Homeಮುಖಪುಟಹೈದ್ರಾಬಾದ್ ಕರ್ನಾಟಕದ ಮೇಲೆ ನಡೆಯುತ್ತಿದೆ ನಿರಂತರ ವಂಚನೆ : ಡಾ.ರಝಾಕ ಉಸ್ತಾದ

ಹೈದ್ರಾಬಾದ್ ಕರ್ನಾಟಕದ ಮೇಲೆ ನಡೆಯುತ್ತಿದೆ ನಿರಂತರ ವಂಚನೆ : ಡಾ.ರಝಾಕ ಉಸ್ತಾದ

ಯಾವುದೇ ಒಂದು ಸರಕಾರ ತನ್ನದೇ ರಾಜ್ಯದ ಒಂದು ಪ್ರದೇಶದ ಜನರಿಗೆ ಇಷ್ಟೊಂದು ಅನ್ಯಾಯ ಮಾಡಿದೆ ಎಂದರೆ ನಿಜವಾಗಿಯೂ ಇದು ಪ್ರಜಾಪ್ರಭುತ್ವ ಸರಕಾರವೇ ಎಂದು ಪ್ರಶ್ನಿಸುತ್ತಿದ್ದಾರೆ ಹೈ.ಕ ದ ಹೋರಾಟಗಾರರಾದ ಡಾ.ರಝಾಕ ಉಸ್ತಾದ್‌..

- Advertisement -
- Advertisement -

ಹೈದ್ರಾಬಾದ ಕರ್ನಾಟಕ ಪ್ರದೇಶವು ರಾಜ್ಯದ ಈಶಾನ್ಯ ಭಾಗದಲ್ಲಿದ್ದು, ಕನ್ನಡ ಭಾಷೆ ಮಾತನಾಡುವ ಜನರಿಂದ ಆವೃತವಾಗಿರುವ ಈ ಪ್ರದೇಶವು 1724 – 1948ರ ವರೆಗೆ ಹೈದ್ರಾಬಾದ ನಿಜಾಮರ ಆಳ್ವಿಕೆಯಲ್ಲಿ ಇತ್ತು. 1948 ರಲ್ಲಿ ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿದ ನಂತರ ಈ ಪ್ರದೇಶವು 1956ರ ವರೆಗೆ ಹೈದ್ರಾಬಾದ ರಾಜ್ಯದ ಭಾಗವಾಗಿತ್ತು. ಹೈದ್ರಾಬಾದ ಕರ್ನಾಟಕ ಪ್ರದೇಶವು ಬೀದರ್, ಕಲಬುರಗಿ, ಯಾದಗೀರ್, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳು ಹಾಗೂ ಬಳ್ಳಾರಿ ಜಿಲ್ಲೆ ಸೇರಿಕೊಂಡು ಇರುತ್ತದೆ. ಹೈದ್ರಾಬಾದ ಕರ್ನಾಟಕ ಪ್ರದೇಶವು ರಾಷ್ಟ್ರದ ಎರಡನೆಯ ಅತೀ ದೊಡ್ಡ ಶುಷ್ಕ ಪ್ರದೇಶವಾಗಿರುತ್ತದೆ.

