Homeಮುಖಪುಟನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಪ್ತಪದಿ ತುಳಿಯಿರಿ: ಇದು ತಮಾಷೆಯಲ್ಲ ಸತ್ಯ

ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಪ್ತಪದಿ ತುಳಿಯಿರಿ: ಇದು ತಮಾಷೆಯಲ್ಲ ಸತ್ಯ

ಈ ಏಳು ಹೆಜ್ಜೆಗಳನ್ನು ಸಾಮಾನ್ಯವಾಗಿ ವೈಯುಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಮನೋಶಾಸ್ತ್ರ ತಜ್ಞರು ಮತ್ತು ವ್ಯಾವಹಾರಿಕ ಸಮಸ್ಯೆಯ ಪರಿಹಾರಕ್ಕೆ ಕಂಪನಿಯ ವ್ಯವಸ್ಥಾಪಕರು ಬಳಸುತ್ತಾರೆ.

- Advertisement -
- Advertisement -

ರೀ ಸ್ವಾಮಿ, ಮದುವೆ ಮಾಡಿಕೊಳ್ಳುವುದರಿಂದ ಒಂದು ಸಮಸ್ಯೆ ಬಗೆಹರಿದರೆ ಇನ್ನೇಳು ಸಮಸ್ಯೆ ಹುಟ್ಟಿಕೊಳ್ಳುತ್ತವಲ್ಲಾ, ಅದಕ್ಕೇನು ಎಂದು ನೀವು ಕೇಳಬಹುದು, ಕೇಳಿ. ಆದರೆ ನಾನು ಮದುವೆಯ ಸಪ್ತ-ಪದಿಯ ಬಗ್ಗೆ ಹೇಳಲು ಹೊರಟಿಲ್ಲ. ನಾನು ಹೇಳುತ್ತಿರುವುದು ಸಮಸ್ಯೆಗಳ ಪರಿಹಾರಕ್ಕೆ ಇರುವ ಏಳು ಸರಳ ಹೆಜ್ಜೆಗಳ ಬಗ್ಗೆ. ಎಲ್ಲಾ ಸಮಸ್ಯೆಗಳಿಗೂ ಇದೇ ಪರಿಹಾರ ಎಂದು ಹೇಳುವಷ್ಟು ಧಾರ್ಷ್ಟ್ಯತೆ ನನಗಿಲ್ಲ. ಆದರೆ ಬಹುತೇಕ ಸಮಸ್ಯೆಗೆ ಇದರಿಂದ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆ ಇದೆ. ಯಾವುದೋ ಸಮಸ್ಯೆ ಉದ್ಭವಿಸಿದಾಗ, ನಮಗೇನೂ ತೋಚದಿದ್ದಾಗ, ವಿಷಯ ಜ್ಞಾನ ಇಲ್ಲದಿದ್ದಾಗ, ಪರಿಣಿತರ ಸಲಹೆ ಪಡೆಯುವುದು ಸ್ವಾಭಾವಿಕ ಮತ್ತು ಅವಶ್ಯಕ. ಆದರೆ, ಕೊನೆಯಲ್ಲಿ ಅವರು ಕೊಟ್ಟ ಸಲಹೆಯನ್ನು ಪಾಲಿಸಬೇಕೋ ಬೇಡವೋ ಆ ನಿರ್ಧಾರ ನಾವೇ ಮಾಡಬೇಕಾಗುತ್ತದೆ.

