Homeಅಂಕಣಗಳುಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

ಯಾವ ಧರ್ಮವೂ ಸಂಕಟವನ್ನು ರೂಪಿಸುವುದಿಲ್ಲ

- Advertisement -
- Advertisement -

ಸಾರ ಅಬೂಬಕ್ಕರ್ |

ಇದೇ ಡಿಸೆಂಬರ್ ತಿಂಗಳ ದಿನಾಂಕ 10ರಂದು ಮಂಗಳೂರಿನ ನೆಹರು ಮೈದಾನದಲ್ಲಿ ಮುಸ್ಲಿಮರ ‘ಶರಿಯತ್ ರಕ್ಷಣ್’ ಎಂಬ ವಿಷಯದ ಕುರಿತು ಸಾರ್ವಜನಿಕ ಸಭೆ ಕರೆಯಲಾಗಿದ್ದು ರಾಜ್ಯಾದ್ಯಂತದಿಂದ ಮುಸ್ಲಿಂ ಪುರುಷರು ಈ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದನ್ನು ಅನುಸರಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ಮುಸ್ಲಿಂ ಪುರುಷರು ಆಗಮಿಸಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಕೇರಳದ ಹಲವಾರು ಧರ್ಮ ಗುರುಗಳು ಬಂದು ಈ ಜನರಿಗೆ ಮಾರ್ಗದರ್ಶನ ನೀಡಿದರು.
1985ರ ಸಂದರ್ಭದಲ್ಲಿ ಶಾಬಾನು ಎಂಬ ಮಹಿಳೆ, ಐದು ಮಕ್ಕಳ ತಾಯಿಯು ವಕೀಲನಾಗಿದ್ದ ಆಕೆಯ ಗಂಡ ತ್ರಿವಳಿ ತಲಾಖ್ ನೀಡಿ ಹೊರ ಹಾಕಿದಾಗ ಆಕೆ ಜೀವನಾಂಶಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದಳು. ನ್ಯಾಯಾಲಯ ಆಕೆ ಮತ್ತು ಮಕ್ಕಳಿಗೆ ತಿಂಗಳಿಗೆ 185ರೂ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದಾಗ ಆಗ ಆಕೆಯ ಗಂಡನು ದೇಶಾದ್ಯಂತ ಎಲ್ಲ ಮುಸ್ಲಿಮರನ್ನು ಈ ತೀರ್ಪಿನ ವಿರುದ್ಧ ಎತ್ತಿ ಕಟ್ಟಿ, ತಲಾಖ್ ನೀಡಿದ ಬಳಿಕ ಹೆಂಡತಿಗೆ ಜೀವನಾಂಶ ನೀಡುವುದು ಧರ್ಮ ವಿರುದ್ಧವೆಂದು ಹೋರಾಟವನ್ನಾರಂಭಿಸಿದರು. ಆಗ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ದಾರಿ ತಪ್ಪಿಸಿ ‘ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ ಎಂಬ ಹೊಸ ನಿಯಮವನ್ನು ಜಾರಿಗೊಳಿಸಿದರು. ಈ ನಿಯಮದಂತೆ ತಲಾಖ್ ಪೀಡಿತ ಮಹಿಳೆಯರನ್ನು ಅವಳ ಸಂಬಂಧಿಕರು ನೋಡಿಕೊಳ್ಳಬೇಕು ಯಾರೂ ಇಲ್ಲವಾದರೆ ವಕ್ಸ್ ಮಂಡಳಿಯನ್ನು ಆಕೆ ಕೇಳಿಕೊಳ್ಳಬೇಕು. ಈ ನಿಯಮ ತೀರಾ ಹಾಸ್ಯಾಸ್ಪದ ಎಂಬಂತಾಯಿತು. ಹಕ್ಕೇ ಇಲ್ಲದ ಮುಸ್ಲಿಂ ಮಹಿಳೆಯರ ಯಾವ ಹಕ್ಕುಗಳನ್ನು ಈ ನಿಯಮ ರಕ್ಷಿಸುತ್ತದೆ? ವಕ್ಪ್ ಮಂಡಳಿಯ ಅನ್ಯ ಪುರುಷರೊಡನೆ ಆಕೆ ತನಗೆ ಜೀವನಾಂಶ ಕೊಡಿ ಎಂದು ಕೇಳತೊಡಗಿದರೆ ಪರಿಣಾಮವೇನಾಗಬಹುದು ಎಂಬುದನ್ನು ನಾನು