ರಾಷ್ಟ್ರ ನಿರ್ಮಾಣಕ್ಕಾಗಿ ತೆರಿಗೆದಾರರು ಮಾಡುತ್ತಿರುವ ಸೇವೆಯನ್ನು ಗೌರವಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದ ಭಾಗವಾಗಿ 2025 ರ ಬಜೆಟ್‌ನಲ್ಲಿ ನೀಡಲಾದ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ತೆರಿಗೆದಾರರ ಸೇವೆ
ಇಂಡಿಯಾ ಟುಡೇ ಮತ್ತು ಬಿಸಿನೆಸ್ ಟುಡೇಯ ಬಜೆಟ್ ರೌಂಡ್ ಟೇಬಲ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ಕಳೆದ ಮೂರು ಅಥವಾ ನಾಲ್ಕು ವರ್ಷಗಳಲ್ಲಿ, ನಾವು ನಿರಂತರವಾಗಿ ತೆರಿಗೆದಾರರೊಂದಿಗೆ ತೊಡಗಿಸಿಕೊಂಡಿದ್ದೇವೆ. ಸರ್ಕಾರದ ಮೇಲೆ ಅವರ ನಂಬಿಕೆ ಉಳಿಸಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ” ಎಂದು ಹೇಳಿದ್ದಾರೆ. ತೆರಿಗೆದಾರರ ಸೇವೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹಳೆಯ ತೆರಿಗೆ ಪದ್ಧತಿಯ ಪ್ರಸ್ತುತತೆ ಮತ್ತು ಯೋಜನೆಗಳ ಕುರಿತು ಮಾತನಾಡಿದ ನಿರ್ಮಲಾ ಅವರು, ಅನುಸರಣೆ ಕಾರಣಗಳಿಗಾಗಿ ಭಾರತದ ತೆರಿಗೆ ವ್ಯವಸ್ಥೆಯು ಒಟ್ಟಾರೆಯಾಗಿ ಸರಳವಾಗಿರಬೇಕೆಂದು ಜನರು ಬಯಸುತ್ತಾರೆ. ಆದರೆ ಹಳೆಯ ತೆರಿಗೆ ಪದ್ಧತಿಯನ್ನು ರದ್ದುಗೊಳಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ರ ಹಣಕಾಸು ವರ್ಷದ ಬಜೆಟ್ ಅನ್ನು ಶನಿವಾರ ಮಂಡಿಸಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ, ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ಪರಿಹಾರ ಕ್ರಮಗಳನ್ನು ಪರಿಚಯಿಸಿದ್ದರು. ಜೊತೆಗೆ ಸ್ಲ್ಯಾಬ್‌ಗಳನ್ನು ಸಹ ಬದಲಾಯಿಸಿದ್ದರು.
ಹೊಸ ಆಡಳಿತದ ಅಡಿಯಲ್ಲಿ 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರವು ಬಜಟ್ ವೇಳೆ ಪ್ರಸ್ತಾಪಿಸಿದೆ. 75,000 ರೂ.ಗಳ ಪ್ರಮಾಣಿತ ಕಡಿತವನ್ನು ಪರಿಗಣಿಸಿ ಸಂಬಳ ಪಡೆಯುವ ತೆರಿಗೆದಾರರಿಗೆ ಮಿತಿ 12.75 ಲಕ್ಷ ರೂ. ಆಗಿರುತ್ತದೆ. ಹೊಸ ಆಡಳಿತದ ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಹಣಕಾಸು ಸಚಿವರು ಪರಿಷ್ಕರಿಸಿದ್ದು, ಇದು ಮನೆಯ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದರು.
ಇದನ್ನೂಓದಿ: ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಮಧ್ಯಂತರ ಪರಿಹಾರ ಪರಿಗಣಿಸಬಾರದು ಎಂದೇನಿಲ್ಲ : ಹೈಕೋರ್ಟ್
ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಮಧ್ಯಂತರ ಪರಿಹಾರ ಪರಿಗಣಿಸಬಾರದು ಎಂದೇನಿಲ್ಲ : ಹೈಕೋರ್ಟ್


