Homeಮುಖಪುಟ'ಬಿರಿಯಾನಿ' ಚಿತ್ರ ಬಿಡುಗಡೆಗೆ ಥಿಯೇಟರ್ ಮಾಲೀಕರ ಹಿಂದೇಟು: ಮಲಯಾಳಂ ನಿರ್ದೇಶಕನ ಆಕ್ರೋಶ

‘ಬಿರಿಯಾನಿ’ ಚಿತ್ರ ಬಿಡುಗಡೆಗೆ ಥಿಯೇಟರ್ ಮಾಲೀಕರ ಹಿಂದೇಟು: ಮಲಯಾಳಂ ನಿರ್ದೇಶಕನ ಆಕ್ರೋಶ

- Advertisement -
- Advertisement -

ಥಿಯೇಟರ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಲಯಾಳಂ ಚಿತ್ರನಿರ್ದೇಶಕ ಸಾಜಿನ್ ಬಾಬು, ‘ಅವರು ಸೂಪರ್ ಸೆನ್ಸಾರ್ ಬೋರ್ಡ್‌ಗಳಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ತಮ್ಮ ಬಿರಿಯಾನಿ ಚಿತ್ರದ ಬಿಡುಗಡೆಗೆ ಒಪ್ಪದ ಥಿಯೇಟರ್ ಮಾಲೀಕರು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

“ಚಿತ್ರದಲ್ಲಿ ಲೈಂಗಿಕ ದೃಶ್ಯಗಳಿವೆ ಎಂದು ಸ್ವತಃ ಇವರೇ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ನಂತರ, ಜನರು ಥಿಯೇಟರ್‌ಗೆ ಬರುವುದಿಲ್ಲ ಹಾಗಾಗಿ ಈ ಚಿತ್ರವನ್ನು ತಮ್ಮ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ” ಎಂದು ಸಾಜಿನ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರಂನ ಕೇಸರಿ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ‘ಮೀಟ್ ದಿ ಡೈರೆಕ್ಟರ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅಂತರರಾಷ್ಟ್ರೀಯ ಮೆಚ್ಚುಗೆ ಮತ್ತು ವಿಶೇಷ ತೀರ್ಪುಗಾರರ ಮೆಚ್ಚುಗೆ ಪಡೆದಿದ್ದ ಬಿರಿಯಾನಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ವಯಸ್ಕರಿಗೆ ಮಾತ್ರ’ (A) ಪ್ರಮಾಣಪತ್ರ ನೀಡಿತ್ತು. ಈ ಚಿತ್ರವು ಶುಕ್ರವಾರ ರಾಜ್ಯದಾದ್ಯಂತ ಹಲವಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಕನ್ನಡದ ಅಕ್ಷಿ ಚಿತ್ರಕ್ಕೆ ಪ್ರಶಸ್ತಿ: ನಟ ಧನುಷ್‌ಗೆ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

“ಈ ಚಿತ್ರವು ಮೊದಲು ಕೋಳಿಕೋಡ್‌ನ ಚಿತ್ರಮಂದಿರಗಳಿಂದ ವಿರೋಧವನ್ನು ಎದುರಿಸಿತು. ಶೀಘ್ರದಲ್ಲೇ, ಇನ್ನೂ ಕೆಲವರು ಇದನ್ನೇ ಅನುಸರಿಸಿದರು. ಚಿತ್ರದಲ್ಲಿ ಸ್ಪಷ್ಟವಾದ ಲೈಂಗಿಕ ದೃಶ್ಯಗಳಿವೆ ಎಂದು ಥಿಯೇಟರ್ ಮಾಲೀಕರು ರಹಸ್ಯವಾಗಿ ಜನರಿಗೆ ಹೇಳುತ್ತಿದ್ದಾರೆ. ಅವರು ನೈತಿಕ ಪೊಲೀಸ್‌ಗಿರಿ ಮಾಡುತ್ತಿರುವುದನ್ನು ನೋಡಿ ನಿರಾಶೆಯಾಗಿದೆ. ಇದು ಸಮಸ್ಯೆಗೆ ಸಿಲುಕಿರುವ ನಮ್ಮ ಸಾಂಸ್ಕೃತಿಕ ಸನ್ನಿವೇಶವನ್ನು ಸೂಚಿಸುತ್ತದೆ” ಎಂದು ಅವರು ಹೇಳಿದರು.

ಇಟಲಿಯ ಏಷ್ಯಾಟಿಕ್ ವಿಶ್ವ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನವನ್ನು ನೀಡಿದ್ದ ಬಿರಿಯಾನಿ ಚಿತ್ರದ ಅತ್ಯುತ್ತಮ ಮಹಿಳಾ ನಟನೆಗಾಗಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಕನಿ ಕುಶ್ರುತಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. ಈ ಚಿತ್ರ ಮುಂದಿನ ವಾರ ಹೊರ ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ.

