Homeಮುಖಪುಟಪ್ರಕರಣವನ್ನು ದೆಹಲಿ ಅಥವಾ ಮುಂಬೈಗೆ ವರ್ಗಾಹಿಸಲು ಹತ್ರಾಸ್ ಸಂತ್ರಸ್ತ ಕುಟುಂಬದ ಒತ್ತಾಯ

ಪ್ರಕರಣವನ್ನು ದೆಹಲಿ ಅಥವಾ ಮುಂಬೈಗೆ ವರ್ಗಾಹಿಸಲು ಹತ್ರಾಸ್ ಸಂತ್ರಸ್ತ ಕುಟುಂಬದ ಒತ್ತಾಯ

ಹತ್ರಾಸ್‌ನಲ್ಲಿ ಕೆಲವೇ ದಲಿತ ಕುಟುಂಬಗಳಿದ್ದು, ಪ್ರಕರಣ ನಡೆದಾಗಿನಿಂದ ಮೇಲ್ಜಾತಿ ಠಾಕೂರರಿಂದ ಬೆದರಿಕೆಗಳು ಬರುತ್ತಿರುವುದರಿಂದ ಇನ್ನು ಹೆಚ್ಚಿನ ರಕ್ಷಣೆ ನೀಡಬೇಕೆಂದು ಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

- Advertisement -
- Advertisement -

ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಹತ್ರಾಸ್ ಯುವತಿಯ ಕುಟುಂಬವು ಪ್ರಕರಣವನ್ನು ಉತ್ತರ ಪ್ರದೇಶದಿಂದ ಬೇರೆಡೆಗೆ ವರ್ಗಾಯಿಸಲು ಒತ್ತಾಯಿಸಿದೆ. ಪ್ರಕರಣವನ್ನು ದೆಹಲಿ ಅಥವಾ ಮುಂಬೈಗೆ ವರ್ಗಾಹಿಸಲು ಹತ್ರಾಸ್ ಸಂತ್ರಸ್ತ ಕುಟುಂಬ ಅಲಹಾಬಾದ್ ಹೈಕೋರ್ಟ್‌ನಲ್ಲಿ ಒತ್ತಾಯಿಸಿದೆ ಎಂದು ಅವರ ಪರ ವಕೀಲೆ ಸೀಮಾ ಕುಶ್ವಾಹ ತಿಳಿಸಿದ್ದಾರೆ.

ಪ್ರಕರಣದ ತನಿಖೆ ನಡೆಯುತ್ತಿರುವಾಗ ಅದನ್ನು ಸಾರ್ವಜನಿಕವಾಗಿ ವರದಿ ಮಾಡಬಾರದು, ಪ್ರಕರಣವನ್ನು ರಾಜ್ಯದಿಂದ ಬೇರೆಡೆಗೆ ವರ್ಗಾಹಿಸಬೇಕು ಮತ್ತು ತಮ್ಮ ಮಗಳಿಗೆ ನ್ಯಾಯ ಸಿಗುವವರೆಗೂ ಚಿತಾಭಸ್ಮ ಬಿಡುವುದಿಲ್ಲ ಎಂದು ಕುಟುಂಬ ನಿರ್ಧರಿಸಿದೆ.

ಅಲಹಾಬಾದ್ ಹೈಕೋರ್ಟ್ ನಿನ್ನೆ ಪ್ರಕರಣ ವಿಚಾರಣೆ ನಡೆಸಿ ಉತ್ತರ ಪ್ರದೇಶದ ಆಡಳಿತ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಸೆಪ್ಟಂಬರ್ 14 ರಂದು ನಾಲ್ವರು ಮೇಲ್ಜಾತಿ ಯುವಕರಿಂದ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆಗೊಳಗಾಗಿದ್ದ ದಲಿತ ಯುವತಿ ಮೃತಪಟ್ಟಾಗ ಕುಟುಂಬದವರಿಗೆ ಆಕೆಯ ಮುಖ ನೋಡಲು ಸಹ ಅವಕಾಶ ಕೊಡದೇ, ಪೊಲೀಸರೇ ಸುಟ್ಟು ಹಾಕಿದ್ದು ಏಕೆ? ಒಂದು ವೇಳೆ ನಿಮ್ಮ ಮಗಳು ಮೃತಪಟ್ಟರೆ ಆಕೆಯನ್ನು ಇದೇ ರೀತಿ ಅಂತ್ಯಕ್ರಿಯೆ ಮಾಡುತ್ತೀರಾ? ಎಂದು ಕೋರ್ಟ್ ಪ್ರಶ್ನಿಸಿದೆ.