ಇತರರಿಗೆ ಬೇಕೋ, ಬೇಡವೋ, ಕೇಳದೇ ಪುಗಸಟ್ಟೆ ಸಲಹೆ ನೀಡುವುದು ನಮ್ಮೆಲ್ಲರ ಹವ್ಯಾಸ. ಅದೇ ರೀತಿ ಸಲಹೆ ಇತರರಿಂದ ಬಂದಾಗ ನಮಗೆ ಕೋಪ ಬರುವುದೂ ಸಹಜ. ಆದ್ದರಿಂದ ಸಮಸ್ಯೆ ಪರಿಹಾರಕ್ಕೆ ತಜ್ಞರ ಸಲಹೆ ಪಡೆಯುವುದು ಅವಶ್ಯಕ. ಈ ಕೆಳಕಂಡ ಸಪ್ತಪದಿಯನ್ನು ನೀವು ಪಾಲಿಸಿದ್ದೇ ಆದಲ್ಲಿ ತಜ್ಞರ ಸಲಹೆ ಪಡೆಯುವುದೂ ಸಹ ಸುಲಭ ಆಗುತ್ತದೆ. ಆದರೆ ಮೊದಲೇ ಹೇಳಿದಂತೆ ಸಲಹೆಯನ್ನು ಅನುಷ್ಠಾನಗೊಳಿಸುವುದು ಮತ್ತು ಸಲಹೆ ಪರಿಣಾಮಕಾರಿಯಾಗದೇ ಇದ್ದಲ್ಲಿ, ಅದನ್ನು ಪಾಲಿಸಿದ್ದಕ್ಕಾಗಿ ಜವಾಬ್ದಾರಿ ಹೊರುವುದು ನಿಮ್ಮ ಕರ್ತವ್ಯವೇ ಆಗಿರುತ್ತದೆ. ಈ ಏಳು ಹೆಜ್ಜೆಗಳನ್ನು ಸಾಮಾನ್ಯವಾಗಿ ವೈಯುಕ್ತಿಕ ಸಮಸ್ಯೆಗಳನ್ನು ಬಗೆಹರಿಸಲು ಮನೋಶಾಸ್ತ್ರ ತಜ್ಞರು ಮತ್ತು ವ್ಯಾವಹಾರಿಕ ಸಮಸ್ಯೆಯ ಪರಿಹಾರಕ್ಕೆ ಕಂಪನಿಯ ವ್ಯವಸ್ಥಾಪಕರು ಬಳಸುತ್ತಾರೆ.

ಸಪ್ತ-ಪದಿ ಪರಿಹಾರಗಳು

  1. ಸಮಸ್ಯೆ ಏನೆಂದು ಸರಿಯಾಗಿ ಅರ್ಥ ಮಾಡಿಕೊಳ್ಳಿ: ಮುಕ್ಕಾಲು ಮೂರು ಪಾಲು ನಮಗೆ ಸಮಸ್ಯೆ ಏನೆಂದೇ ತಿಳಿದಿರುವುದಿಲ್ಲ. ಹಾಗಾಗಿ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಿ ಬರೆದುಕೊಳ್ಳಿ. ಸಮಸ್ಯೆಗೂ ಅದರ ಲಕ್ಷಣಕ್ಕೂ ವ್ಯತ್ಯಾಸವಿರುತ್ತದೆ. ಉದಾಹರಣೆ ನಿಮಗೆ ತಲೆ ನೋಯುತ್ತಿದೆ ಅಥವಾ ಆಗ್ಗಾಗ್ಗೆ ತಲೆನೋವು ಬರುತ್ತಿರುತ್ತದೆ ಎಂದರೆ ತಲೆನೋವು ನಿಮ್ಮ ಸಮಸ್ಯೆ ಅಲ್ಲ, ಅದು ಕೇವಲ ಒಂದು ಲಕ್ಷಣ ಮಾತ್ರ. ಅದಕ್ಕೆ ನಿಜವಾದ ಕಾರಣ ಏನೆಂದು ತಿಳಿದುಕೊಳ್ಳಬೇಕು. ತಲೆನೋವಿಗೆ ಇರುವ ಕಾರಣ ನಿಜವಾದ ಸಮಸ್ಯೆ, ತಲೆನೋವಲ್ಲ. ಮೂಲ ಸಮಸ್ಯೆ ಏನೆಂದು ಸರಿಯಾಗಿ ತಿಳಿದಾಗ ಪರಿಹಾರ ಹುಡುಕುವುದು ಸುಲಭವಾಗುತ್ತದೆ. ಮೂಲ ಸಮಸ್ಯೆ ಹುಡುಕಲು ಮ್ಯಾನೇಜ್ಮೆಂಟ್ ಟೆಕ್ನಿಕ್ನಲ್ಲಿ ರೂಟ್ ಕಾಸ್ ಎನಾಲಿಸಿಸ್ (Management Technique – Root Cause Analysis) ಅಡಿಯಲ್ಲಿ ಫೈವ್-ವೈ (Five Why) ಎಂಬ ಒಂದು ವಿಧಾನ ಅನುಸರಿಸುತ್ತಾರೆ. ಇದರನ್ವಯ ಐದು ಬಾರಿ “ಏಕೆ” ಎಂದು ಪ್ರಶ್ನಿಸುವುದು. ಇದರಿಂದ ಮೂಲ ಸಮಸ್ಯೆಯ ಹತ್ತಿರ ತಲುಪಲು ಅನುಕೂಲವಾಗುತ್ತದೆ. ಸಣ್ಣ ಮಕ್ಕಳಲ್ಲಿ, ಎಲ್ಲವನ್ನೂ ತಿಳಿಯಬೇಕೆಂಬ ಕುತೂಹಲದಿಂದ, ನಾವು ಅವರಿಗೆ ನಾವು ಏನು ಹೇಳಿದರೂ ಅವರು “ಏಕೆ” ಎಂದು ಪ್ರಶ್ನಿಸುವುದನ್ನು ನಾವು ನೋಡಿರಬಹುದು. ಇದು ನೈಸರ್ಗಿಕ ಜಾಣತನದ ಲಕ್ಷಣ. ಇದನ್ನು ಮಕ್ಕಳಲ್ಲಿ ಬೆಳೆಯಲು ಬಿಡಬೇಕು. ನಮ್ಮ ದುರದೃಷ್ಟವೆಂದರೆ ಈ ಚಿಕ್ಕ ಮಕ್ಕಳ ತಿಳಿಯುವ ಕುತೂಹಲದಿಂದ ಬೇಸತ್ತು, ಅವರ ತಲೆಯ ಮೇಲೆ ಮಟ್ಟಿ, ಪ್ರಶ್ನೆಯನ್ನು ಮೊಟಕುಗೊಳಿಸಿ, ಅದೇ ಪಾಠವನ್ನು ಮ್ಯಾನೇಜ್ಮೆಂಟ್ ಟೆಕ್ನಿಕ್ ಎಂದು ಅವರು ಎಂ.ಬಿ.ಎ. ತರಗತಿಗೆ ಬಂದಾಗ ಕಲಿಸಲು ಪ್ರಯತ್ನಿಸುತ್ತೇವೆ.

2. ನಿಮಗೆ ಏನು ಪರಿಹಾರ ಬೇಕಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ: ನಿಮ್ಮ ಪರಿಹಾರದ ಗುರಿ ಖಚಿತವಾಗಿರಬೇಕು ಮತ್ತು ಕೈಗೆಟುಕುವಂತಾಗಿರಬೇಕು. ಪದೇ ಪದೇ ನೆಗಡಿ ಬರುತ್ತಿದೆ ಅಂದರೆ ಅದಕ್ಕೆ ಮೂಗು ಕುಯ್ದುಕೊಳ್ಳುವುದು ಪರಿಹಾರವಲ್ಲ. ನಿಮ್ಮ ಸಮಸ್ಯೆಯ ಲಕ್ಷಣಗಳನ್ನು ಆಧರಿಸಿ ಪರಿಹಾರದ ಗುರಿಯನ್ನೂ ನಿರ್ಧರಿಸಬಹುದು. ಉದಾಹರಣೆಗೆ, ಮೂಗಿನಿಂದ ನೀರು ಸೋರುವುದು ನಿಲ್ಲಬೇಕು, ತಲೆ ಭಾರವಾಗಿರುವುದು ಹಗುರವಾಗಬೇಕು, ದೇಹದ ತಾಪಮಾನ ಸುಸ್ಥಿತಿಗೆ ಬರಬೇಕು, ಇತ್ಯಾದಿ.

3. ಬ್ರೇನ್ ಸ್ಟಾರ್ಮಿಂಗ್: ಸಮಸ್ಯೆಗೆ ಇರುವ ಎಲ್ಲಾ ಉಪಾಯಗಳನ್ನು, ಪರಿಹಾರ ಕೊಡಬಲ್ಲ ವ್ಯಕ್ತಿಗಳನ್ನು, ಸಮಸ್ಯೆಯಿಂದ ಬಾಧಿತರಾದವರನ್ನು ಸಾಧ್ಯವಾದಲ್ಲಿ ಒಂದೆಡೆ ಕಲೆ ಹಾಕಿ. ನಿಮ್ಮ ಟೀಕೆ/ಟಿಪ್ಪಣಿ/ಅನಿಸಿಕೆ/ಉಪಾಯಗಳನ್ನು ತಿಳಿದಷ್ಟು ಮಟ್ಟಿಗೆ, ವಿಸ್ತಾರವಾಗಿ ಬರೆದುಕೊಳ್ಳಿ. ಬೇರೆಯವರಿಂದ ಬಂದ ಸಲಹೆಗಳನ್ನೂ ಅದೇ ಕಾಗದದಲ್ಲಿ ಬರೆಯುತ್ತಾ ಹೋಗಿ. ಅದು ಎಷ್ಟೇ ಮೂರ್ಖತನ ಎನಿಸಿದರೂ ಪರವಾಗಿಲ್ಲ, ಪಟ್ಟಿಯಲ್ಲಿ ಬರೆದುಕೊಳ್ಳಿ.

