Homeಮುಖಪುಟಇಂದು ಬಿ.ವಿ.ಕಾರಂತರ ಜನ್ಮದಿನ: 'ಭಾರತೀಯ ರಂಗಸಂಗೀತ ದಿನ'ವನ್ನಾಗಿ ಆಚರಿಸಲು ಆಗ್ರಹ

ಇಂದು ಬಿ.ವಿ.ಕಾರಂತರ ಜನ್ಮದಿನ: ‘ಭಾರತೀಯ ರಂಗಸಂಗೀತ ದಿನ’ವನ್ನಾಗಿ ಆಚರಿಸಲು ಆಗ್ರಹ

ಕಾರಂತರು, ಮಾತುಗಳನ್ನೂ ಕೂಡ ಸಂಗೀತದ ಚೌಕಟ್ಟಿಗೆ ಅಳವಡಿಸಿದರು. ಉದ್ಗಾರಗಳನ್ನೂ ಕೂಡ ಸಂಗೀತಕ್ಕೆ ಅಳವಡಿಸಿ, ಎಂಥವರೂ ಹಾಡುವಂತೆ ಮಾಡಿದರು. ಅವರು ಸಂಯೋಜಿಸಿದ ಹಾಡುಗಳನ್ನು ಕೇಳಿದರೆ ಅದು ಹಾಡು ಎನಿಸುವುದಿಲ್ಲ. ಆದರೂ ಅದರೊಳಗೆ ಸಂಗೀತದ ಎಲ್ಲಾ ಅಂಶಗಳೂ ಅಡಕವಾಗಿರುತ್ತವೆ- ಚೀನಿ

- Advertisement -
- Advertisement -

ರಂಗಭೀಷ್ಮ ಎಂದೇ ಪ್ರಖ್ಯಾತವಾಗಿರುವ, ಭಾರತೀಯ ಮತ್ತು ಕನ್ನಡ ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣರಾದ ಬಿ.ವಿ.ಕಾರಂತರ ಜನ್ಮದಿನ ಇಂದು. ಈ ದಿನವನ್ನು “ಭಾರತೀಯ ರಂಗಸಂಗೀತ ದಿನ” ಎಂದು ಘೋಷಿಸಬೇಕೆಂದು ಮೈಸೂರು ರಂಗಾಯಣದ ಮುಂದಾಳತ್ವದಲ್ಲಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ.

ರಂಗಸಂಗೀತಕ್ಕೆ ಕಾರಂತರ ಕೊಡುಗೆ ಅನನ್ಯವಾದದ್ದು. ಭಾರತೀಯ ರಂಗಸಂಗೀತಕ್ಕೆ ಮಾಂತ್ರಿಕ ಸ್ಪರ್ಶ ನೀಡಿ, ಶಾಸ್ತ್ರೀಯ ಸಂಗೀತದ ಚೌಕಟ್ಟನ್ನು ಮೀರಿ “ಆನ್ವಯಿಕ ಸಂಗೀತ” ಎಂಬ ಹೊಸ ಪ್ರಕಾರವನ್ನೇ ಹುಟ್ಟುಹಾಕಿದರು. ಇದಕ್ಕೆ ಸಾಕ್ಷಿ ಇವರು ನಿರ್ದೇಶಿಸಿದ ನಾಟಕಗಳು.

ಕಾರಂತರು ನಿರ್ದೇಶಿಸಿರುವ ಎಲ್ಲಾ ನಾಟಕಗಳಿಗೂ ಸ್ವತಃ ತಾವೇ ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದರು. ಕರ್ನಾಟಕದ ಮೈಸೂರಿನಿಂದ ಹಿಡಿದು ಮಧ್ಯಪ್ರದೇಶದ ಭೂಪಾಲ್, ಮುಂಬೈ, ದೆಹಲಿ ಹಾಗೂ ವಿದೇಶಗಳಲ್ಲಿಯೂ ಸಹ ರಂಗಭೂಮಿಯ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಮಕಾಲೀನ ರಾಜಕೀಯ ಸಂದರ್ಭಕ್ಕೆ ಸಿನೆಮಾ ಮತ್ತು ರಂಗಭೂಮಿಯ ಪ್ರತಿಕ್ರಿಯೆ: ಬಿ.ಸುರೇಶ್

