Homeಅಂತರಾಷ್ಟ್ರೀಯಯುದ್ಧದ ವಿರುದ್ಧ ಪ್ರತಿಭಟಿಸಿದರೆ ಬಸ್‌ಗಳಲ್ಲಿ ತುಂಬಿ ಗಾಝಾಕ್ಕೆ ಕಳುಹಿಸುತ್ತೇವೆ: ಇಸ್ರೇಲ್ ಪ್ರಜೆಗಳಿಗೆ ವಾರ್ನಿಂಗ್‌

ಯುದ್ಧದ ವಿರುದ್ಧ ಪ್ರತಿಭಟಿಸಿದರೆ ಬಸ್‌ಗಳಲ್ಲಿ ತುಂಬಿ ಗಾಝಾಕ್ಕೆ ಕಳುಹಿಸುತ್ತೇವೆ: ಇಸ್ರೇಲ್ ಪ್ರಜೆಗಳಿಗೆ ವಾರ್ನಿಂಗ್‌

- Advertisement -
- Advertisement -

ಇಸ್ರೇಲ್‌ನಲ್ಲಿ ಗಾಜಾವನ್ನು ಬೆಂಬಲಿಸಿ ನಡೆಸುವ ಪ್ರತಿಭಟನೆಯನ್ನು ಸಹಿಸಲು ಸಾಧ್ಯವಿಲ್ಲ. ಯುದ್ಧವನ್ನು ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಇಸ್ರೇಲ್‌ ಪ್ರತಿದಿನ ಬಾಂಬ್‌ ದಾಳಿ ನಡೆಸುತ್ತಿರುವ ಗಾಝಾ ಪಟ್ಟಿಗೆ ಕಳುಹಿಸುವುದಾಗಿ ಇಸ್ರೇಲ್‌ ಪೊಲೀಸ್ ಮುಖ್ಯಸ್ಥ ಕೋಬಿ ಶಬ್ಟೈ ಹೇಳಿದ್ದಾರೆ.

ಮಂಗಳವಾರ ಇಸ್ರೇಲ್‌ ಪೊಲೀಸರು ಟಿಕ್‌ಟಾಕ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಶಬ್ತಾಯ್ ಅವರು ಈ ಹೇಳಿಕೆ ನೀಡಿದ್ದಾರೆ.  ಗಾಝಾವನ್ನು ಬೆಂಬಲಿಸಿ ಹೈಫಾದಲ್ಲಿ ರ್ಯಾಲಿಯನ್ನು ನಡೆಸಲಾಗಿತ್ತು.  ಪೊಲೀಸರು ಪ್ರತಿಭಟನೆ ಬಳಿಕ 6 ಜನರನ್ನು ಬಂಧಿಸಿದ್ದಾರೆ. ಯಾರು ಇಸ್ರೇಲ್‌ ಪ್ರಜೆಯಾಗಲು ಬಯಸುತ್ತಾರೆ ಸ್ವಾಗತ. ಗಾಝಾದೊಂದಿಗೆ ಗುರುತಿಸಲು ಬಯಸುವವರನ್ನು ಕೂಡ ಸ್ವಾಗತಿಸುತ್ತೇವೆ. ನಾನು ಅವರನ್ನು ಈಗ ಅಲ್ಲಿಗೆ ಹೋಗುವ ಬಸ್‌ಗಳಲ್ಲಿ ಹಾಕಿ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.

ಕಿರು ವೀಡಿಯೊದಲ್ಲಿ ಶಬ್ತಾಯ್, ಯಾವುದೇ ಪ್ರಚೋದನೆಯನ್ನು ಸಹಿಸಲು ಸಾಧ್ಯವಿಲ್ಲ. ಪ್ರತಿಭಟನೆಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಇಸ್ರೇಲ್ ಯುದ್ಧದ ಸ್ಥಿತಿಯಲ್ಲಿದೆ. ಎಲ್ಲಾ ರೀತಿಯ ಜನರು ಬಂದು ನಮ್ಮನ್ನು ಪರೀಕ್ಷಿಸಲು ನಾವು ಅನುಮತಿಸುವ ಪರಿಸ್ಥಿತಿಯಲ್ಲಿ ನಾವು ಇಲ್ಲ ಎಂದು ಅವರು ಹೇಳಿದರು.

