Homeಮುಖಪುಟಹಸಿವು, ನೋವಿನಿಂದ ಬಳಲಿದ ಬಿಟ್ಟು ಎಂಬ ಬಾಲಕ ಕೊನೆಗೂ ಮನೆ ಸೇರಿದ ಕತೆ

ಹಸಿವು, ನೋವಿನಿಂದ ಬಳಲಿದ ಬಿಟ್ಟು ಎಂಬ ಬಾಲಕ ಕೊನೆಗೂ ಮನೆ ಸೇರಿದ ಕತೆ

ಅಂತೂ ಒಬ್ಬ ಕಾರ್ಮಿಕನ ಕೆಲದಿನಗಳ ಹಸಿವು ನಿಂತಿದೆ. ಆದರೆ ಇನ್ನೂ ಹಸಿವಿನಿಂದ ಬಳಲುತ್ತಿರುವ ಕಾರ್ಮಿಕರು ಅದೆಷ್ಟು ಸಂಖ್ಯೆಯಲ್ಲಿದ್ದಾರೋ ತಿಳಿಯದು.

- Advertisement -
- Advertisement -

ಲಾಕ್‌ಡೌನ್‌ ವಿಸ್ತರಿಸಿದೆ. ಈ ಸಮಯದಲ್ಲಿ ’ಬಿಟ್ಟು’ ಎಂಬ ದೆಹಲಿಯ ವಲಸೆ ಕಾರ್ಮಿಕ ಹಸಿವಿನಿಂದ, ಬಿಸಿಲಿನಿಂದ ಒದ್ದಾಡುತ್ತಿದ್ದಾನೆ. ಆತ ದರ್ಜಿಯ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್‌ ಘೋಷಿಸಿದಾಗಿನಿಂದ ಅವನಿಗೆ ಕೆಲಸವೂ ಇಲ್ಲ, ಸಂಬಳವೂ ಇಲ್ಲ. ಈಗ ಅವನ ಬಳಿ ಹಣವಿಲ್ಲ, ಆಹಾರವಿಲ್ಲ. ಇದೇ ಸಮಯದಲ್ಲಿ ಮನೆ ಬಾಡಿಗೆ ಕಟ್ಟದ ಕಾರಣ ಆತನ ಮನೆಯ ಮಾಲೀಕರು ಮನೆಯಿಂದ ಹೊರಹಾಕಿದ್ದಾರೆ. ದೆಹಲಿಯ ಬೀದಿಗಳಲ್ಲಿ ಉಷ್ಣಾಂಶ 40° C ಆಗಿದೆ.

ಈ ಸಂದರ್ಭದಲ್ಲಿ ಆತ ಏನು ಮಾಡಬೇಕು? ಆ ಸ್ಥಿತಿಯಲ್ಲಿ ನಾವಿದ್ದರೆ ಏನು ಮಾಡುತ್ತಿದ್ದೆವೆ? ಕೊನೆಗೂ ಆತನಿಗೆ ತನ್ನ ಸಹೋದರಿಯ ಮನೆ ನೆನಪಾಯಿತು. ಅಲ್ಲಿಗೆ ಹೋಗಿಬಿಡಲು ನಿರ್ಧರಿಸಿ ಕಾಲ್ನಡಿಗೆ ಆರಂಭಿಸಿದ್ದಾನೆ. ಅಷ್ಟರಲ್ಲಿ ಅದೆಲ್ಲಿದ್ದರೋ ರಾಕ್ಷಸಿ ಸ್ವರೂಪದ ಪೊಲೀಸರು ಆತನನ್ನು ಮನಬಂದಂತೆ ಥಳಿಸಿದ್ದಾರೆ. “ಹಸಿವಾಗುತ್ತಿದೆ, ಊಟಕ್ಕಾಗಿ ಸಹೋದರಿಯ ಮನೆಗೆ ಹೋಗುತ್ತಿದ್ದೇನೆ ಬಿಟ್ಟುಬಿಡಿ” ಎಂದರೂ ಕೇಳದೆ ಪೊಲೀಸರು ಥಳಿಸಿದ್ದಾರೆ.

ಈ ಅಮಾನವೀಯ ಘಟನೆ ನವಭಾರತ್ ಟೈಮ್ಸ್ ಪತ್ರಕರ್ತ ಅನುಪ್ ಪಾಂಡೆಯ ಗಮನಕ್ಕೆ ಬಂದಿದೆ. ಅವರು ತಕ್ಷಣ ಟ್ವಿಟ್ಟರ್‌ನಲ್ಲಿ ಬಿಟ್ಟು ಅಳುತ್ತಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಕೂಡಲೇ ಸಾವಿರಾರು ಟ್ವಿಟ್ಟರ್‌ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸಹಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ತದನಂತರ ಎಚ್ಚೆತ್ತ ದೆಹಲಿ ಸರ್ಕಾರ ತನ್ನ ಶಾಸಕನನ್ನು ಕಳುಹಿಸಿ ಬಿಟ್ಟುವಿಗೆ ಸಹಾಯ ಮಾಡಲು ಸೂಚಿಸಿದೆ.  ತಿಮರ್‌ ಪುರದ ಶಾಸಕ ದಿಲೀಪ್‌ ಕೆ ಪಾಂಡೆ ಸ್ಥಳಕ್ಕೆ ಧಾವಿಸಿ ಬಿಟ್ಟುವನ್ನು ಆತನ ತಾಯಿಯ ಮನೆಗೆ ತಲುಪಿಸಿದ್ದಾರೆ. ಅಲ್ಲದೇ ಅವರಿಗೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಒದಗಿಸಿದ್ದಾಗಿ ಆಪ್‌ ತನ್ನ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದೆ.

ಅಂತೂ ಒಬ್ಬ ಕಾರ್ಮಿಕನ ಕೆಲದಿನಗಳ ಹಸಿವು ನಿಂತಿದೆ. ಆದರೆ ಇನ್ನೂ ಹಸಿವಿನಿಂದ ಬಳಲುತ್ತಿರುವ ಕಾರ್ಮಿಕರು ಅದೆಷ್ಟು ಸಂಖ್ಯೆಯಲ್ಲಿದ್ದಾರೋ ತಿಳಿಯದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...