Homeಮುಖಪುಟದೇಶದಲ್ಲಿ ಆಹಾರಗಳ ದಾಸ್ತಾನು ಸಾಕಷ್ಟಿದೆ, ಆದರೂ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ!

ದೇಶದಲ್ಲಿ ಆಹಾರಗಳ ದಾಸ್ತಾನು ಸಾಕಷ್ಟಿದೆ, ಆದರೂ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ!

- Advertisement -
- Advertisement -

ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣಕ್ಕಾಗಿ ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಬಹಳಷ್ಟು ಬಡವರು ಮತ್ತು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯಗಳು ಸಿಗದೇ ಸಂಕಷ್ಟದಲ್ಲಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ಮಧ್ಯೆ ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂದು ಹೇಳಿಕೊಳ್ಳಲು ಸರ್ಕಾರ ಹೆಣಗಾಡುತ್ತಿದೆ. ಹಾಗಾದರೆ ವಾಸ್ತವವೇನು? ಭಾರತದಲ್ಲಿನ ಆಹಾರದ ಪ್ರಮಾಣವೆಷ್ಟು? ಹಸಿದವರ ಸಂಖ್ಯೆಯೆಷ್ಟು ಎಂಬುದನ್ನು ಅರಿತುಕೊಳ್ಳಬೇಕಿದೆ.

ಮಾರ್ಚ್ ನಲ್ಲಿ ಭಾರತದ ಆಹಾರ ನಿಗಮ ( FCI) ದಲ್ಲಿನ ದಾಸ್ತಾನು ಸುಮಾರು 770 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ. ಇದು FCI ನ ಈ ಹಿಂದಿನ ಕಾಪು ದಾಸ್ತಾನು 210 ಲಕ್ಷ ಟನ್ ಗಿಂತ ಮೂರು ಪಟ್ಟು ಹೆಚ್ಚು ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಹೆಚ್ಚುವರಿ ಆಹಾರ ಧಾನ್ಯಗಳ ಬಗ್ಗೆ ಹೇಳಿದ್ದಾರೆ.

“ಗೊಡೌನ್‌ಗಳಲ್ಲಿ ನಮಗೆ ಆಹಾರ ಧಾನ್ಯದ ದಾಸ್ತಾನು ಕೊರತೆಯಿಲ್ಲ ಮತ್ತು ಅಗತ್ಯವಿರುವದಕ್ಕಿಂತ ಎರಡು ಪಟ್ಟು ಹೆಚ್ಚು ಸಂಗ್ರಹವಿದೆ” ಎಂದು ಪಾಸ್ವಾನ್ ಹೇಳಿದ್ದರು.

ಈ ವರ್ಷ, ಭಾರತವು ಪ್ರಮುಖ ಚಳಿಗಾಳದ ಬೆಳೆಯಾದ 106.21 ಮಿಲಿಯನ್ ಟನ್ ಗೋಧಿ ಕೊಯ್ಲು ಮಾಡಲು ಸಜ್ಜಾಗಿದೆ. ಫೆಬ್ರವರಿಯಲ್ಲಿ ಬಿಡುಗಡೆಯಾದ ಸರ್ಕಾರದ ಎರಡನೇ ಮುಂಗಡ ಅಂದಾಜಿನ ಪ್ರಕಾರ, ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳನ್ನು ಒಳಗೊಂಡಿರುವ ಒಟ್ಟು ಚಳಿಗಾಳದ ಆಹಾರ ಧಾನ್ಯಗಳನ್ನು 149.60 ಮಿಲಿಯನ್ ಟನ್ ಎಂದು ನಿರೀಕ್ಷಿಸಲಾಗಿದೆ, ಇದು ಕಳೆದ ವರ್ಷಕ್ಕಿಂತ ಶೇಕಡಾ 4.10 ರಷ್ಟು ಹೆಚ್ಚಾಗಿದೆ.

“ಇದು ಹುಚ್ಚು. ಭಾರತದಲ್ಲಿ ಅಂತಹ ಶೇಖರಣಾ ಮಟ್ಟಗಳು ಎಂದಿಗೂ ಇರಲಿಲ್ಲ. FCI ಗೆ ಆ ಮಟ್ಟಿನ ಶೇಖರಣಾ ಸಾಮರ್ಥ್ಯವಿಲ್ಲ” ಎಂದು ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಜ್ಞಾನಿ ಜೀನ್ ಡ್ರೀಜ್ ಹೇಳಿದ್ದಾರೆ.

ಆಹಾರ ಮತ್ತು ವ್ಯಾಪಾರ ನೀತಿ ವಿಶ್ಲೇಷಕ ದೇವಿಂದರ್ ಶರ್ಮಾ “ಅಂದಾಜಿನ ಪ್ರಕಾರ ಜುಲೈವರೆಗೆ ಆಹಾರ ದಾಸ್ತಾನು ಇರುವ ಕಾರಣದಿಂದಾಗಿ ಭಾರತವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸುರಕ್ಷಿತ ಸ್ಥಾನದಲ್ಲಿದೆ” ಎಂದು ಹೇಳಿದ್ದಾಗಿ ದಿ ಟೆಲಿಗ್ರಾಫ್ ವರದಿ ಮಾಡಿದೆ.

“ಕನಿಷ್ಠ ಒಂದು ವರ್ಷದವರೆಗೆ ಇಡೀ ರಾಷ್ಟ್ರಕ್ಕೆ ಆಹಾರ ಸರಬರಾಜು ಮಾಡುವ ಬಗ್ಗೆ ನಾವು ಚಿಂತಿಸಬೇಕಾಗಿಲ್ಲ. ಈ ರೀತಿಯಾಗಿರದಿದ್ದರೆ ನಾವು ಎರಡು ವಿಷಯಗಳ ವಿರುದ್ಧ ಹೋರಾಡುತ್ತಿದ್ದೆವು, ಒಂದು ಸಾಂಕ್ರಾಮಿಕ ಮತ್ತು ಇನ್ನೊಂದು ಹಸಿವು” ಎಂದು ಅವರು ವಿವರಿಸಿದರು.

ಆದರೆ ದುರದೃಷ್ಟವಶಾತ್, ಆಹಾರ ದಾಸ್ತಾನಿನಲ್ಲಿ ಈ ಹಿಂದಿನ ಕಾಪು ದಾಸ್ತಾನು ಇದ್ದ ಹೊರತಾಗಿಯೂ ಭಾರತ ಇನ್ನೂ ಎರಡು ವಿಷಯಗಳ ವಿರುದ್ಧ ಹೋರಾಡುತ್ತಿದೆ ಎಂದು ಅವರು ಹೇಳಿದರು. “ನಾವು ಆಹಾರ ದಾಸ್ತಾನು ಹೊಂದಿರುವಾಗ ಯಾಕೆ ಚಿಂತೆ ಮಾಡಬೇಕಾಗಿದೆ? ಈ ದೇಶದಲ್ಲಿ ಹಸಿವು ಬರದಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ”ಎಂದು ಶರ್ಮಾ ಹೇಳಿದ್ದಾರೆ.

ಅಸಾಧಾರಣ ಬಿಕ್ಕಟ್ಟುಗಳಿಗೆ ಅಸಾಧಾರಣ ಪರಿಹಾರಗಳು ಬೇಕಾಗುತ್ತವೆ… ಹಸಿವಿನಿಂದ ಯಾರು ಬಳಲುತ್ತಿದ್ದಾರೋ ಅವರಿಗೆ ಈ ದಾಸ್ತಾನುಗಳನ್ನು ತೆರೆಯಿರಿ. ರಾಷ್ಟ್ರವನ್ನು ಪೋಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ದೇವಿಂದರ್ ಶರ್ಮಾ ಹೇಳಿದ್ದಾರೆ.

ಮುಖ್ಯವಾಗಿ ಆಹಾರ-ಸಬ್ಸಿಡಿ ಅಕೌಂಟಿಂಗ್‌ಗೆ ಸಂಬಂಧಿಸಿರುವ ಅಸಂಗತತೆಯು, ಪರಿಸ್ಥಿತಿಯನ್ನು ನಿಭಾಯಿಸುವಾಗ ಕೇಂದ್ರದ ಮೇಲೆ ಪರಿಣಾಮ ಬೀರುವ ವಿವಿಧ ಸಮಸ್ಯೆಗಳನ್ನು ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ವಿವರಿಸಿದ್ದಾರೆ. “ಆರ್ಥಿಕ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೆಚ್ಚುವರಿ ದಾಸ್ತಾನುಗಳನ್ನು ಲೋಡ್ ಮಾಡಿ ಅದನ್ನು ರಾಜ್ಯಕ್ಕೆ ಕೊಡುವುದರಿಂದ ಏನೂ ಖರ್ಚಾಗುವುದಿಲ್ಲ” ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರಲ್ಲದೆ, “ನಾವು ಶೂನ್ಯವಾಗಿರುವ ಆರ್ಥಿಕ ವೆಚ್ಚದ ಬಗ್ಗೆ ಯೋಚಿಸಬಾರದು. ಸಾರಿಗೆಯಲ್ಲಿ ಸಣ್ಣ ಆರ್ಥಿಕ ವೆಚ್ಚವಿರಬಹುದು, ” ಎಂದಿದ್ದಾರೆ.

ಏಪ್ರಿಲ್ 13 ರಂದು ಪಾಸ್ವಾನ್ ಅವರು ಲಾಕ್ ಡೌನ್ ಮಾಡುವ ಮೊದಲು ಸುಮಾರು 30 ಲಕ್ಷ ಟನ್ ಆಹಾರ ಧಾನ್ಯವನ್ನು ರೈಲ್ವೆ ಮೂಲಕ ಲೋಡ್ ಮಾಡಿ ರವಾನಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ತಜ್ಞರು ಆಹಾರ ಧಾನ್ಯಗಳ ಸಾಗಣೆಯು ಸಮಸ್ಯೆಯಲ್ಲ ಎಂದು ಸೂಚಿಸಿದ್ದಾರೆ, ವಿಶೇಷವಾಗಿ ಈಗ ಸರಕುಗಳ ಚಲನೆ ತೆರೆದುಕೊಂಡಿದೆ. ನಿಜವಾದ ಕಾಳಜಿ ಪಡಿತರ ಚೀಟಿ ಇಲ್ಲದವರ ಬಗ್ಗೆ, ವಿಶೇಷವಾಗಿ ಸಿಕ್ಕಿಬಿದ್ದ ಸಾವಿರಾರು ವಲಸೆ ಕಾರ್ಮಿಕರ ಬಗ್ಗೆ ಎಂದಿದ್ದಾರೆ.

ವಾಸ್ತವವೆಂದರೆ ಹೆಚ್ಚಿನ ಸಂಖ್ಯೆಯ ಜನರು ಇನ್ನೂ ಪಡಿತರ ಚೀಟಿಗಳನ್ನು ಹೊಂದಿಲ್ಲ. ಈ ಜನರು ಹೊಸ ಕುಟುಂಬಗಳನ್ನು ಹೊಂದಿರಬಹುದು, ಕೆಲಸದ ಹುಡುಕಾಟದಲ್ಲಿ ಇತರ ನಗರಗಳಿಗೆ ವಲಸೆ ಹೋಗಿರಬಹುದು ಅಥವಾ ಅವರ ಆಧಾರ್ ಕಾರ್ಡ್‌ಗಳೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗದ ಕಾರಣ ಅವರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಲದೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಿಂದಾಗಿ ಹಲಾವಾರು ಜನರು ತಮ್ಮ ಸ್ಥಿರವಾದ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

ಲಾಕ್ ಡೌನ್ ನಿಂದಾಗಿ ಸಿಕ್ಕಿಬಿದ್ದವರಿಗೆ ರಾಜ್ಯ ವಿಪತ್ತು ನಿಧಿಯಿಂದ ಆಹಾರವನ್ನು ನೀಡಬೇಕು ಎಂದು ಪಾಸ್ವಾನ್ ಹೇಳಿದ್ದರು. “ರಾಜ್ಯ ಸರ್ಕಾರಗಳು ಎಷ್ಟು ಆಹಾರ ಧಾನ್ಯವನ್ನು ತೆಗೆದುಕೊಳ್ಳಬಹುದು – ಗೋಧಿಗೆ ಕಿಲೋಗೆ 21 ರೂ ಮತ್ತು ಅಕ್ಕಿಗೆ 22 ರೂ. – ಮತ್ತು ಜನರಿಗೆ ಮತ್ತಷ್ಟು ವಿತರಿಸಬಹುದು” ಎಂದು ಸಚಿವರು ಹೇಳಿದ್ದರು. ಮೂರು ತಿಂಗಳವರೆಗೆ ಪ್ರತಿ ಕೆ.ಜಿ.ಗೆ 2 ಅಥವಾ 3 ರೂ.ಗಳಂತೆ ವಿತರಿಸಲಾಗುವ ಉಚಿತ ಪಡಿತರವನ್ನು ನೀಡುವ ಸರ್ಕಾರದ ನಿರ್ಧಾರವನ್ನೂ ಅವರು ಉಲ್ಲೇಖಿಸಿದ್ದಾರೆ.

ಕೇಂದ್ರ ಸಚಿವರು ಉಲ್ಲೇಖಿಸಿದ ಬೆಲೆ ಮಾರುಕಟ್ಟೆ ಬೆಲೆಗಿಂತ ಕೆಲವೇ ರೂಪಾಯಿಗಳಷ್ಟಿದೆ ಎಂದು ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಗಮನಸೆಳೆದದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದಂತೆಯೇ ಸಂಪನ್ಮೂಲಗಳನ್ನು ಹೊಂದಿರದ ಕಾರಣ ರಾಜ್ಯ ಸರ್ಕಾರಗಳು ಅದನ್ನು ಪಾವತಿಸುವುದಿಲ್ಲ.

ಸರ್ಕಾರವು ಕನಿಷ್ಠ ಆರು ತಿಂಗಳವರೆಗೆ ತುರ್ತು ಪಡಿತರ ಚೀಟಿಗಳನ್ನು ಒದಗಿಸಬೇಕು ಮತ್ತು ಮುಂದಿನ 12 ತಿಂಗಳುಗಳ ತಾತ್ಕಾಲಿಕ ಕ್ರಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಕೊಳೆಗೇರಿಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಬೇಕು ಎಂದು ಜೀನ್ ಡ್ರೀಜ್ ಸಲಹೆ ನೀಡಿದರು.

“ಇದು ಆಹಾರ ದಾಸ್ತಾನುಗಳಲ್ಲಿ ಸಣ್ಣ ಪರಿಣಾಮ ಮಾತ್ರ ಮಾಡುತ್ತದೆ. ಅಸ್ತಿತ್ವದಲ್ಲಿರುವ ಹಂಚಿಕೆಗೆ ಹೋಲಿಸಿದರೆ ಇದಕ್ಕೆ ಹೆಚ್ಚುವರಿ 200 ಲಕ್ಷ ಟನ್ ಆಹಾರ ಧಾನ್ಯಗಳು ಬೇಕಾಗುತ್ತವೆ. ಇದು ಹೆಚ್ಚುವರಿಯಾಗಿ ಇರುವ ಆಹಾರ ದಾಸ್ತಾನಿನ ಅರ್ಧದಷ್ಟು ಆಗುವುದಿಲ್ಲ” ಎಂದು ಡ್ರೋಜ್ ಹೇಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...