Homeರಾಷ್ಟ್ರೀಯನವೆಂಬರ್‌ 26ರ ಸಂವಿಧಾನ ದಿನವನ್ನು ‘ಜಾತಿ ಪದ್ದತಿ ಸಮರ್ಥನೆ & ವೈಭವೀಕರಣ’ ದಿನವಾಗಿ ಆಚರಿಸಲು ಬಿಜೆಪಿ...

ನವೆಂಬರ್‌ 26ರ ಸಂವಿಧಾನ ದಿನವನ್ನು ‘ಜಾತಿ ಪದ್ದತಿ ಸಮರ್ಥನೆ & ವೈಭವೀಕರಣ’ ದಿನವಾಗಿ ಆಚರಿಸಲು ಬಿಜೆಪಿ ಸರ್ಕಾರದಿಂದ ತಯಾರಿ!

- Advertisement -
- Advertisement -

ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ನವೆಂಬರ್‌ 26ರ ಸಂವಿಧಾನ ದಿನವನ್ನು ‘‘ಸಂವಿಧಾನ ಸಮರ್ಪಣಾ ದಿನ”ವೆಂದು ಕರೆದಿದ್ದು, ಈ ವರ್ಷದ ಆಚರಣೆಯನ್ನು “ಭಾರತ – ಪ್ರಜಾತಂತ್ರದ ಜನನಿ” ಎಂಬ ಹೆಸರಿನಲ್ಲಿ ಆಚರಿಸುವಂತೆ ಸೂಚಿಸಿದೆ. ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದ್ದ ದಿನದಂದು ಒಕ್ಕೂಟ ಸರ್ಕಾರವು ಸುಳ್ಳು ನಿರೂಪಣೆ ಮೂಲಕ “ಭಾರತದ ಜಾತಿ ಪದ್ದತಿಯ ಸಮರ್ಥನೆ ಮತ್ತು ವೈಭವೀಕರಣ’’ ನಡೆಸುತ್ತಿದೆ ಎಂಬ ಅರೋಪ ವ್ಯಕ್ತವಾಗಿದೆ.

ನವಂಬರ್ 9ರಂದು ಬಿಜೆಪಿ ಸರ್ಕಾರದ ಕ್ಯಾಬಿನೆಟ್‌ ಸೆಕ್ರೆಟರಿ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎಲ್ಲಾ ಕಚೇರಿ ಹಾಗೂ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದು, ಈ ಬಾರಿಯ ನವೆಂಬರ್‌ 26ರ ಸಂವಿಧಾನ ಸಮರ್ಪಣಾ ದಿನವನ್ನು “ಭಾರತ – ಪ್ರಜಾತಂತ್ರದ ಜನನಿ” ಎಂಬ ಹೆಸರಿನಲ್ಲಿ “ಜಗತ್ತಿನಲ್ಲಿರುವ ಪ್ರಜಾಪ್ರಭುತ್ವ ಹುಟ್ಟಿದ್ದು ಭಾರತದಲ್ಲಾಗಿದೆ” ಎಂಬ ವಿಷಯವನ್ನು ಸಮರ್ಥಿಸಿಕೊಂಡು ದೇಶಾದ್ಯಂತ ಆಚರಿಸಬೇಕೆಂದು ಸೂಚಿಸಿದೆ. ಇಷ್ಟೆ ಅಲ್ಲದೆ ಈ ಆಚರಣೆಯನ್ನು ಹೇಗೆ ಆಚರಿಸಬೇಕು ಎಂದು ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (ICHR) ತಯಾರಿಸಿರುವ ಟಿಪ್ಪಣಿಯನ್ನು ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ICHR ತಯಾರಿಸಿರುವ ಈ ಟಿಪ್ಪಣಿಯೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದ್ದು, ದೇಶವು ಶತಮಾನಗಳ ಕಾಲದಿಂದಲೂ ನರಳುತ್ತಿರುವ ಜಾತಿ ಪದ್ದತಿಯನ್ನು ಇತಿಹಾಸದ ಸುಳ್ಳು ನಿರೂಪಣೆಯೊಂದಿಗೆ ಇದರಲ್ಲಿ ಹೇಳಲಾಗಿದೆ.

ICHR ಟಿಪ್ಪಣಿಯಲ್ಲಿ ಏನಿದೆ?

