Homeಮುಖಪುಟಲಾಕ್‌ಡೌನ್ ಆನ್ ಆಫ್ ಮಾಡುವ ಸ್ವಿಚ್ ಅಲ್ಲ: ಲಾಕ್‌ಡೌನ್ ನಂತರದ ಕಾರ್ಯತಂತ್ರ ತಿಳಿಸಿ: ರಾಹುಲ್ ಗಾಂಧಿ

ಲಾಕ್‌ಡೌನ್ ಆನ್ ಆಫ್ ಮಾಡುವ ಸ್ವಿಚ್ ಅಲ್ಲ: ಲಾಕ್‌ಡೌನ್ ನಂತರದ ಕಾರ್ಯತಂತ್ರ ತಿಳಿಸಿ: ರಾಹುಲ್ ಗಾಂಧಿ

- Advertisement -
- Advertisement -

ಮೇ 17 ರಂದು ಕೊರೊನಾ ಲಾಕ್‌ಡೌನ್ ಮುಕ್ತಾಯಗೊಂಡ ಮೇಲೆ ದೇಶ ಮತ್ತು ಆರ್ಥಿಕತೆಯನ್ನು ತೆರೆಯುವ ಮುನ್ನ ಕೇಂದ್ರ ಸರ್ಕಾರ ತನ್ನ ಕಾರ್ಯತಂತ್ರದ ಬಗ್ಗೆ ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

“ಕೇಂದ್ರ ಸರ್ಕಾರ ತನ್ನ ಕಾರ್ಯಗಳ ಬಗ್ಗೆ ಸ್ವಲ್ಪ ಪಾರದರ್ಶಕತೆಯನ್ನು ನೀಡಬೇಕಾಗಿದೆ. ಲಾಕ್ ಡೌನ್ ತೆರವುಗೊಳಿಸಿದಾಗ, ಅದರ ಮಾನದಂಡಗಳು ಯಾವುವು, ನಿಜವಾಗಿಯೂ ತೆರೆಯಲು ಪ್ರಾರಂಭಿಸುವ ಮೊದಲು ಅವರು ಬಯಸಿದ್ದು ಯಾವುವು ಎಂದು ನಾವು ತಿಳಿದುಕೊಳ್ಳಬೇಕಾಗಿದೆ”ಎಂದು ಗಾಂಧಿ ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ನೀವು ಸ್ವಿಚ್ ಆನ್ ಮಾಡಿದ ಕೂಡಲೆ ಅದು ಹೋಗಲು ಲಾಕ್ ಡೌನ್ ಒಂದು ಕೀಲಿಯಲ್ಲ. ಇದೆಲ್ಲ ಸರಿಯಾಗಲು ಹಲವಾರು ಸಂಗತಿಗಳ ಅಗತ್ಯವಿದೆ. ಇದಕ್ಕೆ ಮಾನಸಿಕ ಬದಲಾವಣೆಯ ಅಗತ್ಯವಿದೆ. ಸರ್ಕಾರ ಇದು ಆನ್-ಆಫ್ ಸ್ವಿಚ್ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ರಾಹುಲ್ ಹೇಳಿದರು.

ಕೊರೊನಾ ವೈರಸ್ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ಈ ಸೋಂಕು ವಯಸ್ಸಾದವರಿಗೆ, ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಇದು ಅಪಾಯಕಾರಿ. ಆದರೆ ಅದನ್ನು ಹೊರತುಪಡಿಸಿ ಬೇರೆ ಜನರಿಗೆ ಇದು ಅಪಾಯಕಾರಿ ರೋಗವಲ್ಲ. ಆದ್ದರಿಂದ ನಾವು ಜನರ ಮನಸ್ಸಿನಲ್ಲಿ ಮಾನಸಿಕ ಬದಲಾವಣೆಯನ್ನು ಮಾಡಬೇಕಾಗಿದೆ. ಜನರು ಈಗ ತುಂಬಾ ಭಯಭೀತರಾಗಿದ್ದಾರೆ. ಸರ್ಕಾರ ಲಾಕ್ ಡೌನ್ ತೆರೆಯಲು ಬಯಸಿದರೆ, ಈ ಭಯವನ್ನು ಆತ್ಮವಿಶ್ವಾಸದ ಭಾವನೆಯನ್ನಾಗಿ ಪರಿವರ್ತಿಸಬೇಕಾಗುತ್ತದೆ”ಎಂದು ಹೇಳಿದರು.


ಇದನ್ನೂ ಓದಿ: ನನ್ನ ಸಹೋದರರ ಸಾವಿನ ಸುದ್ದಿಯಿಂದ ಆಘಾತಗೊಂಡಿದ್ದೇನೆ: ರಾಹುಲ್ ಗಾಂಧಿ


ವಿಡಿಯೋ ನೋಡಿ:  Canada: Indian man loses his job over Islamophobic Tweet


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

0
ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ...