Homeಎಚ್.ಎಸ್.ದೊರೆಸ್ವಾಮಿಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

ಮದ್ಯದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಸರ್ಕಾರ ಮಾಡಬಾರದು.

- Advertisement -
- Advertisement -

ಮಾಧ್ಯಮಗಳು ಜನರನ್ನು ಎಚ್ಚರಿಸುವಂತ ಕೆಲಸ, ಸರ್ಕಾರಕ್ಕೆ ತಿಳಿವಳಿಕೆ ಹೇಳುವಂತಹ ಕೆಲಸ ಅಗತ್ಯವಾಗಿ ಮಾಡಬೇಕು. ಅವರು ಆ ಕೆಲಸವನ್ನು ಬಿಟ್ಟು ಮಿಕ್ಕೆದ್ದೆಲ್ಲ ಮಾಡ್ತಾರೆ. ಕಾಲಹರಣ ಮಾಡ್ತಾರೆ. ಎಲ್ಲೊ ಒಂದು ಕಡೆ ಸಾವಾಯಿತು ಅಂದ್ರೆ ಐದು ಸರಿ ಅದನ್ನು ಹಾಕ್ತಾರೆ.. ಎಲ್ಲಾದರೂ ಕೊಲೆ ಆದರೂ ಅದನ್ನೆ ಪುನಃ ರಿಪೀಟ್ ಮಾಡಿ ಹಾಕ್ತಾರೆ. ಬರೀ ಈ ತರಹದ ಚರ್ಚೆ ಆಗ್ತಿದೆ ಹೊರತು ಪ್ರಜಾಪ್ರಭುತ್ವವನ್ನು ಮಜಭೂತುಪಡಿಸುವುದಕ್ಕೆ ಮತ್ತು ಸಮಾಜವನ್ನು ತಿದ್ದುವುದಕ್ಕೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದುಷ್ಟ ವಿಚಾರಗಳನ್ನು ಅಳಿಸಲು ಕೆಲಸ ಮಾಡುತ್ತಿಲ್ಲ.

ಒಳ್ಳೇಯದಕ್ಕೆ ಸಮಯ ಕೊಟ್ಟು ಜನರ ಪ್ರಜ್ಞೆಯನ್ನು ಬಳಸಿ, ಅವರಲ್ಲಿ ಹೋರಾಟದ ಮನೋಭಾವವನ್ನು ಬೆಳೆಸಿ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವಂತಹ ಕೆಲಸ ಮಾಡಬೇಕಾದಂತಹ ಮಾಧ್ಯಮಗಳು ಕಾಲಹರಣ ಮಾಡುತ್ತಿವೆ. ಇದನ್ನು ನಾವು ನಾಲ್ಕಾರು ವರ್ಷಗಳಿಂದ ನೋಡ್ತ ಬಂದಿದ್ದೇವೆ.. ಇದರ ಬಗ್ಗೆ ಮಾತಾನಾಡುವ ಜನ ಕೂಡ ಇಲ್ಲ. ನಾವು ಸ್ವತಂತ್ರ ಪೂರ್ವದಲ್ಲಿ ಈ ಮಾದ್ಯಮಗಳನ್ನು ಹೇಗೆ ಉಪಯೋಗ ಮಾಡ್ತಿದ್ದೆವು, ಬ್ರಿಟೀಷರ ವಿರೋಧವಾಗಿ ನಾವು ಗುಲಾಮಗಿರಿಯಿಂದ ಹೊರಗೆ ಬರುವುದ್ದಕ್ಕಾಗಿ, ಶತ್ರುಗಳನ್ನು ಹೊಡೆದು ಓಡಿಸುವುದಕ್ಕಾಗಿ, ಪ್ರಜೆಗಳಲ್ಲಿ ಪ್ರಜ್ಞೆಯನ್ನು ತುಂಬಿಸುವಂತಹ ಕೆಲಸವನ್ನು ಮಾಡ್ತಾ ಇದ್ವಿ. ಈವತ್ತಿನ ಪತ್ರಿಕೆಗಳು ಅಂತಹ ಕೆಲಸ ಮಾಡಬೇಕು.

ಪ್ರಜಾಪ್ರಭುತ್ವವನ್ನು ಉಳಿಸುವಂತಹ ಕೆಲಸ, ನಮ್ಮ ಸಂವಿಧಾನವನ್ನು ಉಳಿಸುವಂತಹ ಕೆಲಸ ಮಾಡಬೇಕೇ ಹೊರೆತು ಕಾಲಹರಣ ಮಾಡುವುದು ಸರಿಯಲ್ಲ. ಈವತ್ತಿನ ದಿವಸ ಕರೋನ ಸಂದರ್ಭದಲ್ಲಿ ಹೆಂಡದ ಅಂಗಡಿಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಯಾವಾಗ ಅಂಗಡಿ ತೆಗೀತಾರೆ ಯಾವಾಗ, ಕುಡಿಯೋಣ ಅಂತ. ಅವರಿಗೆ ಈ ಮಾಧ್ಯಮದವರು ಹೇಳುವುದು ದೂರ ದೂರ ನಿಂತುಕೊಳ್ಳಿ ಅಂತ. ಇವರ ಮಾತು ಕೇಳ್ತಾರೇನ್ರಿ ಕುಡಿಯುವ ಆತುರದಲ್ಲಿ ಇರುವಂತಹ ಜನ?

