Homeಮುಖಪುಟಬಂಡವಾಳಶಾಹಿಯ ಬಿಕ್ಕಟ್ಟೂ... ಕೊರೊನಾ ಸಂಚೂ...

ಬಂಡವಾಳಶಾಹಿಯ ಬಿಕ್ಕಟ್ಟೂ… ಕೊರೊನಾ ಸಂಚೂ…

ಕೊರೊನಾ ಎಂಬ ಭೀತಿಗೆ ಸಮಾಜವನ್ನು ಖುದ್ಧು ಸರ್ಕಾರವೇ ದೂಡಿದೆ ಎನ್ನುವುದಕ್ಕೂ ಕೆಲವೊಂದು ಘಟನೆಗಳೂ ಪುಷ್ಟಿ ನೀಡುತ್ತಿದೆ- ಆಲುವಳ್ಳಿ ಆರ್ ಅಣ್ಣಪ್ಪ

- Advertisement -

ಕೊರೊನಾ ಕಾರಣದಿಂದ ಲಾಕ್‌ಡೌನ್ ಘೋಷಣೆಯಾದ ಆರಂಭದಲ್ಲಿ ಕೊರೊನಾಕ್ಕೆ ತಮ್ಮಲ್ಲಿ ಅದೆಷ್ಟು ಮಂದಿ ಬಲಿಯಾಗಿ ಹೋಗುತ್ತೇವೋ ಎಂಬ ಭೀತಿ-ಹತಾಶೆಗೆ ನಾವು ತಳ್ಳಲ್ಪಟ್ಟಿದ್ದೆವು. ಆದರೆ ದಿನಗಳುರುಳಿದಂತೆ ಕೊರೊನಾ ಎಂಬುದು ಒಂದು ರೋಗವೇ ಅಲ್ಲ ಎನ್ನುವ ಮನಃಸ್ಥಿತಿಗೆ ಜನತೆ ಬರುತ್ತಿದ್ದಾರೆ. ಕೊರೊನಾ ಕುರಿತಾಗಿ ಮೂಡಿಸಿದ್ದ ಭಯ ನಿಧಾನವಾಗಿ ಕರಗುತ್ತಿದೆ.

ದೇವಾಲಯಗಳಲ್ಲಿ ಮಾಮೂಲಿಯಂತೆ ಭಕ್ತಾದಿಗಳು ಕಿಕ್ಕಿರಿದಿದ್ದರೂ ರೋಗ ಕಾಣಿಸಿಕೊಳ್ಳದಿರುವುದು, ಯಾವುದೇ ಸುರಕ್ಷತೆ, ಮುಂಜಾಗರೂಕತೆ ಇರದಿದ್ದರೂ ಬಿಕ್ಷುಕರು, ಚಿಂದಿ ಆಯುವವರಲ್ಲಿ ಒಬ್ಬರೂ ಈ ರೋಗಕ್ಕೆ ತುತ್ತಾದವರು ಕಾಣದಿರುವುದು, ಇತ್ತೀಚೆಗೆ ನಡೆದ ಉಪ ಚುಣಾವಣೆ, ಬಿಹಾರ ಚುಣಾವಣೆಯಲ್ಲಿ ಸಾವಿರಾರು ಜನರಜಂಗುಳಿ ಇದ್ದರೂ ಕೊರೊನಾ ಸುಳಿಯದಿರುವುದು ಜನರಲ್ಲಿ ಕೊರೊನಾ ಕುರಿತಾದ ಭೀತಿ ದೂರಾಗಲು ಕಾರಣವಾಗುತ್ತಿದೆ.

ಇದನ್ನೂ ಓದಿ: ಕಣ್ಣು ಕುರುಡಾಗಿ, ಕಿವಿ ಕಿವುಡಾಗಿ ಸಂವೇದನೆ ಹೊರಟುಹೋಗಿದೆಯೇ: ಭೈರಪ್ಪನವರಿಗೆ ತಿರುಗೇಟು ನೀಡಿದ ದೇವನೂರು

