HomeUncategorizedಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ

ಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ

- Advertisement -
- Advertisement -

ಹಾಗೆ ನೋಡಿದರೆ ನಮ್ಮ ದೇಶಕ್ಕೆ ಕೊರೊನಾ ಸೋಂಕು ಈ ಪ್ರಮಾಣದಲ್ಲಿ ವಿಸ್ತರಿಸಲೇಬಾರದಿತ್ತು. ಚೀನಾ ಪಕ್ಕದ ಇತರ ರಾಷ್ಟ್ರಗಳು ಅಂತಹ ಮಾದರಿ ಸೃಷ್ಟಿ ಮಾಡಿದವು. ಸರ್ಕಾರಗಳು ಜವಾಬ್ದಾರಿಯುತವಾಗಿ ವರ್ತಿಸದೇ ಇರುವುದರಿಂದ ದೇಶಕ್ಕೆ ಕೊರೊನಾ ಪ್ರವೇಶ ಮಾಡಿತು. ಇಷ್ಟು ದೊಡ್ಡ ದೇಶವನ್ನು ಅಷ್ಟು ಸುಲಭದಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕೆಲವರು ಎನ್ನುತ್ತಾರೆ. ಇದು ಎಷ್ಟು ನಿಜವೋ ಸುಳ್ಳೋ ಯಾರಿಗೆ ಗೊತ್ತು. ಆದರೆ ಸಾಂಕ್ರಾಮಿಕ ಹರಡಿದ ಮೇಲೂ ನಮ್ಮ ಪ್ರಭುತ್ವ ಮಾಡಿದ್ದೇನು?. ಚಪ್ಪಾಳೆ ತಟ್ಟಲು, ಬೆಳಕು ಹಚ್ಚಲು ದಿನಗಳ ಮುಂಚೆ ಹೇಳಿದ ಸರ್ಕಾರ ಇಡೀ ದೇಶವನ್ನು ಮುಚ್ಚುತ್ತಿದ್ದೇವೆ ಎಂದು ಹೇಳಿದ್ದು ಕೇವಲ ನಾಲ್ಕೈದು ಗಂಟೆಗಳ ಮುಂಚೆ. ಇದು ಈ ದೇಶದ ಸಂಪತ್ತನ್ನು ಉತ್ಪಾದಿಸುವ ಕಾರ್ಮಿಕವರ್ಗಕ್ಕೆ ಮಾಡಿದ ಅನ್ಯಾಯವಲ್ಲದೆ ಮತ್ತೇನು?. ನಂತರವಾದರೂ ಸರ್ಕಾರ ಎಚ್ಚೆತ್ತಿತೇ ಅದೂ ಇಲ್ಲ. ಲಕ್ಷಾಂತರ ವಲಸೆ ಕಾರ್ಮಿಕರ ಮಹಾವಲಸೆಯ ಕರಳು ಹಿಂಡುವ ಕತೆಗಳಿಗೂ ಸರ್ಕಾರ ಎಚ್ಚರವಾಗಲೇ ಇಲ್ಲ.

ಆದರೆ ದೇಶದ ಇತರ ಕಡೆಗಳಗಲ್ಲಿ ವಲಸೆ ಕಾರ್ಮಿಕರ ಕಣ್ಣೀರಿನ ಕತೆಗಳು ದೇಶದೆಲ್ಲೆಡೆ ಹರಿದಾಡುತ್ತಿರುವಾಗ, ನಮ್ಮದೇ ದೇಶದ ಕಮ್ಯೂನಿಷ್ಟ್ ಸರ್ಕಾರವಿರುವ ಕೇರಳದ್ದು ಬೇರೆಯೆ ಕತೆಯಾಗಿತ್ತು. ಇಲ್ಲಿ ವಲಸೆ ಕಾರ್ಮಿಕರಿಗೆ ದೇಶದ ಇತರ ಕಡೆಗಳಲ್ಲಿ ಆದಂತಹ ಯಾವುದೇ ಕಷ್ಟಗಳೂ ಇರಲಿಲ್ಲ.

ಅಷ್ಟೇ ಅಲ್ಲದೆ ಕೇರಳ ತನ್ನ ಊರನ್ನು ಕಟ್ಟಿದ ಈ ಕಾರ್ಮಿಕರಿಗೆ ವಲಸೆ ಕಾರ್ಮಿಕರು ಎನ್ನುವ ಹೆಸರನ್ನು ಕಿತ್ತೆಸೆದು “ಅತಿಥಿ” ಕಾರ್ಮಿಕರು ಎಂದು ಗೌರವಪೂರ್ವಕವಾಗಿ ಕರೆಯಿತು.

ಕೊರೊನಾ ಪ್ರಕರಣ ಮೊದಲಿಗೆ ವರದಿಯಾಗಿದ್ದು ಕೇರಳದಲ್ಲೇ . ಇದಕ್ಕಾಗಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕೊರೊನಾ ಪರಿಹಾರವಾಗಿ ಬರೋಬ್ಬರಿ 20 ಸಾವಿರ ಕೋಟಿ ಪ್ಯಾಕೇಜನ್ನು ಘೋಷಿಸಿತು. ಈ ಹೊತ್ತಿಗೆ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಇಷ್ಟೊಂದು ಮೊತ್ತದ ಪ್ಯಾಕೇಜನ್ನು ಘೋಷಿಸಿರಲಿಲ್ಲ. ಕೇಂದ್ರದ ಆಡಳಿತ ಪಕ್ಷದ ನಾಯಕರು ಕೇರಳದ ಈ ನಡೆಗೆ ತಕರಾರು ಮಾಡಿದರು, ಆದರೆ ಕೇರಳ ತಲೆ ಕೆಡಿಸಿಕೊಳ್ಳಲಿಲ್ಲ.

ವಲಸೆ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಕರೆದ ಕೇರಳ ಅವರಿಗಾಗಿ ಸರ್ಕಾರದ ವತಿಯಿಂದಲೇ 15 ಸಾವಿರಕ್ಕಿಂತಲೂ ಹೆಚ್ಚು ಕೊರೊನಾ ಪರಿಹಾರ ಶಿಬಿರಗಳನ್ನು ತೆರೆದಿತ್ತು. ಇದರೊಂದಿಗೆ ಅಲ್ಲಿನ NGO ಗಳು ಕೂಡಾ 3397 ಪರಿಹಾರ ಶಿಬಿರಗಳನ್ನು ತೆರೆದು ಜನಸೇವೆಯಲ್ಲಿ ತೊಡಗಿದವು. ಎಪ್ರಿಲ್ 17ರಂದು ಕೇಂದ್ರ ಗೃಹ ಸಚಿವಾಲಯ ಸುಪ್ರೀಂಕೋರ್ಟಿಗೆ ನೀಡಿದ ಮಾಹಿತಿಯಂತೆ ದೇಶದಾದ್ಯಂತ ಇರುವ ಒಟ್ಟು ಪರಿಹಾರ ಶಿಬಿರಗಳಲ್ಲಿ 69% ಕ್ಕಿಂತ ಹೆಚ್ಚು ಶಿಬಿರಗಳು ಕೇರಳವೊಂದರಲ್ಲೇ ಇತ್ತು. ಇಲ್ಲಿ ಕೇವಲ ಕಾರ್ಮಿಕರನ್ನು ಕೂಡಿ ಹಾಕದೆ ಅವರಿಗೆ ಮನೋರಂಜನೆಗಾಗಿ ಟಿವಿ, ಕ್ಯಾರಮ್, ಚೆಸ್, ಮೊಬೈಲ್ ರೀಚಾರ್ಜ್ ಇತ್ಯಾದಿಗಳ ವ್ಯವಸ್ಥೆ ಮಾಡಿಕೊಟ್ಟಿತು. ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಭಾಷೆಗಳನ್ನು ತಮ್ಮದೇ ಭಾಷೆಯಲ್ಲಿ ಮಾತನಾಡುವ ಕೇರಳ,  ಈ ಕಾರ್ಮಿಕರೊಂದಿಗಿನ ಸಂವಹನಕ್ಕಾಗಿ ಅಸ್ಸಾಮಿ, ಒಡಿಯಾ, ಹಿಂದಿ, ಬಂಗಾಳಿ ಇತ್ಯಾದಿ ಭಾಷೆಗಳಲ್ಲಿ ಮಾತನಾಡಿತು, ಸಂದೇಶಗಳನ್ನು ಕೊಟ್ಟಿತು, ಪೋಸ್ಟರುಗಳನ್ನು ಹಂಚಿತು. ಇದಲ್ಲವೇ ನಾಡು ಕಟ್ಟಿದವರ ಋಣವನ್ನು ತೀರಿಸುವ ಬಗೆ.

ಕೇರಳದ  ಪರಿಹಾರ ಶಿಬಿರಗಳಲ್ಲಿ ಮೂರು ಲಕ್ಷ ಕಾರ್ಮಿಕ ಆಶ್ರಯ ಪಡೆಯುತ್ತಾರೆ. (ಸುಮ್ಮನೆ ನಿಮ್ಮ ಮಾಹಿತಿಗೆ ಕರ್ನಾಟಕದ ಪರಿಹಾರ ಶಿಬಿರಗಳಲ್ಲಿ ಇದ್ದ ವಲಸೆ ಕಾರ್ಮಿಕರ ಸಂಖ್ಯೆ ಕೇವಲ 16,138). ಕೇರಳದ ಈ ಪರಿಹಾರ ಶಿಬಿರಗಳಲ್ಲಿ ಒಂದುವರೆ ಲಕ್ಷ ಕಾರ್ಮಿಕರು ನೇರವಾಗಿ ವಸತಿ ಹಾಗೂ ಉಚಿತ ಊಟವನ್ನೂ ಪಡೆಯುತ್ತಾರೆ. ಇದಕ್ಕಾಗಿಯೆ ದೇಶದೆಲ್ಲೆಡೆ ವಲಸೆ ಕಾರ್ಮಿಕರು ಹಸಿವಿನ ಬೆಂಕಿಯಿಂದ ಧಗದಗಿಸುತ್ತಿದ್ದರೆ ಕೇರಳದ ’ಅತಿಥಿ ಕಾರ್ಮಿಕರು’ ತಾವು ಲಾಕ್‌ಡೌನ್ ನಂತರ ನಮ್ಮ ಕುಟುಂಬವನ್ನು ಸೇರಿಕೊಳ್ಳುತ್ತೇವೆ ಎಂದು ವಿಶ್ವಾಸದಿಂದು ಹೇಳಿದ್ದು. ಅವರ ವಿಶ್ವಾಸಗಳು, ನಿರೀಕ್ಷೆಗಳನ್ನು ಕೇರಳದ ಎಡಪಂಥೀಯ ಸರ್ಕಾರ ಹುಸಿಗೊಳಿಸಲೂ ಇಲ್ಲ. ತಮ್ಮೂರನ್ನು ಕಟ್ಟಿದ ’ಅತಿಥಿ ಕಾರ್ಮಿಕ’ರನ್ನು ಬಹಳ ಗೌರವಪೂರ್ವಕವಾಗಿ ಕಳುಹಿಸಿಕೊಟ್ಟಿತು. ಕಾರ್ಮಿಕರಿಗೆ ಉಚಿತ ರೈಲು ಪ್ರಯಾಣ, ಊರಿಗೆ ತಲುಪುವವರೆಗಿನ ಆಹಾರ, ರೈಲಿನಲ್ಲಿ ಪೋಲಿಸ್ ಭದ್ರತೆ, ವೈದ್ಯಕೀಯ ಸೌಲಭ್ಯ ಇತ್ಯಾದಿಗಳನ್ನು ನೀಡಿತು. ಕೇರಳದ ಕಾರ್ಯಕ್ಕೆ ಒರಿಸ್ಸಾ ಮುಖ್ಯಮಂತ್ರಿ ಧನ್ಯವಾದವನ್ನೂ ಹೇಳಿದರು.

ಒಂದು ಆಪತ್ತು ಎರಗಿದರೆ ವ್ಯವಸ್ಥೆಯನ್ನು ಹೇಗೆ ನಡೆಸಬೇಕು ಎಂಬುವುದಕ್ಕೆ ಕೇರಳ ಒಂದು ಅತ್ಯುತ್ತಮ ಉದಾಹರಣೆ. ಈ ಹಿಂದೆ ಕೇರಳಕ್ಕೆ ಎರಗಿದ ನಿಫಾ, ಶತಮಾನದ ಪ್ರವಾಹವನ್ನು ಕೇರಳ ಎದುರಿಸಿದ ರೀತಿ ಮಾದರಿ ಯೋಗ್ಯ. ಕೊರೊನಾ ದೇಶಕ್ಕೆ ಎರಗಿದ ಸಂದರ್ಭದಲ್ಲಿ ಅತೀ ಹೆಚ್ಚು ಪ್ರಕರಣಗಳು ವರದಿ ಮಾಡಿದ್ದ  ಕೇರಳದಲ್ಲಿ ಈಗ ಸಕ್ರಿಯವಾಗಿರುವ ಪ್ರಕರಣ ಕೇವಲ ನಲವತ್ತರ ಒಳಗೆ, ಅಲ್ಲಿ ಸೋಂಕಿನಿಂದ ಘಟಿಸಿರುವ ಸಾವು ಕೇವಲ ನಾಲ್ಕು. ವೃದ್ದರಿಗೆ ಅಪಾಯವೆಂದು ಹೇಳುವ ಈ , ಸೋಂಕು ತಗುಲಿಸಿಕೊಂಡ ಭಾರತದ ಅತ್ಯಂತ ಹಿರಿಯ 93 ವರ್ಷದ ವ್ಯಕ್ತಿಯೂ ಗುಣಮುಖರಾಗಿ ತಮ್ಮ ಮನೆಗೆ ಹೋಗುತ್ತಾರೆ.

ಸರ್ಕಾರಗಳು ಜನಪರವಾಗಿರುವುದು ಅಂದರೆ ಹೀಗೆಯೇ ಅಲ್ಲವೆ. ಹಾಗಾಗಿಯೇ ಹೀಗಂತೂ ಹೇಳಬಹುದು, ಕೇರಳ ರಾಜ್ಯ ಭಾರತವೆಂಬ ರಾಜ್ಯಗಳ ಒಕ್ಕೂಟಕ್ಕೆ ಮಾದರಿ. ಭಾರತ ಅನುಸರಿಸಬೇಕಾದ ದಾರಿ ಕೇರಳದಲ್ಲಿದೆ.


ವಿಡಿಯೋ ನೋಡಿ: ಏನಾಯ್ತು ಈ ಸುದ್ದಿಗಳು ? ಸದ್ದು…!!


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...