ಶೀಘ್ರದಲ್ಲೇ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿರುವ ಸಾಜಿನ್, ಇದನ್ನು ಆನ್‌ಲೈನ್‌ನಲ್ಲಿ ನೋಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

2020 ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಬಿರಿಯಾನಿ ಚಿತ್ರವು ಪ್ರದರ್ಶನಗೊಂಡು ತೀರ್ಪುಗಾರರ ಮೆಚ್ಚುಗೆ ಪಡೆದ ಚಿತ್ರ ಎಂಬ ಹೆಗ್ಗಳಿಕೆ ಗಳಿಸಿತ್ತು. ಕೇರಳದಲ್ಲಿನ ಬಡ ಮುಸ್ಲಿಂ ಕುಟುಂಬದ ಮಹಿಳೆಯೊಬ್ಬಳು ಅನುಭವಿಸುವ ನರಕಯಾತನೆ, ಮಾಧ್ಯಮಗಳು ಮತ್ತು ಸಮಾಜ ನೋಡುವ ರೀತಿ, ಭಯೋತ್ಪಾದನೆಯ ಆಪಾದನೆ ಇತ್ಯಾದಿ ವಿಷಯಗಳನ್ನು ನಿರ್ದೇಶಕ ಸಾಜಿನ್ ಈ ಚಿತ್ರದಲ್ಲಿ ವಿವರಿಸಿದ್ದಾರೆ.


ಇದನ್ನೂ ಓದಿ: ಹಾಲಿವುಡ್ ನಿರ್ದೇಶಕರು ಹೊಗಳಿದ 87 ಸೆಕೆಂಡಿನ ಈ ವಿಡಿಯೊ ಹೇಗಿದೆ; ನೀವೇ ನೋಡಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅನೈತಿಕ ಪೊಲೀಸ್‌ಗಿರಿ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ...

ಬಳ್ಳಾರಿ| ಬಂಡಿಹಟ್ಟಿ-ದಾನಪ್ಪ ಬೀದಿ ಬಡರೈತರ ಮೇಲೆ ದೌರ್ಜನ್ಯ; ಪ್ರತಾಪರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್‌.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 'ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ' ಮುಖಂಡರು ಆಗ್ರಹಿಸಿದರು....

ರೋಹಿತ್ ವೇಮುಲಾ 10ನೇ ಶಹಾದತ್ ದಿನ: ಜ.17ರಂದು ಹೈದರಾಬಾದ್ ವಿವಿಯಲ್ಲಿ ರೋಹಿತ್ ಕಾಯ್ದೆಯ ‘ಜನತಾ ಕರಡು’ ಅನಾವರಣ

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ವಾಂಸ ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ASA) ನಾಯಕ ರೋಹಿತ್ ವೇಮುಲ ಅವರ ಮರಣದ ಹತ್ತು ವರ್ಷಗಳ ನಂತರ, ವಿದ್ಯಾರ್ಥಿ ಗುಂಪುಗಳು ಮತ್ತು ಸಾಮಾಜಿಕ ನ್ಯಾಯ...

ಮಹಾರಾಷ್ಟ್ರವು ಪ್ರಧಾನಿ ಮೋದಿಯನ್ನು ಹೆಚ್ಚು ಅವಲಂಬಿಸಿದೆ: ಸಿಎಂ ಫಡ್ನವೀಸ್

ನಗರ ಪಾಲಿಕೆ ಚುನಾವಣೆಯಲ್ಲಿ ಮಹಾಯುತಿ ಭರ್ಜರಿ ಜಯ ಸಾಧಿಸಿದ ನಂತರ ಮಹಾರಾಷ್ಟ್ರದ ಜನರಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ವಿಜಯವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಅರ್ಪಿಸಿದರು. ರಾಜ್ಯವು ಪ್ರಧಾನಿ...

ಮೆಹುಲ್ ಚೋಕ್ಸಿ ಪುತ್ರ ಕೂಡ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ: ಜಾರಿ ನಿರ್ದೇಶನಾಲಯ

ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ, ಅವರ ಮಗ ರೋಹನ್ ಚೋಕ್ಸಿ ಕೂಡ ಈ ಅಪರಾಧದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೊದಲ ಬಾರಿಗೆ ಹೇಳಿಕೊಂಡಿದೆ....

‘ವೋಟ್ ಚೋರಿ ಒಂದು ರಾಷ್ಟ್ರವಿರೋಧಿ ಕೃತ್ಯ..’; ಬಿಎಂಸಿ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಎಣಿಕೆ ವೇಗ ಪಡೆಯುತ್ತಿದ್ದಂತೆ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ತಮ್ಮ ಮೊದಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ....

ಪುನರಾಭಿವೃದ್ಧಿ ಹೆಸರಿನಲ್ಲಿ ಮಣಿಕರ್ಣಿಕಾ ಘಾಟ್ ಬಳಿ ದೇಗುಲಗಳ ಧ್ವಂಸ: ಮೋದಿ ವಿರುದ್ಧ ಖರ್ಗೆ ಆಕ್ರೋಶ!

ನವದೆಹಲಿ: ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಪುನರಾಭಿವೃದ್ಧಿ ಕಾರ್ಯದ ಭಾಗವಾಗಿ ಬುಲ್ಡೋಜರ್‌ಗಳನ್ನು ಏಕೆ ಓಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ. ಮತ್ತು ಐತಿಹಾಸಿಕ ಪರಂಪರೆಯ ಅನೇಕ ಸ್ಥಳಗಳನ್ನು ಈ...