ಅ.7 ರಂದು ಗಾಝಾ ಜೊತೆಗಿನ ಯುದ್ಧ ಪ್ರಾರಂಭವಾದಾಗಿನಿಂದ ಇಸ್ರೇಲ್‌ನಲ್ಲಿ 63 ಜನರನ್ನು ಭಯೋತ್ಪಾದನೆ ಬೆಂಬಲಿಸುವ ಅಥವಾ ಪ್ರಚೋದಿಸಿದ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ಇಸ್ರೇಲ್ ಪೊಲೀಸ್ ವಕ್ತಾರ ಎಲಿ ಲೆವಿ ಬುಧವಾರ ಆರ್ಮಿ ರೇಡಿಯೊಗೆ ತಿಳಿಸಿದ್ದಾರೆ.

ಗಾಝಾ ಪಟ್ಟಿಯನ್ನು ಮುನ್ನಡೆಸುತ್ತಿರುವ ಹಮಾಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಇಸ್ರೇಲ್‌ನಲ್ಲಿನ ಪ್ಯಾಲೆಸ್ತೀನಿಯನ್ನರನ್ನು ಕೂಡ ಪತ್ತೆ ಹಚ್ಚಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅ.7ರಂದು ಹಮಾಸ್ ಸಶಸ್ತ್ರ ಗುಂಪು, ದಕ್ಷಿಣ ಇಸ್ರೇಲ್‌ ಮೇಲೆ ದಾಳಿಯನ್ನು ನಡೆಸಿದ ನಂತರ ಗಾಝಾ ಪಟ್ಟಿಯ 2.3 ಮಿಲಿಯನ್ ನಿವಾಸಿಗಳಿಗೆ ಆಹಾರ, ನೀರು, ವಿದ್ಯುತ್ ಮತ್ತು ಇಂಧನವನ್ನು ಇಸ್ರೇಲ್‌  ಕಡಿತಗೊಳಿಸಿದೆ. ಇಸ್ರೇಲ್‌ ಅಧಿಕಾರಿಗಳ ಪ್ರಕಾರ ಕನಿಷ್ಠ 1,400 ಜನರು ಸಾವನ್ನಪ್ಪಿದ್ದಾರೆ. 4,400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 199 ಜನರನ್ನು ಹಮಾಸ್ ಒತ್ತೆಯಾಳಾಗಿಸಿದೆ.

ಇಸ್ರೇಲ್ ಯುದ್ಧ ಘೊಷಣೆ ಬಳಿಕ ನಡೆಸಿದ ದಾಳಿಯಲ್ಲಿ 3,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 12,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್‌ ಅಧಿಕಾರಿಗಳು ತಿಳಿಸಿದ್ದಾರೆ.

ಯುದ್ಧವು ಭುಗಿಲೆದ್ದ ನಂತರ ಇಸ್ರೇಲ್ ವಿರೋಧಿ ಹೇಳಿಕೆಯನ್ನು ನೀಡಿರುವ ಆರೋಪದಲ್ಲಿ ಇಸ್ರೇಲ್‌ ಸಂಸತ್ತಿನ ಸಮಿತಿಯು ಎಡಪಂಥೀಯ ಸದಸ್ಯ ಓಫರ್ ಕ್ಯಾಸಿಫ್ ಅವರನ್ನು ಅಮಾನತುಗೊಳಿಸಿದೆ. ಅವರು ಹಮಾಸ್ ದಾಳಿಯನ್ನು ಉಲ್ಲೇಖಿಸಿ ಇಸ್ರೇಲ್ ಈ ಹಿಂಸಾಚಾರವನ್ನು ಬಯಸಿದೆ ಎಂದು ಅವರು ವಿದೇಶಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು. ಜೆರುಸಲೆಮ್ ಪೋಸ್ಟ್ ಪ್ರಕಾರ ಕ್ಯಾಸಿಫ್ ಅವರನ್ನು 45 ದಿನಗಳವರೆಗೆ ಅಮಾನತುಗೊಳಿಸಲಾಗಿದೆ.

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...