ಅಮೇರಿಕಾ ದೇಶದಲ್ಲಿ ಕ್ಯಾಂಪ್ಬೆಲ್ ಎಂಬ, ಸಾಕಷ್ಟು ಹೆಸರುವಾಸಿಯಾದ, ಸೂಪ್ ತಯಾರಿಕೆ ಕಂಪನಿ ಇದೆ. ನಿಮಗೆ ತಿಳಿದಂತೆ ವಿದೇಶಿಯರು ಫೋರ್ಕ್-ನೈಫ್-ಸ್ಪೂನ್ (ಮುಳ್ಳು-ಚಾಕು-ಚಮಚ) ಸಂಸ್ಕೃತಿಯವರು, ಊಟಕ್ಕೆ ಮುನ್ನ ಅಥವಾ ಊಟಕ್ಕೆ ಇನ್ನೂ ಸ್ವಲ್ಪ ಸಮಯವಿದೆ, ಅಲ್ಲಿಯವರೆಗೆ ಹೊಟ್ಟೆ ಹಸಿವನ್ನು ನಿಯಂತ್ರಿಸಬಹುದು  ಎಂದು ಹಗುರವಾದ ಆಹಾರವಾಗಿ ಸೂಪ್ ಕುಡಿಯುತ್ತಾರೆ. ಕಂಪನಿಯವರು ಇದರ ಮಾರಾಟ ಹಾಗೂ ಮಾರುಕಟ್ಟೆ ಹೆಚ್ಚಿಸಲು ಸೌಲಭೋಪಾಯಗಳನ್ನು ಹುಡುಕುತಿದ್ದರು. ಅದಕ್ಕಾಗಿ ಏರ್ಪಡಿಸಿದ ಒಂದು ಬ್ರೇನ್ ಸ್ಟಾರ್ಮಿಂಗ್ ಕಾರ್ಯಾಗಾರದಲ್ಲಿ ಬಂದ ಒಂದು ಟೀಕೆ/ಅನಿಸಿಕೆ ಎಂದರೆ “ಸೂಪನ್ನು ಚಮಚದಿಂದ ಕುಡಿಯಬಹುದೇ ವಿನ: ಫೋರ್ಕಿನಿಂದ ಅಲ್ಲ”. ಇದೆಂತಹ ಅಸಂಬದ್ಧ ಟೀಕೆ ಎಂದು ಅನಿಸಿದರೂ ಸಹ ಬ್ರೇನ್ ಸ್ಟಾರ್ಮಿಂಗ್ ಗುಂಪಿನ ನಾಯಕ ಅದನ್ನು ತೆಗೆದುಹಾಕಲಿಲ್ಲ. ಹಾಗಾದರೆ ಸೂಪನ್ನು ಫೋರ್ಕಿನಿಂದ ತಿನ್ನುವಂತಾದರೆ ಅದರಲ್ಲಿ ಏನೋ ಹೊಸತನ ತರಬಹುದು ಎಂದು ನಿರ್ಧರಿಸಿ ತಯಾರಿಸಿದುದೇ “ಚಂಕೀ ಸೂಪ್” ಅಂದರೆ ತಿನ್ನುವ ತುಣುಕುಗಳುಳ್ಳ – ತರಕಾರಿ, ಚಿಕನ್, ಮಟನ್, ಫಿಷ್ ತುಣುಕುಗಳನ್ನು ಜೊತೆಗೂಡಿಸಿದ ಗಟ್ಟಿಯಾದ ಸೂಪ್. ಇದು ಕಂಪನಿಯ ವ್ಯಾಪಾರಕ್ಕೆ ಸಾಕಷ್ಟು ಲಾಭದಾಯಕವಾಯಿತು.

