ಕಾನೂಲ್‌ನಲ್ಲಿ ಭಾರತ ನಿರ್ಮಿಸುತ್ತಿರುವ ಅಣೆಕಟ್ಟಿನ ಒಪ್ಪಂದದ ಬಗ್ಗೆ ಚರ್ಚಿಸಲು ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರ ಜೊತೆ ನಡೆದ ವಿಡಿಯೋ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಫ್ಘಾನಿಸ್ಥಾನದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಅಲ್ಲಿ ನಿರ್ದೋಷಿ ನಾಗರಿಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಫ್ಘಾನ್ ಅಭಿವೃದ್ದಿಗೆ ಭಾರತವು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ ಪ್ರಧಾನಿ ಮೋದಿ, ಯುದ್ಧವನ್ನು ಕೊನೆಗೊಳಿಸಲು ದೀರ್ಘಕಾಲದ ಕದನವಿರಾಮ ಘೋಷಿಸಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಮೋದಿ-ಆದಿತ್ಯನಾಥ್ ವಿರುದ್ದ ಟೀಕೆ: 293 ಭಾರತೀಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು!
Signing MoU on Shahtoot Dam with President @ashrafghani. https://t.co/Ltfbn8jk0J
— Narendra Modi (@narendramodi) February 9, 2021
‘‘ಭಾರತವು ಅಫ್ಘಾನ್ ಕೇವಲ ಭೌಗೋಳಿಕವಾಗಿ ಮಾತ್ರವಲ್ಲ, ನಮ್ಮ ಇತಿಹಾಸ ಮತ್ತು ಸಂಸ್ಕೃತಿಗಳು ಒಟ್ಟಿಗೆ ಬೆಸೆದುಕೊಂಡಿದೆ. ಈ ಎರಡೂ ನಮ್ಮನ್ನು ಪರಸ್ಪರ ಪ್ರಭಾವಿತರನ್ನಾಗಿ ಮಾಡಿದೆ. ಬಲವಾದ ಕಾರ್ಯತಂತ್ರ ಪಾಲುದಾರ ರಾಷ್ಟ್ರಗಳಾಗಿರುವ ಭಾರತ ಮತ್ತು ಅಫ್ಘಾನಿಸ್ಥಾನವನ್ನು ಭಯೋತ್ಪಾದನಾ ಮುಕ್ತ ವಲಯವನ್ನು ನೋಡಲು ಬಯಸುತ್ತವೆ” ಎಂದು ಹೇಳಿದರು.
‘‘ಯಾವುದೇ ಬಾಹ್ಯ ಶಕ್ತಿಗಳು ಅಫ್ಘಾನಿಸ್ಥಾನದ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ. ಜೊತೆಗೆ ಭಾರತ-ಅಫ್ಘಾನಿಸ್ಥಾನದ ಭಾರತದೊಂದಿಗಿನ ಸ್ನೇಹವನ್ನು ತಪ್ಪಿಸಲು ಸಾಧ್ಯವಿಲ್ಲ. ಅಫ್ಘಾನಿಸ್ಥಾನದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ನಾವು ಚಿಂತಿತರಾಗಿದ್ದೇವೆ. ಅಫ್ಘಾನಿಸ್ಥಾನದಲ್ಲಿ ನಿರ್ದೋಷಿ ನಾಗರಿಕರು, ಪತ್ರಕರ್ತರನ್ನು, ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಲಾಗುತ್ತಿದೆ. ದೇಶದಲ್ಲಿ ಪೂರ್ಣ ಕದನ ವಿರಾಮವನ್ನು ನಾವು ಬೆಂಬಲಿಸುತ್ತೇವೆ” ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಆಂದೋಲನ್ ಜೀವಿಗಳಾಗಲು ಹೆಮ್ಮೆ ಪಡುತ್ತೇವೆ: ಮೋದಿಗೆ ತಿರುಗೇಟು ನೀಡಿದ ರೈತರು



ನಮ್ಮ ಪ್ರದಾನಿ ಜಾಣಕುರುಡರಾಗಿದ್ದಾರಾ? ಅಲ್ಲಿ ನಡೆಯುತ್ತಿರುವುದು ಇಲ್ಲಿಯೂ ನಡೆಯುತ್ತಿದೆ. ತನ ತಟ್ಟೆಯಲ್ಲಿ ಸತ್ತುಬಿದ್ದಿರುವ ಹೆಗ್ಗಣವನ್ನು ನಿರ್ಲಕ್ಷಿಸಿ ಕಂಡೋರ ತಟ್ಟೆಯಲ್ಲಿ ಬಿದ್ದಿರುವ ನೊಣದ ಬಗ್ಗೆ ಮಾತನಾಡುತ್ತಿದ್ದಾರೆ.