ಹತ್ರಾಸ್‌ನಲ್ಲಿ ಕೆಲವೇ ದಲಿತ ಕುಟುಂಬಗಳಿದ್ದು, ಪ್ರಕರಣ ನಡೆದಾಗಿನಿಂದ ಮೇಲ್ಜಾತಿ ಠಾಕೂರರಿಂದ ಬೆದರಿಕೆಗಳು ಬರುತ್ತಿರುವುದರಿಂದ ಇನ್ನು ಹೆಚ್ಚಿನ ರಕ್ಷಣೆ ನೀಡಬೇಕೆಂದು ಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.

ಜಿಲ್ಲಾ ಆಡಳಿತವು ಮಧ್ಯರಾತ್ರಿಯಲ್ಲಿ ಕುಟುಂಬದ ಅನುಪಸ್ಥಿತಿಯಲ್ಲಿ ಶವ ಸುಟ್ಟ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದೆ. ಆ ಸಂದರ್ಭದಲ್ಲಿ ಸಂತ್ರಸ್ತ ಯುವತಿಯ ಸಹೋದರ ಮತ್ತು ಪೋಷಕರನ್ನು ಕೂಡಿಹಾಕಲಾಗಿತ್ತು. ಅವರು ತಮ್ಮ ಮಗಳ ದೇಹವನ್ನು ತಮಗೆ ನೀಡಬೇಕೆಂದು ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ಶವ ನೀಡದೇ, ಮಧ್ಯರಾತ್ರಿಯಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೆ ವಿರುದ್ಧವಾಗಿ “ಮಧ್ಯರಾತ್ರಿಯಲ್ಲಿ ಅಂತ್ಯಸಂಸ್ಕಾರ ಮಾಡಲು ನಮಗೆ ರಾಜ್ಯ ಸರ್ಕಾರದಿಂದ ಯಾವುದೇ ಒತ್ತಡ ಬಂದಿರಲಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಆ ಕ್ರಮ ತೆಗೆದುಕೊಳ್ಳಬೇಕಾಯಿತು” ಎಂದು ಹತ್ರಾಸ್ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಸರ್ ವಾದಿಸಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋರ್ಟ್, “ಸಂತ್ರಸ್ತ ಯುವತಿ ಬಡವರಾಗಿರುವ ಬದಲು ಶ್ರೀಮಂತ ಕುಟುಂಬಕ್ಕೆ ಸೇರಿದ್ದರೆ ನೀವು ಇದೇ ರೀತಿ ಅಂತ್ಯಕ್ರಿಯೆ ಮಾಡುತ್ತಿದ್ದೀರಾ?” ಎಂದು ಪ್ರಶ್ನಿಸಿದೆ.

ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯವು ನವೆಂಬರ್ 02ಕ್ಕೆ ಮುಂದೂಡಿದೆ. ನಿನ್ನೆಯ ವಿಚಾರಣೆಗೆ ಸಂತ್ರಸ್ತ ಕುಟುಂಬವನ್ನು ಭಾರೀ ಭದ್ರತೆಯಲ್ಲಿ ಲಖನೌಗೆ ಕರೆತರಲಾಗಿತ್ತು.


ಇದನ್ನೂ ಓದಿ: ಹತ್ರಾಸ್: ಶವ ಸುಟ್ಟಿದ್ದನ್ನು ಸುಪ್ರೀಂ‌ನಲ್ಲಿ ಸಮರ್ಥಿಸಿಕೊಂಡ ಯುಪಿ ಸರ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...