Homeಮುಖಪುಟಪಾಸ್ ಪರ್ಮಿಷನ್ ಐಲಾಟ - ವಲಸೆ ಕಾರ್ಮಿಕರ ಗೋಳಾಟ: ತನ್ನ ಜನರನ್ನು ತನ್ನ ನೆಲದಲ್ಲೇ...

ಪಾಸ್ ಪರ್ಮಿಷನ್ ಐಲಾಟ – ವಲಸೆ ಕಾರ್ಮಿಕರ ಗೋಳಾಟ: ತನ್ನ ಜನರನ್ನು ತನ್ನ ನೆಲದಲ್ಲೇ ಪರದೇಶಿಗಳನ್ನಾಗಿಸಿದ ಸರ್ಕಾರ

- Advertisement -
- Advertisement -

ಕೊರೊನಾ ಸಂಕಷ್ಟ ನಿಭಾಯಿಸಲು ಹೆಣಗಾಡುತ್ತಿರುವ ಸರ್ಕಾರ ಪ್ರಜ್ಞಾಪೂರ್ವಕವಾಗಿ ಈ ದೇಶದ ಸಾಮಾನ್ಯ ಜನರನ್ನು ಮರೆತು ಉಳ್ಳವರ ಹಿತ ಕಾಯಲು ಟೊಂಕ ಕಟ್ಟಿನಿಂತಿರುವುದು ಜಗಜ್ಜಾಹೀರಾಗಿದೆ. ಈ ದೇಶದ ಕಾನೂನು -ಕಟ್ಟುಪಾಡುಗಳು ಎಂತಹುದ್ದದೇ ಸಂಕಷ್ಟದ ಕಾಲದಲ್ಲೂ ಬಡವರ, ಕೂಲಿ ಕಾರ್ಮಿಕರ, ದುಡಿಯುವ ವರ್ಗಗಳ ವಿರುದ್ಧವೇ ಚಲಾವಣೆಯಾಗುತ್ತಿರುವುದಕ್ಕೆ ಪ್ರತಿದಿನವೂ ಉದಾಹರಣೆಗಳು ಕಾಣ ಸಿಗುತ್ತಿವೆ.

ವಿದೇಶಿದಲ್ಲಿನ ಸುಮಾರು ನಾಲ್ಕು ಲಕ್ಷ ಭಾರತೀಯರನ್ನು ಭಾರತಕ್ಕೆ ಕರೆತರಲು ರೆಡ್ ಕಾರ್ಪೇಟ್ ಹಾಸಿರುವ ಕೇಂದ್ರ ಸರ್ಕಾರ ದೇಶದೊಳಗೆ ತಮ್ಮ ತಮ್ಮ ಊರುಗಳಿಗೆ ತಲುಪಲಾಗದೆ ಅನ್ನ, ನೀರು, ನೆಲೆ ಕಳೆದುಕೊಂಡು ಪರಿತಪಿಸುತ್ತಿರುವ ಲಕ್ಷಾಂತರ ಜನರ ಗೋಳಿಗೆ ಕಿವುಡಾಗಿ ವರ್ತಿಸುತ್ತಿದೆ. ವಿದೇಶದಲ್ಲಿನ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಐತಿಹಾಸಿಕ ಏರ್ ಲಿಪ್ಟ್,’ ‘ಆಪರೇಶನ್ ಏರ್ ಲಿಪ್ಟ್,’, ವಿದೇಶಿದಲ್ಲಿನ ಭಾರತೀಯರಿಗೆ ಮೋದಿ ಆಪತ್ಭಾಂಧವ ಎಂದು ಬಣ್ಣಿಸುತ್ತಿರುವ ಮಾಧ್ಯಮಗಳು ಭಾರತದಲ್ಲಿಯೇ ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹೋಗಿ ಸಿಲುಕಿರುವ ದುಡಿಯವು ವರ್ಗಗಳನ್ನು ಕನಿಷ್ಟ ‘ರೋಡ್ ಲಿಪ್ಟ್ ‘ ಮೂಲಕ ತಮ್ಮ ತಮ್ಮ ಊರು, ಹಳ್ಳಿ, ಪಟ್ಟಣಗಳಿಗೆ ತಲುಪಿಸಲಾಗದ ಸರ್ಕಾರದ ಹೊಣೆಗೇಡಿತನವನ್ನು ಮರೆಮಾಚುತ್ತಿವೆ.

ಇನ್ನೂ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೊರಟ ಶ್ರಮಿಕರಿಂದ ಬಸ್‌ಚಾರ್ಜ್ ವಸೂಲಿಗಿಳಿದ ರಾಜ್ಯ ಸರ್ಕಾರ ತನ್ನ ವಿಕೃತ ನಿರ್ಧಾರವನ್ನು ಪ್ರತಿಪಕ್ಷಗಳ ಹೋರಾಟ, ಸಾಮಾಜಿಕ ಜಾಲತಾಣಗಳಲ್ಲಿನ ತೀವ್ರ ಟೀಕೆಗಳ ಕಾರಣ ಹಿಂಪಡೆಯುತ್ತದೆ. ಹಲವಾರು ದಿನಗಳಿಂದ ಅನ್ನ, ನೀರು, ನಿದ್ದೆಗಳಿಲ್ಲದೆ ಬಳಲಿದ್ದ ದುಡಿಯುವ ವರ್ಗಗಳಿಂದಲೂ ಟಿಕೆಟ್ ದರ ವಸೂಲಿಗಿಳಿದ ಸರ್ಕಾರದ ನಿರ್ಲಜ್ಜಗೇಡಿಗತನವನ್ನು ಖಂಡಿಸದ ಮಾಧ್ಯಮಗಳು ನಾಗರೀಕರ, ವಿಪಕ್ಷಗಳು ಮಾಡಿದ ಮಂಗಳಾರತಿಯಿಂದ ಸರ್ಕಾರ ಟಿಕೆಟ್ ದರ ವಸೂಲಿಯ ನಿರ್ಧಾರ ಹಿಂಪಡೆದದ್ದನ್ನು ‘ಕಷ್ಟಕ್ಕೆ ಕರಗಿದ ಸರ್ಕಾರ’ ಎಂದು ತುತ್ತೂರಿ ಊದುತ್ತವೆ ಎಂದರೆ ಇಂತಹ ಮಾಧ್ಯಮಗಳ ಸಂವೇದನೆ ಸತ್ತು ಹೋಗಿರುವುದು ನಿಚ್ಚಳವಾಗಿ ಗೋಚರಿಸುತ್ತದೆ.

ಇಂದಿಗೂ ವಲಸೆಯ ಪರ್ವ ಮುಗಿಯುತ್ತಿಲ್ಲ. ಕೂಲಿ, ನಾಲಿಗೆ ವಲಸೆ ಹೋಗಿರುವ ದುಡಿಯುವ ವರ್ಗಗಳು ತಮ್ಮ ತಮ್ಮ ಊರುಗಳಿಗೆ ತಲುಪಲಾಗದೆ ಪರಿತಪಿಸುತ್ತಿವೆ. ರಾಜ್ಯದಲ್ಲಿ ಕಳೆದರೆಡು ದಿನಗಳಿಂದ ಪಾಸ್ ವ್ಯವಸ್ಥೆ ಮೂಲಕ ಮತ್ತು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತಲುಪಲು ಅವಕಾಶ ಕೊಡಲಾಗಿದೆ ಸರಿಯಷ್ಟೆ. ಆದರೆ ಪಾಸ್ ಪಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಬೆಂಗಳೂರು ಸೇರಿದಂತೆ ಅನೇಕ ಇತರೆ ಜಿಲ್ಲೆಗಳಲ್ಲಿನ ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ತಮ್ಮ ಊರು ಮನೆ ಸೇರಿಕೊಳ್ಳಲು ನಡೆದುಕೊಂಡು ಅಥವಾ ದ್ವಿಚಕ್ರವಾಹನಗಳಲ್ಲಿ ಹಳ್ಳಿ, ಹಳ್ಳ, ಕೊಳ್ಳ, ಕಾಡು ಮೇಡುಗಳ ಬಳಸು ದಾರಿಯಲ್ಲಿ ಬಂದರೂ ಅವರು ತಮ್ಮ ತಮ್ಮ ಜಿಲ್ಲೆಗಳ ಒಳ ಪ್ರವೇಶಿಸಲು ಚೆಕ್ ಪೋಸ್ಟ್ ಗಳಲ್ಲಿ ಪಾಸ್ ಇಲ್ಲದ ನೆಪದಿಂದ ಅವರನ್ನು ಒಳಬಿಟ್ಟುಕೊಳ್ಳಲಾಗುತ್ತಿಲ್ಲ. ಹಾಗೊಮ್ಮೆ ಒಳಬಂದರೂ ಅವರನ್ನು ನುಸುಳುಕೋರರಂತೆ ಬಂಧಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಇಂತಹ ವಲಸಿಗ ರೊಂದಿಗೆ ಅತ್ಯಂತ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನೆಲೆ. ಅನ್ನ, ನೀರು ಇಲ್ಲದೆ ಮೊದಲೇ ಬಳಲಿ ಬೆಂಡಾಗಿರುವ ಈ ವಲಸಿಗ ಕುಟುಂಬಗಳು ಈಗ ತಮ್ಮದೇ ನೆಲದಲ್ಲಿ ಪರಕೀಯರಾಗಿ ತಿರಸ್ಕರಿಸಲ್ಪಡುತ್ತಿವೆ. ಅತ್ತ ಬಂದ ಜಿಲ್ಲೆಗೂ ಹೋಗಲಾರದೆ. ಇತ್ತ ತಮ್ಮ ಊರಿಗೂ ಪ್ರವೇಶ ಸಿಗದೆ ಸಾವಿರಾರು ದುಡಿಯುವ ಜನಸಮುದಾಯ ಮಕ್ಕಳು,ಮರಿಗಳನ್ನು ಕಟ್ಟಿಕೊಂಡು ಅಲೆದಾಡುವತ್ತಾ ನಿಷ್ಕಾರುಣ್ಯವಾಗಿ ವರ್ತಿಸುತ್ತಿರುವ ಆಡಳಿತ ವ್ಯವಸ್ಥೆಯ ಕಾಲು ಕಟ್ಟಿಕೊಟ್ಟು ರೋಧಿಸುತ್ತಿವೆ. ಹಳ್ಳಿಗಳಲ್ಲೂ ಕೂಡ ಅಪರಿಚಿತರನ್ನು ಒಳ ಬಿಟ್ಟುಕೊಳ್ಳದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ವಲಸಿಗರ ಪಾಡು ಹೇಳತೀರದಾಗಿದೆ.

ಕೇವಲ ಪಾಸ್ ಮುಖ್ಯವಾಗಿಟ್ಟುಕೊಂಡು ವಲಸಿಗರನ್ನು ಅವರ ಊರುಗಳ ಒಳಬಿಟ್ಟುಕೊಳ್ಳದ ಕೆಲಸವನ್ನು ಜಿಲ್ಲಾಡಳಿತಗಳೇ ಮಾಡುತ್ತಿದ್ದು, ಬಹಳಷ್ಟು ಕಡೆ ಇಂತಹ ವಲಸಿಗರ ಮೇಲೆ ಪೊಲೀಸರು ಹಲ್ಲೆ ನಡೆಸಿ ಹೊರ ತಳ್ಳುವ ಘಟನೆಗಳು ನಡೆದಿವೆ. ಹೀಗೆ ವಲಸೆ ಬರುವವರನ್ನು ಆರೋಗ್ಯ ತಪಾಸಣೆ ಮಾಡಿ ಅಗತ್ಯ ಬಿದ್ದಲ್ಲಿ ಕ್ವಾರಂಟೈನ್ ಗೆ ಒಳಪಡಿಸುವ ಮೂಲಕ ಅಂತಹ ಈ ವಲಸಿಗ ಕುಟುಂಬಗಳಿಗೆ ಕನಿಷ್ಟ ಅನ್ನ, ಆಹಾರ, ನೆಲೆಯನ್ನು ಒದಗಿಸಬಹುದಾಗಿದ್ದರೂ ಆಡಳಿತ ವ್ಯವಸ್ಥೆಗಳು ಇದಾವುದನ್ನು ಮಾಡದೆ ವಲಸಿಗರನ್ನು ನಗರದ ಒಳಬಿಟ್ಟುಕೊಳ್ಳದೆ ಓಡಿಸುತ್ತಿವೆ. ಕೂಲಿ ಕುಟುಂಬಗಳ ಬದುಕು ಈಗ ‘ಅತ್ತ ದರಿ ಇತ್ತ ಪುಲಿ’ ಎಂಬಂತಾಗಿದೆ. ಕಾಯ್ದೆ-ಕಾನೂನುಗಳ ಉದ್ದೇಶ ಅಂತಿಮವಾಗಿ ಆ ನೆಲದ ಜನರ ಕಲ್ಯಾಣವೇ ಆಗಿರುತ್ತದೆ. ಆದರೆ ಜನರ ಹಿತ ಕಾಯದ ಕಾನೂನು ಕಟ್ಟಳೆಗಳು ಇರುವುದಾದರೂ ಏತಕ್ಕೆ ?, ಅನೇಕ ಸಂದರ್ಭಗಳಲ್ಲಿ ಕಾಯ್ದೆ-ಕಾನೂನುಗಳು ಜನರಿಗೆ ಮಾರಕವಾದಾಗಲೇ ದಂಗೆ, ಕ್ರಾಂತಿಗಳು ಭುಗಿಲೇಳುತ್ತವೆ. ಅಂತಹ ಕಾನೂನುಗಳನ್ನು ಮುರಿದು ಮುನ್ನುಗ್ಗುವ ಸಂದರ್ಭಗಳು ಸೃಷ್ಟಿಯಾಗುತ್ತವೆ. ಇದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು.

ಮೊನ್ನೆ ಬೆಂಗಳೂರಿನಲ್ಲಿ ಬಿಹಾರಿ ಕಾರ್ಮಿಕರ ಸಿಟ್ಟು ಸ್ಪೋಟಗೊಂಡು ಪೊಲೀಸ್ ಅಧಿಕಾರಿಯೊಬ್ಬನ ತಲೆ ಒಡೆಯುವಂತಾಗಿದೆ. ದುಡಿಯುವ ವರ್ಗದ ಸಿಟ್ಟು ರಟ್ಟೆಗೆ ಬಂದಾಗ ಇಂತಹ ಘಟನೆಗಳು ನಡೆಯುತ್ತವೆ. ಇದು ಕಾನೂನು ಭಂಗವಲ್ಲ. ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ತೋರಿದ ಪ್ರತಿರೋಧವಾಗುತ್ತದೆ. ಗುಜರಾತ್ ನ ಸೂರತ್ ನಲ್ಲಿ ವಲಸೆ ಕಾರ್ಮಿಕರ ಗುಂಪಿನ ದಂಗೆ ಕೂಡ ಇದೆ ಆಗಿದೆ. ಇದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು. ವಿದೇಶದಲ್ಲಿನ ಭಾರತೀಯರನ್ನು ಕರೆತರಲು ಹಾತೊರೆವ ಕೇಂದ್ರ ಸರ್ಕಾರ ಭಾರತದೊಳಗೆ ಇರುವ ವಲಸೆ ಕಾರ್ಮಿಕರನ್ನು ಅವರವರ ನೆಲೆಗೆ ತಲುಪಿಸಲು ಅಕ್ಷಮ್ಯ ನಿರ್ಲಕ್ಷ್ಯವನ್ನು ತೋರುತ್ತಿದೆ.

ಕೊರೊನಾ ಸೋಂಕು ವಿದೇಶದಿಂದಲೆ ಭಾರತಕ್ಕೆ ನುಸುಳಿದ್ದು, ಶ್ರೀಮಂತರು ತಂದ ಕಾಯಿಲೆಗೆ ಭಾರತದ ಬಡಜನಸಮುದಾಯ ಬರ್ಬರವಾಗಿ ನರಳುತ್ತಿದೆ. ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ರಸ್ತೆ ಹಿಡಿದು ಹೊರಟ ಈ ದೇಶದ ಆರ್ಥಿಕ ಅಭಿವೃದ್ದಿಗೆ ಬೆನ್ನೆಲುಬಾದ ದುಡಿಯುವ ವರ್ಗಗಳ ಧಾರುಣವಾದ ಮಹಾವಲಸೆ ಸರ್ಕಾರಕ್ಕಾಗಲಿ , ಮಾಧ್ಯಮಗಳಿಗಾಗಲಿ ಅದೊಂದು ಈ ದೇಶದ, ಈ ನಾಡಿನ ಜನಸಮುದಾಯದ ಗೋಳು ಎಂದು ಅನಿಸಲೇ ಇಲ್ಲ. ಇಂತಹ ಹೊತ್ತಿನಲ್ಲಿ ಈ ಬಡಸಮುದಾಯವನ್ನು , ದುಡಿಯವ ವರ್ಗದ ಹಿತ ಕಾಯಬೇಕಾದ ಸರ್ಕಾರ ಭಾರತದ ಬಡಜನರ ನಿರ್ನಾಮಕ್ಕೆ ವಿದೇಶದಿಂದ ಸೋಂಕು ಆಮದು ಮಾಡಿಕೊಳ್ಳಲು ಸಡಗರದಲ್ಲಿದೆ.

ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಂಗಳೂರು ವಿಮಾನನಿಲ್ದಾಣದಲ್ಲಿ ವಿದೇಶಿಗಳಿಂದ ಬರುವ ಭಾರತೀಯರನ್ನು ಸ್ವಾಗತಿಸಿ ಐಷಾರಾಮಿ ಹೊಟೇಲ್ , ಬಂಗ್ಲೆಗಳಿಗೆ ಬೀಳ್ಕೊಡುವ ಮುಂಚೆ ಪಾಸ್, ಪರ‍್ಮಿಷನ್, ಲೊಟ್ಟೆ-ಲೊಸಗು ಎಂಬ ನಿರ್ಬಂಧಗಳನ್ನು ತೆಗೆದು ತಮ್ಮದೇ ನೆಲದ ವಲಸೆ ಕಾರ್ಮಿಕ ಸಮುದಾಯವನ್ನು ಅವರವರ ಊರುಮನೆಗಳಿಗೆ ತಲುಪಿಸಿ ಅನ್ನ,ನೀರು ಕೊಡಬೇಕಾಗಿದೆ. ಇದು ಒಂದು ನಾಗರೀಕ ಸರ್ಕಾರವೆನಿಸಿಕೊಳ್ಳಲು ಘನತೆಯ ಮಾರ್ಗವಾಗಿರುತ್ತದೆ.

(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವಯಕ್ತಿಕವಾದವು)


ಇದನ್ನೂ ಓದಿ: ಬಿಲ್ಡರ್‌ ಲಾಬಿಗೆ ಮಣಿದು ರೈಲುಸೇವೆ ರದ್ದುಗೊಳಿಸಿದ ರಾಜ್ಯಸರ್ಕಾರ: ಸಂಕಷ್ಟದಲ್ಲಿ ಕಾರ್ಮಿಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...