ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ದೇವನಹಳ್ಳಿಯಲ್ಲಿ ದೇವಾಲಯದ ಬಳಿ ಆಟವಾಡುತ್ತಿದ್ದ 10 ವರ್ಷದ ಬಾಲಕಿಯ ಮೇಲೆ ಅರ್ಚಕ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಸದ್ಯ, 62 ವರ್ಷದ ಆರೋಪಿ ಅರ್ಚಕ ವೆಂಕಟರಮಣಪ್ಪನನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆದರೆ ಟ್ವಿಟರ್‌ನಲ್ಲಿ #RapistPoojary ಮತ್ತು #bangaloreasifa ಎಂಬ ಹ್ಯಾಶ್‌ಟ್ಯಾಗ್‌ನಳು ಟ್ರೆಂಡಿಂಗ್‌ನಲ್ಲಿವೆ.
ಟ್ವಿಟರ್‌ನಲ್ಲಿ ಹಲವು ಮಂದಿ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ರಕ್ಷಿತ್ ಶಿವರಾಂ ಎನ್ನುವ ಪೇಜ್‌ನಿಂದ ಸಂಸದೆ ಶೋಭಾ ಕರಂದ್ಲಾಜ್ಜೆ ಅವರ ಚಿತ್ರವನ್ನು ಟ್ಯಾಗ್ ಮಾಡಿ, ಈ ಅತ್ಯಾಚಾರವನ್ನು ಖಂಡಿಸುವಿರಾ..? ಎಲ್ಲಿದ್ದಿರಿ ಶೋಭಾ ಕರಂದ್ಲಾಜೆ ಎಂದು ಪ್ರಶ್ನಿಸಿದ್ದಾರೆ.
Where are you @ShobhaBJP ?
Will you condemn this Rape? #RapistPoojary #bangaloreasifa pic.twitter.com/iyZbW0tJeG— Rakshith Shivaram/ರಕ್ಷಿತ್ ಶಿವರಾಂ (@bkrs100) November 26, 2020
ಇದನ್ನೂ ಓದಿ: ಬೆಂಗಳೂರು: ದೇವಸ್ಥಾನದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅರ್ಚಕ
ಭರತ್.ಪಿ. ಎನ್ನುವವರು ತೇಜಸ್ವಿ ಸೂಯ್ ಅವರ ಹಳೆಯ ಟ್ವೀಟ್‌ಗಳ ಫೋಟೋಗಳನ್ನು ಹಾಕಿ ಅತ್ಯಾಚಾರವನ್ನು ಹೇಗೆ ನೊಡಲಾಗುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.
Case1:Rape Victim is Minority/Dalit. Offender is Majority= Support Offender.
Case2:Victim is Majority, Offender is Majority =Keep Silence.@Tejasvi_Surya #RapistPoojary #BangaloreAsifa pic.twitter.com/Lxb3MfTWxO
— ಭರತ್.ಪಿ (@Bharathpkgl) November 26, 2020
ಸಂಸದ ತೇಜಸ್ವಿ ಸೂರ್ಯ 2014ರಲ್ಲಿ ತೀರ್ಥಹಳ್ಳಿಯಲ್ಲಿ ನಡೆದಿದ್ದ ಅತ್ಯಾಚಾರ ಸಂದರ್ಭದಲ್ಲಿ ಬಳಸಿದ್ದ ಟ್ವೀಟ್‌ಗಳನ್ನು ಮತ್ತೆ ಬಳಸಿ ವ್ಯಂಗ್ಯವಾಡಿದ್ದಾರೆ.
’ದೇವಾಲಯದಲ್ಲಿ ನಡೆದ ಅತ್ಯಾಚಾರವನ್ನು ನಂಬಲು ಸಾಧ್ಯವಿಲ್ಲ, ಇದನ್ನೂ ಯಾರು ಸಮರ್ಥಿಸುವಿರಿ..? ಎಂದು ಮತ್ತೊಂದು ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.
Stop rape!?#RapistPoojary
..Who will justify this??? I can't believe this can happen in a temple. #BangaloreAsifa #RapistPoojary pic.twitter.com/B6PgLyJ6p6— wasim k Belapu (@wasimkbelapu) November 26, 2020
ದೇವಾಲಯದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದ ಸಂತ್ರಸ್ತ ಮಗು ಆಸೀಫಾ ಪ್ರಕರಣದ ಜೊತೆಗೆ ಈ ಘಟನೆಯನ್ನು ಹೋಲಿಸುವ ಪ್ರಯತ್ನ ಟ್ವಿಟರ್‌ನಲ್ಲಿ ಮಾಡಲಾಗಿದೆ.
ಇದನ್ನೂ ಓದಿ: ಬಿಜೆಪಿ ನನ್ನ ಜೈಲಿಗೆ ಹಾಕಿದರೂ, ಅಲ್ಲಿಂದಲೇ ಪಕ್ಷವನ್ನು ಗೆಲ್ಲಿಸುವೆ-ಮಮತಾ ಬ್ಯಾನರ್ಜಿ
Unforgiveable punishment for lowly creatures as these..#RapistPoojary #BangaloreAsifa pic.twitter.com/5B2qtCXeOB
— Sophiya (@sophiyatweets) November 26, 2020
ಬೆಂಗಳೂರು ಆಸೀಫಾ ಎಂದು ಕರೆದು, ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ನ್ಯಾಯ ಬೇಕೆಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆಗ್ರಹಿಸಿದ್ದಾರೆ.
10 year old girl raped by a temple priest in Bangalore.
The rapist pujari should be hanged till death.#RapistPoojary pic.twitter.com/EkDPmnjrtR— Usman Ansari (@Usmanansari780) November 26, 2020
ಮತ್ತೊಬ್ಬ ಟ್ವಿಟರ್ ಬಳಕೆದಾರರು, ಅತ್ಯಾಚಾರ ಆರೋಪಿ ಅರ್ಚಕನನ್ನು ನೇಣಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.
’ಅಂದು ಆಸೀಫಾ, ಇಂದು ಐಶ್ವರ್ಯ ಆಗಿರಬಹುದು, ನಾಳೆ ಆಲಿಶಾಗೆ ಕೂಡ ಇದೇ ರೀತಿ ನಡೆಯಬಹುದು’ ಎಂದು ಭಿತ್ತಿಪತ್ರವನ್ನು ಹಂಚಿಕೊಂಡಿದ್ದಾರೆ.
Sαnghis cry over fiction but turn a blind eye to real life barbarism when p€rpetrαtors are co-Sαngh¡s.#RapistPoojary#BangaloreAsifa
Fiction Reality pic.twitter.com/g5DFP06cOD
— Aafiya (@Mermaid___tales) November 26, 2020
ಮತ್ತೊಬ್ಬ ನೆಟ್ಟಿಗರು, ಇತ್ತಿಚೆಗೆ ‘ಎ ಸೂಟಬಲ್ ಬಾಯ್’ ಎನ್ನುವ ವೆಬ್ ಸೀರೀಸ್‌ನ ದೃಶ್ಯವೊಂದರಲ್ಲಿ ದೇವಸ್ಥಾನದ ಆವರಣದಲ್ಲಿ ಯುವಕ-ಯುವತಿ ಚುಂಬಿಸುತ್ತಿರುವ ದೃಶ್ಯವಿದೆ ಎನ್ನುವ ಕಾರಣಕ್ಕೆ “ಬಾಯ್ಕಾಟ್ ನೆಟ್‌ಫ್ಲಿಕ್ಸ್” ಟ್ರೆಂಡಿಂಗ್ ಮಾಡಿದ್ದನ್ನು ನೆನಪಿಸಿದ್ದಾರೆ.
ಕಾಲ್ಪನಿಕ ಚಿತ್ರಗಳಲ್ಲಿ ಹೀಗೆ ತೋರಿಸುವುದನ್ನು ವಿರೋಧಿಸುವವರು ನಿಜ ಜೀವನದಲ್ಲಿ ಇಂತಹ ಘಟನೆಗಳ ಬಗ್ಗೆ ವಿರೋಧ ವ್ಯಕ್ತಪಡಿಸದೇ ಜಾಣ ಕುರುಡು ಪ್ರದರ್ಶಿಸುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.