ವೇದ, ಪುರಾಣ, ಉಪನಿಷತ್‌, ಭಗವದ್ಗೀತೆ ಕಾಲದಲ್ಲೆ ಭಾರತದಲ್ಲಿ ಪ್ರಜಾಪ್ರಭುತ್ವ ಇತ್ತು. 2 ಸಾವಿರ ವರ್ಷಗಳಿಂದ ನಡೆಯುತ್ತಿರುವ ವಿದೇಶಿ ದಾಳಿಗಳ ನಡುವೆಯು ಪಂಚಾಯತಿ ಕಟ್ಟೆ, ಖಾಪ್ ಪಂಚಾಯತ್‌‌‌ ಈ ಪ್ರಜಾಪ್ರಭುತ್ವನ್ನು ಹಿಂದೂ ಸಂಸ್ಕೃತಿ ಉಳಿಸಿಕೊಂಡು ಬಂದಿದೆ ಎಂದು ICHR ಟಿಪ್ಪಣಿಯಲ್ಲಿ ಹೇಳಿದೆ.

ಅದಾಗ್ಯೂ, ಖಾಪ್‌ ಪಂಚಾಯತ್‌ಗಳು ಜಾತಿ ಶ್ರೇಣೀಕೃತ ವ್ಯವಸ್ಥೆಯ ಭಾಗವಾಗಿದ್ದು ಇಂದಿಗೂ ಅವು ಭಾರತದಲ್ಲಿ ಜಾತಿ ಪದ್ದತಿಯನ್ನು ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಲೆ, ಜಾತಿ ದೌರ್ಜನ್ಯ ಎಸಗುತ್ತಲೆ ಇವೆ ಸಾಬೀತಾಗಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಕೂಡಾ ಇವುಗಳು ಹೆಣ್ಣು ಮಕ್ಕಳನ್ನು ಮತ್ತು ಮಹಿಳೆಯವನ್ನು ಹಣಕ್ಕಾಗಿ ಮಾರಾಟ ಮಾಡಿರುವ ಬಗ್ಗೆ ಕೂಡಾ ವರದಿಯಾಗಿತ್ತು. ಇದನ್ನೂ ಓದಿ: ರಾಜಸ್ಥಾನ: ಸಾಲ ತೀರಿಸಲು ಹುಡುಗಿಯರ ಮಾರಾಟ; ನಿರಾಕರಿಸಿದರೆ ಜಾತಿ ಮಂಡಳಿಗಳ ಆದೇಶದ ಮೇರೆಗೆ ಅವರ ತಾಯಿಯ ಮೇಲೆ ಅತ್ಯಾಚಾರ!

ಚಿಂತಕ ಶಿವಸುಂದರ್‌ ಅವರು, “ಇದು ಆರೆಸ್ಸೆಸ್ ಸರಸಂಘಚಾಲಕ ಗೋಲ್ವಾಲ್ಕರ್ ಪ್ರತಿಪಾದನೆಯಾಗಿದೆ. ಅವರು, ‘ಜಾತಿ ವ್ಯವಸ್ಥೆಯೇ ಈ ದೇಶದ ಅಸ್ಮಿತೆ. ಅದು ಸಡಿಲವಾಗಿದ್ದರಿಂದಲೇ ಭಾರತದ ಈಶಾನ್ಯ ಮತ್ತು ವಾಯುವ್ಯ ಪ್ರಾಂತ್ಯಗಳಲ್ಲಿ ಪರದೇಸಿ ಧರ್ಮಗಳು ನೆಲಸುವಂತಾಯಿತು’ ಎಂದು ಅವರ ಬಂಚ್ ಆಫ್‌ ಥಾಟ್ಸ್‌‌ನಲ್ಲಿ ಬರೆದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಯಥಾವತ್ ಅದೇ ಮಾತನ್ನು ಸಂವಿಧಾನ ದಿನದಂದು ಪ್ರಚಾರ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟೆ ಅಲ್ಲದೆ, ಇತಿಹಾಸದ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆಯಾಗಿರುವ ICHR ಬಿಹಾರದ ರಾಖಿಗರಿಯಲ್ಲಿ ಇತ್ತೀಚೆಗೆ ನಡೆದ ಸಂಶೋಧನೆಯ ಬಗ್ಗೆ ತನ್ನ ಟಿಪ್ಪಣಿಯಲ್ಲಿ ಸುಳ್ಳು ಬರೆದುಕೊಂಡಿದೆ. ICHR ತನ್ನ ಟಿಪ್ಪಣಿಯಲ್ಲಿ, “ಇತ್ತೀಚಿಗೆ ರಾಖಿಗರಿ ಸಂಶೋಧನೆಯಲ್ಲೂ ಭಾರತದ ವೈದಿಕ ನಾಗರೀಕತೆ 5 ಸಾವಿರ ವರ್ಷಗಳಷ್ಟು ಹಿಂದಿನದ್ದೆಂದೂ, ಆ ಕಾಲದಲ್ಲೂ ಪ್ರಜಾತಾಂತ್ರಿಕ ವ್ಯವಸ್ಥೆ ಇತ್ತೆಂದು ಸಾಬೀತಾಗಿದೆ” ಎಂದು ಉಲ್ಲೇಖಿಸಿದೆ.

