Homeಫ್ಯಾಕ್ಟ್‌ಚೆಕ್ಭಾರತೀಯ ವಿಜ್ಞಾನಿ ‘Ramesh EM Desigan’ ಗೌರವಾರ್ಥ ಆ್ಯಂಟಿ ವೈರಲ್‌ ಲಸಿಕೆಗೆ ‘Remdesivir’ ಎಂದು ನಾಮಕರಣ...

ಭಾರತೀಯ ವಿಜ್ಞಾನಿ ‘Ramesh EM Desigan’ ಗೌರವಾರ್ಥ ಆ್ಯಂಟಿ ವೈರಲ್‌ ಲಸಿಕೆಗೆ ‘Remdesivir’ ಎಂದು ನಾಮಕರಣ ಮಾಡಲಾಯಿತೆ?

- Advertisement -
- Advertisement -

ಪ್ರಸ್ತುತ ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಆ್ಯಂಟಿ ವೈರಲ್ ಔಷಧಿಗೆ ‘ರೆಮ್‌ಡೆಸಿವಿರ್‌‌’(Remdesivir) ಎಂಬ ಹೆಸರನ್ನು ತಮಿಳುನಾಡು ಮೂಲದ ಭಾರತೀಯ ವಿಜ್ಞಾನಿಯಾದ ‘ರಮೇಶ್ ಇ.ಎಂ. ದೇಸಿಗನ್’ (Ramesh EM Desigan) ಅವರ ಗೌರವಾರ್ಥವಾಗಿ ಇಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಸಂದೇಶವೊಂದು ಹರಿದಾಡುತ್ತಿದೆ. ಆಯ

ಆದರೆ ರೆಮ್‌ಡೆಸಿವಿರ್‌ ಮೂಲ ಕಂಪನಿಯಾದ ‘ಗಿಲ್ಯಾಡ್‌ ಸೈನ್ಸಸ್’ ಅವರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪ್ರತಿಪಾದನೆ ನಿಜವಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇನು?

  • ರೆಮ್ಡೆಸಿವಿರ್ ಅನ್ನು ಕ್ಯಾಲಿಫೋರ್ನಿಯಾ ಮೂಲದ ಗಿಲ್ಯಾಡ್ ಸೈನ್ಸ್ ಅಭಿವೃದ್ಧಿಪಡಿಸಿದೆ. ಅಲ್ಲಿನ ಜೆಕ್ ವಿಜ್ಞಾನಿ ಥೋಮಸ್ ಸಿಹ್ಲರ್ ನೇತೃತ್ವದ ತಂಡವು ಎಬೋಲಾ ಚಿಕಿತ್ಸೆಗಾಗಿ ಈ ಔಷಧವನ್ನು ಕಂಡುಹಿಡಿದಿದೆ.
  • ಆ್ಯಂಟಿ ವೈರಲ್‌ ಔಷಧಕ್ಕೆ ಮೊದಲು ಎಬ್ಪಾಂಟುವಿರ್ (Ebpantuvir) ಎಂದು ಹೆಸರು ಇದ್ದು, ನಂತರ ಸಿಹ್ಲಾರ್ ತಂಡದ ಪ್ರಮುಖ ವಿಜ್ಞಾನಿ ‘ರಮೇಶ್ ಇ.ಎಂ. ದೇಸಿಗನ್’ ಅವರ ಗೌರವಾರ್ಥವಾಗಿ ‘ರೆಮ್‌ಡೆಸಿವಿರ್‌’ ಎಂದು ನಾಮಕರಣ ಮಾಡಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೊರೊನಾ ಸಮಯದಲ್ಲಿ ಕುಂಭಮೇಳಕ್ಕೆ ಆಕ್ಷೇಪ; ಪತ್ರಕರ್ತೆಯ ಇರಿದು ಕೊಲೆ ಎಂಬುದು ಸುಳ್ಳು

  • ರಮೇಶ್ ತಮಿಳುನಾಡಿನ ರಾಸಿಪುರಂ ಮೂಲದವರಾಗಿದ್ದು, ಗಿಲ್ಯಾಡ್‌‌ನಲ್ಲಿ ಕೆಲಸ ಮಾಡಲು 2002 ರಲ್ಲಿ ಕ್ಯಾಲಿಫೋರ್ನಿಯಾಗೆ ತೆರಳಿದರು.
  • ರಮೇಶ್ ಇ.ಎಂ. ದೇಸಿಗನ್ ಅವರ ಗೌರವಾರ್ಥವಾಗಿ ತಮಿಳುನಾಡಿನಲ್ಲಿ ಅವರ ಕಲಿತ ಪ್ರಾಥಮಿಕ ಶಾಲೆ, ರಾಶಿ ಇಂಟರ್ನ್ಯಾಷನಲ್ ಸ್ಕೂಲ್‌ಗೆ ಗಿಲ್ಯಾಡ್‌ 2 ಮಿಲಿಯನ್ ದೇಣಿಗೆ ನೀಡಿದೆ.
ಅದರ ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸಂದೇಶವು ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸತ್ಯವೇನು?

ಕ್ಯಾಲಿಫೋರ್ನಿಯಾ ಮೂಲದ ಗಿಲ್ಯಾಡ್ ಸೈನ್ಸಸ್ ‘ರೆಮ್‌ಡೆಸಿವಿರ್‌’ ಔಷಧಿಯ ಮೂಲ ಕಂಪೆನಿಯಾಗಿದೆ ಎಂಬುದು ನಿಜವಾಗಿದೆ. ಗಿಲ್ಯಾಡ್‌ನ ವೆಬ್‌ಸೈಟ್‌ನಲ್ಲಿ ಈ ಔಷಧದ ಬೆಳವಣಿಗೆಯನ್ನು ವಿವರಿಸುವ ಡಾಕ್ಯುಮೆಂಟ್ ಅನ್ನು ಕೆಳಗೆ ನೋಡಬಹುದುದಾಗಿದೆ.

ಇದನ್ನೂ ಓದಿ: ಜಯ್ ಶಾ ಮಾನಹಾನಿ ಪ್ರಕರಣದಲ್ಲಿ ದಿ ವೈರ್ ಕ್ಷಮೆ ಕೇಳಿತೆ? ಅಸಲಿ ಸಮಾಚಾರ ಇಲ್ಲಿದೆ!

2009 ರಲ್ಲಿ ಹೆಪಟೈಟಿಸ್ ಸಿ (ಎಚ್‌ಸಿವಿ) ಮತ್ತು ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್‌ಎಸ್‌ವಿ) ನ ಸಂಶೋಧನಾ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ರೆಮ್‌ಡೆಸಿವಿರ್‌‌ನ ಅಭಿವೃದ್ದಿ ಸಂಶೋಧನೆಯು  ಪ್ರಾರಂಭವಾಯಿತು ಎಂದು ಡಾಕ್ಯುಮೆಂಟ್ ಉಲ್ಲೇಖಿಸುತ್ತದೆ. ತರುವಾಯ 2014 ರಲ್ಲಿ ಎಬೋಲಾ ಮತ್ತು ಇತ್ತೀಚೆಗೆ ಕೊರೊನಾ ವೈರಸ್ಗಾಗಿ ಈ ಔಷಧವನ್ನು ಪರೀಕ್ಷಿಸಲಾಯಿತು.

ಕಂಪನಿಯ ವೆಬ್‌ಸೈಟ್‌ನಲ್ಲಿ ‘Four Questions with Tomas Cihlar: The Field of Emerging Viruses’ ಎಂಬ ಶೀರ್ಷಿಕೆಯ ಮತ್ತೊಂದು ಲೇಖನದಲ್ಲಿ, ಥಾಮಸ್‌ ಸಿಹ್ಲರ್ ಅವರು ಗಿಲ್ಯಾಡ್‌ನ ಆಂಟಿವೈರಲ್ ಔಷಧದ ಸಂಶೋಧನೆಗೆ ಕಾರಣಕರ್ತರಾಗಿದ್ದು, ವೈರಾಲಜಿಯ ಉಪಾಧ್ಯಕ್ಷರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ರೆಮ್‌ಡೆಸಿವಿರ್‌ ಔಷಧದ ಅಭಿವೃದ್ಧಿಗೆ ಅವರು ನೇತೃತ್ವ ವಹಿಸಿದ್ದಾರೆ.

ಆದರೆ ವೆಬ್‌ಸೈಟ್‌ನ ಲೇಖನದಲ್ಲಿ ‘ರಮೇಶ್ ಇಎಂ ದೇಸಿಗನ್’ ಬಗ್ಗೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ಜೊತೆಗೆ ರೆಮ್‌ಡೆಸಿವಿರ್‌‌ನ ಅಭಿವೃದ್ದಿ ಮತ್ತು ಪ್ರಯೋಗಗಳಿಗೆ ಸಂಬಂಧಿಸಿದ ತಂಡದಲ್ಲಿ ‘ರಮೇಶ್ ಇಎಂ ದೇಶಿಗನ್’ ಎಂಬ ವ್ಯಕ್ತಿ ಇಲ್ಲ ಎಂದು ಕಂಪೆನಿಯು ದೃಡಪಡಿಸಿದೆ ಎಂದು ‘ದಿಕ್ವಿಂಟ್’ ವರದಿ ಮಾಡಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಏರ್‌ಪೋರ್ಟ್-ಸಿಲ್ಕ್‌ಬೋರ್ಡ್ ಮೆಟ್ರೋ ಕಾಮಗಾರಿಗೆ 15,000 ಕೋಟಿ ಮಂಜೂರು?: ವಾಸ್ತವವೇನು?

ಗಿಲ್ಯಾಡ್ ಸೈನ್ಸಸ್‌ನ ಸಾರ್ವಜನಿಕ ವ್ಯವಹಾರಗಳ ಹಿರಿಯ ನಿರ್ದೇಶಕ, ಬಹಾರ್ ತುರ್ಕೊಗ್ಲು, ‘‘ರೆಮ್‌ಡೆಸಿವಿರ್‌ನೊಂದಿಗೆ ರಮೇಶ್ ಇಎಂ ದೇಶಿಗನ್ ಎಂಬ ವ್ಯಕ್ತಿಗೆ ಯಾವುದೇ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.

ಅಲ್ಲದೆ ವೈರಲ್ ಸಂದೇಶದಲ್ಲಿ ಇರುವ ತಮಿಳುನಾಡಿನ ರಾಶಿ ಇಂಟರ್‌ನ್ಯಾಷನಲ್‌ ಶಾಲೆಗೆ ಗಿಲ್ಯಾಡ್ ಯಾವುದೆ ದೇಣಿಗೆ ನೀಡಿಲ್ಲ, ವೈರಲ್ ಸಂದೇಶವು ಸಂಪೂರ್ಣವಾಗಿ ಸುಳ್ಳು ಎಂದು ಶಾಲೆಯ ಪ್ರಾಂಶುಪಾಲ ಡಾ. ಡಿ ವಿದ್ಯಾಸಾಗರ್ ಹೇಳಿದ್ದಾರೆ.

ಅಲ್ಲದೆ ರಾಶಿ ಇಂಟರ್‌ನ್ಯಾಷನಲ್ ಶಾಲೆಯನ್ನು 2008 ರಲ್ಲಿ ಸ್ಥಾಪಿಸಲಾಗಿದೆ. ವೈರಲ್ ಪೋಸ್ಟ್‌ನಲ್ಲಿ ರಮೇಶ್‌ ಗಿಲ್ಯಾಡ್‌ ಸಂಸ್ಥೆಯನ್ನು 2002 ರಲ್ಲಿ ಸೇರಿದರು ಎಂದು ಉಲ್ಲೇಖಿಸಲಾಗಿದೆ.

ಸ್ಪಷ್ಟವಾಗಿ ಹೇಳಬಹುದಾದರೆ, ಆಂಟಿವೈರಲ್ ಔಷಧಿಯಾದ ‘ರೆಮ್ಡೆಸಿವಿರ್’ ಸುತ್ತಲೂ ಹಬ್ಬುತ್ತಿರುವ ಈ ಸುದ್ದಿಗಳು ಸುಳ್ಳಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಊಟದ ವೇಳೆ ರಾಹುಲ್ ಗಾಂಧಿ ಮಾಸ್ಕ್ ಧರಿಸಿರಲಿಲ್ಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...