ವಿವರಿಸಬೇಕಾಗಿಲ್ಲ. ಇಷ್ಟಕ್ಕೂ ಖುರಾನಿನ 2ನೇ ಸೂರದ 241ನೇ ವಾಕ್ಯ ಸ್ಪಷ್ಟವಾಗಿ ತಲಾಖ್ ಪೀಡಿತ ಮಹಿಳೆಯ ಮುಂದಿನ ಬದುಕಿಗಾಗಿ ಆಕೆಗೆ ಜೀವನಾಂಶ ನೀಡಬೇಕೆಂದು ಬರೆದಿದೆ. ಮುಸ್ಲಿಂ ಪುರುಷರು ಈ ಖುರ್‍ಆನಿನ ಈ ವಾಕ್ಯವನ್ನೇ ಜನರ ಕಣ್ಣಿನಿಂದ ಮಶಿಮಾ ಡಿ, ತಲಾಖ್ ಪೀಡಿತೆಗೆ ಜೀವನಾಂಶ ಧರ್ಮ ವಿರುದ್ಧ. ತಮ್ಮ ಧರ್ಮದಲ್ಲಿ ಸರಕಾರದ ಹಸ್ತಕ್ಷೇಪ ಎಂದು ಘೋಷಣೆ ಕೂಗಿದರು. ತಲಾಖ್ ಪೀಡಿತ ಮುಸ್ಲಿಂ ಮಹಿಳೆಯರು ಬದುಕಿನ ಹಾದಿಯನ್ನು ಮುಂಬೈಯ ಕೆಂಪು ದೀಪದ ಅಡಿಯಲ್ಲಿ ಕಂಡುಕೊಂಡರು. ಧರ್ಮ ರಕ್ಷಕರೆಂಬ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಎಂಬ ಸಂಸ್ಥೆ ಧರ್ಮ ರಕ್ಷಣೆ ಆಯಿತೆಂದು ಸಂಭ್ರಮಾಚರಿಸಿದರು. ತಲಾಖ್ ಪೀಡಿತ ಮಹಿಳೆಯರ ಗತಿ ಏನಾಯಿತೆಂದು ಈ ಪುರುಷರು ಯೋಚಿಸುವ ಗೋಜಿಗೆ ಇಂದಿನವರೆಗೂ ಹೋಗಿಯೇ ಇಲ್ಲ. ಈ ಹೊಸ ನಿಯಮದ ವಿರುದ್ಧ ಹೋರಾಡಿದ ವಿದ್ಯಾವಂತ ಮುಸ್ಲಿಂ ಮಹಿಳೆಯರ ಮೇಲೆ ಕೂಡಾ ಈ ಜನರು ಜಾತಿ ಭ್ರಷ್ಟತೆಯ ಆರೋಪ ಹೊರಸಿದರು.
ಈಗಲೂ ತ್ರಿವಳಿ, ಬಾಯಿಮಾತಿನ ತಲಾಖನ್ನು ಕೇಂದ್ರ ಸರಕಾರ ನಿಷೇಧಿಸಿದ ಕಾರಣ ನೀಡಿ ಈ ಜನರು ಶರಿಯತ್ ರಕ್ಷಣೆಯ ನಾಟಕವಾಡುತ್ತಿದ್ದಾರೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ರದ್ಧತಿ ನಿಯಮದಿಂದ ಹಿಂದೆ ಸರಿಯಬಾರದೆಂದು ನನ್ನ ಕಳಕಳಿಯ ಮನವಿ.
ನಮ್ಮ ಸಂವಿಧಾನವು ಎಲ್ಲರಿಗೂ ತಮ್ಮ ಧಾರ್ಮಿಕ ನಿಯಮಗಳನ್ನು ಪಾಲಿಸುವ ಅಧಿಕಾರವನ್ನು ನೀಡಿದೆ. ಆದರೆ ಯಾವ ಧರ್ಮ ಕೂಡಾ ಮನುಷ್ಯರನ್ನು ಬದುಕಿನಲ್ಲಿ ಸಂಕಟ ಪಡುವಂತಹ ನಿಯಮಗಳನ್ನು ರೂಪಿಸುವುದಿಲ್ಲ. 1500 ವರ್ಷಗಳ ಹಿಂದೆ ಪ್ರವಾದಿಗಳು ಹೆಂಡತಿ ಬೇಡವಾದರೆ ಬೀದಿಗೆಸೆಯಿರಿ ಎಂದು ಹೇಳಿಯೂ ಇರಲಿಲ್ಲ. ಅವರು ಪುರುಷರಿಂದ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ನೋಡಿಯೇ ಇಸ್ಲಾಂ(ಶಾಂತಿ) ಎಂಬ ಧರ್ಮ ಸ್ಥಾಪನೆ ಮಾಡಿದರು.
ಧರ್ಮದ ನಿಯಮಗಳು 1500 ವರ್ಷಗಳ ಹಿಂದೆ ನಡೆಯುತ್ತಿದ್ದಂತೆ ಈಗಲೂ ಇರಬೇಕೆನ್ನುವುದೇ ಮೂರ್ಖತನವಾಗುತ್ತದೆ. ಶರಿಯತ್ ರಕ್ಷಣೆಗೆ ಹೊರಟವರಿಗೆ ಶರಿಯತ್ ಎಂಬ ಕರ್ಮ ಶಾಸ್ತ್ರ ಯಾವಾಗ ಜಾರಿಯಾಯಿತೆಂದು ತಿಳಿದಿದೆಯೇ? ಪ್ರವಾದಿಗಳ ಮರಣಾನಂತರ 150 ವರ್ಷಗಳ ಬಳಿಕವಷ್ಟೆ ಧಾರ್ಮಿಕ ಗುರುಗಳು ಶರಿಯತ್‍ನ್ನು ಜಾರಿಗೊಳಿಸಿದರು. ಇಸ್ಲಾಂ ಧಾರ್ಮಿಕ ನಿಯಮಗಳು ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಪುರುಷರಿಗೆ ಸಾಧ್ಯವಾಗುವಂತಹ ನಿಯಮಗಳನ್ನು ಶರಿಯತ್ ಎಂಬ ಹೆಸರಿನಲ್ಲಿ ಜಾರಿಗೊಳಿಸಿದರು.
ನಮ್ಮ ಸಂವಿಧಾನ ಸರ್ವರಿಗೂ ಸಮಾನತೆ ನೀಡಿದೆ. ವಿವಿಧ ಧಾರ್ಮಿಕ ನಿಯಮಗಳಿಂದಾಗಿ ಈ ಸಮಾನತೆ ಮುಸ್ಲಿಂ ಮಹಿಳೆಯರಿಗೆ ದೊರೆಯುತ್ತಿಲ್ಲ. ವಿವಾಹ, ವಿಚ್ಛೇದನ ಇವು ಯಾವುದು ಧಾರ್ಮಿಕ ನಿಯಮಗಳಲ್ಲ. ಇವೆಲ್ಲವೂ ಸಾಮಾಜಿಕ ನಿಯಮಗಳು ಇಂತಹ ಸಾಮಾಜಿಕ ನಿಯಮಗಳು ಮಹಿಳೆಯರಿಗೆ ಬದುಕಲು ಸಾಧ್ಯವಾಗದ ರೀತಿಯಲ್ಲಿ ಅವರಿಗೆ ಉಸಿರುಗಟ್ಟುವಂತಾದರೆ ಅವುಗಳನ್ನು ಕಾಲಕ್ಕನುಸಾರವಾಗಿ ಬದಲಾಯಿಸಬಹುದು. ನೀವು ಯಾವ ದೇಶದಲ್ಲಿ ಬದುಕುತಿದ್ದೀರೋ ಆ ದೇಶದ ಸಾಮಾಜಿಕ ನಿಯಮವನ್ನು ಅನುಸರಿಸಬಹುದು ಎಂಬುದು ಪ್ರವಾದಿಗಳ ಬೋಧನೆಯಾ.
ಇಂದು ನಮ್ಮ ಸುತ್ತಮುತ್ತಲಿನ ಸುಮಾರು ಹತ್ತಿಪ್ಪತ್ತು ದೇಶಗಳಲ್ಲಿ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದುಪಡಿಸಲಾಗಿದೆ. ಅಲ್ಲಿ ಯಾರೂ ನಮ್ಮ ಧರ್ಮದಲ್ಲಿ ಹಸ್ತಕ್ಷೇಪವೆಂದು ಕಿರುಚಾಡಲಿಲ್ಲವಲ್ಲಾ? ಇತರ ಮುಸ್ಲಿಂ ರಾಷ್ಟ್ರಗಳು ಇಂತಹ ಅನ್ಯಾಯದ ನಿಯಮವನ್ನು ತಿದ್ದುಪಡಿ ಮಾಡಿದರೆ ಇಂಡಿಯಾ ಕೂಡಾ ಅದನ್ನು ಮಾಡಲು ಯಾರ ಅನುಮತಿಯನ್ನು ಪಡೆಯಬೇಕಾಗಿಲ್ಲ.
ನಾವೆಲ್ಲರೂ ನಮ್ಮ ಸಂವಿಧಾನಕ್ಕನುಸಾರವಾಗಿ ಬದುಕಬೇಕು. ನಮಗೆ ನಮ್ಮ ಧರ್ಮವೆನ್ನುವುದಾದರೆ ಮುಸ್ಲಿಮೇತರರೂ ಮನುಧರ್ಮಶಾಸ್ತ್ರ ನಮ್ಮ ಧರ್ಮವೆನ್ನುತ್ತಾರೆ. ಪೇಜಾವರ ಗುರುಗಳು ಹಾಗೂ ವಾರಣಾಸಿಯ ಧರ್ಮಗುರುಗಳೂ ನಮಗೆ ಸಂವಿಧಾನದಲ್ಲಿ ವಿಶ್ವಾಸವಿಲ್ಲ. ನಾವು ಮನುವಾದವನನುಸರಿಸುತ್ತೇವೆ ಎಂದು ಹೇಳತೊಡಗಿದ್ದಾರೆ. ನಮ್ಮ ದೇಶದಲ್ಲಿ ಅತ್ಯುತ್ತಮ ಸಂವಿಧಾನವಿದೆ. ನಾವೆಲ್ಲರೂ ಸೌಹಾರ್ದದಿಂದ ಈ ಸಂವಿಧಾನಕ್ಕನುಸಾರವಾಗಿ ವರ್ತಿಸತೊಡಗಿದರೆ ದೇಶದಲ್ಲಿ ಶಾಂತಿ ನೆಲೆಯೂರಬಹುದು. ಮುಸ್ಲಿಮರು ಎಷ್ಟು ಮಸೀದಿ ಕಟ್ಟಿಸಿಕೊಳ್ಳಲೂ ಅಭ್ಯಂತರವಿಲ್ಲ. ಒಂದೇ ಬೀದಿಯಲ್ಲಿ ಮೂರೋ ನಾಲ್ಕೋ ಮಸೀದಿಗಳಿರುವುದೂ ಇದೆ. ನಮ್ಮ ಧಾರ್ಮಿಕ ನಿಯಮಗಳನ್ನು ಯಾರೂ ತಡೆಯಲಾರರು. ನಮಗೆ ಎಲ್ಲರನ್ನು ಅರ್ಥ ಮಾಡಿಕೊಳ್ಳುವಂತಹ ಹೃದಯ ವಾತ್ಸಲ್ಯತೆ ಇರಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು : ಸಿಎಂ ಸಿದ್ದರಾಮಯ್ಯ

ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ...

ವೆನೆಜುವೆಲಾ ಮೇಲೆ ಅಮೆರಿಕ ದಾಳಿಗೆ ಖಂಡನೆ : ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಭಾರತದ ಎಡಪಕ್ಷಗಳು

ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ಭಾರತದ ಎಡಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಬಂಧನವನ್ನು ‘ಅಪಹರಣ’ ಎಂದು ಹೇಳಿದೆ. ಹಾಗೆಯೇ, ಅಮೆರಿಕದ...

ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 40 ಮಂದಿ ಸಾವು: ವರದಿ

ಶನಿವಾರ ನಡೆದ ದಾಳಿಯಲ್ಲಿ ವೆನೆಜುವೆಲಾದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ವೆನೆಜುವೆಲಾದ ಹಿರಿಯ ಅಧಿಕಾರಿಯೊಬ್ಬರು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ, ಅವರಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ...

ಅತ್ಯಾಚಾರ-ಕೊಲೆ ಅಪರಾಧಿ ಗುರ್ಮೀತ್ ರಾಮ್ ರಹೀಮ್‌ಗೆ ಮತ್ತೆ 40 ದಿನಗಳ ಪೆರೋಲ್

ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಮತ್ತು ಪತ್ರಕರ್ತನ ಹತ್ಯೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೊಮ್ಮೆ 40 ದಿನಗಳ ಪೆರೋಲ್ ಮಂಜೂರಾಗಿದೆ....

ವೆನೆಜುವೆಲಾ ಮೇಲೆ ಅಮೆರಿಕಾ ದಾಳಿ: ಕಳವಳ ವ್ಯಕ್ತಪಡಿಸಿದ ಭಾರತ: ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕರೆ

ನವದೆಹಲಿ: ಅಮೆರಿಕವು ತೈಲ ಸಮೃದ್ಧ ದೇಶದ ಮೇಲೆ ದಾಳಿ ಮಾಡಿ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಅಪಹರಿಸಿದ ನಂತರ, ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು "ತೀವ್ರ ಕಳವಳಕಾರಿ...

ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್‌ರನ್ನು ನೇಮಿಸಿದ ಸುಪ್ರೀಂ ಕೋರ್ಟ್

ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಅಮೆರಿಕ ಸೇನೆ ಬಂಧಿಸಿರುವ ಹಿನ್ನೆಲೆ, ಹಂಗಾಮಿ ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ವೆನಿಜುವೆಲಾದ ಸುಪ್ರೀಂ ಕೋರ್ಟ್...

ರ‍್ಯಾಗಿಂಗ್‌ಗೆ ದಲಿತ ವಿದ್ಯಾರ್ಥಿನಿ ಬಲಿ: ‘ಜಾತಿ ಮತ್ತು ಲಿಂಗ ಆಧಾರಿತ ಸಾಂಸ್ಥಿಕ ಹಿಂಸಾಚಾರದ ಗಂಭೀರ ನಿದರ್ಶನ’ ಎಂದ ಮಾನವ ಹಕ್ಕುಗಳ ಸಂಘಟನೆ

ಹಿಮಾಚಲ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ 19 ವರ್ಷದ ದಲಿತ ವಿದ್ಯಾರ್ಥಿನಿಯ ಸಾವಿನ ನಂತರ, ದಲಿತ ಹಕ್ಕುಗಳ ಸಂಘಟನೆಗಳು ಶುಕ್ರವಾರ ಮೂವರು ಹಿರಿಯ ವಿದ್ಯಾರ್ಥಿಗಳು ಮತ್ತು ಕಾಲೇಜು ಪ್ರಾಧ್ಯಾಪಕರನ್ನು ಬಂಧಿಸಬೇಕು ಮತ್ತು ಅಧಿಕಾರಿಗಳು ಅದಕ್ಕೆ...

ಫ್ರೀಡಂ ಫ್ಲೋಟಿಲ್ಲಾ ಸದಸ್ಯರ ಮೇಲೆ ಇಸ್ರೇಲಿ ಪಡೆಗಳಿಂದ ಲೈಂಗಿಕ ದೌರ್ಜನ್ಯ ಆರೋಪ : ಸ್ವತಂತ್ರ ತನಿಖೆ ಆಗ್ರಹ

ಗಾಝಾ ಮೇಲೆ ವಿಧಿಸಲಾಗಿದ್ದ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿದ ಫ್ಲೋಟಿಲ್ಲಾ ಹಡಗುಗಳನ್ನು ತಡೆದ ನಂತರ, ಅವುಗಳಲ್ಲಿದ್ದ ಜಗತ್ತಿನ ವಿವಿಧ ಭಾಗಗಳ ಹಲವು ಹೋರಾಟಗಾರರನ್ನು ಇಸ್ರೇಲ್ ಸೇನೆ ಬಂಧಿಸಿದೆ. ಈ ಬಂಧಿತರ ಮೇಲೆ ಇಸ್ರೇಲಿ...

‘ನನಗೆ, ನನ್ನ ಕುಟುಂಬಕ್ಕೆ ‘ಝಡ್‌’ ಶ್ರೇಣಿ ಭದ್ರತೆ ಒದಗಿಸಿ’: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನಾರ್ದನ ರೆಡ್ಡಿ ಪತ್ರ 

ಕೊಪ್ಪಳ: ಬಳ್ಳಾರಿಯಲ್ಲಿ ತಮ್ಮ ಮೇಲೆ "ಪೂರ್ವ ಯೋಜಿತ ಹತ್ಯೆ ಯತ್ನ" ನಡೆದಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ...

ಪೋಕ್ಸೋ ಪ್ರಕರಣದ ದೂರು ತಿರುಚಿದ ಪೊಲೀಸರು : ಸಂತ್ರಸ್ತೆಯ ತಾಯಿ ಆರೋಪ

​ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವೊಂದನ್ನು ದಾಖಲಿಸುವ ವೇಳೆ ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ, ಪೊಲೀಸರು ತಮಗೆ ಇಷ್ಟ ಬಂದಂತೆ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ...