Homeಮುಖಪುಟಇಂಧನ ತೆರಿಗೆ ಸಂಗ್ರಹ: 2014 ಕ್ಕಿಂತ 2021 ರಲ್ಲಿ 456% ದಷ್ಟು ಹೆಚ್ಚಳ!

ಇಂಧನ ತೆರಿಗೆ ಸಂಗ್ರಹ: 2014 ಕ್ಕಿಂತ 2021 ರಲ್ಲಿ 456% ದಷ್ಟು ಹೆಚ್ಚಳ!

- Advertisement -
- Advertisement -

ಇಂಧನ ತೆರಿಗೆಗಳು ಸರ್ಕಾರದ ಕಾಮಧೇನು ಆಗಿ ಮಾರ್ಪಟ್ಟಿದೆಯೇ ಎಂಬ ಬಗ್ಗೆ ಯಾವುದೇ ಸಂದೇಹಗಳು ಉಳಿದಿದ್ದರೆ, ಸೋಮವಾರ ಲೋಕಸಭೆಗೆ ಹಣಕಾಸು ಸಚಿವಾಲಯ ನೀಡಿರುವ ಉತ್ತರದಲ್ಲಿ ಅವುಗಳನ್ನು ಪರಿಹರಿಸಿ ಕೊಳ್ಳಬಹುದಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲದ ಮೇಲೆ ಅಬಕಾರಿ ಸುಂಕ ಸಂಗ್ರಹಣೆ ಮಾತ್ರವಲ್ಲ, ಭಾರತದ ಒಟ್ಟು ತೆರಿಗೆ ಆದಾಯದಲ್ಲಿ ಅಂತಹ ತೆರಿಗೆಗಳ ಪಾಲು ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಏರಿಕೆಯಾಗುವುದನ್ನು ನೋಡಬಹುದಾಗಿದೆ. ಇದು ಇಂಧನ ತೆರಿಗೆ ಆದಾಯದ ಮೇಲೆ ಸ್ಥಿರವಾಗಿ ಹೆಚ್ಚುತ್ತಿರುವ ಅವಲಂಬನೆಯನ್ನು ಸೂಚಿಸುತ್ತದೆ.

ಹಣಕಾಸು ಸಚಿವಾಲಯವು ಲೋಕಸಭೆಗೆ ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಈ ಹಣಕಾಸು ವರ್ಷದ (FY-21) ಮೊದಲ 10 ತಿಂಗಳಲ್ಲಿ ಇಂಧನ ಮತ್ತು ನೈಸರ್ಗಿಕ ಅನಿಲದಿಂದಾದ ಅಬಕಾರಿ ಸುಂಕ ಸಂಗ್ರಹವು ಈಗಾಗಲೇ ಕಳೆದ ಹಣಕಾಸು ವರ್ಷ(FY-20)ದ ಅವಧಿಯಲ್ಲಿ ದಾಖಲಾದ ಸಂಗ್ರಹಕ್ಕಿಂತ 45% ಹೆಚ್ಚಾಗಿದೆ!.

ಈ ಅಂಕಿ-ಅಂಶವು, ಏಪ್ರಿಲ್‌ 2020 ಮತ್ತು ಜನವರಿ 2021 ರಲ್ಲಿ 2.94 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದರೆ, FY-20 ರಲ್ಲಿ ಕೇವಲ 2,03,010 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಈ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಮಾಡಿದ ತೆರಿಗೆ ಸಂಗ್ರಹಗಳು FY-14 ರಲ್ಲಿ ದಾಖಲಾದ 53,090 ಕೋಟಿ ರೂ.ಗಳಿಗಿಂತ ಐದು ಪಟ್ಟು (456%) ಹೆಚ್ಚಾಗಿದೆ.

ಇದನ್ನೂ ಓದಿ: ಭಗತ್ ಸಿಂಗ್ ಹುತಾತ್ಮ ದಿನ: ದೆಹಲಿಯ ಗಡಿಗಳಲ್ಲಿ ನೆರೆಯಲಿದ್ದಾರೆ ಯುವಜನರ ದಂಡು!

ಅಬಕಾರಿ ತೆರಿಗೆಯ ಸಂಗ್ರಹ ಕಡಿಮೆಯಾದರೂ ಸಹ, ರಾಜ್ಯ ವ್ಯಾಟ್‌ ಸಂಗ್ರಹ ಇನ್ನೂ ಗಮನಾರ್ಹವಾಗಿ ಹೆಚ್ಚಳವಾಗಿದೆ. ಕಚ್ಚಾ ತೈಲ ಬೆಲೆಗಳು 2014 ಜೂನ್‌ ತಿಂಗಳಲ್ಲಿ‌‌‌ ಬ್ಯಾರೆಲ್‌ಗೆ 114 ಡಾಲರ್‌‌ನಿಂದ ಪ್ರಸ್ತುತ ಪ್ರತಿ ಬಾರ್‌ಗೆ 64 ಡಾಲರ್‌ಗೆ ಇಳಿದಿದ್ದರೂ ಚಿಲ್ಲರೆ ಇಂಧನದ ಬೆಲೆಗಳು ಇನ್ನೂ ಇಳಿದಿಲ್ಲ.

ಈ ಅವಧಿಯಲ್ಲಿ ಕಚ್ಚಾ ತೈಲ ಬೆಲೆಗಳು 90 ಡಾಲರ್‌‌ನಿಂದ 16 ಡಾಲರ್‌ನಷ್ಟು ಆಗಿತ್ತು, ಅಂದರೆ ಪ್ರತಿ ಬ್ಯಾರೆಲ್‌ಗೆ ಸರಾಸರಿ 50-60 ಡಾಲರ್‌ನಷ್ಟಾಗಿತ್ತು. ಆದರೆ ಈ ಬೆಲೆ ಕುಸಿತದ ಹೆಚ್ಚಿನ ಲಾಭಗಳನ್ನು ಬೊಕ್ಕಸಕ್ಕೆ ತಳ್ಳಲಾಗಿದೆ.

ಚಿಲ್ಲರೆ ಬೆಲೆಯಲ್ಲಿ ಕೇಂದ್ರದ ತೆರಿಗೆ 39%!

ಜೂನ್ 7, 2014 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಪ್ರತಿ ಲೀಟರ್‌ಗೆ 71.51 ರೂ. ಮತ್ತು 57.28 ರೂ. ಆಗಿತ್ತು. ಕಚ್ಚಾ ಬೆಲೆ ಕುಸಿದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಯನ್ನು ಹೆಚ್ಚಿಸುತ್ತಲೇ ಇದ್ದವು. ಪ್ರಸ್ತುತ ದೆಹಲಿಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್‌‌ ಚಿಲ್ಲರೆ ಬೆಲೆಯ 60% ಮತ್ತು ಡೀಸೆಲ್ ಬೆಲೆಯ 53% ವನ್ನು ಹೊಂದಿವೆ. ಕೇಂದ್ರ ಅಬಕಾರಿ ಸುಂಕವೆ ಚಿಲ್ಲರೆ ಬೆಲೆಯ ಸುಮಾರು 39% ಒಳಗೊಂಡಿದೆ.

ಇದನ್ನೂ ಓದಿ: 100 ಕೋಟಿ ಲಂಚದ ಆರೋಪ, ಮೈತ್ರಿ ಪಕ್ಷಗಳ ಸಭೆಯಲ್ಲಿ ಅನಿಲ್ ದೇಶ್‌ಮುಖ್ ಭವಿಷ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...