Homeಅಂತರಾಷ್ಟ್ರೀಯತೆರೆಸಾ ಮೇಗೆ 'Exit' ಎಂದ ಬ್ರಿಟನ್

ತೆರೆಸಾ ಮೇಗೆ ‘Exit’ ಎಂದ ಬ್ರಿಟನ್

2016ರ ನಿರ್ಧಾರವನ್ನೇ ತಲೆಕೆಳಗು ಮಾಡುವ ಸಾಧ್ಯತೆ ಇರುವ ಎರಡನೇ ಜನಮತಗಣನೆ ಇತ್ಯಾದಿಯಾಗಿ ಹಲವು ಸಾಧ್ಯತೆಗಳು ಎದುರಾಗಲಿವೆ

- Advertisement -
- Advertisement -

| ಡಾ.ಸ್ವಾತಿ ಶುಕ್ಲಾ |

ಬ್ರೆಕ್ಸಿಟ್ ಒಪ್ಪಂದವೊಂದನ್ನು ಸಾಧಿಸಲು ವಿಫಲರಾದ ಬಳಿಕ ಯುಕೆ ಪ್ರಧಾನಿ ತೆರೆಸಾ ಮೇ ಅವರು, ಆಳುವ ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಮತ್ತು ಬ್ರಿಟನ್‌ನ ಪ್ರಧಾನಿಯಾಗಿ ತನ್ನ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ತಾನು ಜೂನ್ 7ರಂದು ಆಳುವ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ತ್ಯಜಿಸುವುದಾಗಿ ಅವರು ತನ್ನ ಘೋಷಣೆಯಲ್ಲಿ ತಿಳಿಸಿದ್ದಾರೆ. 

ಬ್ರೆಕ್ಸಿಟ್ (Brexit)
ಬ್ರೆಕ್ಸಿಟ್- (ಬ್ರಿಟನ್ ಮತ್ತು ಎಕ್ಸಿಟ್ ಎಂಬ ಎರಡು ಪದಗಳ ಸಂಕ್ಷೇಪ) ಎಂಬುದು ಯುಕೆಯ ಯುರೋಪಿಯನ್ ಯೂನಿಯನ್ (ಐರೋಪ್ಯ ಒಕ್ಕೂಟ)ನಲ್ಲಿ ಮುಂದುವರಿಯಬೇಕೆ, ಹೊರಬರಬೇಕೆ ಎಂಬುದನ್ನು ನಿರ್ಧರಿಸಲು 23 ಜೂನ್ 2016ರಲ್ಲಿ ನಡೆದ ಜನಮತಗಣನೆ.

ಈ ಜನಮತಗಣನೆಯಲ್ಲಿ 71.8 ಶೇಕಡಾ ಮತದಾರರು, ಎಂದರೆ ಸುಮಾರು ಮೂರು ಕೋಟಿ ಮತದಾರರು ಮತ ಚಲಾಯಿಸಿದ್ದು, ಹೊರಬರುವ ತೀರ್ಮಾನ 51.9 ಶೇಕಡಾ- 48.1 ಶೇಕಡಾ ನಿಕಟ ಅಂತರದಿಂದ ಜಯಿಸಿತ್ತು. ಆದರೆ, ಈ ಜನಮತಗಣನೆ ನಡೆದು ಹೆಚ್ಚುಕಡಿಮೆ ಮೂರು ವರ್ಷಗಳ ನಂತರವೂ ತಾನು 1973ರಲ್ಲಿ ಸೇರಿದ್ದ ಐರೋಪ್ಯ ಒಕ್ಕೂಟದಿಂದ ಹೊರಬರುವುದು ಹೇಗೆ ಎಂಬುದು ಬಿಡಿ, ಹೊರಬರಬೇಕೋ ಬೇಡವೋ ಎಂಬ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲು ಬ್ರಿಟನ್ ವಿಫಲವಾಗಿದೆ.