ಅಂಗಡಿ ತೆಗಯಬೇಡಿ ಅಂತ ಹೇಳುವುದು ಮಾದ್ಯಮದವರ ಕರ್ತವ್ಯವಾಗಿತ್ತು. ಯಾಕೆಂದರೆ ಅದರಿಂದ ಅನಾಹುತ ಆಗುತ್ತೆ, ಕರೋನ ಮತ್ತೆ ಜಾಸ್ತಿ ಆಗುತ್ತೆ ಅಂತ ಹೇಳಬೇಕಾಗಿತ್ತೆ ಹೊರೆತು, ಇವರು ತಿಳುವಳಿಕೆ ಕೊಡುವಂತಹ ರೀತಿಯಲ್ಲಿ ಅಲ್ಲ. ಈ ಮಾಧ್ಯಮದವರು ಏನೇನೋ ಮಾತಾಡ್ತಾರೆ, ಆದರೆ ಇದು ಸರಿ ಅಲ್ಲ. ನೀವು ದೂರ ದೂರ ನಿಂತಿಕೊಳ್ಳಿ ಅಂತ ಮಾತು ಬೇರೆ ಸಂದರ್ಭದಲ್ಲಿ ಹೇಳಲಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೆಂಡದಂಗಡಿ ಹತ್ತಿರ ನೀವು ಉಪದೇಶ ಮಾಡ್ತಿದೀರಿ. ಇದು ಆಗುತ್ತೇನ್ರಿ? ಇದು ಆಗದೇ ಇರುವಂತಹದು. ಈವತ್ತು ಕುಡಿಯಲು ನೂಕು ನುಗ್ಗಲು ಮಾಡಿದ್ದರಿಂದ ಪೋಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಆದ್ದರಿಂದ ನೀವು ವ್ಯವಹಾರಿಕವಾಗಿ ನಡೀಬೇಕು. ಈವತ್ತು ಸಮಸ್ಯೆ ಏನಿದೆ ಅದರ ಬಗ್ಗೆ ಪರಿಗಣಿಸಬೇಕು.

ಕರೊನ ಕಾರಣದಿಂದ ಈಗ ಜನ ಕುಡಿಯುವುದನ್ನು ನಿಲ್ಲಿಸಿದ್ದಾರೆ. ಯಾರೋ ಕುಡುಕರು ತುಂಬಾ ದಿನಾ ಕುಡೀದೇ ಇದ್ದರೆ ಆಗುವುದೇ ಇಲ್ಲ ಅನ್ನುವ ಜನರಿಗೆ ಬೇಕಾದರೆ ಪರ್ಮಿಟ್ಟು ಕೊಡಿ. ಆದರೆ ಸಾಮನ್ಯ ಜನರು ಕುಡಿಯುವುದನ್ನು ಬಿಡುವುದಕ್ಕೆ ತಯಾರು ಇರಬೇಕಾದ್ರೆ, ಅವರುಗಳಿಗೆ ಅಂಗಡಿಗಳು ಇಲ್ಲದೇ ಇರುವ ಹಾಗೆ ಮಾಡಿದರೆ ಬಿಟ್ಟೇ ಬಿಡ್ತಾರೆ… ಗುಜರಾತ್ ನಲ್ಲಿ ಈ ಕೆಲಸ ಮಾಡಿದ್ದಾರೆ. ತುಂಬಾ ಕುಡಿಯುವ ಚಟ ಇರುವ ಬೆರಳೆಣಿಕೆಯಷ್ಟು ಕುಡಕರಿಗೆ ಪರ್ಮಿಟ್ ಕೊಟ್ಟಿದ್ದಾರೆ, ಉಳಿದವರಿಗೆ ಅಂಗಡಿಗಳಿಲ್ಲ.

ಆ ರೀತಿಯ ವ್ಯವಸ್ಥೆ ಇಲ್ಲಿ ಆಗಬೇಕೇ ಹೊರೆತು ಸಾಲಾಗಿ ನಿಲ್ಲಿಸಿ ಲಾಠಿ ಚಾರ್ಜ್ ಆಗುವಂತೆ ಮಾಡುವುದು ವಿವೇಕವಲ್ಲ. ರೆಡ್ ಜೋನ್‌ನಲ್ಲಿ ಇರುವ ಕುಡುಕರು ಅಲ್ಲಿ ಕುಡಿತದ ಅಂಗಡಿಗಳು ಇಲ್ಲವಾದ್ದರಿಂದ ಕುಡಿತದ ಅಂಗಡಿಗಳು ತೆಗೆದಿರುವ ಬಡಾವಣೆಗಳಿಗೆ ನುಗ್ಗಿ ಬರುತ್ತಿದ್ದಾರೆ. ಮೊದಲು ಅದನ್ನು ತಡೆಗಟ್ಟಿ ಎಂದು ಪೋಲಿಸರಿಗೆ ಮತ್ತು ಮಾಧ್ಯಮಗಳಿಗೆ ಮನವಿ ಮಾಡಿಕೊಳ್ಳುತ್ತೇನೆ.

ಸರ್ಕಾರ ಆತುರದಲ್ಲಿ ಕುಡಿತದ ಅಂಗಡಿಗಳನ್ನು ತೆರೆಯುವ ಅವಿವೇಕದ ಕೆಲಸವನ್ನು ಮಾಡಬಾರದು.


ಇದನ್ನೂ ಓದಿ: ದೈಹಿಕ ಸೌಂದರ್ಯ & ಧಾರ್ಮಿಕ ನಂಬಿಕೆ: ಆದರ್ಶ ಹುಡುಗಿಯ ಕುರಿತು ಗೌರಿ ಲಂಕೇಶ್‌ ಬರಹ


ನಮ್ಮ ಇಂಗ್ಲಿಷ್ ವೆಬ್ಸೈಟಿಗೆ ಭೇಟಿ ನೀಡಿ

https://gaurilankeshnews.com/


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...