ನಮಗೆ ಚಳಿಯಾದಾಗ ಯಾರಾದರೂ ಬೆಚ್ಚನೆಯ ಹೊದಿಕೆ ಕೊಟ್ಟರೇ, ಮಳೆಯಲ್ಲಿ ನೆನೆಯುವಾಗ, ಬಿಸಿಲಿನ ತಾಪ ತಡೆಯದಾದಾಗ ಯಾರಾದರೂ ಕೊಡೆ ಹಿಡಿದರೆ ಅದೆಷ್ಟು ಖುಷಿ, ಸುರಕ್ಷತಾ ಭಾವ ಅಲ್ಲವೇ.. ನಾವೇನೋ ಮನುಷ್ಯರು ಒಬ್ಬರಲ್ಲ ಒಬ್ಬರು ಸಹಾಯ ಮಾಡುತ್ತಾರೆ. ಕುಟುಂಬ, ಸಂಬಂಧಿಕರು, ಸ್ನೇಹಿತರು ಯಾರಾದರೂ… ಆದರೆ ಭೂಮಿಗೆ…?
ಇರುವುದೊಂದೇ ಭೂಮಿ…ಆದರೆ ನಿಮಗೆ ಗೊತ್ತೇ ಭೂಮಿಯನ್ನೂ ಕೂಡ ಒಂದು ಪದರ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ. ಅದೇ ಓಝೋನ್ ಪದರ. ಇಂದು ವಿಶ್ವ ಓಝೋನ್ ದಿನ. ಈ ದಿನದ ನೆಪದಲ್ಲಾದರೂ ಓಝೋನ್ ಪದರದ ಬಗ್ಗೆ ತಿಳಿದುಕೊಳ್ಳಲೇ ಬೇಕು.
ಇದನ್ನೂ ಓದಿ: ನೇಚರ್ ವಿಜ್ಞಾನ ಪತ್ರಿಕೆಯ 150 ವರ್ಷಗಳು : ಅನುರಣನ – ಡಾ.ಟಿ.ಎಸ್ ಚನ್ನೇಶ್
ವಾಯುಮಂಡಲದ ಸ್ಟ್ರಾಟೋಸ್ಫಿಯರ್‌ನ 15-20 ಕಿ.ಮೀ ಮೇಲ್ಪಟ್ಟ ಪ್ರದೇಶದಲ್ಲಿರುವ ಓಝೋನ್ ಪದರ ಭೂಮಿಯ ಮೇಲೆ ಸೂರ್ಯನಿಂದ ಹೊರಹೊಮ್ಮುವ ಅತಿನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ. ಈ ಪದರವೇ ಇಲ್ಲದಿದ್ದರೇ, ಭೂಮಿಯ ಮೇಲೆ ಜೀವ ಸಂಕುಲವೇ ನಾಶವಾಗಿರುತ್ತಿತ್ತು. ಜೀವ ಸಂಕುಲದಲ್ಲಿ ಅಷ್ಟು ಪ್ರಮುಖ ಪಾತ್ರ ಓಝೋನ್ ಪಡೆದುಕೊಂಡಿದೆ.

ಸೂರ್ಯನ ಬೆಳಕು ಇಲ್ಲದೇ ಭೂಮಂಡಲದಲ್ಲಿ ಜೀವನ ಸಾಧ್ಯವಿಲ್ಲ ಆದರೆ, ಸೂರ್ಯನ ಹೆಚ್ಚಿನ ನೇರಳಾತೀತ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶ ಮಾಡಿ, ಮಾನವನ ದೇಹ ಹಾಗೂ ಜಲಚರ ಸೇರಿದಂತೆ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಹೀಗಾಗಿ ಇದನ್ನುಈ ಕಿರಣಗಳನ್ನು ತಡೆದು ಜೀವ ಸಂಕುಲಕ್ಕೆ ಸಹಾಯಕವಾಗಿದೆ.
ಇದನ್ನೂ ಓದಿ: ಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ
ಆದರೆ ಮಾನವ ಮಾಡುವ ಕೆಲಸಗಳಿಂದ, ಬಳಸುವ ವಸ್ತುಗಳಿಂದ ಹವಾನಿಯಂತ್ರಣ ಸಾಧನಗಳು (ಎಸಿ), ಪ್ರಿಡ್ಜ್ ಮತ್ತು ಇತರೆ ಉತ್ಪನ್ನಗಳಿಂದ ಬಿಡುಗಡೆಯಾಗುವ ಅಪಾಯಕಾರಿ ರಾಸಾಯನಿಕಗಳು ಓಝೋನ್ ಪದರ ಸವೆಯಲು ಶೇಕಡಾ 99ರಷ್ಟು ಕಾರಣವಾಗಿದೆ.
ಹವಾಮಾನ ವೈಪರಿತ್ಯ ಹಾಗೂ ತಾಪಮಾನ ಏರಿಕೆಗೆ ಕಾರಣವಾಗುವ ಅನಿಲಗಳಾದ ಹೈಡ್ರೋಫ್ಲೋರೊಕಾರ್ಬನ್ ಅನ್ನು ಹಂತಹಂತವಾಗಿ ಕಡಿಮೆಗೊಳಿಸಬೇಕು ಇದರಿಂದ ಓಝೋನ್ ಪದರದ ಸವಕಳಿಯನ್ನು ತಡೆಯಬಹುದು.
ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ. ಓಝೋನ್ ಪದರದ ಸವಕಳಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದನ್ನು ಸಂರಕ್ಷಿಸಲು ತೆಗೆದುಕೊಳ್ಳಬಹುದಾದ ಪರಿಹಾರಗಳನ್ನು ಹುಡುಕಲು ಇದನ್ನು ಆಚರಿಸಲಾಗುತ್ತದೆ.
ವಿಶ್ವ ಓಝೋನ್ ದಿನದ ಇತಿಹಾಸ
ಡಿಸೆಂಬರ್ 19, 1994 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೆಪ್ಟೆಂಬರ್ 16 ರಂದು ಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವನ್ನು ಘೋಷಿಸಿತು. ಸೆಪ್ಟೆಂಬರ್ 16, 1987 ರಂದು, ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಮಾಂಟ್ರಿಯಲ್ ಪ್ರೊಟೋಕಾಲ್‌ಗೆ ಸಹಿ ಹಾಕಿದ್ದವು.
ಪ್ರತಿ ವರ್ಷ ಈ ದಿನವನ್ನುಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ. ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಪದರವನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು #NoMoreBJP, #unemploymentday
‘ಓಝೋನ್ ಫಾರ್ ಲೈಫ್’ ಎಂಬುದು ವಿಶ್ವ ಓಝೋನ್ ದಿನ 2020 ರ ಘೋಷಣೆಯಾಗಿತ್ತು. ಈ ವರ್ಷದ ಓಜೋನ್ ದಿನದ ಘೋಷವಾಕ್ಯ, ‘ನಮ್ಮನ್ನು, ನಮ್ಮ ಆಹಾರ ಮತ್ತು ಲಸಿಕೆಗಳನ್ನು ತಂಪಾಗಿರಿಸುವುದು!’ ಎಂಬುವುದಾಗಿದೆ.
ಓಝೋನ್ ಪದರ ಕೆಲವ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವ ಕೊಡೆ ಮಾತ್ರವಲ್ಲ. ಇಡೀ ಭೂಮಂಡಲದ ಜೀವ ಸಂಕುಲವನ್ನು ರಕ್ಷಿಸುವ ಪದರವಾಗಿ ಕೆಲಸ ಮಾಡುತ್ತಿದೆ. ನಮ್ಮನ್ನು ರಕ್ಷಿಸುತ್ತಿರುವ ಈ ರಕ್ಷಾ ಕವಚವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ಪೀಳಿಗೆಗೆ ಆರೋಗ್ಯಯುತ, ಬದುಕಲು ಯೋಗ್ಯವಾದ ಭೂಮಿಯನ್ನು ಕೊಡುವ ಕರ್ತವ್ಯ ನಮ್ಮದು.