ವಾಸ್ತವದಲ್ಲಿ ಕೊರೊನಾಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡವರೆಲ್ಲರೂ ಅನ್ಯ ರೋಗದಿಂದ ಬಳಲುತ್ತಿದ್ದವರೇ ಆಗಿದ್ದು, ಅವೆಲ್ಲವನ್ನೂ ಕೊರೊನಾದೊಂದಿಗೆ ತಳುಕು ಹಾಕಲಾಯಿತು. ಕೊರೊನಾಕ್ಕೆ ಯಾವುದೇ ಲಸಿಕೆ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಾಟಕ ಆಡಲಾಯಿತು ಮತ್ತು ಗುಣಪಡಿಸಲಾಗಿದೆ ಎಂದು ವರದಿ ಮಾಡಲಾಯಿತು. ಲಸಿಕೆಯಿಲ್ಲದೆ ಗುಣಪಡಿಸಲು ಸಾಧ್ಯವೆಂದಾದರೆ ಅಂಥಹ ರೋಗಕ್ಕೆ ಅಂಜಿ ಲಾಕ್‌ಡೌನ್ ಮಾಡುವ ಅವಶ್ಯಕತೆ ಈ ದೇಶಕ್ಕೆ- ಸಮಾಜಕ್ಕೆ ಇತ್ತೆ?

ಇಷ್ಟೇ ಅಲ್ಲದೆ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಲಾಕ್‌ಡೌನ್ ಹೊರತಾಗಿ ಯಾವುದೇ ಕ್ರಮ ಕೈಗೊಳ್ಳದಿದ್ದದ್ದು, ಕೊರೊನಾ ಎಂಬ ಪಿಡುಗು ಈ ಸಮಾಜವನ್ನು ಕಾಡುತ್ತಿಲ್ಲ ಎಂಬ ಖಚಿತತೆ ಈ ಸರ್ಕಾರಕ್ಕೆ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲವೇ..? ದೇಹಲಿ ಗಡಿಯಲ್ಲಿ ಕೋಟ್ಯಾಂತರ ರೈತರು, ಸರ್ಕಾರ-ಆರೋಗ್ಯ ಇಲಾಖೆ ನೀಡಿರುವ ಎಲ್ಲ ಮಾರ್ಗದರ್ಶನಗಳನ್ನು ಧಿಕ್ಕರಿಸಿ, ಸಾಮೂಹಿಕ ಗುಂಪು ಹೂಡಿ ತಿಂಗಳು ಕಳೆದರೂ, ಅಲ್ಲಿ ಕೊರೊನಾ ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಕೊರೊನಾವು ಪ್ರಚಾರ ಪಡಿಸಿದಷ್ಟು ಭೀಕರವಾಗಿದ್ದಿದ್ದರೆ ಅಲ್ಲಿ ಮರಣ ಮೃದಂಗವೇ ನಡೆಯಬೇಕಿತ್ತು. ಆದರೆ ಹೀಗಾಗದಿರುವುದು, ಆಲೋಚನೆ ಮಾಡುವ ಶಕ್ತಿ ಇರುವ ಮಾನವ ಸಮಾಜಕ್ಕೆ ಕೊರೊನಾ ಎಂಬ ರೋಗ ಈ ಭೂಮಿಯ ಮೇಲೆ ಇಲ್ಲ ಎಂದು ಖಚಿತ ಪಡಿಸಿಕೊಳ್ಳಲು ಆಧಾರ ಒದಗಿಸುತ್ತಿದೆ.

ಇದನ್ನೂ ಓದಿ: ‘ಲಸಿಕೆಯಲ್ಲಿ ಹಂದಿ ಮಾಂಸವಿಲ್ಲ’ – ಆಧಾರರಹಿತ ಸುದ್ದಿ ಕಡೆಗಣಿಸಲು ಮುಸ್ಲಿಂ ವಿದ್ವಾಂಸರ ಕರೆ

ಜೊತೆಗೆ ಕೊರೊನಾ ಎಂಬ ಭೀತಿಗೆ ಸಮಾಜವನ್ನು ಖುದ್ದು ಸರ್ಕಾರವೇ ದೂಡಿದೆ ಎನ್ನುವುದಕ್ಕೂ ಕೆಲವೊಂದು ಘಟನೆಗಳೂ ಪುಷ್ಟಿ ನೀಡುತ್ತಿದೆ.

