Homeಮುಖಪುಟಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ 'ಸರಪಟ್ಟ ಪರಂಪರೈ' - ಬಿ. ಶ್ರೀಪಾದ ಭಟ್

ಇದು ನಮ್ಮ ಕಾಲ, ಎದ್ದೇಳು ಬಾ ಎನ್ನುವ ‘ಸರಪಟ್ಟ ಪರಂಪರೈ’ – ಬಿ. ಶ್ರೀಪಾದ ಭಟ್

ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ.

- Advertisement -
- Advertisement -

ಜಾತಿಯ ಹೆಸರು ಹೇಳಿದರೆ ಬೆಚ್ಚಿಬೀಳುವ ಭಾರತೀಯ ಸಿನಿಮಾ ರಂಗದಲ್ಲಿ ‘ದಲಿತರು ಮತ್ತು ಸಿನಿಮಾ’ ಎನ್ನುವ ಮಾತು ಮೊನ್ನೆಯವರೆಗೂ ಕಿವಿಗೆ ಬೀಳುತ್ತಿರಲಿಲ್ಲ. ಇಲ್ಲಿನ ರೋಗಗ್ರಸ್ಥ ಜಾತಿ ಸಮಾಜದಲ್ಲಿ ಆ ತರಹದ ಕಲ್ಪನೆಯೂ ಸಾಧ್ಯವಿಲ್ಲದಂತಹ ಪರಿಸ್ಥಿತಿಯಿತ್ತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ನಾಗ್ರಾಜ್ ಮಂಜುಳೆ, ಪ.ರಂಜಿತ್ ಮತ್ತು ಮಾರಿ ಸೆಲ್ವರಾಜ್ ಜಾತಿ ಪ್ರಶ್ನೆಯನ್ನು ಶೋಷಿತರ ನೆಲೆಯಿಂದ ಮಾತನಾಡತೊಡಗಿದಾಗ ಈ ಪಟ್ಟಭದ್ರ ಸಿನಿಮಾರಂಗದಲ್ಲಿ ಬಂಡೆಯನ್ನು ಸೀಳಿಕೊಂಡು ಸಮಾನತೆ, ಸ್ವಾತಂತ್ರ್ಯದ ಹುಲ್ಲು ಮೊಳಕೆಯೊಡಗಿತು. ಈವರೆಗಿನ ಸಿದ್ದ ಮಾದರಿಯನ್ನು ಕೆಡವಿ, ಮುರಿದು ಸಬಲ್ಟ್ರಾನ್ ಕಥನವನ್ನು ಮತ್ತೆ ಕಟ್ಟತೊಡಗಿದರು. ಮಂಜುಳೆ ಜಾತಿ ದೌರ್ಜನ್ಯದ ನಿರೂಪಣೆಯನ್ನು ಆಯ್ಕೆ ಮಾಡಿಕೊಂಡರೆ, ಪ.ರಂಜಿತ್ ದಲಿತರ assertion ಕುರಿತು ಮಾತ್ರ ಮಾತನಾಡುತ್ತೇನೆ ಎಂದು ಹೊಸ ಅಲೆಯ ಮತ್ತೊಂದು ಮಾದರಿಯನ್ನೇ ಸೃಷ್ಟಿಸಿದರು. ಆದರೆ ರಂಜಿತ್ ಇದನ್ನು ಪರ್ಯಾಯ ಸಿನಿಮಾ ಪರಂಪರೆಯಾಗಿ ಬೆಳೆಸದೆ ಬದಲಿಗೆ ಜನಪ್ರಿಯ ಸಿನಿಮಾದ ಕ್ಷೇತ್ರದೊಳಗೆ ಸಾದಿಸುತ್ತಾರೆ. ಮುರಿದು ಕಟ್ಟುವ ಪ.ರಂಜಿತ್ ಇಂದು ಅಂಬೇಡ್ಕರ್‌ವಾದದ ಹೊಸ ಅರ್ಥಗಳನ್ನೇ ಬಿಚ್ಚಿಡುತ್ತಿದ್ದಾರೆ. ಸಬಲ್ಟ್ರಾನ್ ಕಥನದ ಮರು ಕಟ್ಟುವ ಈ ಪ್ರಯೋಗಗಳು ಕಬಾಲಿ, ಕಾಲಾದ ನಂತರ ಈಗ ‘ಸರಪಟ್ಟ ಪರಂಪರೈ’ ನಲ್ಲಿ ಮತ್ತೊಂದು ಮಜಲನ್ನು ತಲುಪಿದೆ ಮತ್ತು ‘ಇದು ನಮ್ಮ ಕಾಲ’ ಎಂದು ಹಿರಿಮೆಯಿಂದ, ಘನತೆಯಿಂದ ಆತ್ಮವಿಶ್ವಾಸದಿಂದ ಹಾಡುತ್ತಿದ್ದಾರೆ.

