Homeಮುಖಪುಟಕೇಜ್ರಿವಾಲ್‌‌ ಪಂಜಾಬ್‌‌ನಲ್ಲಿ ಸುಳ್ಳುಗಳ ಮಾರಾಟ ಮಾಡುತ್ತಿದ್ದಾರೆ: ನವಜೋತ್‌ ಸಿಧು

ಕೇಜ್ರಿವಾಲ್‌‌ ಪಂಜಾಬ್‌‌ನಲ್ಲಿ ಸುಳ್ಳುಗಳ ಮಾರಾಟ ಮಾಡುತ್ತಿದ್ದಾರೆ: ನವಜೋತ್‌ ಸಿಧು

- Advertisement -
- Advertisement -

ದೆಹಲಿ ಮುಖ್ಯಮಂತ್ರಿ ಅರವಿಂದ್‌‌ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ‘ಸುಳ್ಳುಗಳ ಮಾರಾಟ’ ಮಾಡುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಖಾಸಗಿ ಚಾನೆಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕೇಜ್ರಿವಾಲ್ ಇತ್ತೀಚೆಗಷ್ಟೇ ಪಂಜಾಬ್‌ಗೆ ಭೇಟಿ ನೀಡಿದ್ದರು.

“ಪಂಜಾಬ್‌ನಲ್ಲಿ ಕೇಜ್ರಿವಾಲ್ ಸುಳ್ಳುಗಳನ್ನು ಮಾರಾಟ ಮಾಡುತ್ತಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷದ ಸುಳ್ಳುಗಳನ್ನು ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಎಎಪಿಯಂತಹ ನಿರಂಕುಶ ಪಕ್ಷವಲ್ಲ” ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಇದನ್ನೂ ಓದಿ:‘ವಿಭಜನೆಯ ಕಣ್ಣೀರು!’: 74 ವರ್ಷಗಳ ನಂತರ ಮತ್ತೇ ಭೇಟಿಯಾದ ಸಹೋದರರು

“ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಬಗ್ಗೆ ಮಾತನಾಡಲು ಕೇಜ್ರಿವಾಲ್‌ಗೆ ಸಾಧ್ಯವಿಲ್ಲ. ಡ್ರಗ್ಸ್ ಮಾಫಿಯಾ ಮುಂದೆ ಅವರೇ ಶರಣಾಗಿದ್ದರು” ಎಂದು ಸಿಧು ಆರೋಪಿಸಿದ್ದಾರೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಮಾಜಿ ಕಾಂಗ್ರೇಸಿಗ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಹೊಸ ರಾಜಕೀಯ ಪಕ್ಷದ ಬಗ್ಗೆ ಮಾತನಾಡಿದ ಸಿಧು, “ಕ್ಯಾಪ್ಟನ್‌ಗೆ ಕಾಂಗ್ರೆಸ್ ಬೇಕಿಲ್ಲ, ಅವರಿಗಿಂತ ನಾಚಿಕೆಗೇಡಿನ ನಾಯಕನನ್ನು ನಾನು ನೋಡಿಲ್ಲ. ಕಳೆದ ಬಾರಿ ರಾಜಕೀಯ ಪಕ್ಷ ಕಟ್ಟಿಕೊಂಡು ಬಂದ ಕ್ಯಾಪ್ಟನ್ 800 ಮತವನ್ನೂ ಪಡೆಯಲಿಲ್ಲ. ಕ್ಯಾಪ್ಟನ್ ರಾಜ್ಯದಲ್ಲಿ ಕಳೆದುಹೋದ ಶಕ್ತಿಯಾಗಿದ್ದಾರೆ” ಎಂದು ವ್ಯಂಗ್ಯವಾಗಿಡದ್ದಾರೆ.

ಇದನ್ನೂ ಓದಿ:ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದೇ ದಿನದಲ್ಲಿ ಅರೆಸ್ಟ್‌‌ ವಾರೆಂಟ್‌‌!

ಪ್ರಧಾನಿ ಭದ್ರತಾ ಲೋಪದ ಬಗ್ಗೆ ಮಾತನಾಡಿದ ಸಿಧು, “ರ್‍ಯಾಲಿ ಫ್ಲಾಪ್ ಶೋ ಆಗಿರುವುದರಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಸತ್ಯಗಳನ್ನು ತಿರುಚಿದೆ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಪಂಜಾಬ್‌ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯ ಬೆಂಗಾವಲು ಫ್ಲೈಓವರ್ ಮೇಲೆ ಸಿಲುಕಿಕೊಂಡಿತ್ತು. ಇದರಿಂದಾಗಿ ಪ್ರಧಾನಿ ಫ್ಲೈಓವರ್‌ನಲ್ಲಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಕಾಯುವಂತಾಯಿತು.

ಈ ಮಧ್ಯೆ ಪಂಜಾಬ್‌ ಸೇರಿದಂತೆ ದೇಶದ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಪಂಜಾಬ್‌ನ 117 ಕ್ಷೇತ್ರಗಳಿಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಎಣಿಕೆ ಮಾಡಲಾಗುತ್ತದೆ.

ಇದನ್ನೂ ಓದಿ:ಯುಪಿ ಬಿಜೆಪಿಗೆ ಮತ್ತೊಂದು ಶಾಕ್: ಸಚಿವ ಸ್ಥಾನಕ್ಕೆ ದಾರಾ ಸಿಂಗ್ ಚೌಹಾಣ್ ರಾಜೀನಾಮೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...