ಹೈದ್ರಾಬಾದ ಕರ್ನಾಟಕ ಪ್ರದೇಶದ ಭೌಗೋಳಿಕ ವಿಸ್ತೀರ್ಣವು ರಾಜ್ಯದ ಒಟ್ಟಾರೆ ಭೌಗೋಳಿಕ ವಿಸ್ತೀರ್ಣದ ಪ್ರತಿಶತ 23 ರಷ್ಟಿರುತ್ತದೆ. ಪ್ರದೇಶದ ಸಾಗುವಳಿಯಾಗದ ಕೇತ್ರದ ವಿಸ್ತೀರ್ಣವು ರಾಜ್ಯದ ಒಟ್ಟಾರೆ ಸಾಗುವಳಿಯಾಗದ ವಿಸ್ತೀರ್ಣದ ಪ್ರತಿಶತ 23 ರಷ್ಟಿದೆ. ಪ್ರದೇಶದ ಜನಸಂಖ್ಯೆಯು ರಾಜ್ಯದ ಜನಸಂಖ್ಯೆಯ ಪ್ರತಿಶತ 18 ರಷ್ಟಿರುತ್ತದೆ, ರಾಜ್ಯದ ಪರಿಶಿಷ್ಟ ಜಾತಿಯವರ ಜನಸಂಖ್ಯೆಯ ಪೈಕಿ ಪ್ರತಿಶತ 24 ರಷ್ಟಿದೆ, ಪರಿಶಿಷ್ಟ ವರ್ಗದವರ ಜನಸಂಖ್ಯೆಯ ಪೈಕಿ ಪ್ರತಿಶತ 34 ರಷ್ಟಿದೆ, ರಾಜ್ಯದ ಸಾಕ್ಷರತೆ ಪ್ರಮಾಣ ಪ್ರತಿಶತ 75.36 ರ ಎದುರು ಪ್ರದೇಶದ ಸಾಕ್ಷರತಾ ಪ್ರಮಾಣವು ಪ್ರತಿಶತ 64.45 ರಷ್ಟಿದೆ.

ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಅನುಚ್ಛೇದ 371ರ ತಿದ್ದುಪಡಿಗಾಗಿ ಹಲವು ದಶಕಗಳ ಕಾಲ ಈ ಪ್ರದೇಶದ ಜನತೆ ನಿರಂತರ ಹೋರಾಟ ಮಾಡಿದ್ದು ಈಗ ಇತಿಹಾಸ. ದಶಕಗಳ ಬೇಡಿಕೆಗೆ ಸ್ಪಂದಿಸಿದ ಅಂದಿನ ಯುಪಿಎ ಸರಕಾರ 2012ರ ಡಿಸೆಂಬರ್ ತಿಂಗಳಲ್ಲಿ ಸಂವಿಧಾನದ ಅನುಚ್ಛೇದ 371ಕ್ಕೆ ತಿದ್ದುಪಡಿ ತಂದು ಕರ್ನಾಟಕ ರಾಜ್ಯದ ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಅನುಚ್ಛೇದ 371ಜೆ ಅಡಿಯಲ್ಲಿ ಸೇರಿಸಲಾಗಿದೆ. ಸಂವಿಧಾನದ ಅನುಚ್ಛೇದ 371ಜೆ ಅಡಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆಯಲ್ಲದೇ ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಮಂಡಳಿ ರಚಿಸಲು ಅವಕಾಶ ಮಾಡಿಕೊಡಲಾಗಿದೆ.

ಅದರಂತೆ, 2013 ನವೆಂಬರ್ ತಿಂಗಳಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಆದೇಶ, 2013ರ ಕಾಯ್ದೆಯ ಮೂಲಕ ಈ ಪ್ರದೇಶದಲ್ಲಿ ಮಂಡಳಿ ರಚಿಸಲಾಗಿದೆ. 2013-14ನೇ ಸಾಲಿನ ಸೀಮಿತ ಅವಧಿಗೆ 150 ಕೋ.ರೂ. ಅನುದಾನ ನೀಡಿ ಮಂಡಳಿ ಪ್ರಾರಂಭಿಸಲಾಗಿದೆ. 2014-15ನೇ ಸಾಲಿನಲ್ಲಿ ಬಜೆಟ್ ಮೂಲಕ 600 ಕೋ.ರೂ. ಅನುದಾನ ನಿಗದಿಗೊಳಿಸಲಾಗಿದೆ ಮತ್ತು 24-11-2014ರಂದು ಗುಲ್ಬರ್ಗಾದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಶೇಷವಾಗಿ 400 ಕೋ.ರೂ. ಅನುದಾನ ಒದಗಿಸಲಾಗಿದೆ, ಅಂದರೆ 2014-15 ನೇ ಸಾಲಿಗೆ ಒಟ್ಟು 1000 ಕೋ.ರೂ. ಅನುದಾನ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೀಡಲಾಗಿದೆ. ಅದರಂತೆ 2015-16 ಹಾಗೂ 2016-17ನೇ ಸಾಲಿನ ಬಜೆಟ್‍ನಲ್ಲಿ 1000 ಕೋ.ರೂ. ಅನುದಾನ ಮಂಡಳಿಗೆ ನೀಡಲಾಗಿದೆ. ನಂತರ 2017-18ನೇ ಸಾಲಿನಿಂದ 2019-20ರ ವರೆಗೆ ಪ್ರತಿ ಬಜೆಟ್‍ನಲ್ಲಿ ಸುಮಾರು 1500 ಕೋ.ರೂ. ಅನುದಾನ ಘೋಷಣೆ ಮಾಡಲಾಗಿದೆ.

ಆದರೆ ಸರಕಾರದ ಆರ್ಥಿಕ ವರದಿ 2019-20ನೇ ಸಾಲಿನ ವರದಿಯಲ್ಲಿ 2017-18, 2018-19 ನೇ ಸಾಲಿನಲ್ಲಿ ಕೇವಲ 1000 ಕೋ.ರೂ. ಅನುದಾನ ನೀಡಿರುವ ಮಾಹಿತಿ ನೀಡಿದ್ದು, ಯಾವುದು ಸತ್ಯ, ಯಾವುದು ಸುಳ್ಳು ಎನ್ನುವದು ತಿಳಿಯದಂತ ಪರಿಸ್ಥಿತಿ ಒದಗಿಬಂದಿದೆ. ಸಿದ್ದರಾಮಯ್ಯ ಸರಕಾರ ಹಾಗೂ ಕುಮಾರಸ್ವಾಮಿಯವರ ಸರಕಾರ ಈ ಭಾಗದಲ್ಲಿ ಇಂದಿಗೂ ನಾವು 1500 ಕೋ.ರೂ ಅನುದಾನ ನೀಡಿದ್ದೇವೆ ಎಂದೆ ಪ್ರತಿಪಾದಿಸುತ್ತ ಬಂದಿದ್ದಾರೆ. ಆದರೆ, ಅವರದೇ ಸರಕಾರದ ವರದಿ ಬೇರೆಯದ್ದೇ ಮಾಹಿತಿ ನೀಡುತ್ತಿದೆ. ಇದು ಹೈದ್ರಾಬಾದ ಕರ್ನಾಟಕದ ಜನತೆಗೆ ಮಾಡಿದ ವಂಚನೆ ಎಂದೇ ಹೇಳಬಹುದು.

ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನೀಡಿದ ಮಾಹಿತಿಯಂತೆ ಕಳೆದ ಆರು ವರ್ಷಗಳಲ್ಲಿ ಮಂಡಳಿಗೆ ಹಂಚಿಕೆಯಾದ ಅನುದಾನ 6612.63 ಕೋ.ರೂ., ಸರಕಾರ ತನ್ನ ಆರ್ಥಿಕ ವರದಿಯಲ್ಲಿ ನೀಡಿದ ಅನುದಾನ ಒಟ್ಟು 6253.50 ಕೋ.ರೂ. ಅನುದಾನ ಮಂಜೂರು ಮಾಡಲಾಗಿದೆ. ಆದರೆ, ಕಳೆದ 6 ವರ್ಷಗಳಿಂದ ಬಜೆಟ್‍ನಲ್ಲಿ ಘೋಷಿಸಿದಂತೆ ಮತ್ತು ಗುಲ್ಬರ್ಗಾದಲ್ಲಿ ನಡೆದ 24-11-2014ರ ಸಚಿವಸಂಪುಟದ ನಿರ್ಣಯದ 400 ಕೋ.ರೂ. ಅನುದಾನ ಸೇರಿದಂತೆ ಸುಮಾರು 7650 ಕೋ.ರೂ ಅನುದಾನ ಮಂಡಳಿಗೆ ಹಂಚಿಕೆಯಾಗಬೇಕು. ಆದರೆ, ಯಾವುದೇ ಒಂದು ಸರಕಾರ ತನ್ನದೇ ರಾಜ್ಯದ ಒಂದು ಪ್ರದೇಶದ ಜನರಿಗೆ ಇಷ್ಟೊಂದು ಅನ್ಯಾಯ ಮಾಡಿದೆ ಎಂದರೆ ನಿಜವಾಗಿಯೂ ಇದು ಪ್ರಜಾಪ್ರಭುತ್ವ ಸರಕಾರವೇ ಎಂದು ಕೇಳಬೇಕೆನಿಸಿದೆ.

ಮಂಡಳಿ ನೀಡುತ್ತಿರುವ ಮಾಹಿತಿಗೂ ಸರಕಾರ ಬಜೆಟ್‍ನಲ್ಲಿ ಘೋಷಿಸಿದ ಮಾಹಿತಿಗೂ ಸಾಕಷ್ಟು ವ್ಯತ್ಯಾಸ ಈಗಾಗಲೇ ಗೊಂದಲ ಮೂಡಿಸಿದ ನಡುವೆ ಸರಕಾರದ ಆರ್ಥಿಕ ವರದಿ ಇನ್ನೂ ಅಚ್ಚರಿ ಮೂಡಿಸುವ ಅಂಶವನ್ನು ಗಮನಿಸಿದಲ್ಲಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿಸಲಾಗಿದೆ.

ಕೋಷ್ಠಕದಲ್ಲಿ ವಿವರಿಸಿರುವಂತೆ ರೀತಿ ಸರಕಾರವೇ ಇಷ್ಟೊಂದು ಮೋಸ ಮಾಡುತ್ತಿರುವದರ ಜೊತೆಗೆ ಕಳೆದ ಜುಲೈ 2019ರಿಂದ ಇಲ್ಲಿಯವರೆಗೆ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ನೇಮಿಸದೇ ಇಲ್ಲಿಯವರೆಗೆ ಮಂಡಳಿಯ ಯಾವುದೇ ಸಭೆ ನಡೆಯಲು ಸಾದ್ಯವಾಗದ ರೀತಿ ಸರಕಾರ ನಡೆದುಕೊಂಡಿದೆ, ಈ ನಡುವೆ ಸರಕಾರ ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿರುವದರಿಂದ ಸರಕಾರ ಕಾಗದದಲ್ಲಿ ಮಾತ್ರ ಕಲ್ಯಾಣ ಮಾಡಲು ಹೋಗುತ್ತಿರುವದು ನಾಚಿಕೆಗೇಡಿನ ಸಂಗತಿ. ಒಂದು ಇಡೀ ಆರ್ಥಿಕ ವರ್ಷಕ್ಕೆ ಮಂಡಳಿಗೆ ಅಧ್ಯಕ್ಷರಿಲ್ಲದಂತಾಗಿ ಅಭಿವೃದ್ಧಿ ವೇಗ ಕುಂಠಿತಗೊಂಡಿದೆ. ಇದರ ನಡುವೆ ಸರಕಾರ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರನ್ನು ಆ ಭಾಗದ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಇರುವದನ್ನು ತಿದ್ದುಪಡಿ ಮಾಡಿ ಮಂಡಳಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಆ ಭಾಗದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಒಬ್ಬರು ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಇಬ್ಬರು ವಿಧಾನ ಪರಿಷತ್ ಸದಸ್ಯರು, ಎಂಟು ಜನ ಶಾಸಕರು ಹಾಗೂ ರಾಜ್ಯ ಹಿರಿಯ ಅಧಿಕಾರಿಗಳು ಆ ಮಂಡಳಿಗೆ ಸದಸ್ಯರಾಗಿರುತ್ತಾರೆ. ಇಂತಹ ಮಂಡಳಿಗೆ ಸಾಕಷ್ಟು ಚರ್ಚಿಸಿ, ಈ ಭಾಗದ ಜನರೊಂದಿಗೆ ಸಭೆ-ಚರ್ಚೆ-ಸಂವಾದ ನಡೆಸಿ, ಸಂಘ ಸಂಸ್ಥೆಗಳೊಂದಿಗೆ, ಹೋರಾಟಗಾರರ ಜೊತೆಗೆ ಚರ್ಚಿಸಿ ಒಬ್ಬ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಅಧ್ಯಕ್ಷರನ್ನಾಗಿ ಮಾಡಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧ್ದಿ ಮಂಡಳಿ ಕಾಯ್ದೆಯಲ್ಲಿ ಅವಕಾಶ ಮಾಡಲಾಗಿದೆ. ಯಾರೊಂದಿಗೂ ಚರ್ಚಿಸದೇ ಏಕಾಏಕೀ ಯಾರೊಂದಿಗೂ ಚರ್ಚಿಸದೇ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವದು ಈ ಪ್ರದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಮಂಡಳಿ ದುರ್ಬಲವಾಗಿ 1991 ರಿಂದ 2013 ರ ವರೆಗೆ ಇದ್ದಂತಹ ಮಂಡಳಿಯ ತರಹ ಇದೂ ಕೂಡ ಆಗುತ್ತದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ.

