Homeಮುಖಪುಟಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ‘ಸಂಕೇಶ್ವರ್‌’!

ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ‘ಸಂಕೇಶ್ವರ್‌’!

- Advertisement -
- Advertisement -

ಲಿಂಬೆ ಹಣ್ಣು ಚಿಕಿತ್ಸೆಯ ಸಲಹೆ ನೀಡಿದ ಮಾಧ್ಯಮೋದ್ಯಮಿ ವಿಜಯ್ ಸಂಕೇಶ್ವರ್, ಕನ್ನಡ ಪತ್ರಿಕೋದ್ಯಮದ ಹಾಲಿನ ಬಟ್ಟಲಿಗೆ ಲಿಂಬೆಹುಳಿ ಹಿಂಡಿದವರು ಎನ್ನುವುದನ್ನು ಬಹಳ ಮಂದಿ ಮರೆತುಬಿಟ್ಟಿದ್ದಾರೆ.

ಮೊದಲನೆಯದಾಗಿ, ಉದ್ಯಮವಾಗಿ ಪರಿವರ್ತನೆಗೊಳ್ಳುತ್ತಿದ್ದ ಕನ್ನಡ ಮಾಧ್ಯಮ‌ ಕ್ಷೇತ್ರವನ್ನು ಪತ್ರಿಕಾ ಧರ್ಮವನ್ನೇ ಮರೆತ ಕೇವಲ ಲಾಭ-ನಷ್ಟದ ವ್ಯಾಪಾರವನ್ನಾಗಿ‌ ಮಾಡಿದವರು ಸಂಕೇಶ್ವರ್. ಇಂಗ್ಲೀಷ್‌ ಮಾಧ್ಯಮದಲ್ಲಿ ಟೈಮ್ಸ್ ಆಫ್ ಇಂಡಿಯಾ ಪ್ರಾರಂಭಿಸಿದ್ದ ಬೆಲೆ‌ ಸಮರದ ಅನಾರೋಗ್ಯ‌ ಪೈಪೋಟಿಯ ವ್ಯಾಪಾರಿ ತಂತ್ರವನ್ನು‌ ವಿಜಯ ಕರ್ನಾಟಕದ ಮೂಲಕ ಕರ್ನಾಟಕಕ್ಕೆ ಪರಿಚಯಿಸಿದವರು ಸಂಕೇಶ್ವರ್. (ಒಂದು ರೂಪಾಯಿಗೆ ಪತ್ರಿಕೆ, ಪತ್ರಿಕೆಯ ಜೊತೆ ಏನೇನೋ‌ ಗಿಪ್ಟ್‌ಗಳ‌ ಆಮಿಷ ಇತ್ಯಾದಿ)

ಎರಡನೆಯದಾಗಿ ಪತ್ರಿಕೆಗೆ ಓದುಗರನ್ನು ಸೆಳೆಯಲು ತನ್ನ ಜಾತಿಯನ್ನು ದುರ್ಬಳಕೆ‌ ಮಾಡಿಕೊಂಡವರು ಸಂಕೇಶ್ವರ್. ಬ್ರಾಹ್ಮಣರು ಸಂಪಾದಕೀಯ ವಿಭಾಗದಲ್ಲಿ ಪಾರುಪತ್ಯ ನಡೆಸುತ್ತಿದ್ದರೂ‌, ಜನಸಂಖ್ಯಾ ಬಲ ಇಲ್ಲದ ಬ್ರಾಹ್ಮಣ ಸಂಪಾದಕರಿಗಾಗಲಿ, ಮಾಧ್ಯಮ ಮಾಲೀಕರಾಗಾಲಿ ತನ್ನ ಜಾತಿ ಬಲದ ಮೂಲಕ‌‌ ಪ್ರಸಾರದ ಸಂಖ್ಯೆಯನ್ನು ಹೆಚ್ಚು‌ಮಾಡಲು ಸಾಧ್ಯವಾಗಿರಲಿಲ್ಲ. ಅಂತಹದ್ದೊಂದು ಕೆಟ್ಟ ಪರಂಪರೆಯನ್ನು ಸಂಕೇಶ್ವರ್ ಪ್ರಾರಂಭಿಸಿದರು. ಲಿಂಗಾಯತ ಸ್ವಾಮಿಗಳು,‌ಮಠಗಳು ಮತ್ತು‌ ಲಿಂಗಾಯತ ಶಿಕ್ಷಣ ಸಂಸ್ಥೆಗಳನ್ನು ಇದಕ್ಕಾಗಿ‌ ಬಳಸಿಕೊಂಡರು.

ಇದನ್ನೂ ಓದಿ: ಸಂಕೇಶ್ವರರ ‘ನಿಂಬೆ’ ಸಲಹೆ ಪಾಲಿಸಿ ಎಂದ ಬಿಜೆಪಿ ಸಂಸದ; ಅವೈಜ್ಞಾನಿಕತೆ ಹರಡುತ್ತಿದ್ದಾರೆಂದು ಆಕ್ರೋಶ

ಮೂರನೆಯದಾಗಿ, ಪತ್ರಿಕೆಯನ್ನು ಮುಜುಗರ ಇಲ್ಲದೆ ನೇರವಾಗಿ ತನ್ನ ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಂಡವರು ಕೂಡಾ ಸಂಕೇಶ್ವರ್. ಪತ್ರಿಕೆಯ ಮೂಲಕವೇ ಅವರ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಿ ಸಂಸತ್ ಪ್ರವೇಶಿಸಿದ ಸಂಕೇಶ್ವರ್ ಕೊನೆಗೆ ಅಧಿಕಾರದ ಮತ್ತಿನಿಂದ ಸ್ವಂತ ಪಕ್ಷ ಕಟ್ಟಿ‌ ಮುಖ್ಯಮಂತ್ರಿಯಾಗಲು ಹೊರಟು ಬುದ್ದಿ ಕಲಿತು ಮತ್ತೆ‌ ಬಿಜೆಪಿ ಸೇರಿಕೊಂಡರು.

ನಾಲ್ಕನೆಯದಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಹಲವಾರು ‘ಪತ್ರಕರ್ತ ರತ್ನ’ ಗಳನ್ನು‌ ನೀಡಿದವರು‌ ಕೂಡಾ ಸಂಕೇಶ್ವರ್. ಅವರಲ್ಲಿ ವಿಶ್ವೇಶ್ವರ ಭಟ್, ತಿಮ್ಮಪ್ಪ ಭಟ್, ಹರಿಪ್ರಕಾಶ ಕೋಣೆಮನೆ ಮೊದಲಾದವರು ಪ್ರಮುಖರು. ಇಂದಿನ‌‌ ಕನ್ನಡ ಪತ್ರಿಕೆಗಳಲ್ಲಿ ಈ ಭಟ್ರುಗಳ ಶಿಷ್ಯಗಣವೇ ತುಂಬಿವೆ.

ಕೊನೆಗೂ ಸಂಕೇಶ್ವರ್ ಅವರಿಗೆ ತನ್ನ ಜಾತಿಯ ನಾಲ್ಕು ಒಳ್ಳೆಯ ಪತ್ರಕರ್ತರನ್ನು‌ ರೂಪಿಸಲು‌ ಕೂಡಾ ಸಾಧ್ಯವಾಗಿಲ್ಲ. ರವಿ ಬೆಳಗೆರೆ,‌ ಚಕ್ರವರ್ತಿಯಂತಹವರಿಗೆ ಮುಖ್ಯವಾಹಿನಿ ಮಾಧ್ಯಮದಲ್ಲಿ ಮಾನ್ಯತೆ ನೀಡಿದವರು ಕೂಡಾ ಸಂಕೇಶ್ವರ್. ಈ ರೀತಿ ಕನ್ನಡ ಪತ್ರಿಕೋದ್ಯೋಗವನ್ನು ವ್ಯಾಪಾರ, ಜಾತಿ ಮತ್ತು ರಾಜಕೀಯದ ಕೆಸರಲ್ಲಿ ಮುಳುಗಿಸಿದವರು ಸಂಕೇಶ್ವರ್.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಕೇವಲ ಒಂದೇ ಒಂದು ಏಮ್ಸ್ ಸ್ಥಾಪನೆಯಾಯಿತೆ…?

ಉದ್ಯಮವಾಗಿ ಬದಲಾಗುತ್ತಿದ್ದ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಸಂಕೇಶ್ವರ್ ಅವರಂತಹ ಚಾಣಾಕ್ಷ್ಯ ಉದ್ಯಮಿಯ ಅಗತ್ಯ ಖಂಡಿತ ಇತ್ತು. ಸಂಕೇಶ್ವರ್ ಅಂತಹ ಒಂದು ನಿರ್ವಾತವನ್ನು ತುಂಬಬಹುದೆಂಬ ನಿರೀಕ್ಷೆ ಇತ್ತು. ಅವರು ಕನ್ನಡ ಓದುಗರ ಸಂಖ್ಯೆಯನ್ನು ಬೆಳೆಸಿದರು, ಹೊಸ ಪ್ರಯೋಗಳಿಗೆ ಕನ್ನಡ ಮಾಧ್ಯಮವನ್ನು ತೆರೆದರು ಎನ್ನುವುದು ನಿಜ,‌ಇದು ಅವರ ಕೊಡುಗೆಯೂ ಹೌದು.

ಇದರ ಜೊತೆಗೆ ಕನ್ನಡ ಪತ್ರಿಕೆಗಳನ್ನು ಸಂಪೂರ್ಣ ವ್ಯಾಪಾರದ ಸರಕನ್ನಾಗಿ‌ ಮಾಡಿದ ಮತ್ತು ಸಮಾಜದಲ್ಲಿ ಪತ್ರಕರ್ತರಿಗಿದ್ದ ಗೌರವ‌ ಕಳೆದುಕೊಳ್ಳುವಂತೆ ಮಾಡಿದ ಕೀರ್ತಿಯೂ ಅವರಿಗೆ‌ ಸಲ್ಲುತ್ತದೆ.

ನನ್ನ ಪ್ರಕಾರ ಸಂಕೇಶ್ವರ್ ಅವರಿಗೆ ಪತ್ರಕರ್ತರ ಬಗ್ಗೆ ದ್ವೇಷ ಇಲ್ಲದೆ ಇದ್ದರೂ ವಿಶೇಷ ಗೌರವ ಖಂಡಿತ ಇಲ್ಲ. ಅವರು ಪತ್ರಿಕೆ ಪ್ರಾರಂಭಿಸಿದ ಹೊಸತರಲ್ಲಿ ಯಾರ ಜೊತೆಯಲ್ಲಿಯೋ ಮಾತನಾಡುತ್ತಾ “ನಮ್ಮ ಲಾರಿ ಚಾಲಕರ ಸಂಬಳಕ್ಕಿಂತಲೂ ಕಡಿಮೆ ಸಂಬಳಕ್ಕೆ ಪತ್ರಕರ್ತರು ಕೆಲಸಕ್ಕೆ ಸಿಗ್ತಾರೆ ಎಂದು ನನಗೆ ಗೊತ್ತಿರಲಿಲ್ಲ” ಎಂದು‌ ನಕ್ಕಿದ್ದರಂತೆ. ಈ ಕಾರಣದಿಂದಾಗಿಯೋ ಏನೋ, ಈಶ್ವರ್ ದೈದೋಟ, ಮಹದೇವಪ್ಪ, ಕೃಷ್ಣ ಪ್ರಸಾದ್, ಜಯಂತ್ ಕಾಯ್ಕಿಣಿಯಂತಹವರು ಕೂಡಾ ಬಹಳ ದಿನ ಅವರ ಬಳಿ ಉಳಿಯಲಿಲ್ಲ.

ತಪ್ಪು‌ ಖಂಡಿತ ಅವರದ್ದಲ್ಲ, ಅವರ ಸಾರಥ್ಯದ ಪತ್ರಿಕೆ ಮತ್ತು ಟಿ.ವಿ ಚಾನೆಲ್‌ಗಳನ್ನು ಕನ್ನಡದ ಜನ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಬಡವರ ಬಗೆಗಿನ ತಮ್ಮ ತಿರಸ್ಕಾರ ಮತ್ತು ಕೊರೊನಾಕ್ಕೆ ತಾವು ಕಂಡು ಹಿಡಿದ ಲಿಂಬೆಹುಳಿ ಚಿಕಿತ್ಸೆಯನ್ನೂ ಒಪ್ಪಿಕೊಳ್ಳಬಹುದೆಂಬ ಭರವಸೆಯಿಂದ ಮಾತನಾಡಿದ್ದಾರೆ.

ಇದನ್ನೂ ಓದಿ: ಭಾರತೀಯ ವಿಜ್ಞಾನಿ ‘Ramesh EM Desigan’ ಗೌರವಾರ್ಥ ಆ್ಯಂಟಿ ವೈರಲ್‌ ಲಸಿಕೆಗೆ ‘Remdesivir’ ಎಂದು ನಾಮಕರಣ ಮಾಡಲಾಯಿತೆ?

(ಅಭಿಪ್ರಾಯ ಲೇಖಕರ ವೈಯಕ್ತಿಕವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ತುಂಬಾ ಉತ್ತಮ ಬರಹ. ಕನ್ನಡ ಪತ್ರಿಕೋದ್ಯಮದ ಇಂದಿನ ಅಧೋಗತಿಯ ಕುರಿತು ಒಂದಿಷ್ಟು ಕಾಲ ವಿಜಯ ಸಂಕೇಶ್ವರ ಮೀಸಲಿರಿಸಿ, ಆತ್ಮಾವಲೋಕನ ಮಾಡಿಕೊಳ್ಳಲಿ. ಪತ್ರಿಕೋದ್ಯಮದ ಮೂಲಕ ಅವರು ಶತದಡ್ಡ ಶಿಖಾಮಣಿಗಳನ್ನೇ ಹಾಗೂ ತಲೆಯಲ್ಲಿ ಜಾತಿಯ ಹೆಂಡಿ ಬಿಟ್ಟರೆ ಮತ್ತೇನೂ ಇರದ ಎಡಬಿಡಂಗಿಗಳನ್ನೇ ಶ್ರೇಷ್ಠ ಪತ್ರಕರ್ತರೆಂದು ತಿಳಿದು ಬೆಳೆಸಿದ್ದಕ್ಕೆ ಕನ್ನಡ ಪತ್ರಿಕೋದ್ಯಮದ ಗುಣಮಟ್ಟವೂ ಒಂದಿಷ್ಟು ಕುಸಿಯಲು ಕಾರಣ. ಇದು, ಕನ್ನಡ ಪತ್ರಿಕೋದ್ಯಮದಲ್ಲಾದ ಬಹು ದೊಡ್ಡ ಅಪರಾಧ. ಇದಕ್ಕೂ, ವಿಜಯ ಸಂಕೇಶ್ವರ ಕಾರಣ ಎಂಬುದನ್ನು ತಳ್ಳಿ ಹಾಕುವಂತಿಲ್ಲ.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...