ದೇಶಕ್ಕೆ ಸ್ವಾತಂತ್ಯ್ರ ಸಿಕ್ಕಾಗ ಬೇರ್ಪಟ್ಟಿದ್ದ ಸಹೋದರರಿಬ್ಬರು ಬರೋಬ್ಬರಿ 74 ವರ್ಷಗಳ ನಂತರ ಮತ್ತೇ ಭೇಟಿಯಾಗಿದ್ದಾರೆ. ಭಾವನಾತ್ಮಕ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ.
1947 ರಲ್ಲಿ ಭಾರತ ವಿಭಜನೆಯಾದಾಗ ಮೊಹಮ್ಮದ್ ಸಿದ್ದೀಕ್ ಸಣ್ಣ ಮಗುವಾಗಿದ್ದರು. ದೇಶ ವಿಭಜನೆಯಿಂದ ಅವರ ಕುಟುಂಬವು ವಿಭಜನೆಯಾಗಿತ್ತು. ಅವರ ಹಿರಿಯ ಸಹೋದರ ಹಬೀಬ್ ಅಲಿಯಾಸ್ ಶೆಲಾ ಅವರು ಭಾರತದಲ್ಲಿ ಉಳಿದಿದ್ದರು.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!
ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಅನ್ನು ಭಾರತಕ್ಕೆ ಸಂಪರ್ಕಿಸುವ ಕರ್ತಾರ್‌ಪುರ ಕಾರಿಡಾರ್ ಸಹೋದರರನ್ನು ಬರೋಬ್ಬರಿ 74 ವರ್ಷಗಳ ನಂತರ ಮತ್ತೆ ಒಂದುಗೂಡಿಸಿದೆ. ಒಡಹುಟ್ಟಿದವರ ಪುನರ್ಮಿಲನದ ಭಾವನಾತ್ಮಕ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಜನರ ಹೃದಯಗಳನ್ನು ಗೆದ್ದಿದೆ.
ವರದಿಗಳ ಪ್ರಕಾರ ಸಿದ್ದಿಕ್ ಪಾಕಿಸ್ತಾನದ ಫೈಸ್ಲಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಶೆಲಾ ಅವರ ಹಿರಿಯ ಸಹೋದರನಾಗಿದ್ದು, ಪಂಜಾಬ್‌ನ ಭಾರತದ ಭಾಗದಲ್ಲಿ ವಾಸಿಸುತ್ತಿದ್ದಾರೆ. 74 ವರ್ಷಗಳ ನಂತರ ಪರಸ್ಪರ ಭೇಟಿಯಾಗುತ್ತಿರುವ ಸಹೋದರರಿಬ್ಬರು ಅಪ್ಪಿಕೊಂಡು ಅತ್ತಿದ್ದಾರೆ.
ಗಡಿಯಿಂದ ಐದು ಕಿಲೋಮೀಟರ್ ದೂರದಲ್ಲಿರುವ ಕರ್ತಾರ್‌ಪುರದವರೆಗೆ ಭಾರತದಿಂದ ಪಾಕಿಸ್ತಾನಕ್ಕೆ ವೀಸಾ-ಮುಕ್ತ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್ ಅನ್ನು ತೆರೆದಿದ್ದಕ್ಕಾಗಿ ಸಹೋದರರಿಬ್ಬರು ಉಭಯ ದೇಶಗಳ ಸರ್ಕಾರಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಕರ್ತಾರ್‌ಪುರ ಕಾರಿಡಾರ್ 2019 ರ ನವೆಂಬರ್ ತಿಂಗಳಿನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತ್ತು.
ಇದನ್ನೂ ಓದಿ:ನಟಿಯ ಬಗ್ಗೆ ಅಸಂಬದ್ದ ಸುದ್ದಿ ಪ್ರಕಟಿಸಿ ‘ವಿಕೃತಿ’ ಮೆರೆದ ವಿಜಯವಾಣಿ.ನೆಟ್