1977-81ರ ಅವಧಿಯಲ್ಲಿ ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರೂ ಆಗಿದ್ದರು. ನಂತರ ಮೈಸೂರಿಗೆ ಬಂದು, 1989ರಲ್ಲಿ, ಸರ್ಕಾರದ ಅಧೀನದಲ್ಲಿ ರಂಗಾಯಣ ಎಂಬ ರೆಪರ್ಟರಿಯನ್ನು ಸ್ಥಾಪಿಸುವುದರೊಂದಿಗೆ ಕರ್ನಾಟಕದ ಆಧುನಿಕ ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದರು. ಹಾಗಾಗಿ ಪದ್ಮಶ್ರೀ ಬಿ.ವಿ.ಕಾರಂತರ ಜನ್ಮದಿನವನ್ನು “ಭಾರತೀಯ ರಂಗಸಂಗೀತ ದಿನ”ವನ್ನಾಗಿ ಆಚರಿಸಬೇಕೆಂದು ಮೈಸೂರು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅವರು ಪತ್ರಬರೆದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಾರಂತರು, “ಏವಂ ಇಂದ್ರಜಿತ್, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ, ಪಂಜರಶಾಲೆ, ಗೋಕುಲ ನಿರ್ಗಮನ, ಸತ್ತವರ ನೆರಳು ಸೇರಿ 52 ನಾಟಕಗಳ ನಿರ್ದೇಶನ ಮಾಡಿದ್ದಾರೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಚಲನಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಸ್ವತಃ ಚೋಮನದುಡಿ ಚಿತ್ರವನ್ನು ನಿರ್ದೇಶಿಸಿ ರಾಷ್ಟ್ರೀಯ ಸ್ವರ್ಣಪದಕ ಪ್ರಶಸ್ತಿಯನ್ನು ಪಡೆದಿದ್ದರು. ಹಂಸಗೀತೆ, ಚೋಮನದುಡಿ, ಆದಿಶಂಕರ, ಫಣಿಯಮ್ಮ ಸೇರಿದಂತೆ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಈ ಮಹತ್ತರ ಸಾಧನೆಗಾಗಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಶ್ರೀ, ಮಧ್ಯ ಪ್ರದೇಶದ ಕಾಳಿದಾಸ ಸಮ್ಮಾನ್, ರಾಜ್ಯ ಸರಕಾರದ ಗುಬ್ಬಿ ವೀರಣ್ಣ ಪ್ರಶಸ್ತಿಗಳು ಲಭಿಸಿವೆ.”

ರಂಗಸಂಗೀತದ ಕುರಿತಂತೆ ಕಾರಂತರ ಕೆಲವು ಮಾತುಗಳನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ.

ಭಾರತದ ಉದ್ದಗಲಕ್ಕೂ ಕಾರಂತರ ಆನ್ವಯಿಕ ಸಂಗೀತದ ಹೊಸ ಪ್ರಕಾರವನ್ನು ಅವರ ಶಿಷ್ಯರು ಮುಂದುವರಿಸಿದ್ದಾರೆ. ಕಾರಂತರ ಕೊನೆಯ ಕಾಲದವರೆಗೂ ಅವರ ಜೊತೆಗಿದ್ದ ಮತ್ತು ಅವರು ಸಂಗೀತ ನಿರ್ದೇಶನ ಮಾಡಿರುವ ಎಲ್ಲಾ ನಾಟಕಗಳಲ್ಲಿಯೂ ಅವರಿಗೆ ಸಹಾಯಕರಾಗಿದ್ದುಕೊಂಡಿದ್ದ ಮತ್ತು ಇಂದು ಸ್ವತಃ ಕರ್ನಾಟಕದ ಪ್ರಮುಖ ಸಂಗೀತ ನಿರ್ದೇಶಕರುಗಳಲ್ಲಿ ಒಬ್ಬರೆನಿಸಿರುವ ಶ್ರೀನಿವಾಸ್ ಭಟ್ (ಚೀನಿ)ರವರು ನಾನುಗೌರಿ.ಕಾಂನೊಂದಿಗೆ ಮಾತನಾಡಿ ಕಾರಂತರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.