ಮೊದಲನೆಯದಾಗಿ ಹೇಳಬೇಕೆಂದರೆ, ಸಮಾಜ ಕೊರೊನಾ ಭೀತಿಯಲ್ಲಿ ಸಂತ್ರಸ್ಥವಾಗಿ ಅಸಹಾಯಕ ಸ್ಥಿತಿಯಲ್ಲಿರುವಾಗಲೇ ತುರಾತುರಿಯಲ್ಲಿ ಕಾರ್ಮಿಕ ಕಾನೂನು, ಭೂ ಸುಧಾರಣಾ ಕಾಯಿದೆ, APMC ಕಾಯಿದೆಗಳಿಗೆ ತಿದ್ದುಪಡಿ ತಂದು ಜಾರಿ ಮಾಡ ಹೊರಟಿರುವುದು.

ಎರಡನೆಯದಾಗಿ ಪಟ್ಟಿ ಮಾಡಬಹುದಾದದ್ದೆಂದರೆ, ಬೆಳಕಿಗೆ ಬರುತ್ತಿರುವ ಕೈಗಾರಿಕೋತ್ಪನ್ನಗಳ ಅತಿಯಾದ ಉತ್ಪಾದನೆ ಮತ್ತು ಸಂಗ್ರಹ. ಒಮ್ಮೆ ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಇದರ ಅರಿವಾಗುತ್ತದೆ. ನಿರಂತರವಾಗಿ 9 ತಿಂಗಳಿನಿಂದ ಉತ್ಪಾದನೆ ಸ್ಥಗಿತಗೊಂಡಿದ್ದರೂ ಇಂದು ಮಾರುಕಟ್ಟೆಯಲ್ಲಿ ಯಾವುದೆ ವಸ್ತುಗಳ ಕೊರತೆ ಕಾಣುತ್ತಿಲ್ಲ. ಎಲ್ಲ ಮಾರಾಟ ಮಳಿಗೆಳಲ್ಲಿ ಲಾಕ್‌ಡೌನ್ ಪೂರ್ವದಲ್ಲಿದ್ದಂತೆಯೇ ವಸ್ತುಗಳ ಲಭ್ಯತೆಯಿದೆ. ಬಟ್ಟೆ ಖರೀದಿಸಲು ಹೋದರೆ ಯಾವುದೆ ಕೊರತೆಯಿಲ್ಲ. ದೂರದರ್ಶನ, ಫ್ರಿಡ್ಜ್, ವಾಹನ, ಶೃಂಗಾರ ಸಾಮಗ್ರಿ, ಪಾದರಕ್ಷೆ ಯಾವುದರಲ್ಲಿಯೂ ಕೊರತೆ ಕಾಣುತ್ತಿಲ್ಲ. ಎಲ್ಲದರ ಸರಬರಾಜು ನಿರಂತರವಾಗಿದೆ. ಎಂದಿನಂತೆ ವಿದ್ಯುತ್ ಸರಬರಾಜು ಇದೆ. ನಿರ್ಮಾಣ ಕಾರ್ಯಕ್ಕೆ ಬೇಕಾಗುವ ಸಿಮೆಂಟ್, ಕಬ್ಬಿಣ, ಸ್ಯಾನಿಟರಿಗೆ ಸಂಬಂಧಿಸಿದ ವಸ್ತುಗಳು, ಗೃಹಲಂಕಾರ ವಸ್ತುಗಳು ಹೀಗೆ ಯಾವುದರಲ್ಲಿಯೂ ಕೊರತೆಯಿಲ್ಲ. ಎಲ್ಲವೂ ಎಲ್ಲ ಅಂಗಡಿಗಳಲ್ಲಿ ತುಂಬಿ ತುಳುಕುತ್ತಿವೆ. ಜೊತೆಗೆ ಹೊಸ ಹೊಸ ವ್ಯಾಪಾರ ಮಳಿಗೆಗಳನ್ನೂ ತೆರೆಯಲಾಗುತ್ತಿದೆ.

ಮತ್ತೂ ವಿಚಿತ್ರವೆಂದರೆ, ಆರ್ಥಿಕ ಕುಸಿತ ಕಾಣುತ್ತಿದೆ ಎನ್ನಲಾಗುತ್ತಿದ್ದ ವ್ಯವಸ್ಥೆಯಲ್ಲಿ ಕುಸಿತ ಕಾಣ ಬೇಕಾಗಿದ್ದ ಬೆಲೆ, ಏರಿಕೆ ಕಾಣುತ್ತಿರುವುದು. ಸಾಮಾನ್ಯವಾಗಿ ಆರ್ಥಿಕ ಕುಸಿತಕ್ಕೆ ತುತ್ತಾದ ಸಮಾಜದಲ್ಲಿ ಎಂದೂ ಬೆಲೆಯೇರಿಕೆ ಕಾಣಲಾರದು. ಅಂತಹ ಸಮಾಜದಲ್ಲಿ ಆರ್ಥಿಕತೆಯ ಪುನಃಶ್ಚೇತನಕ್ಕೆ ಸರ್ಕಾರದ ವತಿಯಿಂದ ನಾನಾ ಕಸರತ್ತು ನಡೆಯುತ್ತಿರುತ್ತದೆ. ಆರ್ಥಿಕ ಶಕ್ತಿಗಳಿಂದ ಸರ್ಕಾರದ ಮೇಲೆ ಅಂತಹ ಕಾರ್ಯಕ್ರಮಗಳಿಗೆ ನಿರಂತರವಾದ ಒತ್ತಡವಿರುತ್ತದೆ. ನಮ್ಮಲ್ಲಿ ಸರ್ಕಾರಗಳು ತಟಸ್ಥವಾಗಿರುವುದನ್ನು ಗಮನಿಸಿದರೆ ಈ ಬಿಕ್ಕಟ್ಟು ಪಟ್ಟಭದ್ರ ಹಿತಾಸಕ್ತಿಗಳ ಕೃಪಾಪೋಷಿತ ಎನಿಸುತ್ತದೆ.

ಇದನ್ನೂ ಓದಿ: ಸ್ಥಾನಮಾನ ಸಿಕ್ಕರೆ ಬಿಜೆಪಿ ಸೇರ್ಪಡೆ ಖಚಿತ: ಶಾಸಕ ಎನ್‌ ಮಹೇಶ್

ಹಾಗೆಯೇ ಲಾಕ್ ಡೌನ್ ತೆರವಾಗಿ ಕೊರೊನಾ ಭೀತಿಯಿಂದ ಜನತೆ ಹೊರಬಂದು ಉದ್ಯೋಗ ಅರಸುತ್ತಿದ್ದಾಗ್ಯೂ ಕೈಗಾರಿಕೆಗಳು ಮಾತ್ರ ಉತ್ಪಾದನೆಗೆ ಇಳಿಯದಿರುವುದೂ ಹಲವು ಅನುಮಾನಗಳನ್ನೂ ಹುಟ್ಟು ಹಾಕುತ್ತಿದೆ. ಈಗಾಗಲೇ ಇವರ ಗೋದಾಮುಗಳಲ್ಲಿ ಮಿತಿ ಮೀರಿ ಸಂಗ್ರಹಗೊಂಡಿರುವ ಉತ್ಪನ್ನಗಳೆಲ್ಲ ಬಿಕರಿಯಾಗಿ ಖಾಲಿಯಾಗುವುದಕ್ಕಾಗಿ ಕಾದುಕುಳಿತಿರುವುದನ್ನು ಸ್ಪಷ್ಟ ಪಡಿಸುತ್ತಿದೆ.

ಸದ್ಯದ ಪರಿಸ್ಥಿತಿ ಗಮನಿಸಿದರೆ ಯಾವ ಕೈಗಾರಿಕೆಗಳೂ ಸದ್ಯಕ್ಕೆ ಉತ್ಪಾದನೆ ಆರಂಭಿಸುವ ಲಕ್ಷಣಗಳಂತೂ ಕಂಡುಬರುತ್ತಿಲ್ಲ. ಹೇಳಬೇಕೆಂದರೆ ಇವರ ಗೋದಾಮುಗಳಲ್ಲಿ ತುಂಬಿರುವ ಎಲ್ಲ ಸರಕುಗಳೂ ಮುಗಿಯುವವರೆಗೂ ಉತ್ಪಾದನೆ ಆರಂಭಿಸಲಾರವು ಎನಿಸುತ್ತಿದೆ.

