Homeಮುಖಪುಟಹಾಲಿವುಡ್ ನಿರ್ದೇಶಕರು ಹೊಗಳಿದ 87 ಸೆಕೆಂಡಿನ ಈ ವಿಡಿಯೊ ಹೇಗಿದೆ; ನೀವೇ ನೋಡಿ!

ಹಾಲಿವುಡ್ ನಿರ್ದೇಶಕರು ಹೊಗಳಿದ 87 ಸೆಕೆಂಡಿನ ಈ ವಿಡಿಯೊ ಹೇಗಿದೆ; ನೀವೇ ನೋಡಿ!

ವಿಡಿಯೋವನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಗಿದೆ

- Advertisement -
- Advertisement -

‘ಬೌಲಿಂಗ್’ ಆಟದ ಪ್ರಚಾರಕ್ಕಾಗಿ ಡ್ರೋನ್ ಮೂಲಕ ಚಿತ್ರಿಸಲಾಗಿರುವ 87 ಸೆಕೆಂಡುಗಳ “ರೈಟ್ ಅಪ್ ಅವರ್‌ ಅಲ್ಲಿ” ಎಂಬ ವಿಡಿಯೊ ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗಿದ್ದು, ಅದನ್ನು ಹಲವಾರು ಖ್ಯಾತನಾಮರು ‘ಕ್ಲಾಸಿಕ್’ ಎಂದು ಕೊಂಡಾಡಿದ್ದಾರೆ.

ವಿಡಿಯೋವನ್ನು ಕಳೆದ ವಾರ ಮಿನ್ನಿಯಾಪೋಲಿಸ್ ‘ಬೌಲಿಂಗ್’ ಆಟದ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ಭಾರಿ ವೇಗದಲ್ಲಿ ಹೊರಗಿನಿಂದ ಹಾರಿ ಬರುವ ಡ್ರೋನ್ ಅನ್ನು ಇಕ್ಕಟ್ಟಿನ ಜಾಗದಲ್ಲೂ ಸಲೀಸಲಾಗಿ ಆಪರೇಟ್ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಜೊತೆಗೆ ಹಾಲಿವುಡ್ ನಿರ್ದೇಶಕರ ಮೆಚ್ಚುಗೆಯನ್ನು ಕೂಡಾ ಈ ವಿಡಿಯೋ ಗಳಿಸಿದೆ.

ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್‌ಡೌನ್‌‌ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ

ಹಾಲಿವುಡ್‌ನ ಹಿರಿಯ ವ್ಯಕ್ತಿಯೊಬ್ಬರು “ಈ ವಿಡಿಯೋ ಸಿನೆಮಾದ ಭಾಷೆ ಮತ್ತು ಶಬ್ದಕೋಶವನ್ನು ಹೆಚ್ಚಿಸುತ್ತದೆ” ಎಂದು ಹೇಳಿದ್ದಾರೆ.

“ಇದು ನಾನು ನೋಡಿದ ಅತ್ಯಂತ ಅದ್ಭುತವಾದ ಸಂಗತಿಗಳಲ್ಲಿ ಒಂದಾಗಿದೆ” ಎಂದು ನಿರ್ದೇಶಕ ಲೀ ಅನ್ಕ್ರಿಚ್ ಟ್ವೀಟ್ ಮಾಡಿದ್ದಾರೆ. ಲೀ ಅನ್ಕ್ರೀಚ್‌ ಅವರ ಚಲನಚಿತ್ರ “ಕೊಕೊ” 2017 ರಲ್ಲಿ ಅತ್ಯುತ್ತಮ ಆನಿಮೇಟೆಡ್ ವೈಶಿಷ್ಟ್ಯಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿತ್ತು.

 

ವೀಡಿಯೊದಲ್ಲಿ ಚಿತ್ರೀಕರಣದಲ್ಲಿ ಡ್ರೋನ್‌, ಬೌಲಿಂಗ್ ಆಟದ ಸ್ಥಳ, ಥಿಯೇಟರ್, ರೆಸ್ಟೋರೆಂಟ್, ಕ್ಯಾಬರೆ ಥಿಯೇಟರ್ ಮತ್ತು ಬಾರ್ ಅನ್ನು ಪ್ರಾರಂಭದ ವೇಗದಲ್ಲೇ ಚಿತ್ರೀಕರಣ ಮಾಡಿದೆ.

‘ಸಾಂಕ್ರಾಮಿಕದಿಂದಾಗಿ ಮಿನ್ನೇಸೋಟದ ಸುತ್ತಮುತ್ತಲಿನ ಪ್ರಸಿದ್ಧ ವ್ಯವಹಾರಗಳನ್ನು ದಾಖಲಿಸುವ ಯೋಜನೆಯ ಭಾಗವಾಗಿ ಡ್ರೋನ್ ಆಪರೇಟರ್ ಜೇ ಕ್ರಿಸ್ಟೇನ್ಸೆನ್ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ’ ಎಂದು ‘ರೈಟ್ ಅಪ್ ಅವರ್ ಅಲ್ಲಿ’ ಯನ್ನು ನಿರ್ಮಿಸಿದ ರ್‍ಯಾಲಿ ಸ್ಟುಡಿಯೋದ ನಿರ್ಮಾಪಕ ಬ್ರಿಯಾನ್ ಹೈಮನ್ ಹೇಳಿದ್ದಾರೆ.

ವಿಡಿಯೋ ಇಲ್ಲಿ ನೋಡಿ


ಇದನ್ನೂ ಓದಿ: 66ನೇ ಫಿಲ್ಮ್‌ ಫೇರ್ ಅವಾರ್ಡ್‌ ಪ್ರಕಟ: 7 ಪ್ರಶಸ್ತಿ ಗೆದ್ದ ತಾಪ್ಸಿ ಪನ್ನು ನಟನೆಯ ‘ಥಪ್ಪಡ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...