“ಭಾರತೀಯ ರಂಗ ಸಂಗೀತದ ಇತಿಹಾಸದಲ್ಲಿ ಕಾರಂತರ ಹೆಸರು ಯಾಕೆ ಪ್ರಮುಖ ಎಂದರೆ, ಕಾರಂತರು, ಮಾತುಗಳನ್ನೂ ಕೂಡ ಸಂಗೀತದ ಚೌಕಟ್ಟಿಗೆ ಅಳವಡಿಸಿದರು. ಉದ್ಗಾರಗಳನ್ನೂ ಕೂಡ ಸಂಗೀತಕ್ಕೆ ಅಳವಡಿಸಿ, ಎಂಥವರೂ ಹಾಡುವಂತೆ ಮಾಡಿದರು. ಅವರು ಸಂಯೋಜಿಸಿದ ಹಾಡುಗಳನ್ನು ಕೇಳಿದರೆ ಅದು ಹಾಡು ಎನಿಸುವುದಿಲ್ಲ. ಆದರೂ ಅದರೊಳಗೆ ಸಂಗೀತದ ಎಲ್ಲಾ ಅಂಶಗಳೂ ಅಡಕವಾಗಿರುತ್ತವೆ” ಎಂದು ಹೇಳಿದರು.

ಇದನ್ನೂ ಓದಿ: ಕನ್ನಡ್ ಸುದ್ದಿಗ್ ಏನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲ; ‘ರಸೋಕಿನ’ ತಂಡದಿಂದ ವಿಶಿಷ್ಟ ಪ್ರತಿರೋಧ

“ಕಾರಂತರು ತುಂಬಾ ಪ್ರಾಯೋಗಿಕವಾದ ಮನೋಭಾವವುಳ್ಳವರು. ನಾಟಕ ಮಾಡುವವರು ಮೊದಲು ಸಮಾಜದಲ್ಲಿ ಸಕಲೆಂಟು ಅನುಭವಗಳನ್ನೂ ಪಡೆದುಕೊಂಡಿರಬೇಕು, ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎನ್ನುತ್ತಿದ್ದರು. ನಿಜವಾದ ಪಾಠಶಾಲೆ ಸಮಾಜ ಎಂದು ನಟರನ್ನೆಲ್ಲಾ ಕ್ಷೇತ್ರಾನುಭವ ಪಡೆಯಲು ಕಳುಹಿಸುತ್ತಿದ್ದರು” ಎಂದು ಹೇಳಿದರು.

ಚೀನಿಯರವರು ಕಾರಂತರ ಬಗ್ಗೆ ಕೆಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ಈ ವೀಡಿಯೋದಲ್ಲಿ ನೋಡಬಹುದು.

ಕಾರಂತರ ಶಿಷ್ಯ ಪರಂಪರೆಯಲ್ಲಿ ಕರ್ನಾಟಕದಲ್ಲಿರುವವರು ಇವರೊಬ್ಬರೇ. ಹಾಗಾಗಿ ಇಂದು ಸಂಜೆ ಮೈಸೂರಿನ ರಂಗಾಯಣದಲ್ಲಿ ಭಾರತೀಯ ರಂಗ ಸಂಗೀತ ದಿನದ ಆಚರಣೆಯ ಕಾರ್ಯಕ್ರಮದಲ್ಲಿ ಚೀನಿಯವರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ.


ಇದನ್ನೂ ಓದಿ: ಬಾದಲ್ ಸರ್ಕಾರ್‌ರವರ ‘ಏವಂ ಇಂದ್ರಜಿತ್’: ಮೂರನೇ ರಂಗಭೂಮಿಗೆ ಅಡಿಪಾಯ ಹಾಕಿದ ನಾಟಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...