ಇಲ್ಲಿಯವರೆಗೂ ಅನಾಮಿಕವಾಗಿದ್ದ ‘ಉತ್ತರ ಮದ್ರಾಸ್’ ವೆಟ್ರಿಮಾರನ್ ಸಿನಿಮಾಗಳ ಮೂಲಕ ಬೆಳಕಿಗೆ ಬರತೊಡಗಿತು. ಈಗ ‘ಸರಪಟ್ಟ’ ಸಿನಿಮಾದ ಮೂಲಕ ಪ. ರಂಜಿತ್ ಅಲ್ಲಿನ ದುಡಿಯುವ ವರ್ಗಗಳ ಬದುಕು, ಬವಣೆಯ ವಿರಾಟ್ ಸ್ವರೂಪವನ್ನು ನಮಗೆಲ್ಲಾ ಎಳೆಎಳೆಯಾಗಿ ಬಿಚ್ಚಿ ತೋರಿಸಿದ್ದಾರೆ. ನೆಲಮೂಲ ಸಂಸ್ಕೃತಿಯ ಜೀವಂತಿಕೆ ಸ್ಪರ್ಶ ಮಾಡಿಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಈ ‘ಉತ್ತರ ಮದ್ರಾಸ್’ನ ಸ್ಲಂಗಳು, ಓಣಿಗಳು, ಕಾರ್ಖಾನೆಗಳಲ್ಲಿ ವಾಸಿಸುತ್ತಿರುವ ದುಡಿಯುವ ವರ್ಗದ ಬದುಕಿನ ಅನಾವರಣವಿದೆ. ಇಲ್ಲಿ ಈ ವರ್ಗದೊಳಗಿನ ಜಾತಿ ತಾರತಮ್ಯದ ಕ್ರೌರ್ಯವೂ ಸಹ ಬಿಚ್ಚಿಕೊಳ್ಳುತ್ತದೆ ಮತ್ತು ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಇದನ್ನು ‘ಬಾಕ್ಸಿಂಗ್ ಡ್ರಾಮಾ’ದ ಮೂಲಕ ನಿರೂಪಿಸಿದ್ದಾರೆ. ಸರಪಟ್ಟ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಎಂದು ಮಾತ್ರ ಕರೆದರೆ ರಂಜಿತ್‌ರವರ ಮುರಿದು ಕಟ್ಟುವ ಕಥನವನ್ನು ಮೂಲೆಗುಂಪು ಮಾಡಿದಂತಾಗುತ್ತದೆ. ಅದರಾಚೆಗೆ ಬೆಳೆದ ಚಿತ್ರಕತೆಯು ಅಲ್ಲಿ ವಾಸಿಸುತ್ತಿರುವ ವಿವಿಧ ವರ್ಗ, ಜಾತಿಗಳ ಜನರ ಬದುಕನ್ನು ಒಂದೇ ಹಾರದಲ್ಲಿ ಪೋಣಿಸಿ ಸುಂದರ ಹಾರದಂತೆ ಹೆಣೆಯಲಾಗಿದೆ.

ಸರಪಟ್ಟ ಸಿನಿಮಾವನ್ನು ಉತ್ತರ ಮದ್ರಾಸ್‌ನ ಶ್ರಮಿಕರ ಬದುಕಿನ ಕೊಲಾಜ್ ಎಂದೇ ಕರೆಯಬಹುದು. ಆ ಬಹುಸಂಸ್ಕೃತಿಯ ಜಗತ್ತಿನಲ್ಲಿ ಅಂಬೇಡ್ಕರ್, ಬುದ್ದ ಕಾಣಿಸಿಕೊಳ್ಳುತ್ತಾರೆ, ಬೀಫ್ ಬಿರಿಯಾನಿ, ಮೊಲ ಮಾಂಸದ ಆಹಾರ ಸಂಸ್ಕೃತಿಯಿದೆ. ಇಲ್ಲಿ ಡಾನ್ಸಿಂಗ್ ರೋಸಿಯ ಸ್ಟೈಲ್ ಇದೆ, ‘ಜೀವ ಹೋದರೂ ಪರವಾಗಿಲ್ಲ, ಮೌಲ್ಯಗಳನ್ನು ಬಿಡಲಾರೆ’ ಎನ್ನುವ ರಂಗನ್ ವಾದ್ಯಾರ್‌ರ ಬಾಳ್ವೆಯ ಬದುಕಿದೆ. ‘ಪರಂಪರೆ ಮುಖ್ಯವಲ್ಲ, ನೀನು, ನಾನು, ಮುನುಷ್ಯರು ಮುಖ್ಯ’ ಎಂದು ಬದುಕಿನ ದೊಡ್ಡ ಪಾಠ ಹೇಳಿದ ಮಾರಿಯಮ್ಮಳ ಮಾನವೀಯತೆಯ ಒರತೆಯಿದೆ, ‘ಮಗ ಕೊಲೆಗಾರನಾಗಬಾರದು, ಕಳ್ಳನಾಗಬಾರದು, ಹಾಗೆಯೇ ಯಾರೂ ಸಹ’ ಎಂದು ಮುರಿದು ಬೀಳುತ್ತಿರುವ ಬದುಕನ್ನು ಮರಳಿ ಕಟ್ಟಲು ಹೆಣಗುತ್ತಿರುವ ಬಾಕಿಯಮ್ಮಳ ಛಲ, ದಿಟ್ಟತೆಯಿದೆ. ನಾವು ಬದುಕೋಣ, ಎಲ್ಲರೂ ಬದುಕೋಣ ಎನ್ನುವ ಡ್ಯಾಡಿಯ ಜೀವಪರತೆಯಿದೆ, ಶಕುನಿ ಮಾಮಾನನ್ನು ನೆನಪಿಸುವ ಕೋಣಿ ಚಂದನ್ ಇದ್ದರೆ ಕಾಯಕ ತತ್ವವನ್ನು ಉಸಿರಾಡುವ ಬೀಡಿ ರಾಯಪ್ಪನ್ ನಮ್ಮನ್ನು ಕಾಡುತ್ತಾನೆ. ಬಾಕ್ಸಿಂಗ್ ದೈತ್ಯ ವೆಂಬುಲಿಯ ಪೌರುಷದ ದುರಹಂಕಾರ ಒಂದೆಡೆಯಿದ್ದರೆ ಮತ್ತೊಂದೆಡೆ ಆಳುವ, ಗೋಳಾಡುವ, ಅಸಹಾಯಕನಾಗಿ ಕುಸಿದು ಹೋಗುವ ಈ ಸಿನಿಮಾದ ಪ್ರೊಟಗಾನಿಸ್ಟ್ ಕಬಿಲನ್ ನಮಗೆಲ್ಲ ಎಚ್ಚರಿಕೆಯ ಪಾಠದಂತಿದ್ದಾನೆ. ತಾನು ಬಾಕ್ಸರ್, ಆದರೆ ತನ್ನ ತಂದೆಯಿಂದಲೇ ತಿರಸ್ಕರಿಸ್ಪಡುವ ವೇಟ್ರಿಸೆಲ್ವನ್ ಬದುಕಿನ ಸಂಕೀರ್ಣತೆಯ ದುರಂತವಿದೆ. ಇವರೆಲ್ಲರ ಜೀವ ಮಿಡಿತದ ಸದ್ದು ‘ಸರಪಟ್ಟ’. ಇಲ್ಲಿ ಯಾರೂ ಅಮುಖ್ಯರಲ್ಲ. ಎಲ್ಲರೂ ಮುಖ್ಯ.

ಪ.ರಂಜಿತ್‌ಗೆ 1970ರ ದಶಕದ ‘ಉತ್ತರ ಮದ್ರಾಸ್’ನ ಆ ನಾಸ್ಟಾಲ್ಜಿಯಾದ ಕುರಿತು, ಆ ಕಾಲದ ಭೌಗೋಳಿಕತೆಯ ಕುರಿತು ಆಸಕ್ತಿಯಿಲ್ಲ. ಜನರು ಮಾತ್ರ ಮುಖ್ಯ ಎಂದು ನಂಬಿದ ನಿರ್ದೇಶಕ ಆ ಶೋಷಿತ ಜನರ ಬದುಕಿನ ಕಥನವನ್ನು ‘ಬಾಕ್ಸಿಂಗ್ ಕ್ರೀಡೆ’ಯ ಹಿನ್ನಲೆಯ ಮೂಲಕ ರೂಪಿಸುತ್ತಾ ಹೋಗುತ್ತಾರೆ. ಒಂದು ಕಾಲದಲ್ಲಿ ಕುಡಿತ ಮತ್ತು ಗೂಂಡಾಗಿರಿ ಮೇಲುಗೈ ಸಾಧಿಸಿ ಉತ್ತರ ಮದ್ರಾಸ್‌ನ ಬಾಕ್ಸಿಂಗ್ ಜಗತ್ತು ಕೊಳೆಯತೊಡಗಿತ್ತು, ಕುಟುಂಬಗಳ ಬದುಕು ಛಿದ್ರಗೊಳ್ಳತೊಡಗಿತ್ತು. ಇದನ್ನು ಎಲ್ಲಿಯೂ ಸಂಕೀರ್ಣಗೊಳಿಸದೆ ನೇರವಾಗಿ ಗತಕಾಲದ ವಾಸ್ತವವನ್ನು ಸಿನೀಮಿಯವಾಗಿ ಮುಂದಿಟ್ಟಿದ್ದಾರೆ. ಬಾಕ್ಸಿಂಗ್ ರಿಂಗ್‌ನ ಒಳಗೆ ನಡೆಯುವ ಎರಡು ವಂಶಗಳ ನಡುವಿನ ಹಣಾಹಣಿಯು ವೈಯಕ್ತಿಕವೂ ಹೌದು ಮತ್ತು ಸಾಮಾಜಿಕವೂ ಹೌದು. ಇದನ್ನು ಒಂದೇ ಸೂತ್ರದಲ್ಲಿ ಬೆಸಿದಿರುವ ನಿರ್ದೇಶಕ ಆ ಮೂಲಕ ಸಮುದಾಯದ ವಿಮೋಚನೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದೇ ಈ ಸಿನಿಮಾದ ಗೆಲುವು. ತಮ್ಮ ಬಡತನದ ನಡುವೆಯೂ ಬಾಕ್ಸಿಂಗ್ ಕ್ರೀಡೆಯ ಕಾಳಗದ ಮೂಲಕ ಬದುಕನ್ನು ವರ್ಣರಂಜಿತಗೊಳಸಿಕೊಳ್ಳಲು ತವಕಿಸುವ ‘ಉತ್ತರ ಮದ್ರಾಸ್‘ನ ಶ್ರಮಿಕರ ಜೀವನಪ್ರೇಮವೂ ಈ ಸಿನಿಮಾದ ಆತ್ಮದಂತಿದೆ. ಆದರೆ ಈ ವರ್ಗದೊಳಗೂ ಜಾತಿ ತಾರತಮ್ಯವಿದೆ. ದಲಿತ ಎನ್ನುವ ಕಾರಣಕ್ಕೆ ಕಬಿಲನ್ ಗೆಲ್ಲಬಾರದೆಂದು ಹೆಣಗಾಡುವ ರಮಣ್ ಮತ್ತವನ ಚಿಕ್ಕಪ್ಪ ತಣಿಗೈನ ವಿಕೃತಿಗಳು ಜಾತಿ ದೌರ್ಜನ್ಯವನ್ನು ಅನಾವರಣಗೊಳಿಸುತ್ತವೆ.