4. ಪರ್ಯಾಯ ಉಪಾಯ/ಮಾರ್ಗಗಳನ್ನು ಹುಡುಕಿ: ಮೇಲೆ ತಿಳಿಸಿದಂತೆ ಪ್ರತಿಯೊಂದು ವಿಧಾನದ ಸಾಧಕ-ಬಾಧಕ/ಪರ-ವಿರುದ್ಧದ ಚರ್ಚೆಯಲ್ಲಿ ಭಾಗವಹಿಸಿ. ಆಗು/ಹೋಗುಗಳನ್ನು ಸರಿಯಾಗಿ ವಿಶ್ಲೇಷಿಸಿ. ನೀವು ಪರಿಣಿತರ ಬಳಿಗೆ ಹೋಗುವ ಮುನ್ನ, ಮೇಲೆ ಹೇಳಿದ ಮೂರು ಹೆಜ್ಜೆ ಈಗಾಗಲೇ ಹಾಕಿದ್ದಲ್ಲಿ, ಸಮಸ್ಯೆಯನ್ನು ಸರಿಯಾಗಿ ತಜ್ಞರೊಡನೆ ಚರ್ಚಿಸುವುದೂ ಸಹ ನಿಮಗೆ ಸುಲಭವಾಗುತ್ತದೆ. ಅವರು ನೀಡಿದ ಸಲಹೆಯನ್ನೂ ನಿಮ್ಮ ಪಟ್ಟಿಗೆ ಸೇರಿಸಿ ಪ್ರತಿಯೊಂದರ ಸಾಧಕ-ಬಾಧಕ ಗಹನವಾಗಿ ವಿಶ್ಲೇಷಿಸಿ. ಬರಬಹುದಾದ ಅಡಚಣೆಗಳು ಏನು ಎಂಬುದನ್ನು ಪಟ್ಟಿಮಾಡಿ, ಅದಕ್ಕೆ ಪರಿಹಾರ/ಪರ್ಯಾಯ ಏನು ಎಂಬುದನ್ನೂ ಈಗಲೇ ತಿಳಿದುಕೊಳ್ಳಿ. ಉದಾಹರಣೆಗೆ, ಹಣದ ಅಡಚಣೆಯಾಗಬಹುದೇ, ಸ್ಥಳದ ಸಮಸ್ಯೆ ಉದ್ಭವಿಸಬಹುದೇ, ನೀರು/ವಿದ್ಯುತ್ ಅಥವಾ ಇತರ ಸಂಪನ್ಮೂಲಗಳ ಕೊರತೆಯಾಗಬಹುದೇ, ಕಾನೂನಿನ ತೊಡಕು ಬರಬಹುದೇ ಎಂದೆಲ್ಲಾ ಯೋಚಿಸಿ ಅದಕ್ಕೆ ಪರಿಹಾರವನ್ನೂ ಬರೆದುಕೊಳ್ಳಿ.

5. ಸರಿಯಾದ ಪರಿಹಾರದ ಆಯ್ಕೆ ಮಾಡಿ:ನಿಮ್ಮ ಸ್ವಂತ ಇಚ್ಛೆ/ಇಷ್ಟಕ್ಕನುಗುಣವಾಗಿ ಯಾವ ಪರಿಹಾರ ಸೂಕ್ತ ಎನಿಸುತ್ತದೋ ಅದನ್ನು ಮೊದಲು ಪರಿಗಣಿಸಿ. ಕೇವಲ ಯಾವುದರಿಂದ ಅತ್ಯಂತ ಹೆಚ್ಚು ಲಾಭ, ಕಡಿಮೆ ಹಾನಿ ಅಥವಾ ಅನುಷ್ಠಾನಕ್ಕೆ ಸುಲಭ ಎನಿಸುತ್ತದೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದೇನೂ ಇಲ್ಲ. ಯಾವ ಆಯ್ಕೆಯನ್ನು ನೀವು ಮುಂದೆ ಸಮರ್ಥಿಕೊಳ್ಳಲು ಸಾಧ್ಯವಾಗುತ್ತದೋ ಅದಕ್ಕೆ ಅದ್ಯತೆ ನೀಡಿ. ಪರಿಹಾರದ ಆಯ್ಕೆ ಮಾಡಿಕೊಂಡ ನಂತರ ಅದರ ಅನುಷ್ಠಾನಕ್ಕೆ ಕಟ್ಟುನಿಟ್ಟಾದ ಸಮಯ ಸಾರಿಣಿ ಮತ್ತು ಬೇಕಾದ ಸಾಧನ/ಸಂಪನ್ಮೂಲಗಳನ್ನು ಕಲೆ ಹಾಕುವುದೂ ಅಷ್ಟೇ ಮುಖ್ಯ. ನಿಗದಿತ ಸಮಯಕ್ಕೆ ಹಾಕಿಕೊಂಡ ನಿರ್ದಿಷ್ಟ ಗುರಿ ನೀವು ತಲುಪಲೇ ಬೇಕು. ಸಮಸ್ಯೆಯಿಂದ ಬಾಧಿತರಾದ, ಪರಿಹಾರದ ಅನುಷ್ಠಾನದಲ್ಲಿ ಸಹಭಾಗಿಯಾಗುವವರ ಸಭೆ ಕರೆದು ನಿಮ್ಮ ನಿರ್ಧಾರ ತಿಳಿಸಿ, ಅನುಷ್ಠಾನದ ಸಮಯ ಸಾರಿಣಿ, ಅವರ ಪಾತ್ರ ಇವುಗಳನ್ನು ಸ್ಪಷ್ಟವಾಗಿ ತಿಳಿಸಿ, ಅವರ ಸಹಕಾರ ಕೋರಿ.

6. ಅನುಷ್ಠಾನಗೊಳಿಸಿ: ನೀವು ಹಾಕಿಕೊಂಡ ಸಮಯಸಾರಿಣಿಯನ್ನು ಅನುಸರಿಸಿ ನಿಮ್ಮ ಪರಿಹಾರವನ್ನು ಅನುಷ್ಠಾನಗೊಳಿಸಿ. ಈ ಹಂತದಲ್ಲಿ ಪರಿಹಾರ ಸಫಲವಾಗುತ್ತದೋ ಇಲ್ಲವೋ ಅದರ ಚಿಂತೆ ಬಿಡಿ. ರಸ್ತೆಯ ಮೇಲೆ ನಿಗಾ ಇಡಿ. ಅನಾವಶ್ಯಕ ಒತ್ತಡಕ್ಕೆ ಒಳಗಾಗಬೇಡಿ, ಇತರರಿಗೂ ಒತ್ತಡ ಹೇರಬೇಡಿ ಆದರೆ ಪ್ರಗತಿಯ ಬಗ್ಗೆ ಸೂಕ್ಷ್ಮವಾಗಿ ಕಣ್ಣಿಡಿ.

7. ಮೌಲ್ಯಮಾಪನ: ನಿಮ್ಮ ಪರಿಹಾರದ ಸಫಲತೆಯನ್ನು ಒರೆ ಹಚ್ಚಿ ನೋಡಿ. ಮೂಲ ಸಮಸ್ಯೆ ಪರಿಹಾರವಾಗಿದ್ದಲ್ಲಿ, ಅಭಿನಂದನೆಗಳು. ಆಗಿಲ್ಲದಿದ್ದರೂ ಚಿಂತೆಯಿಲ್ಲ, ಮತ್ತೊಮ್ಮೆ ಸಮಸ್ಯೆಯ ಲಕ್ಷಣಗಳನ್ನು ಅವಲೋಕಿಸಿ. ಬಹುಶಃ ನಿಮ್ಮ ಆಯ್ಕೆ ಸಮರ್ಪಕವಾಗಿರಲಿಲ್ಲವೋ ಅಥವಾ ವಸ್ತುಸ್ಥಿತಿ ಬದಲಾಗಿರಬಹುದು. ಆದರೆ ನಿಮ್ಮ ಕಲಿಕೆ ಎಂದೂ ವ್ಯರ್ಥವಾಗುವುದಿಲ್ಲ, ಮರುಪ್ರಯತ್ನ ಮಾಡಲು ನೀವು ಈಗ ಸಜ್ಜಾಗಿದ್ದೀರಿ. ಮರಳಿ ಯತ್ನವ ಮಾಡು ನೀ ಮನುಜ ಗುರಿ ಮುಟ್ಟುವ ತನಕ, ಇರುವುದೊಂದು ಬದುಕು ಬಿಡಬೇಡ ನೀ ಗೆಲ್ಲುವ ತವಕ.


ಇದನ್ನೂ ಓದಿ: ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿಯವರ ಲೇಖನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...