advertisement -
- Advertisement -

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಮೊದಲೇ ಕಾವೇರುತ್ತಿದ್ದು ರಾಜಕೀಯ ಪಕ್ಷಗಳು ಈಗಲೆ ಕಾದಾಟಕ್ಕಿಳಿದಿವೆ. ಈ ನಿಟ್ಟಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಕಮಲ್ ಹಾಸನ್‌ ಅವರ ರಿಯಾಲಿಟಿ ಶೋ ‘ಬಿಗ್ ಬಾಸ್’ ಅನ್ನು ಉಲ್ಲೇಖಿಸಿ, “ಮಕ್ಕಳ್‌ ನೀದಿಮಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಕಮಲ್ ಹಾಸನ್ ಬಿಗ್‌ಬಾಸ್ ನಡೆಸುತ್ತಾರೆ. ಅವರಿಗೆ ರಾಜಕೀಯದ ಬಗ್ಗೆ ಎನು ಗೊತ್ತು” ಎಂದು ಟೀಕಿಸಿದ್ದಾರೆ.

ಕಮಲ್ ಹಾಸನ್ ಇತ್ತೀಚೆಗೆ, ಎಐಎಡಿಎಂಕೆ ಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿ. ಎಂ.ಜಿ. ರಾಮಚಂದ್ರನ್ ಅವರ ಪರಂಪರೆಯ ಬಗ್ಗೆ ಪ್ರಸ್ತಾಪಿಸಿ, ಸರ್ಕಾರವನ್ನು ಟೀಕಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಪಳನಿಸ್ವಾಮಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

 

ಇದನ್ನೂ ಓದಿ: ’ಒಂದು’ ಎಂಬ ಕಲ್ಪನೆ ಯಾವಾಗಲೂ ಸರ್ವಾಧಿಕಾರ ಮತ್ತು ದಬ್ಬಾಳಿಕೆಗೆ ಕಾರಣ- ಕಮಲ್ ಹಾಸನ್

ಇದಕ್ಕೆ ತಿರುಗೇಟು ಕಮಲ್ ಹಾಸನ್, “ಮುಖ್ಯಮಂತ್ರಿಯವರೂ ರಿಯಾಲಿಟಿ ಶೋವನ್ನು ನೋಡಿದ್ದಾರೆಂದರೆ ಬಹಳ ಸಂತೋಷ” ಎಂದು ಹೇಳಿದ್ದಾರೆ.

ಕಮಲ್ ಹಾಸನ್ ರಾಜಕೀಯ ಪಕ್ಷ ಸ್ಥಾಪಿಸಿರುವ ಬಗ್ಗೆ ಉಲ್ಲೇಖಿಸಿದ್ದ ಪಳನಿಸ್ವಾಮಿ, “ಅವರಿಗೆ (ಕಮಲ್ ಹಾಸನ್) ರಾಜಕೀಯದ ಬಗ್ಗೆ ಏನು ಗೊತ್ತು? ಅವರು ಬಿಗ್‌ಬಾಸ್ ನಡೆಸುತ್ತಾರೆ. ಅವುಗಳನ್ನು ನೋಡಿದರೆ ಮಕ್ಕಳು ಮಾತ್ರವಲ್ಲ, ಕುಟುಂಬಗಳೇ ಹಾಳಾಗುತ್ತವೆ” ಎಂದು ಹೇಳಿದ್ದರು.

ಇದನ್ನೂ ಓದಿ: ಸಿದ್ದಾಂತ ಹೊಂದಿಕೆಯಾದರೆ ರಜನಿಕಾಂತ್‌ ಜೊತೆ ಮೈತ್ರಿಗೆ ಸಿದ್ದ: ಕಮಲ್ ಹಾಸನ್

ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಅವರ ಪಕ್ಷ ಘೋಷಿಸಿದೆ. ಜೊತೆಗೆ ರಜನಿಕಾಂತ್ ಅವರ ಪಕ್ಷವೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದೆ. ಇನ್ನು ಕಮಲ್ ಹಾಸನ್ ಅವರೇ ಹೇಳಿರುವಂತೆ ಸಿದ್ಧಾಂತ ಹೊಂದಿಕೆಯಾಗುವುದಾದರೆ, ಜನತೆಗೆ ಉಪಯೋಗವಾಗುವುದಾದರೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದೂ ಹೇಳಿದ್ದಾರೆ.

ಒಟ್ಟಾರೆ ತಮಿಳುನಾಡಿನ ರಾಜಕೀಯ ಕಣ ರಂಗೇರುತ್ತಿದ್ದು ಯಾರಿಗೆ ಲಾಭವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.


ಇದನ್ನೂ ಓದಿ: ದೇಶದ ಅರ್ಧದಷ್ಟು ಜನ ಹಸಿವಿನಲ್ಲಿರುವಾಗ ಹೊಸ ಸಂಸತ್ತು ಬೇಕೆ? ಮೋದಿಗೆ ಕಮಲ್ ಹಾಸನ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...