ಆದರೆ ವಾಸ್ತವದಲ್ಲಿ, ರಾಖಿಗರಿ ಸಂಶೋಧನೆಯು ಹರಪ್ಪಾ ನಾಗರಿಕತೆಗೂ ವೇದ ನಾಗರಿಕತೆಯ ಆರ್ಯರಿಗೂ ಸಂಬಂಧವಿಲ್ಲ ಎಂದು ಸಾಬೀತಾಗಿದೆ. ರಾಖಿಗರಿ ನಾಗರಿಕರೆ ದ್ರಾವಿಡ ನಾಗರೀಕತೆಯೆ ಹೊರತು ವೇದ ನಾಗರಿಕತೆಯಲ್ಲ ಎಂದು ಸಂಶೋಧನೆ ಸಾಬೀತು ಮಾಡಿದೆ. ರಾಖಿಗರಿಯಲ್ಲಿ ಪತ್ತೆಯಾದ ಅಸ್ಥಿಪಂಜರದ DNA ಇದನ್ನ ಪುಷ್ಠಿಕರಿಸಿದ್ದು, ಸಿಂಧೂ ಕಣಿವೆ ನಾಗರಿಕತೆಯನ್ನು ಕಟ್ಟಿರುವವರು ‘ಋಗ್ವೇದ ಕಾಲದ ಆರ್ಯ’ರಲ್ಲ ಎಂಬುದನ್ನು ಈ ಸಂಶೋಧನೆ ಹೇಳಿದೆ. ಇದನ್ನೂ ಓದಿ: ಸಿಂಧೂ ನದಿ ನಾಗರಿಕತೆ ನಿರ್ಮಾಣದಲ್ಲಿ ಸ್ಟೆಪ್ ಮೂಲದ ಆರ್ಯ ವೈದಿಕರ ಪಾತ್ರವಿಲ್ಲ: ಅದನ್ನು ಕಟ್ಟಿದವರು ದಕ್ಷಿಣ ಏಷಿಯನ್ನರು

ಇಷ್ಟೆ ಅಲ್ಲದೆ ICHR ತನ್ನ ಟಿಪ್ಪಣಿಯಲ್ಲಿ ಭಗವದ್ಗೀತೆಯನ್ನು ತಪ್ಪಾಗಿ ವೈಭವೀಕರಿಸಿದ್ದು, “ಭಗವದ್ಗೀತೆ ವೇದದ ಪ್ರಜಾತಾಂತ್ರಿಕತೆಯ ಭಾಗವಾಗಿ ಮಾನವನ ನಡತೆಯಲ್ಲಿ ಜ್ಞಾನ, ಶ್ರದ್ಧೆ , ಕ್ರಿಯೆ ಮತ್ತು ಗುಣಗಳು ವ್ಯಕ್ತವಾಗಬೇಕು ಎಂದು ಪ್ರತಿಪಾದಿಸುತ್ತದೆ” ಎಂದು ಬರೆದಿದೆ.

ಇದನ್ನು ವಿರೋಧಿಸಿರುವ ಶಿವಸುಂದರ್‌ ಅವರು, “ಅಂಬೇಡ್ಕರ್ ಅವರು ಸ್ಪಷ್ಟಪಡಿಸುವಂತೆ , ಭಗವದ್ಗೀತೆಯು ಜಾತಿ ಆಧಾರಿತ ಶ್ರೇಣೀಕರಣವನ್ನು ಪ್ರತಿಪಾದಿಸುವ ಮನುಸ್ಮೃತಿಯ ತಾತ್ವಿಕ ಸಮರ್ಥನೆಯಾಗಿದೆ. ಅದರಲ್ಲಿ ಭೋಧಿಸಲಾಗಿರುವ ಜ್ಞಾನ, ಗುಣ ಮತ್ತು ಕ್ರಿಯೆಗಳೆಲ್ಲವೂ ಹುಟ್ಟಿನಿಂದಲೇ ತೀರ್ಮಾನವಾಗಿರುತ್ತದೆ ಎಂಬ ಜಾತಿ ಶ್ರೇಣೀಕರಣದ ತಾರತಮ್ಯ ತತ್ವವನ್ನೇ ಹೇಳುತ್ತದೆ” ಎಂದು ಹೇಳಿದ್ದಾರೆ. ಮೋದಿ ಸರ್ಕಾರ ಇದನ್ನು ಭಾರತದ ಸನಾತನ ಪ್ರಜಾತಂತ್ರ ಎಂದು ಆಚರಿಸಲು ಆದೇಶಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಷ್ಟೆ ಅಲ್ಲದೆ, ಭಾರತದಲ್ಲಿ ಹುಟ್ಟಿನ ಆಧಾರದಲ್ಲಿ ಸಂಪತ್ತು, ಜ್ಞಾನ ಮತ್ತು ರಾಜ್ಯಅಧಿಕಾರಗಳು ಒಂದೆಡೆ ಕೇಂದ್ರೀಕರಣಗೊಂಡಿಲ್ಲ ಎಂದು ICHR ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದು, “ಇದು ಜಗತ್ತಿನ ಇತರ ಪ್ರಾಚೀನ ಪ್ರಜಾತಂತ್ರಗಳಾದ ಗ್ರೀಸ್ ಮತ್ತು ರೋಮನ್ ಪ್ರಜಾತಂತ್ರಕ್ಕೂ ಭಾರತದ ವೈದಿಕ ಪ್ರಜಾತಂತ್ರಕ್ಕೂ ಇದ್ದ ದೊಡ್ಡ ವ್ಯತ್ಯಾಸವಾಗಿದೆ” ಎಂದು ಹೇಳಿದೆ.

ಇದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಶಿವಸುಂದರ್‌ ಅವರು, “ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದು ಇರಬಹುದೇ? ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ಹುಟ್ಟಿನ ಆಧಾರದ ಜಾತಿ ವ್ಯವಸ್ಥೆ, ಜಾತಿ ತಾರತಮ್ಯ ಇರುವುದು ಭಾರತದ ಬ್ರಾಹ್ಮಣಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಾತ್ರ. ಸಂಪತ್ತು, ಅಧಿಕಾರ ಮತ್ತು ಜ್ಞಾನವನ್ನು ದಲಿತರಿಂದ ಮತ್ತು ಶೂದ್ರರಿಂದ, ಮಹಿಳೆಯರಿಂದ ಕಸಿದು ಕೇವಲ ಬ್ರಾಹ್ಮಣಿಯ ಮೇಲ್ಜಾತಿಗಳ ಖಾಸಗಿ ಆಸ್ತಿಯನ್ನಾಗಿ ಮಾಡಿದ್ದು ಭಾರತದ ವೇದ-ಪುರಾಣ-ಶಾಸ್ತ್ರ-ಸ್ಮೃತಿ-ಶ್ರುತಿ ಗಳನ್ನಾಧರಿಸಿದ ಈ ದೇಶದ ಹಿಂದೂ ಬ್ರಾಹ್ಮಣಿಯ ಜಾತಿ ವ್ಯವಸ್ಥೆಯಾಗಿದೆ” ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಂಧೂ ನಾಗರಿಕತೆ ಕುರಿತ ವಿಜ್ಞಾನದ ಹೊಸ ಸಂಶೋಧನೆಗಳೂ… ಸತ್ಯ ತಿರುಚುವ ಪತ್ರಿಕೆಗಳೂ… ಸುಳ್ಳು ಹೇಳಿತೇಕೆ ವಿಜಯ ಕರ್ನಾಟಕ

ಚಿಂತಕ ಶಿವಸುಂದರ್‌ ಅವರು ವೈರಲ್ ಬರಹವನ್ನು ಓದಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತ ಪ್ರಜಾತಂತ್ರದ ಜನನಿ ನವಂಬರ್ 26 ಆಚರಣೆಗಳು ಇವೆಲ್ಲವೂ ಮುಂದಿನ ಚುನಾವಣೆಯನ್ನ ಎದುರಿಟ್ಟುಕೊಂಡು ಮಾಡುವ ಆಚರಣೆಗಳ ವಿನಹ ಭಾರತದಲ್ಲಿ ನರಳಾಡುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನ ಮೇಲೆತ್ತುವ ಕೆಲಸವಾಗಲಿ ಇತರ ಅಭಿವೃದ್ಧಿ ಕೆಲಸವಾಗಲಿ, ನಗಣ್ಯ ಈ ಸರಕಾರಕ್ಕೆ ಎಲ್ಲವೂ ನಾವೆಲ್ಲ ನೋಡುವಾಗ ಇದು ಪ್ರಜಾಪ್ರಭುತ್ವ ರಾಷ್ಟ್ರವಾಗದೆ ಏಕಪ್ರಭುತ್ವ ರಾಷ್ಟ್ರವಾಗಿದೆ ಅಂತ ನನಗನಿಸುತ್ತದೆ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...