ಈ ಮಂಡಳಿ ಕಳೆದ ಏಳು ವರ್ಷಗಳಲ್ಲಿ ಶಿಕ್ಷಣಕ್ಕಾಗಿ 1519.00 ಕೋ.ರೂ, ಆರೋಗ್ಯ ಕ್ಷೇತ್ರಕ್ಕೆ 316.00 ಕೋ.ರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಕ್ಕೆ 87.00 ಕೋ.ರೂ, ರಸ್ತೆ ಮತ್ತು ಸೇತುವೆಗಳಿಗೆ 3650.00 ಕೋ.ರೂ ಹಾಗೂ ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ 253.00 ಕೋ.ರೂ ಅನುದಾನ ಖರ್ಚು ಮಾಡಲಾಗಿದೆ. ವಿಶೇಷವೆನೆಂದರೆ, ಕಲ್ಯಾಣ ಕರ್ನಾಟಕ ಪ್ರದೇಶವು ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳು ಅಪೌಷ್ಟಿಕತೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿರುವದರಿಂದ ಅಂತಹ ಕ್ಷೇತ್ರಗಳನ್ನು ಗುರುತಿಸಿ ಮಂಡಳಿಯು ಯೋಜನೆ ರೂಪಿಸಬೇಕಿತ್ತು, ಆದರೆ ಮಂಡಳಿಯ ಕಾರ್ಯಕ್ರಮಗಳು ಈ ಭಾಗದಲ್ಲಿ ಕಾಂಕ್ರೀಟ ರಸ್ತೆ ನಿರ್ಮಿಸುವದರಲ್ಲಿಯೇ ಆಸಕ್ತಿವಹಿಸಿರುವದು ಅತ್ಯಂತ ಚಿಂತೆಗೀಡುಮಾಡುತ್ತಿದೆ. ಈ ಭಾಗದ ಪ್ರಗತಿಪರರು, ಹೋರಾಟಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಪ್ರದೇಶದ ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸದೇ ಇದ್ದರೆ ಖಂಡಿತವಾಗಿಯೂ ಮಂಡಳಿಯು ಈ ಭಾಗದ ಅಭಿವೃದ್ದಿ ಶ್ರಮಿಸುತ್ತದೆ ಎನ್ನುವ ವಿಶ್ವಾಸ ಜನರಲ್ಲಿ ಮೂಡಿಸುವುದಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...