Homeಚಳವಳಿದೇಶದ ಎಲ್ಲಾ ರೈತ ಸಂಘಗಳನ್ನು ಕರೆಯದ ಹೊರತು ಮಾತುಕತೆಯಿಲ್ಲ: ಪ್ರತಿಭಟನಾ ನಿರತ ರೈತರು

ದೇಶದ ಎಲ್ಲಾ ರೈತ ಸಂಘಗಳನ್ನು ಕರೆಯದ ಹೊರತು ಮಾತುಕತೆಯಿಲ್ಲ: ಪ್ರತಿಭಟನಾ ನಿರತ ರೈತರು

"ದೇಶದಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳಿವೆ. ಆದರೆ ಸರ್ಕಾರ ಕೇವಲ 32 ಸಂಘಟನೆಗಳನ್ನು ಮಾತುಕತೆಗೆ ಕರೆದಿದೆ. ಮಾತುಕತೆಗೆ ಕರೆಯುವುದಾದರೆ ದೇಶದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ಚರ್ಚೆಗೆ ಬರುವುದಿಲ್ಲ"

- Advertisement -

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಆಂದೋಲನ ಇಂದಿಗೆ 6 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಇಂದು ರೈತರನ್ನು ಮಾತುಕತೆಗೆ ಕರೆದಿದ್ದು, ಆದರೆ ದೇಶದ ಎಲ್ಲಾ ರೈತ ಸಂಘಗಳನ್ನು ಮಾತುಕತೆಗೆ ಆಹ್ವಾನಿಸದ ಹೊರತು ಚರ್ಚೆಗೆ ಬರುವುದಿಲ್ಲ ಎಂದು ರೈತರು ಹೇಳಿದ್ದಾರೆ.

ರೈತರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಚಳಿ ಮತ್ತು ಕೊರೊನಾವನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 3 ಕ್ಕಿಂತಲೂ ಮೊದಲೇ ನಾವು ರೈತ ಸಂಘಗಳ ಮುಖಂಡರನ್ನು ಚರ್ಚೆಗೆ ಆಹ್ವಾನಿಸಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಕೊರೆವ ಚಳಿಯಲ್ಲಿ ದೇಶದ ಅನ್ನದಾತರು: ದೇವ್ ದೀಪಾವಳಿ ಸಂಭ್ರಮದಲ್ಲಿ ಪ್ರಧಾನಿ ಮೋದಿ!

ಪಂಜಾಬ್ ರೈತ ಸಂಘರ್ಘ ಸಮಿತಿ ಜಂಟಿ ಕಾರ್ಯದರ್ಶಿ ಸುಖ್‌ವಿಂದರ್ ಎಸ್ ಸಭರನ್, “ದೇಶದಲ್ಲಿ 500ಕ್ಕೂ ಹೆಚ್ಚು ರೈತ ಸಂಘಟನೆಗಳಿವೆ. ಆದರೆ ಸರ್ಕಾರ ಕೇವಲ 32 ಸಂಘಟನೆಗಳನ್ನು ಮಾತುಕತೆಗೆ ಕರೆದಿದೆ. ಮಾತುಕತೆಗೆ ಕರೆಯುವುದಾದರೆ ದೇಶದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು ಆಹ್ವಾನಿಸಬೇಕು. ಇಲ್ಲದಿದ್ದರೆ ಚರ್ಚೆಗೆ ಬರುವುದಿಲ್ಲ” ಎಂದು ಹೇಳಿದ್ದಾರೆ.

ಭಾರತಿ ಕಿಸಾನ್ ಯುನಿಯನ್(ಡಕೌಂಡ) ಪ್ರಧಾನ ಕಾರ್ಯದರ್ಶಿ ಜಗನ್ ಮೋಹನ್ ಸಿಂಗ್, “ಪಂಜಾಬ್‌ಗೆ ಮಾತ್ರ ಪ್ಯಾಕೇಜ್ ಅಥವಾ ಕೊಡುಗೆ ನೀಡುವುದಾದರೆ ಅದು ಸ್ವೀಕಾರಾರ್ಹವಲ್ಲ. ಇಡೀ ದೇಶದ ರೈತರಿಗೆ ಸಾಮಾನ್ಯ ನಿರ್ಧಾರವನ್ನು ಪಡೆಯುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೈತರ ಪರವಾಗಿ ನಿಲ್ಲುವುದನ್ನೇ ರಾಜಕಾರಣವೆನ್ನುವುದಾದರೆ, ಹೌದು ನಾವು ತಪ್ಪಿತಸ್ಥರೇ..!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ನಿರಾಕರಣೆ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ

0
ಈ ಬಾರಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲು ಕೇರಳ ಸರ್ಕಾರ ಕಳುಹಿಸಿದ್ದ ಪ್ರಸ್ತಾಪವನ್ನು ಒಕ್ಕೂಟ ಸರ್ಕಾರ ನಿರಾಕರಿಸಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.  ಕೇರಳವು ಗಣರಾಜ್ಯೋತ್ಸವದ ಸ್ತಬ್ಧಚಿತ್ರದಲ್ಲಿ...
Wordpress Social Share Plugin powered by Ultimatelysocial