ಈ ಹಿನ್ನೆಲೆಯಿಂದ ನೋಡಿದಾಗ ಬಂಡವಾಳಿಗರು ತಮ್ಮ ಬಿಕ್ಕಟ್ಟನ್ನು ಕೊರೊನಾ-ಲಾಕ್‌ಡೌನ್ ಹೆಸರಿನಲ್ಲಿ ಜನತೆಯ ಮೇಲೆ- ಸಮಾಜದ ಮೇಲೆ ಹೇರಿರುವುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: ಪುರಸಭೆ ಸದಸ್ಯೆಯನ್ನು ಎಳೆದಾಡಿದ್ದ ಬಿಜೆಪಿ ಶಾಸಕ ಸಿದ್ದು ಸವದಿ: 31 ಜನರ ವಿರುದ್ಧ FIR

ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿರುವ ಸರಕುಗಳು ಮತ್ತು ಪರಿಸ್ಥಿತಿ ತಿಳಿಯಾಗಿರುವ ಎಲ್ಲ ಲಕ್ಷಣ ಇದ್ದರೂ, ಉತ್ಪಾದನೆ ಆರಂಭಿಸದಿರುವ ಇವರ ಮನಸ್ಥಿತಿ ಗಮನಿಸಿದರೆ ದೇಶವನ್ನು ಮುಂಬರಲಿರುವ ದಿನಗಳಲ್ಲಿ ಬೀಕರವಾದ ಆರ್ಥಿಕ ಕುಸಿತದೆಡೆಗೆ ಕೊಂಡೊಯ್ಯುತ್ತಿರುವಂತಿದೆ. ಇದು ಭಾರತದ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಗಳಿಗೆ ದೂಡುವ ಸಾಧ್ಯತೆ ಎದ್ದು ಕಾಣುತ್ತಿದೆ.

ಇದರಿಂದ ಸಮಾಜ ಕಲಿಯಬೇಕಿರುವುದೂ ಇದೆ. ಕೊರೊನಾ ಲಾಕ್‌ಡೌನ್ ನಂತಹ ಬಿಕ್ಕಟ್ಟುಗಳು, ಬಿಕ್ಕಟ್ಟುಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಮರುಕಳಿಸುತ್ತಲೆ ಇರುತ್ತದೆ. ಆಳುವ ಹಾಗು ವಿರೋಧ ಪಕ್ಷಗಳು ಬಂಡವಾಳಶಾಹಿ ಪಕ್ಷಗಳೇ ಆಗಿರುವುದರಿಂದ ಈ ಸತ್ಯ ಜನರ ಗಮನಕ್ಕೆ ಬರದಂತೆ ತಡೆಯುವಲ್ಲಿ ಯಶಸ್ವಿಯಾಗುತ್ತವೆ.

ಕಮ್ಯುನಿಸ್ಟ್‌ ದೃಷ್ಟಾರ ಮಾರ್ಕ್ಸ್ ಹೇಳುವಂತೆ ಬಂಡವಾಳಶಾಹಿ ಬೆಳೆದಂತೆಲ್ಲ ಬಿಕ್ಕಟ್ಟನ್ನೂ ತನ್ನೊಂದಿಗೆ ತರುತ್ತಾನೆ ಮತ್ತು ಒಂದು ಹಂತದಲ್ಲಿ ಅದು ಹತೋಟಿ ಮೀರಿ, ಅದೇ ಕ್ರಾಂತಿಗೆ ಹಾದಿ ಮಾಡಿಕೊಟ್ಟು ಬಂಡವಾಳವಾದ ಅಂತ್ಯ ಕಾಣುತ್ತದೆ. ಆದರೆ ಮಾರ್ಕ್ಸ್ ಅವರ ಈ ಎಲ್ಲ ಗ್ರಹಿಕೆಳನ್ನೂ ಸುಳ್ಳಾಗಿಸುವ ಎಲ್ಲಾ ಚಾಲಾಕಿತನವನ್ನು ಬಂಡವಾಳಿಗರು ಇಂದು ಮೈಗೂಡಿಸಿಕೊಂಡಿಸಿದ್ದಾರೆ. ಮಾರ್ಕ್ಸ್ ವಾದದಿಂದ ಕಮ್ಯುನಿಸ್ಟರಿಗಿಂತಲೂ ಬಂಡವಾಳಶಾಹಿಗಳು ತಮ್ಮ ಸಾಮ್ರಾಜ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಕಲಿತುಕೊಂಡಿದ್ದಾರೆ. ಇಲ್ಲಿ ಕಮ್ಯುನಿಸ್ಟರು ತುಂಬ ಎಳಸು ಎನಿಸುತ್ತದೆ.


ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial