Homeಮುಖಪುಟ’ಒಂದು’ ಎಂಬ ಕಲ್ಪನೆ ಯಾವಾಗಲೂ ಸರ್ವಾಧಿಕಾರ ಮತ್ತು ದಬ್ಬಾಳಿಕೆಗೆ ಕಾರಣ- ಕಮಲ್ ಹಾಸನ್

’ಒಂದು’ ಎಂಬ ಕಲ್ಪನೆ ಯಾವಾಗಲೂ ಸರ್ವಾಧಿಕಾರ ಮತ್ತು ದಬ್ಬಾಳಿಕೆಗೆ ಕಾರಣ- ಕಮಲ್ ಹಾಸನ್

"ಸಮಾನ ನ್ಯಾಯವಿಲ್ಲದ ಮತ್ತು ಸಾಮಾಜಿಕ ನ್ಯಾಯವಿಲ್ಲದ ಅಸಮಾನ ಸಮಾಜದಲ್ಲಿ, 'ಒಂದು ಮಾತ್ರ' ಎಂದು ಹೇಳುವುದು ದೊಡ್ಡ ಅನ್ಯಾಯ" - ಕಮಲ್ ಹಾಸನ್

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಮೇಲೆ ತೀವ್ರ ದಾಳಿ ನಡೆಸಿರುವ ಮಕ್ಕಳ ನೀದಿ ಮಯ್ಯಂ ಸಂಸ್ಥಾಪಕ, ನಟ ಕಮಲ್ ಹಾಸನ್, ’ಒಂದು’ ಎಂಬ ಕಲ್ಪನೆಯು ಯಾವಾಗಲೂ ಸರ್ವಾಧಿಕಾರ ಮತ್ತು ದಬ್ಬಾಳಿಕೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

“ಒಂದು ರಾಷ್ಟ್ರ, ಒಂದು ಕಾನೂನು, ಒಂದು ಧರ್ಮ, ಒಂದು ಆಯ್ಕೆ, ಹಿಂದಿ ಒಂದೇ ಭಾಷೆಯಾಗಿ, ಒಂದು ಆಹಾರ, ಒಬ್ಬ ಪ್ರಧಾನಿ ಹೀಗೆ ಎಲ್ಲವೂ ಒಂದೇ ಆಗುವುದಾದರೇ, ಆ ‘ಒಂದು’ ಯಾವಾಗಲೂ ಸರ್ವಾಧಿಕಾರ ಮತ್ತು ದಬ್ಬಾಳಿಕೆಗೆ ಕಾರಣವಾಗಿದೆ ಎಂದು ಇತಿಹಾಸವು ತೋರಿಸಿದೆ’’ ಎಂದು ಕಮಲ್ ಹಾಸನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜನರಿಗೆ ಪ್ರಯೋಜನ ಆಗುವುದಾದರೇ ರಜನಿಕಾಂತ್ ಜೊತೆಗೆ ಮೈತ್ರಿಗೆ ಸಿದ್ಧ- ಕಮಲ್ ಹಾಸನ್

“ಸಮಾನ ನ್ಯಾಯವಿಲ್ಲದ ಮತ್ತು ಸಾಮಾಜಿಕ ನ್ಯಾಯವಿಲ್ಲದ ಅಸಮಾನ ಸಮಾಜದಲ್ಲಿ, ‘ಒಂದು ಮಾತ್ರ’ ಎಂದು ಹೇಳುವುದು ದೊಡ್ಡ ಅನ್ಯಾಯವಾಗಿದೆ” ಎಂದು ತಮ್ಮ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.

ಈ ’ಒಂದು’ ಎಂಬುದರ ಸಾಲಿನಲ್ಲಿ ಇನ್ನು ಕಾಣದಂದೆ ಮರೆಮಾಚಿರುವುದು ಏಕ ಪ್ರಧಾನಿ ಎಂಬುದು ಎಂದು ವಿಭಿನ್ನತೆಯ ದೇಶದಲ್ಲಿ ಒಂದು ಎಂಬ ಹೆಸರಲ್ಲಿ ಹೇರಿಕೆ ಮಾಡುತ್ತಿರುವ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಇದಲ್ಲದೇ ಹಿಂದಿ ಹೇರಿಕೆಯ ಕುರಿತಾಗಿಯೂ ಚುನಾವಣಾ ಪ್ರಚಾರದಲ್ಲಿ ಕಮಲ್ ಹಾಸನ್ ತಿರುಗೇಟು ನೀಡಿದ್ದಾರೆ.

ತಮಿಳು ಭಾಷೆ ಮಾತನಾಡುವ ಮೂಲಕ ಅಧಿಕಾರ ಪಡೆದುಕೊಂಡವರು ಅಧಿಕಾರಕ್ಕೆ ಬಂದ ನಂತರ ತಮಿಳನ್ನು ಮರೆತಿದ್ದಾರೆ ಎಂದು ತಮ್ಮ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.

“ತಮಿಳು ಮಾತನಾಡುವ ಮೂಲಕ ಅಧಿಕಾರಕ್ಕೆ ಬಂದವರು ಅಧಿಕಾರಕ್ಕೆ ಬಂದ ನಂತರ ತಮಿಳನ್ನು ಮರೆತಿದ್ದಾರೆ. ತಮಿಳು ಜನರು ಎಲ್ಲಾ ಭಾಷೆಗಳನ್ನು ಕಲಿಯಲು ಸಿದ್ಧರಾಗಿದ್ದು, ತಮಿಳು ಸಿಹಿಯಾದ ಭಾಷೆಯಾಗಿದೆ. ನನಗೆ ಹಿಂದಿ ಇಷ್ಟವಿಲ್ಲ ಎಂದು ನಾನು ಹೇಳಲಾರೆ. ಆದರೆ ನಮ್ಮ ಭಾಷೆ ಕೂಡ ಅದ್ಭುತವಾಗಿದೆ” ಎಂದು ಹೇಳಿದ್ದಾರೆ.

ಈ ಹಿಂದೆ ಕೂಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದ ಕಮಲ್ ಹಾಸನ್, ದೇಶದ ಆರ್ಥಿಕತೆ ತೀವ್ರ ಕುಸಿತ ಕಂಡಿರುವ ಈ ಸಮಯದಲ್ಲಿ ಇಂತಹ ಬೃಹತ್ ಮೊತ್ತದ ಹೊಸ ಸಂಸತ್ತು ನಿರ್ಮಾಣದ ಅರ್ಥವೇನು ಎಂದು  ಪ್ರಧಾನಿಯವರನ್ನು ಪ್ರಶ್ನಿಸಿದ್ದರು.

ತಮ್ಮ ಟ್ವಿಟರ್‌ ಖಾತೆಯಲ್ಲಿ ಕಮಲ್ ಹಾಸನ್, “ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವಾಗ, ಕೊರೊನಾ ವೈರಸ್‌ನಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವಾಗ 1,000 ಕೋಟಿ ವೆಚ್ಚದ ಹೊಸ ಸಂಸತ್ತು ಏಕೆ..?” ಎಂದು ಪ್ರಶ್ನಿಸಿದ್ದರು.

ಇತ್ತಿಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದಾದ್ಯಂತ ಪ್ರತಿ ತಿಂಗಳು ಚುನಾವಣೆಗಳು ನಡೆಯುತ್ತಿರುವುದರಿಂದ ಸಮಯ, ಹಣ ಎರಡು ವ್ಯರ್ಥವಾಗಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ. ಹಾಗಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಭಾರತದ ಅವಶ್ಯಕತೆ ಇದೆ ಎಂದು ಹೇಳಿದ್ದರು.

ಈ ನಟ ಕಮಲ್ ಹಾಸನ್ ಇಂತಹ ಒಂದು ಎಂಬ ಕಲ್ಪನೆ ಯಾವಾಗಲೂ ಸರ್ವಾಧಿಕಾರ ಮತ್ತು ದಬ್ಬಾಳಿಕೆಗೆ ಕಾರಣವಾಗುತ್ತದೆ ಎಂಬುದು ಇತಿಹಾಸ ತೋರಿಸಿದೆ ಎಂದು, ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ. ತಮಿಳುನಾಡು ವಿಧಾನಸಭಾ ಚುನಾವಣೆಗಳು 2021 ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿವೆ.


ಇದನ್ನೂ ಓದಿ: ದೇಶದ ಅರ್ಧದಷ್ಟು ಜನ ಹಸಿವಿನಲ್ಲಿರುವಾಗ ಹೊಸ ಸಂಸತ್ತು ಬೇಕೆ? ಮೋದಿಗೆ ಕಮಲ್ ಹಾಸನ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...