Homeನಿಜವೋ ಸುಳ್ಳೋಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

ಇಲ್ಲಿರುವುದು ಬಾಲಕ ಅಬ್ದುಲ್ ಕಲಾಂರೋ? ಅಥವಾ ಬಾಲಕ ಮೋದಿಯೋ? ಗುರುತಿಸಬಲ್ಲಿರಾ?

- Advertisement -
- Advertisement -

ಇಲ್ಲಿ ತಾಯಿ ಮತ್ತು ಬಾಲಕ ಇರುವ ಫೋಟೊ ನೋಡಿ. ಅದರಲ್ಲಿರುವ ಬಾಲಕ ಮಾಜಿ ರಾಷ್ಟ್ರಪತಿ, ಕ್ಷಿಪಣಿ ವಿಜ್ಞಾನಿ ಅಬ್ದುಲ್ ಕಲಾಂ ಅಂತ ಒಂದು ವಾದ ತೇಲಿ ಬಂತು. ನಂತರ ಇದೇ ಫೋಟೊ ಹಾಕಿದ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ‘ದೇಶಕ್ಕೆ ಇವತ್ತು ಅಪದ್ಭಾವಂತನಾಗಿ ಬಂದಿದ್ದು ಇದೇ ಬಾಲಕ.. ಇದು ಮೋದಿಯ ಬಾಲ್ಯದ ಫೋಟೋ ಎಂದು ಪ್ರಚಾರ ಮಾಡಿದ್ದವು.

ಈ ಫೋಟೊದಲ್ಲಿರುವುದು ಬಾಲ ಮೋದಿಯೋ ಅಥವಾ ಬಾಲ ಕಲಾಂರೋ ಎನ್ನುವುದಂತೂ ಆರೋಗ್ಯಕರ ಮನಸ್ಸುಗಳಿಗೆ ಗಂಭೀರ ವಿಷಯವಂತೂ ಅಲ್ಲವೇ ಅಲ್ಲ. ನಮ್ಮ ತಂಡಕ್ಕೂ ಅದೇ ಅಭಿಪ್ರಾಯವಿದ್ದರೂ, ಇಂತಹ ಸಣ್ಣ ವಿಷಯಗಳ ಹಿಂದಿನ ಸತ್ಯಾಸತ್ಯತೆ ತಿಳಿಸುವುದು ನಮ್ಮ ಜವಾಬ್ದಾರಿ. ಅದೆಲ್ಲಕ್ಕಿಂತ ಮುಖ್ಯವಾಗಿ ಫೇಕ್ ಸುದ್ದಿಗಳ ಈ ಕಾಲದಲ್ಲಿ ಸಾಮಾನ್ಯ ಕುಟುಂಬವೊಂದರ ಗ್ರೂಪ್ ಫೋಟೊವನ್ನೂ ಹೇಗೆ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಜನರ ಗಮನಕ್ಕೆ ತರುವುದಷ್ಟೇ ನಮ್ಮ ಉದ್ದೇಶ. ಜನಸಾಮಾನ್ಯರ ಖಾಸಗಿ ಬದುಕಿನ ಫೋಟೊಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅಸಹ್ಯ ಚಾಳಿಯನ್ನು ತೋರಿಸಲು ಇದನ್ನು ಪ್ರಕಟಿಸುತ್ತಿದ್ದೇವೆ.

ಇಲ್ಲಿ ಮಹಿಳೆಯಬ್ಬರು ಬಾಲಕನ ಜೊತೆ ಇರುವ ಫೋಟೊ ಗಮನಿಸಿ. ಕಳೆದ ವಾರದಿಂದಲೂ ಕೆಲವು ಸಾಮಾಜಿಕ ಜಾಲತಾಣಗಳ ಗುಂಪುಗಳು ಈ ಫೋಟೊ ಬಳಸಿ, ತಾಯಿ ಹಿರಾಬೆನ್ ಜೊತೆಗೆ ಬಾಲಕ ಮೋದಿ ಎಂದು ಪ್ರಚಾರ ಮಾಡಿದ್ದಾರೆ. ಇದರಿಂದ ದೇಶಕ್ಕೇನೂ ನಷ್ಟವಿಲ್ಲ ಅಂತ ಅನಿಸಬಹುದು. ಆದರೆ ಫೇಸ್‍ಬುಕ್ ಬಳಕೆದಾರರೊಬ್ಬರು ಈ ಫೋಟೊ ಹಾಕಿ, ಅದರ ಮೇಲೆ ಹಿಂದಿಯಲ್ದಿ, ‘ 132 ಕೋಟಿ ಜನರನ್ನು ಶಾಕ್ ಮಾಡಿದ್ದು ಇದೇ ಬಾಲಕ…’ ಎಂಬ ಸಾಲು ಲಗತ್ತಿಸಿ, ‘ಜೈದೇವ್, ತಾಯಿಯೊಂದಿಗೆ ನರೇಂದ್ರ ಮೋದಿಯ ಬಾಲ್ಯದ ಫೋಟೋ’ ಎಂದು ಪೋಸ್ಟ್ ಹಾಕಿದ್ದರು. ಸಾವಿರಾರು ಟ್ವೀಟರ್ ಮತ್ತು ವ್ಯಾಟ್ಸಾಪ್ ಬಳಕೆದಾರರು ಇದೇ ಸಂದೇಶದೊಂದಿಗೆ ಈ ಫೋಟೊವನ್ನು ಶೇರ್ ಮಾಡಿದರು, ಮಾಡುತ್ತಲೇ ಇದ್ದಾರೆ.

ನಿಜಕ್ಕೂ ಇದು ಬಾಲಕ ಮೋದಿ ಮತ್ತು ತಾಯಿಯ ಫೋಟೊವೇ?
ಈ ಕುರಿತು ಅಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿದಾಗ, ಫೋಟೊದಲ್ಲಿರುವ ಬಾಲಕ ಮೋದಿ ಅಲ್ಲ ಎಂಬುದು ಖಾತ್ರಿಯಾಗಿತು. ಜೊತೆಗೆ ಇನ್ನಷ್ಟು ವಿಚಿತ್ರ ಸಂಗತಿಗಳು ಹೊರಬಂದವು. ಇದೇ ಫೋಟೊವನ್ನು ಪ್ರಕಟಿಸಿ ಹಲವಾರು ಮಾಧ್ಯಮಗಳು ತಪ್ಪು ಎಸಗಿದ್ದವು. ಮೇ8, 2016ರಲ್ಲಿ ಇಂಡಿಯಾ ಟುಡೇ ಪ್ರಕಟಿಸಿದ ಒಂದು ಬರಹದಲ್ಲಿ ಇದೇ ಫೋಟೊ ಹಾಕಿ, ‘ಐಶಿಯಮ್ಮ ಜೈನಿಲುಬುದ್ದಿನ್, ಕಲಾಂ ತಾಯಿ’ ಎಂದು ಕ್ಯಾಪ್ಸನ್ ನೀಡಲಾಗಿತ್ತು.

ಶೋಧ ಮುಂದುವರೆಸಿದಾಗ, ಮೇಲೆ ಬಳಸಿದ ಆ ಎರಡು ಫೋಟೊಗಳು ಒಂದೇ ಎಂಬುದು ಪಕ್ಕಾ ಆಗಿತು. ಆದರೆ, ಒಂದು ಗ್ರೂಪ್ ಫೋಟೊದಿಂದ ಕತ್ತರಿಸಿ ಈ ಅರೆಬರೆ ಫೋಟೊವನ್ನು ಬಳಸಲಾಗಿತ್ತು.

ಈ ಫೋಟೊದ ಮೂಲ ಯಾವುದು?
2013ರ ಆಗಸ್ಟ್ ನಲ್ಲಿ ಈ ಫೋಟೊವನ್ನು ಬ್ಲಾಗ್ ಒಂದರಲ್ಲಿ ಬಳಸಲಾಗಿತ್ತು. ಜುಲೈ 2018ರಲ್ಲಿ ಕಲಾಂರ ಜಯಂತಿಯಂದು ಜಾಗೃಣ್ ಸಮೂಹ ಎಂಬ ಶೈಕ್ಷಣಿಕ ಸಂಸ್ಥೆಯ ಜಾಗೃಣ್ ಪೋರ್ಟಲ್‍ನಲ್ಲ್ಲಿ ಇದೇ ಫೋಟೊ ಬಳಸಿ, ತಾಯಿಯೊಂದಿಗೆ ಬಾಲಕ ಕಲಾಂ ಎಂದು ಬರೆಯಲಾಗಿತ್ತು.

ಕೊನೆಗೆ ಆಲ್ಟ್ ನ್ಯೂಸ್ ಕಲಾಂರ ಸಮೀಪದ ಸಂಬಂಧಿಕ ಅಜ್ಜನ ಕಡೆಯವರು, ಹಾಗೆಯೇ ಕಲಾಂ ಇಂಟರ್‍ನ್ಯಾಷನಲ್ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿಯೂ ಆಗಿರುವ ಶೇಖ ಸಲೀಮರನ್ನು ಸಂಪರ್ಕಿಸಿದಾಗ, ‘ಇದರಲ್ಲಿರುವುದು ಕಲಾಂ ಅಥವಾ ತಾಯಿ ಅಲ್ಲವೇ ಅಲ್ಲ, ಕಲಾಂ ಆ ವಯಸ್ಸಿನವರು ಆಗಿರುವ ಸಂದರ್ಭದಲ್ಲಿನ ಯಾವ ಫೋಟೊವೂ ಲಭ್ಯ ಇಲ್ಲ. ಆ ಸಂದರ್ಭದಲ್ಲಿ ಕಲಾಂ ತಾವು ಫೋಟೊ ತೆಗಿಸಿಕೊಳ್ಳಲು ಹಿಂಜರಿಯುತ್ತಿದ್ದ ಮುಗ್ಧ ಆಗಿದ್ದರು. ‘ಹೌಸ್ ಆಫ್ ಕಲಾಂ’ನಲ್ಲಿ ಇರುವ ಫೋಟೊಗಳ ಪೈಕಿ ಕಲಾಂರ ಚಿಕ್ಕಂದಿನ ಫೋಟೊ ಎಂದರೆ ಅವರು ಕಾಲೇಜು ಸೇರುವಾಗ ತೆಗೆಸಿದ್ದು’ ಎಂದು ಸತ್ಯದ ಅನಾವರಣ ಮಾಡಿದರು..

ಯುವಕ ಕಲಾಂ ಫೋಟೊ

ಅಂದರೆ ಯಾವುದೋ ಒಂದು ಅಪರಿಚಿತ ಸಾಮಾನ್ಯ ಕುಟುಂಬದ ಗ್ರೂಪ್ ಫೋಟೊ ಈ ತಂತ್ರಜ್ಷಾನ ಕಾಲದಲ್ಲಿ ಹೇಗೆ ದುರುಪಯೋಗವಾಗುತ್ತಿದೆ ಎಂಬುದನ್ನು ತೋರಿಸಲು ಈ ಬರಹವನ್ನು ನಾನುಗೌರಿ.ಕಾಮ್ ಪ್ರಕಟಿಸುತ್ತಿದೆ.

ಇಲ್ಲಿ ಇಂಡಿಯಾಟುಡೇ ಕಣ್ತಪ್ಪನಿಂದ, ಜಾಗೃಣ ಸಂಸ್ಥೆ ಅಜ್ಞಾನದಿಂದ ತಪ್ಪು ಮಾಡಿರಬಹುದು, ಆದರೆ ಇದು ಬಾಲಕ ಮೋದಿ ಎಂದು ಹಬ್ಬಿಸಿರುವುದರ ಜನರನ್ನು ಕ್ಷಮಿಸಲಾಗದು. ‘ಇದೇ ಬಾಲಕ ನೋಡಿ 130 ಕೋಟಿ ಗೆದ್ದಿರುವುದು’ ಎಂದು ಹಾಕುವಾಗ ನಿಜವಾದ ಬಾಲಕ ಮೊದಿಯ ಫೋಟೊ ಹಾಕಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ.

ಪಾಪ, ಮೋದಿಯವರೆ ಅವರ ಬಾಲ್ಯದ ಕುರಿತು ಕನಫ್ಯೂಸ್ ಮಡುತ್ತ ಬಂದಿದ್ದಾರಲ್ಲ? ಭಕ್ತರೇ ಮೋದಿಯ ಬಾಲ್ಯದ ಫೋಟೊ ಸಿಗಲ್ಲ, ಆದರೆ ಯಾವುದೋ ಮಗುವಿನ, ಕುಟುಂಬದ ಫೋಟೊ ಬಳಸಬೇಡಿ. ಅಷ್ಟಾದರೂ ಸೂಕ್ಷ್ಮ ಕಲಿಯಿರಿ.
(ಆಧಾರ: ಅಲ್ಟ್ ನ್ಯೂಸ್)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

0
ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ...