ಹತ್ತು ದಿನಗಳ ಹಿಂದೆ ರಂಗಾ ರೆಡ್ಡಿ ಜಿಲ್ಲೆಯ ಮಹೇಶ್ವರಂ ಮಂಡಲದ ಶಾಲೆಯೊಂದರ ಮುಖ್ಯೋಪಾಧ್ಯಾಯರ ಮೇಲೆ ಅಯ್ಯಪ್ಪ ಭಕ್ತರು ಹಲ್ಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ವಿಫಲವಾದರೆ ತೆಲಂಗಾಣದಾದ್ಯಂತ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ ಮುಖ್ಯೋಪಾಧ್ಯಾಯರಾದ ಪಿ.ರಾಮುಲು ಅವರನ್ನು ಗುಂಪು ಥಳಿಸಿದ್ದು, ಅಯ್ಯಪ್ಪ ಮಾಲಾಧಾರಿಯಾಗಿರುವ 8ನೇ ತರಗತಿಯ ವಿದ್ಯಾರ್ಥಿಯ ಬಳಿ ಕ್ಷಮೆ ಕೇಳುವಂತೆ ಬಲವಂತಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಡಿಸೆಂಬರ್ 21 ರಂದು ತುಕ್ಕುಗುಡ ಮಂಡಲದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗೆ ಗಣಿತದ ಕೋಷ್ಟಕಗಳನ್ನು ಹೇಳುವಂತೆ ಹೇಳಿದಾಗ ಈ ಸಮಸ್ಯೆ ಉದ್ಭವಿಸಿದೆ. ಆದರೆ, ಮುಖ್ಯೋಪಾಧ್ಯಾಯರು ತರಗತಿಯಲ್ಲಿ ಒದ್ದರು ಎಂದು ಬಾಲಕ ಹೇಳಿಕೊಂಡಿದ್ದಾನೆ.
ಘಟನೆಯ ಸಂದೇಶವನ್ನು ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗಿದೆ. ಮರುದಿನ, 50 ಕ್ಕೂ ಹೆಚ್ಚು ಜನರ ಗುಂಪು ಶಾಲೆಗೆ ಆಗಮಿಸಿ ಮುಖ್ಯೋಪಾಧ್ಯಾಯರನ್ನು ಹಿಡಿದಿದೆ. ಅಯ್ಯಪ್ಪ ಭಕ್ತರು ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ ನಡೆಸಿದ್ದು, ಅವರ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ಸಿಬ್ಬಂದಿ ಹೇಗೋ ಪಿ.ರಾಮುಲು ಅವರನ್ನು ರಕ್ಷಿಸಿದರು. ಪೊಲೀಸ್ ದೂರು ದಾಖಲಿಸಲಾಗಿದ್ದು, ಗುಂಪಿನ ವಿರುದ್ಧ ಬಿಎನ್‌ಎಸ್ ಕಾಯಿದೆ ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ನಡೆದು ಹತ್ತು ದಿನಗಳ ನಂತರ ವಿವಿಧ ದಲಿತ ಸಂಘಟನೆಗಳು ದಾಳಿಯ ವಿರುದ್ಧ ಧ್ವನಿಯೆತ್ತಿವೆ. ಹೈಕೋರ್ಟ್ ವಕೀಲ ಪಿ.ವಿಷ್ಣು ಮಾತನಾಡಿ, ಶಾಲೆಗೆ ನುಗ್ಗಿದ ಗುಂಪು ಅಯ್ಯಪ್ಪ ಸ್ವಾಮಿ ವೇಷ ಧರಿಸಿದ್ದ ವಿಎಚ್‌ಪಿ ಮತ್ತು ಬಜರಂಗದಳದ ಸದಸ್ಯರನ್ನು ಒಳಗೊಂಡಿತ್ತು.
“ಪರಿಶಿಷ್ಟ ಜಾತಿ ಗುಂಪಿಗೆ ಸೇರಿದ ಮುಖ್ಯೋಪಾಧ್ಯಾಯರ ಮೇಲೆ ದಾಳಿ ನಡೆದಿದೆ ಎಂದು ನಮ್ಮ ಗಮನಕ್ಕೆ ಬಂದಿದೆ. 60 ವರ್ಷ ವಯಸ್ಸಿನ ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿಯ ಪಾದಗಳನ್ನು ಮುಟ್ಟುವಂತೆ ಒತ್ತಾಯಿಸಲಾಯಿತು. ಪೊಲೀಸರು ಕ್ರಮ ಕೈಗೊಂಡು ಕೊಲೆ ಯತ್ನದ ಮೊಕದ್ದಮೆ ಹೂಡಬೇಕು” ಎಂದು ವಕೀಲರ ಸಂಘದ ಸದಸ್ಯ ವಕೀಲ ವಿಷ್ಣು ಹೇಳಿದರು.
ಇದನ್ನೂ ಓದಿ; ಮಧ್ಯಪ್ರದೇಶ ಪೊಲೀಸ್ ಠಾಣೆಯಲ್ಲಿ ದಲಿತ ಯುವಕ ಸಾವು – ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ


