ಕೊರೊನಾ ಸೋಂಕು ತಗುಲಿದ್ದ ಭಾರತದ ಅತ್ಯಂತ ಹಿರಿಯ ದಂಪತಿಗಳು ಗುಣಮುಖ

ಕೊರೊನಾ ಸೋಂಕಿಗೆ ಒಳಗಾಗಿದ್ದ ಭಾರತದ ಅತ್ಯಂತ ಹಿರಿಯ ದಂಪತಿಗಳು ಇದೀಗ ಗುಣಮುಖರಾಗಿ ತಮ್ಮ ಮನೆಗೆ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ.

ಕೊರೊನಾ ಸೋಂಕಿಗೆ ಒಳಗಾಗಿ ಎರಡು ವಾರಗಳ ಹಿಂದೆ ಕೇರಳದ ಕೊಟ್ಟಾಯಂ ವೈದ್ಯಕೀಯ ಕಾಲೇಜಿನ ಐಸೊಲೇಷನ್ ವಾರ್ಡ್‌ಗೆ ದಾಖಲಾಗಿದ್ದ 93 ವರ್ಷದ ಥಾಮಸ್ ಅಬ್ರಹಾಂ ಮತ್ತು 88 ವರ್ಷದ ಅವರ ಪತ್ನಿ ಮರಿಯಮ್ಮ ಕೇರಳದ ಪಟ್ಟನಂತಿಟ್ಟು ಜಿಲ್ಲೆಯ ರಾನ್ನಿಯಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಸೋಂಕಿತ ದಂಪತಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕಿಗೆ ಒಳಗಾಗಿದ್ದ ಆರೋಗ್ಯ ಕಾರ್ಯಕರ್ತರೂ ಸಹ ರೋಗದಿಂದ ಗುಣಮುಖರಾಗಿದ್ದಾರೆ ಎಂದು ಕೇರಳ ಸರ್ಕಾರದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.


ಇದನ್ನೂ ಓದಿ: ಕೊರೊನಾ ಜಯಿಸಿದ ಕರ್ನಾಟಕದ ಮೊದಲ ವ್ಯಕ್ತಿಯ ಮನದ ಮಾತುಗಳು


ಪಟ್ಟನಂತಿಟ್ಟು ನಿವಾಸಿಗಳಾದ ಥಾಮಸ್ ಮತ್ತು ಮರಿಯಮ್ಮ ಅವರ ಮಗ ತನ್ನ ಕುಟುಂಬದ ಜೊತೆಗೆ ಹಲವಾರು ವರ್ಷಗಳಿಂದ ಇಟಲಿಯಲ್ಲಿ ವಾಸವಿದ್ದರು. ಆದರೆ, ಕಳೆದ ತಿಂಗಳು ಅವರು ತಮ್ಮ ಹೆಂಡತಿ ಹಾಗೂ ಮಗುವಿನ ಜೊತೆಗೆ ಕೇರಳದ ತನ್ನ ಊರಿಗೆ ಹಿಂದಿರುಗಿದ್ದರು. ಇವರಿಂದಾಗಿಯೇ ಥಾಮಸ್ ಮತ್ತು ಮರಿಯಮ್ಮ ದಂಪತಿಗಳಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೀಗಾಗಿ ಇವರನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮಗ, ಸೊಸೆ ಮತ್ತು ಮಗು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದರು. ಆದರೆ, ಸತತ ಎರಡು ವಾರದ ಚಿಕಿತ್ಸೆ ಬಳಿಕ ಹಿರಿಯ ದಂಪತಿಗಳು ಇದೀಗ ಗುಣಮುಖರಾಗಿದ್ದಾರೆ.

ಆರಂಭದಲ್ಲಿ ಹಿರಿಯ ದಂಪತಿಗಳನ್ನು ಪರೀಕ್ಷೆ ಮಾಡಲಾಗಿ ಕೊರೊನಾ ನೆಗೆಟಿವ್ ಎನ್ನಲಾಗಿತ್ತು. ಆದರೆ, ಹೆಚ್ಚಿನ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಪ್ರಸ್ತುತ ಇವರು ಕೊರೊನಾ ವೈರಸ್‌ನಿಂದ ಗುಣಮುಖರಾಗಿದ್ದು, ಭಾರತದ ಅತ್ಯಂತ ಹಿರಿಯ ವ್ಯಕ್ತಿಗಳು ಈ ಸೋಂಕಿನಿಂದ ಗುಣಮುಖರಾದ ಮೊದಲ ಪ್ರಕರಣ ಎಂದು ದಾಖಲಾಗಲಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ನಿಮ್ಮ ಪತ್ರಿಕೆಯಲ್ಲಿ. ಮರಕಜ ನಿಜಾಮುದ್ದೀನ್. ವಿಷಯ ಯಾಕ ಕೊಡಲಹೊಂಟಿರಿ

LEAVE A REPLY

Please enter your comment!
Please enter your name here