- Advertisement -
- Advertisement -
ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇರುವ ಅರ್ಹತಾ ಪರೀಕ್ಷೆಯಾಗಿರುವ, ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್ -2021) ಭಾನುವಾರ ನಡೆಯಲಿದೆ. ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ. ಆದರೆ ಈ ಬಾರಿ ಕೆಲವು ಹೊಸ ನಿಯಮಗಳನ್ನೂ ಪರಿಚಯಿಸಲಾಗಿದ್ದು, ವಿದ್ಯಾರ್ಥಿಗಳು ಇದನ್ನು ಪಾಲಿಸುವುದು ಅವಶ್ಯವಾಗಿದೆ.
- ವಿದ್ಯಾರ್ಥಿಗಳು ಪರೀಕ್ಷಾ ಸ್ಥಳಕ್ಕೆ ಹಾಜರಾಗುವ ಮೊದಲು ಕಡ್ಡಾಯವಾಗಿ ಫ್ರಿಸ್ಕಿಂಗ್‌ಗೆ ಒಳಗಾಗಬೇಕು. ವಿದ್ಯಾರ್ಥಿಗಳ ದೇಹದಲ್ಲಿ ಅಡಗಿರುವ ಲೋಹದ ವಸ್ತು, ಆಭರಣ, ಕ್ಯಾಲ್ಕುಲೇಟರ್, ಮೊಬೈಲ್ ಫೋನ್ ನಂತಹ ವಸ್ತುವನ್ನು ಅವರನ್ನು ಮುಟ್ಟದೇ ಪತ್ತೆ ಹಚ್ಚುವ ವಿಧಾನವಾಗಿದೆ ಇದು. ಈ ಪ್ರಕ್ರಿಯೆ ಇರುವುದರಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆಭರಣ ಸೇರಿದಂತೆ ಯಾವುದೇ ರೀತಿಯ ಲೋಹದ ವಸ್ತುವನ್ನು ದೇಹದಲ್ಲಿ ಇರದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.ಇದನ್ನೂ ಓದಿ: ಬಹುಪಾಲು ವಿದ್ಯಾರ್ಥಿಗಳಿಗೆ ‘ನೀಟ್’ ಬೇಡ: ನ್ಯಾಯಮೂರ್ತಿ ರಾಜನ್
- ಕೊರೊನಾ ಹಿನ್ನಲೆಯಲ್ಲಿ ಪರೀಕ್ಷಾ ಕೊಠಡಿ ಒಳಗೆ 50ML ಹ್ಯಾಂಡ್ ಸ್ಯಾನಿಟೈಜರ್ ಬಾಟಲ್‌ಗೆ ಅನುಮತಿ ನೀಡಲಾಗಿದೆ.
- ಪಾರದರ್ಶಕ ಬಾಟಲಿಯಲ್ಲಿ ನೀರು, ಹಾಜರಾತಿ ಹಾಳೆಯಲ್ಲಿ ಅಂಟಿಸಲು ಅರ್ಜಿ ನಮೂನೆ, ತುಂಬಿದ ಆದರೆ ಸಹಿ ಮಾಡದ ಸ್ವಯಂ ಘೋಷಿತ ಪ್ರವೇಶ ಪತ್ರದ ಪ್ರಿಂಟ್ ಔಟ್ ನಮೂನೆ. ಪೋಸ್ಟ್‌ಕಾರ್ಡ್ ಫೋಟೋ, ಫೋಟೋ ಐಡಿ, ಪಿಡಬ್ಲ್ಯೂಡಿ ಪ್ರಮಾಣಪತ್ರ ಮತ್ತು ಲಿಖಿತ ಸಂಬಂಧಿತ ದಾಖಲೆಗಳನ್ನು ಅವಕಾಶ ಹೊಂದಿದ್ದರೆ ಮಾತ್ರ ತೆಗೆದುಕೊಂಡು ಹೋಗಬಹುದು.
ನೀಟ್-2021 ನಲ್ಲಿ ವಸ್ತ್ರ ಸಂಹಿತೆಯನ್ನೂ ಪರಿಚಯಿಸಲಾಗಿದೆ
- ದಪ್ಪ ಅಡಿಭಾಗವಿರುವ ಪಾದರಕ್ಷೆ, ದೊಡ್ಡ ಗುಂಡಿಗಳನ್ನು ಹೊಂದಿರುವ ಉಡುಪುಗಳನ್ನು ಧರಿಸಲು ಅನುಮತಿ ಇಲ್ಲ.
- ಗಂಡಸರು ಅರ್ಧ ತೋಳಿನ ಶರ್ಟ್, ಟೀ ಶರ್ಟ್ ಧರಿಸಬಹುದಾಗಿದೆ.
- ಹಗುರವಾದ ಬಟ್ಟೆಗಳನ್ನು ಧರಿಸಬೇಕಾಗಿದ್ದು, ಝಿಪ್ ಕಿಸೆಗಳಿರುವ, ದೊಡ್ಡ ಗುಂಡಿಗಳು ಮತ್ತು ಹೆಚ್ಚಿನ ಕಸೂತಿ ಇರುವ ಬಟ್ಟೆಗಳನ್ನು ಧರಿಸಿರಬಾರದು.
- ಸರಳವಾಗಿರುವ ಪ್ಯಾಂಟ್ ಧರಿಸಬಹುದಾಗಿದೆ.
- ಮಹಿಳೆಯರು ಫುಲ್ ಸ್ಲೀವ್ಸ್ ಬಟ್ಟೆ, ವಿಸ್ತಾರವಾದ ಕಸೂತಿ, ಹೂವುಗಳು, ದೊಡ್ಡ ಗುಂಡಿಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಿರಬಾರದು. ಹಿಲ್ಡ್ಸ್ ಪಾದರಕ್ಷೆ, ದೊಡ್ಡ ಪಾಕೆಟ್ ಹೊಂದಿರುವ ಜೀನ್ಸ್ ಧರಿಸಬಾರದು.
- ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ.
- ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು N95 ಮುಖವಾಡಗಳನ್ನು ನೀಡಲಾಗುತ್ತದೆ.
- ಅಭ್ಯರ್ಥಿಗಳು ಪರೀಕ್ಷೆಯ ಕೊನೆಯಲ್ಲಿ ಅಡ್ಮಿಟ್ ಕಾರ್ಡ್ ಅನ್ನು ಪರೀಕ್ಷಾ ಕೊಠಡಿಯ ಉಸ್ತುವಾರಿ ಹೊಂದಿರುವ ಇನ್ವಿಜಿಲೇಟರ್ಗೆ ಹಸ್ತಾಂತರಿಸಬೇಕು.
ಇದನ್ನೂ ಓದಿ: ಇದು ನೀಟ್ ಪರೀಕ್ಷೆ ನಡೆಸಲು ಸರಿಯಾದ ಸಮಯವೆ?: ಕೇಂದ್ರಕ್ಕೆ ಎಂ. ಕೆ. ಸ್ಟಾಲಿನ್


