ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 12-13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದು, ತಮ್ಮ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿರುವ “ಆತ್ಮೀಯ ಸ್ನೇಹಿತ” ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೊದಲ ಸಭೆ ನಡೆಸಲಿದ್ದಾರೆ. ಟ್ರಂಪ್ ಅಧಿಕಾರ ವಹಿಸಿಕೊಂಡ ಮೊದಲ ತಿಂಗಳೊಳಗೆ ನಡೆಯಲಿರುವ ಈ ಭೇಟಿಯು ಟ್ರಂಪ್ ಭಾರತಕ್ಕೆ ಸುಂಕ ವಿಧಿಸುವ ಬೆದರಿಕೆಗಳು ಮತ್ತು ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುತ್ತಿರುವ ಮಧ್ಯೆ ನಡೆಯುತ್ತಿದೆ. ಸುಂಕ ಬೆದರಿಕೆ
ಪ್ರಧಾನಿ ಮೋದಿಯ ಭೇಟಿಯನ್ನು ಘೋಷಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, “ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕಕ್ಕೆ ಭೇಟಿ ನೀಡುವ ಮೊದಲ ಕೆಲವು ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಕೂಡ ಒಬ್ಬರು. ಹೊಸ ಆಡಳಿತ ಅಧಿಕಾರ ವಹಿಸಿಕೊಂಡ ಕೇವಲ ಮೂರು ವಾರಗಳಲ್ಲಿ ಪ್ರಧಾನಿಯನ್ನು ಅಮೆರಿಕಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ. ಇದು ಭಾರತ-ಅಮೆರಿಕದ ಪಾಲುದಾರಿಕೆಯ ಮಹತ್ವವನ್ನು ತೋರಿಸುತ್ತದೆ. ಈ ಪಾಲುದಾರಿಕೆ ಅಮೆರಿಕದಲ್ಲಿ ಅನುಭವಿಸುವ ದ್ವಿಪಕ್ಷೀಯ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಟ್ರಂಪ್ ಈಗಾಗಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದ್ದಾರೆ ಮತ್ತು ಈ ವಾರ ವಾಷಿಂಗ್ಟನ್‌ನಲ್ಲಿ ಜಪಾನ್‌ನ ಶಿಗೇರು ಇಶಿಬಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಟ್ರಂಪ್ ಅವರ ಮೊದಲ ಅವಧಿಯಲ್ಲಿ ಆತ್ಮೀಯ ಸಂಬಂಧಗಳನ್ನು ಹಂಚಿಕೊಂಡ ಇಬ್ಬರು ನಾಯಕರು ಕಳೆದ ವಾರ ಫೋನ್ ಕರೆ ನಡೆಸಿದ್ದರು. ಈ ವೇಳೆ ವಲಸೆ, ಭದ್ರತೆ ಮತ್ತು ವ್ಯಾಪಾರ ಸಂಬಂಧಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಸುಂಕ ಬೆದರಿಕೆ
ಟ್ರಂಪ್ ಅವರನ್ನು ತಮ್ಮ “ಆತ್ಮೀಯ ಸ್ನೇಹಿತ” ಎಂದು ಉಲ್ಲೇಖಿಸಿದ ಪ್ರಧಾನಿ ಮೋದಿ, “ನಮ್ಮ ಜನರ ಕಲ್ಯಾಣಕ್ಕಾಗಿ” ಮತ್ತು “ಜಾಗತಿಕ ಶಾಂತಿಯ ಕಡೆಗೆ” ಇಬ್ಬರೂ ನಾಯಕರು ಒಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಟ್ರಂಪ್ ಕೂಡಾ ಕಳೆದ ವರ್ಷ ಪ್ರಧಾನಿ ಮೋದಿ ಅವರನ್ನು “ಶ್ರೇಷ್ಠ ನಾಯಕ” ಎಂದು ಕರೆದಿದ್ದರು. ಅದಾಗ್ಯೂ, ಈ ಹಿಂದೆ ಅವರು ಭಾರತವನ್ನು “ಸುಂಕದ ರಾಜ” ಮತ್ತು ವ್ಯಾಪಾರ ಸಂಬಂಧಗಳ “ದೊಡ್ಡ ದುರುಪಯೋಗ ಮಾಡುವ” ದೇಶ ಎಂದು ಬಣ್ಣಿಸಿದ್ದರು.
ಇದನ್ನೂಓದಿ: ಶೀಘ್ರದಲ್ಲೇ ಅಮೆರಿಕದಿಂದ 487 ಅಕ್ರಮ ಭಾರತೀಯ ವಲಸಿಗರ ಗಡೀಪಾರು: ಕೇಂದ್ರ ಸರ್ಕಾರ
ಶೀಘ್ರದಲ್ಲೇ ಅಮೆರಿಕದಿಂದ 487 ಅಕ್ರಮ ಭಾರತೀಯ ವಲಸಿಗರ ಗಡೀಪಾರು: ಕೇಂದ್ರ ಸರ್ಕಾರ