ಇಯು, ಎಂದು ಗುರುತಿಸಲ್ಪಡುವ ಐರೋಪ್ಯ ಒಕ್ಕೂಟವು 28 ಐರೋಪ್ಯ ದೇಶಗಳ ಆರ್ಥಿಕ ಮತ್ತು ರಾಜಕೀಯ ಸಹಭಾಗಿತ್ವವಾಗಿದೆ. ಎರಡನೇ ಮಹಾಯುದ್ಧದ ಬಳಿಕ- ಪರಸ್ಪರ ವಾಣಿಜ್ಯ, ವ್ಯಾಪಾರ ಇರುವ ದೇಶಗಳ ನಡುವೆ ಯುದ್ಧದ ಸಂಭವ ಕಡಿಮೆ ಎಂಬ ನೆಲೆಯಲ್ಲಿ ಆರ್ಥಿಕ ಸಹಕಾರವನ್ನು ಉತ್ತೇಜಿಸಲು ಹುಟ್ಟಿಕೊಂಡ ಪರಿಕಲ್ಪನೆಯಿದು. ಅಲ್ಲಿಂದ ಅದೀಗ ‘ಏಕ ಮಾರುಕಟ್ಟೆ’ಯಾಗುವ ತನಕ ಬೆಳೆದಿದೆ. ಎಷ್ಟರ ಮಟ್ಟಿಗೆ ಎಂದರೆ, ಸರಕು ಮತ್ತು ಜನರು ಒಂದೇ ದೇಶ ಎಂಬಷ್ಟರ ಮಟ್ಟಿಗೆ ಈ ದೇಶಗಳಲ್ಲಿ ಸಂಚರಿಸಬಹುದು. ಅದಕ್ಕೆ ಸ್ವಂತ ಕರೆನ್ಸಿಯಾದ ಯುರೋ ಇದ್ದು, ಅದನ್ನು 19 ದೇಶಗಳು ಬಳಸುತ್ತಿವೆ. ಅದಕ್ಕೆ ಸ್ವಂತ ಸಂಸತ್ತು ಕೂಡಾ ಇದ್ದು, ಅದು ಪರಿಸರ, ಸಾರಿಗೆ, ಗ್ರಾಹಕರ ಹಕ್ಕುಗಳು, ಅಷ್ಟೇ ಏಕೆ ಮೊಬೈಲ್ ಫೋನ್ ದರ ನಿಗದಿಯ ವರೆಗೆ ವ್ಯಾಪಕ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಿದೆ.

ಹೊರ ಬರುವ ಪ್ರಕ್ರಿಯೆ ಆರಂಭಿಸಿದ ಬಳಿಕ ಯುಕೆ, 29 ಮಾರ್ಚ್ 2019ರಲ್ಲಿ ಹೊರಬರಬೇಕಾಗಿತ್ತು. ಆದರೆ ಹೊರಬರುವಿಕೆ ಕುರಿತು ಐರೋಪ್ಯ ಒಕ್ಕೂಟ ಮತ್ತು ಯುಕೆ ನಡುವೆ ಮಾಡಲಾಗಿದ್ದ ಒಪ್ಪಂದವನ್ನು ಸಂಸದರು ಮೂರು ಬಾರಿ ತಿರಸ್ಕರಿಸಿದ್ದಾರೆ. ಈ ಒಪ್ಪಂದದ ಮುಖ್ಯ ಅಂಶವೆಂದರೆ, ಉದ್ದಿಮೆಗಳು ಹಾಗೂ ವ್ಯಕ್ತಿಗಳು ಆದಷ್ಟು ಸರಾಗವಾಗಿ ಐರೋಪ್ಯ ಒಕ್ಕೂಟದಿಂದ ಹೊರಬರುವುದನ್ನು ಖಾತರಿಪಡಿಸುವುದು ಮತ್ತು ಶಾಶ್ವತವಾದ ವಾಣಿಜ್ಯ ಸಂಬಂಧವನ್ನು ರೂಪಿಸಿಕೊಳ್ಳಲು ಎರಡೂ ಕಡೆಗಳವರಿಗೆ ಕಾಲಾವಕಾಶ ನೀಡುವುದು. ಇದೀಗ ಐರೋಪ್ಯ ಒಕ್ಕೂಟವು ಆರು ತಿಂಗಳುಗಳ ವಿಸ್ತರಣೆ ನೀಡಿ, 31 ಅಕ್ಟೋಬರ್ 2019ರ ತನಕ ಕಾಲಾವಕಾಶ ಒದಗಿಸಿದೆ.

