ಎಲ್‌ಪಿಜಿ ಬೆಲೆ ಏರಿಕೆ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಸರ್ಕಾರದ ಅಭಿವೃದ್ಧಿಯ ಮಾತುಗಳಿಂದ ಜನರು ದೂರವಿದ್ದು, ಲಕ್ಷಾಂತರ ಕುಟುಂಬಗಳು ‘ಒಲೆ’ಯನ್ನು ಬಳಸಲು ಒತ್ತಾಯಿಸಲಾಗಿದೆ’ ಎಂದು ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಬೆಲೆ ಏರಿಕೆ ಎಂಬ ಹ್ಯಾಶ್‌ಟ್ಯಾಗ್ ಬಳಸಿ ‘ಮೋದಿಜಿ ಅವರ ಅಭಿವೃದ್ಧಿ ವಾಹನವು ರಿವರ್ಸ್ ಗೇರ್‌ನಲ್ಲಿದೆ ಹಾಗೂ ಅದರ ಬ್ರೇಕ್‌ಗಳು ಸಹ ವಿಫಲವಾಗಿವೆ’ ಎಂದು ರಾಹುಲ್‌ಗಾಂಧಿಯವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ವಾಹನವು ‘ರಿವರ್ಸ್ ಗೇರ್’ನಲ್ಲಿದೆ. ಅಭಿವೃದ್ಧಿಯ ವಾಕ್ಚಾತುರ್ಯದಿಂದ ಮೈಲಿಗಳಷ್ಟು ದೂರದಲ್ಲಿ, ಲಕ್ಷಾಂತರ ಕುಟುಂಬಗಳು ’ಒಲೆ’ಯನ್ನು ಬಳಸಲು ಒತ್ತಾಯಿಸಲಾಗಿದೆ’ ಎಂದು ಅವರು ಕುಟುಕಿದ್ದಾರೆ.
विकास के जुमलों से कोसों दूर,
लाखों परिवार चूल्हा फूंकने पर मजबूर।मोदी जी के विकास की गाड़ी रिवर्स गियर में है और ब्रेक भी फ़ेल हैं।#PriceHike pic.twitter.com/IwEUBUe0un
— Rahul Gandhi (@RahulGandhi) November 6, 2021
ಸುದ್ದಿ ವರದಿಯೊಂದರ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಅವರು ‘ಸಮೀಕ್ಷೆಯೊಂದರ ಪ್ರಕಾರ, ಗ್ರಾಮೀಣ ಪ್ರದೇಶದ ಶೇ.42 ರಷ್ಟು ಜನರು ಅಡುಗೆ ಮಾಡಲು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವುದನ್ನು ನಿಲ್ಲಿಸಿದ್ದು, ಉರುವಲು ಬಳಸುವುದಕ್ಕೆ ಹಿಂದಿರುಗಿದ್ದಾರೆ’ ಎಂದಿದ್ದಾರೆ.
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ಹಣದುಬ್ಬರದ ವಿಷಯದ ಬಗ್ಗೆ ಸರ್ಕಾರವನ್ನು ಟೀಕಿಸಿದ್ದಾರೆ.
ಇದನ್ನು ಓದಿ: ಕೆಲವೇ ತಿಂಗಳಲ್ಲಿ ಉತ್ತರಾಖಂಡ ಚುನಾವಣೆ: ಶಂಕರಾಚಾರ್ಯ ಪ್ರತಿಮೆ ಉದ್ಘಾಟಿಸಿ ರಾಮಮಂದಿರದ ಬಗ್ಗೆ ಉಲ್ಲೇಖಿಸಿದ ಮೋದಿ



ಮೋದಿಯವರ ವಾಹನ ರಿವರ್ಸ್ ನಲ್ಲಿ ಇದ್ದರೂ ಗಾಡಿ ಮಾತ್ರ ಕಂಡೀಷನ್ ನಲ್ಲಿ ನಡಿತಿದೆ ,ಆದರೆ ರಾಹುಲ್ ಗಾಂಧಿ (ಸ್ವ ಘೋಷಿತ ಗಾಧಿ) ಗಾಡಿ ಗುಜರಿಗೆ ಹೋಗಿದ್ದು ,ನಿರುಪಯುಕ್ತ ವಾಗಿದೆ .