Homeಕರೋನಾ ತಲ್ಲಣರಾಜ್ಯದಲ್ಲಿ ನಾಲ್ಕು ದಿನಗಳಿಗೆ ಸಾಕಾಗುವಷ್ಟು ಮಾತ್ರ ಕೊರೊನಾ ಲಸಿಕೆ ದಾಸ್ತಾನು!

ರಾಜ್ಯದಲ್ಲಿ ನಾಲ್ಕು ದಿನಗಳಿಗೆ ಸಾಕಾಗುವಷ್ಟು ಮಾತ್ರ ಕೊರೊನಾ ಲಸಿಕೆ ದಾಸ್ತಾನು!

- Advertisement -
- Advertisement -

ರಾಜ್ಯದಲ್ಲಿ ಕೊರೊನಾ ಲಸಿಕೆ ದಾಸ್ತಾನು ಮುಂದಿನ ನಾಲ್ಕು ದಿನಗಳವರೆಗೆ ಸಾಕಾಗುವಷ್ಟು ಮಾತ್ರ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ವರದಿ ಮಾಡಿದೆ. ಒಂದೆಡೆ, ತಜ್ಞರು ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ವೇಗಗೊಳಿಸಿ, ರಾಜ್ಯದಲ್ಲಿ ಸಾಂಗ್ರಮಿಕ ಎರಡನೇ ಅಲೆಯ ಪರಿಣಾಮವನ್ನು ಕಡಿಮೆ ಮಾಡಲು ಸೂಚಿಸುತ್ತಿದ್ದಾರೆ, ಮತ್ತೊಂದೆಡೆ ಲಸಿಕೆ ತಲುಪಲು ಇನ್ನೂ ಎರಡು ವಾರಗಳವರೆಗೆ ಕಾಯುವಂತೆ ಕೇಂದ್ರ ಸರ್ಕಾರ ರಾಜ್ಯವನ್ನು ಕೇಳಿದೆ ಎಂದು ವರದಿಯಾಗಿದೆ.

“ನಮ್ಮ ದಾಸ್ತಾನುಗಳಲ್ಲಿ ಇರುವ ಲಸಿಕೆಗಳು (ಮುಖ್ಯವಾಗಿ ಕೋವಿಶೀಲ್ಡ್) ಮುಂದಿನ ನಾಲ್ಕು ದಿನಗಳವರೆಗೆ ಮಾತ್ರ ಸಾಕಾಗುತ್ತದೆ. ಆದರೆ ಇದು ವ್ಯಾಕ್ಸಿನೇಷನ್‌ ಪ್ರಕ್ರಿಯೆ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಾವು ಹೊಸ ಸ್ಟಾಕ್ ಕೇಳಿದ್ದೇವೆ ಮತ್ತು ಅದು ಶೀಘ್ರದಲ್ಲೇ ಬರಲಿದೆ” ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ TNIE ವರದಿ ಮಾಡಿದೆ.

ಈ ಬಗ್ಗೆ TNIE ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, “ಹೆಚ್ಚಿನ ಲಸಿಕೆಗಳಿಗಾಗಿ ನಾವು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಲಸಿಕೆಗಳು ಶೀಘ್ರದಲ್ಲೇ ಬರಲಿವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದಕ್ಕಾಗಿ ಚಿಂತಿಸಬೇಕಾದ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಯ್ ಶಾ ಮಾನಹಾನಿ ಪ್ರಕರಣದಲ್ಲಿ ದಿ ವೈರ್ ಕ್ಷಮೆ ಕೇಳಿತೆ? ಅಸಲಿ ಸಮಾಚಾರ ಇಲ್ಲಿದೆ!

ರಾಜ್ಯದಲ್ಲಿ ಇಲ್ಲಿಯವರೆಗೆ 60 ವರ್ಷಕ್ಕಿಂತ ಮೇಲ್ಪಟ್ಟ 11,73,848 ಜನರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ 3,09,660 ಜನರಿಗೆ ಲಸಿಕೆಯ ಮೊದಲ ಡೋಸ್‌ಗಳನ್ನು ನೀಡಲಾಗಿದೆ. ಅನೇಕರು ಈಗ ತಮ್ಮ ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ, ಇದನ್ನು ಏಪ್ರಿಲ್ 1 ರಿಂದ ನೀಡಲಾಗುವುದು ಎನ್ನಲಾಗಿದೆ.

ಕೋವಿಶೀಲ್ಡ್‌‌ನ ಎರಡನೆ ಡೋಸ್‌ ಆರರಿಂದ ಎಂಟು ವಾರಗಳ ನಂತರ ತೆಗೆದುಕೊಂಡರೆ ಅದರ ಪರಿಣಾಮ ಹೆಚ್ಚಾಗಿರುತ್ತದೆ ಎಂದು ವೈಜ್ಞಾನಿಕ ಆಧಾರದಲ್ಲಿ ಕೇಂದ್ರ ಸರ್ಕಾರವು ಹೇಳಿರುವುದರಿಂದ, ಅದೃಷ್ಟವಶಾತ್ ಎರಡನೇ ಡೋಸ್‌ಗಾಗಿ ಕಾಯುತ್ತಿರುವವರಿಗೆ, ಲಸಿಕೆಯ ದಾಸ್ತಾನುಗಳ ಕೊರತೆಯು ಕಾಡುವುದಿಲ್ಲ.

ಆದ್ದರಿಂದ ಈ ಲಸಿಕೆಗಳು ಜನರು ತಮ್ಮ ಎರಡನೇ ಡೋಸ್‌ ತೆಗೆದುಕೊಳ್ಳುವ ಸಮಯಕ್ಕೆ ರಾಜ್ಯವನ್ನು ತಲುಪಬಹುದು ಎಂದು ವೈದ್ಯರು ಭಾವಿಸಿದ್ದಾರೆ. “ಆದರೂ, ಯಾವುದೇ ರೀತಿಯ ಕೊರತೆ ಇದ್ದರೆ ಅದನ್ನು ಬೇಗನೆ ಸರಿಪಡಿಸಬೇಕಾಗಿದ್ದು, ಯಾಕೆಂದರೆ ಲಸಿಕೆಯ ಕೊರತೆಯು ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೆ ಎರಡನೇ ಅಲೆ ಪ್ರಾರಂಭವಾಗಿ ರಾಜ್ಯದಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ ಹೀಗಾಗುವುದು ಒಳ್ಳೆಯದಲ್ಲ” ಎಂದು ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.


ಇದನ್ನೂ ಓದಿ: ಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ: ಯುದುವೀರ್ ಸಿಂಗ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...