ಮೇಯ ದಾಖಲೆ
ಐರೋಪ್ಯ ಒಕ್ಕೂಟದ ಜೊತೆ ಯಾವ ರೀತಿಯ ಭವಿಷ್ಯದ ಸಂಬಂಧವನ್ನು ಒಪ್ಪಲು ಸಿದ್ಧರಿದ್ದೀರಿ ಎಂಬ ಕುರಿತು ತಮ್ಮದೇ ಪಕ್ಷದೊಳಗಿನ ಬ್ರೆಕ್ಸಿಟ್ ಬೆಂಬಲಿಗರ ಜೊತೆ ಮೂರು ವರ್ಷಗಳ ಕಠಿಣ ಚೌಕಾಸಿಯ ಬಳಿಕ ಮೇ ಅವರ ನಿರ್ಗಮನವಾಗುತ್ತಿದೆ. 2017ರ ಸಾರ್ವತ್ರಿಕ ಚುನಾವಣೆಯಲ್ಲಿ ‘ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಸದೃಢ ಮತ್ತು ಸ್ಥಿರ ನಾಯಕತ್ವ’ದ ಭರವಸೆ ನೀಡುವ ದುರಂತಕಾರಿ ಎಂದು ಬಣ್ಣಿಸಲಾಗುವ ಪ್ರಚಾರದ ನೇತೃತ್ವ ವಹಿಸಿದ್ದ ಮೇ ಅವರು ಬಹುಮತ ಕಳೆದುಕೊಂಡ ಬಳಿಕ ಈ ಕೆಲಸ ಇನ್ನಷ್ಟು ಕಠಿಣವಾಯಿತು.

ನಂತರ ರೂಪಿಸಿದ ಹತ್ತು ಅಂಶಗಳ ‘ಹೊಸ ಬ್ರೆಕ್ಸಿಟ್ ಒಪ್ಪಂದ’ವು ಪ್ರತಿಪಕ್ಷಗಳು ಬಿಡಿ, ಅವರದ್ದೇ ಟೋರಿ (ಕನ್ಸರ್ವೇಟಿವ್) ಪಕ್ಷದ ಸಾಮಾನ್ಯ ಸಂಸದರು ಮಾತ್ರವಲ್ಲ, ಅವರದ್ದೇ ಸಂಪುಟದ ಕೆಲವು ಸದಸ್ಯರನ್ನೂ ಕೆಂಡಾಮಂಡಲಗೊಳಿಸಿದ ಬಳಿಕ ಅವರ ಗತಿ ಖಚಿತವಾಗಿತ್ತು. ಹೌಸ್ ಆಫ್ ಕಾಮನ್ಸ್ (ಕೆಳಮನೆ) ನಾಯಕಿ ಆಂಡ್ರಿಯಾ ಲೀಡ್‌ಸಂ ಅವರು ಈ ಬ್ರೆಕ್ಸಿಟ್ ಮಸೂದೆಯನ್ನು ಮಂಡಿಸುವುದಕ್ಕೆ ಬದಲಾಗಿ ಬುಧವಾರ ರಾಜೀನಾಮೆಯನ್ನೇ ನೀಡಿದ್ದರು.

ಅವರ ಮಾಜಿ ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ಅವರು ಮುಂದಿನ ಪ್ರಧಾನಿ ಹುದ್ದೆಗೆ ಪ್ರಬಲ ಅಭ್ಯರ್ಥಿಯಾಗಿದ್ದು, ಒಂದು ಡಜನಿಗೂ ಹೆಚ್ಚು ಹಿರಿಯ ಟೋರಿ ನಾಯಕರು ಈ ಪದಕ್ಕಾಗಿ ಹೊಂಚುತ್ತಿದ್ದಾರೆ.

ಬ್ರಿಟನ್‌ಗೆ ಮುಂದೇನು ಕಾದಿದೆ?

ಮೇ ಅವರ ನಿರ್ಗಮನದ ಬಳಿಕ ಹೊಸ ನಾಯಕತ್ವದಲ್ಲಿ ಬ್ರೆಕ್ಸಿಟ್ ಬಿಕ್ಕಟ್ಟು ತೀವ್ರವಾಗಲಿದ್ದು, ಹೊಸ ನಾಯಕತ್ವದಲ್ಲಿ ಐರೋಪ್ಯ ಒಕ್ಕೂಟದ ಜೊತೆ ಸಂಘರ್ಷದ ಸಾಧ್ಯತೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ, ಸಾರ್ವತ್ರಿಕ ಚುನಾವಣೆ ನಡೆದು ಜೆರೆಮಿ ಕೋರ್ಬಿನ್ ನೇತೃತ್ವದ ಲೇಬರ್ ಪಕ್ಷದ ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆಯೂ ಇದೆ. ಹಾಗಾದಲ್ಲಿ ಬ್ರಿಟನ್‌ಗೆ ಕ್ರಮಬದ್ಧವಾದ ಹಿಂತೆಗೆತ ಒಪ್ಪಂದ, ಒಪ್ಪಂದ ರಹಿತ ಹಿಂತೆಗೆತ, ಚುನಾವಣೆ, ಅಥವಾ ಐರೋಪ್ಯ ಒಕ್ಕೂಟದಿಂದ ಹೊರಬರುವ 2016ರ ನಿರ್ಧಾರವನ್ನೇ ತಲೆಕೆಳಗು ಮಾಡುವ ಸಾಧ್ಯತೆ ಇರುವ ಎರಡನೇ ಜನಮತಗಣನೆ ಇತ್ಯಾದಿಯಾಗಿ ಹಲವು ಸಾಧ್ಯತೆಗಳು ಎದುರಾಗಲಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತೆರೆಸಾ ಮೇ ಗೆ Exit ಎಂದ ಬ್ರಿಟನ್ – ಲೇಖನ ಓದಿ ನನಗೆ ಮೆಚ್ಚುಗೆ ಆಯಿತು. ಲೇಖಕರು ಸರಳವಾಗಿ EU ಬಗ್ಗೆ ಮತ್ತು ಬ್ರಿಟನ್ ನ Exit ತೊಳಲಾಟದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ವಿವರಗಳಿಗೆ ಧಕ್ಕೆ ಆಗದಂತೆ ವಿವರಿಸಿದ್ದಾರೆ. ಧನ್ಯವಾದಗಳು.

  2. ಸಂಪಾದಕರಲ್ಲಿ ನಮ್ಮ ನಮಸ್ಕಾರಗಳು,

    ತಮ್ಮ ಅಂಕಣದಲ್ಲಿ ಬಂದಂತಹ ಬರಹಗಳು ತುಂಬಾ ಅರ್ಥಪೂರ್ಣವಾಗಿರುತ್ತದೆ ಮತ್ತು ತುಂಬಾ ಚೆನ್ನಾಗಿ ಮೂಡಿಬಂದಿರುತ್ತದೆ ಮತ್ತೊಮ್ಮೆ ತಮಗೆ ಹೃದಯ ಪೂರಕವಾಗಿ ಅಭಿನಂದನೆಗಳು.🙏✍

  3. ಸಂಪಾದಕರಲ್ಲಿ ಸವಿನಯ ಪ್ರಾರ್ಥನೆಗಳು, ಕೇಂದ್ರ ಸರ್ಕಾರದವರು ತಮಗೆ ಸ್ಪಂದಿಸದಿದ್ದರೆ, ಇ ಡಿ ಪ್ರಕರಣದಲ್ಲಿ ದಾಖಲಿಸುತ್ತಾರೆ ಯಾಕೆ? ಮತ್ತು ತಮ್ಮಲ್ಲಿರುವ ಸಮಾಜ ಸೇವಕರಲ್ಲಿ ಇಲ್ಲಿಯವರೆಗೂ ಯಾವ ವ್ಯಕ್ತಿಯೂ ಕೂಡಾ ತನಿಖೆಗೆ ವಹಿಸಿಕೊಟ್ಟಿಲ್ಲಾ ಈ ರೀತಿ ಮಾಡುವುದು ಸರಿಯೇ ಇದು ನಮ್ಮ ಪ್ರಶ್ನೆಯಾಗಿದೆ ದಯಮಾಡಿ ಉತ್ತರಿಸಿರಿ.

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...