ಪ ರಂಜಿತ್

ಮುಖ್ಯವಾಗಿ ಅನಾದಿ ಕಾಲದಿಂದಲೂ ವೈಭವೀಕರಿಸಲ್ಪಟ್ಟ ದ್ರೋಣಾಚಾರ್ಯ-ಅರ್ಜುನ ಪರಂಪರೆಯನ್ನು ಸಂಪೂರ್ಣವಾಗಿ ಒಡೆದು ಹಾಕುವ ಪ.ರಂಜಿತ್ ಸರಪಟ್ಟು ಸಿನಿಮಾದ ಮೂಲಕ ಏಕಲವ್ಯನಿಗೆ ಹೊಸ ಬದುಕು ಕಟ್ಟಿಕೊಡುತ್ತಾನೆ. ಇಲ್ಲಿ ಆತ ಹೆಬ್ಬೆರೆಳು ಕತ್ತರಿಸಿಕೊಡುವ ಅಗತ್ಯವಿಲ್ಲ. ಜಾತಿ ಕಾರಣಕ್ಕೆ ತಿರಸ್ಕೃತನಾದರೂ ಮತ್ತೆ ಮತ್ತೆ ಪುಟಿದೆದ್ದು ಗೆಲುವು ಸಾದಿಸುವ ಏಕಲವ್ಯನ ಹೊಸ ನಿರೂಪಣೆಯ ಮೂಲಕ ರಂಜಿತ್ ದಲಿತರ assertion ನ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ನಾಂದಿ ಹಾಡುತ್ತಾರೆ. ಹೀಗಾಗಿ ಇದನ್ನು ಕೇವಲ ಬಾಕ್ಸಿಂಗ್ ಕ್ರೀಡೆಯ ಸಿನಿಮಾ ಮಾತ್ರವಲ್ಲ, ಜೊತೆಗೆ ಬಾಕ್ಸಿಂಗ್ ಕ್ರೀಡೆಯನ್ನು ಹಿನ್ನಲೆಯಾಗುಳ್ಳ ಸಮಾಜೋ-ರಾಜಕೀಯ-ಸಾಂಸ್ಕೃತಿಕ ಕಥನ.

ಇದನ್ನೂ ಓದಿ; ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್‌…

ಈ ಸಿನಿಮಾದ ಕಡೆಯ ಒಂದು ತಾಸು ನಿರ್ದೇಶಕರ ಬತ್ತಳಿಕೆಯ ಸರಕು ಖಾಲಿಯಾಗಿ ಪರದಾಡುವಂತಾಗಿರುವುದೂ ಸಹ ಇಲ್ಲಿನ ಮಿತಿ ಎನ್ನಬಹುದು. ಆದರೆ ಬಾಕ್ಸಿಂಗ್ ಕ್ರೀಡೆಯನ್ನು ಅದರ ವೃತಿಪರತೆಯಲ್ಲಿ ಮೈಗೂಡಿಸಿಕೊಂಡು ಚಿತ್ರಕತೆಗೆ ಅದ್ಭುತವಾಗಿ ಒಗ್ಗಿಸಿಕೊಂಡಿರುವುದು ಈ ಮಿತಿಗಳನ್ನು ಗೌಣಗೊಳಿಸುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಅಗತ್ಯವಾದ ಲಿಂಕ್‌ಗಳನ್ನು ಎಲ್ಲಿಯೂ ಸಡಿಲಗೊಳಿಸದೆ ನಿರಂತರತೆಯನ್ನು ಕಾಪಾಡಿಕೊಂಡಿರುವುದು ಸಣ್ಣ ಪುಟ್ಟ ದೋಶಗಳನ್ನು ಮರೆ ಮಾಚುತ್ತದೆ.

‘ಇದು ನಮ್ಮ ಕಾಲಂ, ಏಳಂದು ವಾ’ ಎಂಬ ಆತ್ಮವಿಶ್ವಾಸದ ಹಾಡಿನ ಮೂಲಕ ಶೋಷಿತ ಸಮುದಾಯಗಳ ಮೇಲ್ಮುಖ ಚಲನೆಯ, ಸಬಲೀಕರಣದ ದಿನಗಳು ಪ್ರಾರಂಭವಾಗಿದೆ ಎನ್ನುವ ಹೇಳಿಕೆ ಕೊಡುವ ‘ಸರಪಟ್ಟ’ ಸಿನಿಮಾವನ್ನು ಮತ್ತೆ ಮತ್ತೆ ನಿರ್ವಚಿಸಬೇಕಾಗುತ್ತದೆ.

  • ಶ್ರೀಪಾದ್ ಭಟ್

(ವೃತ್ತಿಯಲ್ಲಿ ಇಂಜಿನಿಯರ್ ಆದ ಬಿ.ಶ್ರೀಪಾದ್ ಭಟ್ ಹಿರಿಯ ಚಿಂತಕ, ಬರಹಗಾರ. ಹಲವು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಮಾಜದ ಆಗುಹೋಗುಗಳಿಗೆ ನಿರಂತರ ಸ್ಪಂದಿಸುವ ಇವರು ಸಮಾನ ಶಿಕ್ಷಣಕ್ಕಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ; ಕನ್ನಡದಲ್ಲೂ ’ಜೈ ಭೀಮ್’ ಎಂದ ತಮಿಳು ನಟ ಸೂರ್ಯ: ಹೊಸ ಚಿತ್ರಕ್ಕೆ ಕನ್ನಡಿಗರ ಸ್ವಾಗತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...